ಗಾಜನೂರಿನಲ್ಲಿ ಯುವರಾಜ್ ಕುಮಾರ್ ಮದುವೆ ಸಂಭ್ರಮ
Recommended Video
ಗಾಜನೂರಿನಲ್ಲಿ ಡಾ ರಾಜ್ ಮೊಮ್ಮಗ ರಾಘವೇಂದ್ರ ರಾಜ್ ಕುಮಾರ್ ಮೊಮ್ಮಗ ಯುವ ರಾಜ್ ಕುಮಾರ್ ಮದುವೆ ಸಂಭ್ರಮ
ಡಾ ರಾಜ್ ಕುಮಾರ್ ಮೊಮ್ಮಗ, ರಾಘವೇಂದ್ರ ರಾಜ್ ಕುಮಾರ್ ಮಗ ಯುವರಾಜ್ ಕುಮಾರ್ ಮದುವೆ ಸಂಭ್ರಮ ಶುರುವಾಗಿದೆ. ಇಂದು ಗಾಜನೂರಿನಲ್ಲಿ ಅರಿಶಿಣ ಶಾಸ್ತ್ರ ಕಾರ್ಯಕ್ರಮ ನಡೆದಿದೆ.
ಎರಡು ದಿನಗಳ ಹಿಂದೆಯೇ ಮದುವೆ ಸಂಭ್ರಮ ಶುರುವಾಗಿದೆ. ಈಗಾಗಲೇ ಸಂಗೀತ ಕಾರ್ಯಕ್ರಮ ಅದ್ದೂರಿಯಾಗಿ ಮುಗಿದಿದೆ. ರಾಜಣ್ಣನ ಹುಟ್ಟುರಿನಲ್ಲಿ ಮೊಮ್ಮಗನ ಮದುವೆ ಕಾರ್ಯ ನಡೆಯುತ್ತಿದೆ. ಇಡೀ ರಾಜ್ ಕುಟುಂಬ ಈ ಸಂತೋಷದ ಕಾರ್ಯಕ್ರಮದಲ್ಲಿ ಭಾಗಿಯಾಗಿದೆ.

ಯುವರಾಜ್ ಕುಮಾರ್ ದೊಡ್ಡಪ್ಪ ನಟ ಶಿವರಾಜ್ ಕುಮಾರ್ ಹಾಗೂ ಚಿಕ್ಕಪ್ಪ ಪುನೀತ್ ರಾಜ್ ಕುಮಾರ್ ನಾಳೆಯಿಂದ ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ.
ಇದೇ ತಿಂಗಳು 25 - 26 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಯುವರಾಜ್ ಕುಮಾರ್ ಹಾಗೂ ಶ್ರೀದೇವಿ ಭೈರಪ್ಪ ಕಲ್ಯಾಣೋತ್ಸವ ನಡೆಯಲಿದೆ. ಶ್ರೀದೇವಿ ಮೈಸೂರು ಮೂಲದವರಾಗಿದ್ದಾರೆ.
English summary
Actor Rajkumar grandson Yuvaraj Kumar and Sridevi Byrappa arishina shastra held in gajanuru.


Click it and Unblock the Notifications