For Quick Alerts
  ALLOW NOTIFICATIONS  
  For Daily Alerts

  ಯುವರಾಜ್ ಕುಮಾರ್ ಗೆ ಹುಟ್ಟುಹಬ್ಬದ ಸಂಭ್ರಮ: ತಾತನ ಜನ್ಮದಿನಕ್ಕೆ ನೀಡುತ್ತಿದ್ದಾರೆ ಸಿಹಿ ಸುದ್ದಿ

  |

  ಡಾ.ರಾಜ್ ಕುಮಾರ್ ಪುತ್ರ ರಾಘವೇಂದ್ರ ರಾಜ್ ಕುಮಾರ್ ಎರಡನೇ ಮಗ ಯುವರಾಜ್ ಕಮಾರ್ ಗೆ ಹುಟ್ಟುಹಬ್ಬದ ಸಂಭ್ರಮ. 27ನೇ ವಸಂತಕ್ಕೆ ಕಾಲಿಟ್ಟ ರಾಜ್ ಮೊಮ್ಮಗ ಯುವ ರಾಜ್ ಗೆ ಚಿತ್ರರಂಗದ ಗಣ್ಯರು, ಸ್ನೇಹಿತರು ಮತ್ತು ಅಭಿಮಾನಿಗಳು ಶುಭಾಶಯ ಕೋರುತ್ತಿದ್ದಾರೆ.

  ಈ ವರ್ಷ ಅಣ್ಣಾವ್ರ ಹುಟ್ಟುಹಬ್ಬಕ್ಕೆ ಶಿವಣ್ಣ ಏನು ಮಾಡುತ್ತಿದ್ದಾರೆ | Shivarajkumar | Raj kumar Birthday

  ಯುವ ರಾಜ್ ಕುಮಾರ್ ಇನ್ನೂ ಸಿನಿಮಾರಂಗಕ್ಕೆ ಎಂಟ್ರಿಕೊಟ್ಟಿಲ್ಲ. ಯುವರಾಜ್ ನನ್ನು ತೆರೆ ಮೇಲೆ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಕಳೆದ ವರ್ಷವೆ ಸಿನಿಮಾರಂಗಕ್ಕೆ ಎಂಟ್ರಿ ಕೊಡುತ್ತಾರೆ ಎನ್ನುವ ಮಾತುಗಳು ಕೇಳಿ ಬರುತ್ತಿತ್ತು. ಆದರೆ ಯುವ ಕಳೆದ ವರ್ಷ ಸಿನಿಮಾಗೆ ಪಾದಾರ್ಪಣೆ ಮಾಡಲು ಭರ್ಜರಿ ತಯಾರಿ ನಡೆಸಿದ ಯುವ ಈ ವರ್ಷ ಗ್ರ್ಯಾಂಡ್ ಎಂಟ್ರಿ ಕೊಡುತ್ತಿದ್ದಾರೆ. ಈಗಾಗಲೆ ಫಸ್ಟ್ ಲುಕ್ ರಿಲೀಸ್ ಗೆ ತಯಾರಿ ಮಾಡಿಕೊಂಡಿದ್ದಾರೆ. ಮುಂದೆ ಓದಿ...

  'ಯುವರಾಜ'ನನ್ನು ಲಾಂಚ್ ಮಾಡ್ತಿದ್ದಾರೆ 'ಕೆಜಿಎಫ್' ಸಹ ನಿರ್ದೇಶಕ<br>'ಯುವರಾಜ'ನನ್ನು ಲಾಂಚ್ ಮಾಡ್ತಿದ್ದಾರೆ 'ಕೆಜಿಎಫ್' ಸಹ ನಿರ್ದೇಶಕ

  ತಾತನ ಹುಟ್ಟುಹಬ್ಬಕ್ಕೆ ಮೊಮ್ಮಗನ ಸಿನಿಮಾ ಅನೌನ್ಸ್

  ತಾತನ ಹುಟ್ಟುಹಬ್ಬಕ್ಕೆ ಮೊಮ್ಮಗನ ಸಿನಿಮಾ ಅನೌನ್ಸ್

  ಯುವ ರಾಜ್ ಕುಮಾರ್ ಸಿನಿಮಾ ಎಂಟ್ರಿಗೆ ಏಪ್ರಿಲ್ 24ಕ್ಕಿಂತ ಉತ್ತಮ ದಿನ ಇನ್ನೊಂದಿಲ್ಲ. ಹಾಗಾಗಿ ಯುವ ರಾಜ್ ಕುಮಾರ್ ಮೊದಲ ಸಿನಿಮಾವನ್ನು ಡಾ.ರಾಜ್ ಕುಮಾರ್ ಹುಟ್ಟುಹಬ್ಬದ ದಿನವೇ ಅನೌನ್ಸ್ ಮಾಡುತ್ತಿದ್ದಾರೆ. ಈಗಾಗಲೆ ಸಕಲ ಸಿದ್ಧತೆ ಮಾಡಿಕೊಂಡಿರುವ ಯುವ ಅಂಡ್ ಟೀಂ ಏಪ್ರಿಲ್ 24ಕ್ಕೆ ಫಸ್ಟ್ ಲುಕ್ ಮೂಲಕ ಎಂಟ್ರಿ ಕೊಡುತ್ತಿದ್ದಾರೆ.

  'ನಿಮ್ಮೆಲ್ಲರ ಪ್ರೀತಿ ಪ್ರೋತ್ಸಾಹ ಸದಾ ಇರಲಿ...'

  'ನಿಮ್ಮೆಲ್ಲರ ಪ್ರೀತಿ ಪ್ರೋತ್ಸಾಹ ಸದಾ ಇರಲಿ...'

  ಯುವ ಮೊದಲ ಸಿನಿಮಾದ ಮಲೆ ನಿರೀಕ್ಷೆ ದುಪ್ಪಟ್ಟಾಗಿರುತ್ತೆ. ಚೊಚ್ಚಲ ಬಾರಿಗೆ ಬಣ್ಣಹಚ್ಚುವ ಮೂಲಕ ಚಿತ್ರರಂಗದಲ್ಲಿ ಅದೃಷ್ಟ ಪರೀಕ್ಷೆಗೆ ನಿಂತಿರುವ ಯುವರಾಜ್ ಕುಮಾರ್, ಎಲ್ಲರ ಪ್ರೀತಿ, ಪ್ರೋತ್ಸಾಹ ಇರಲಿ ಎಂದು ಕೇಳಿಕೊಂಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಯುವ "ತಾತನ ಹುಟ್ಟು ಹಬ್ಬದ ದಿನ, ಏಪ್ರಿಲ್ 24ಕ್ಕೆ ನನ್ನ ಫಸ್ಟ್ ಲುಕ್ ರಿಲೀಸ್ ಆಗುತ್ತಿದೆ. ನಿಮ್ಮೆಲ್ಲರ ಪ್ರೀತಿ ಪ್ರೋತ್ಸಾಹ ಸದಾ ಹೀಗೆ ಇರಲಿ" ಎಂದು ಹೇಳಿದ್ದಾರೆ.

  ಏಪ್ರಿಲ್ 24 ಮಗನ ಸಿನಿಮಾ ಹುಟ್ಟುಹಬ್ಬ

  ರಾಘವೇಂದ್ರ ರಾಜ್ ಕುಮಾರ್ ಮೊದಲ ಮಗ ವಿನಯ್ ರಾಜ್ ಕುಮಾರ್ ಈಗಾಗಲೆ ಬಣ್ಣದ ಲೋಕದಲ್ಲಿ ಸಕ್ರೀಯರಾಗಿದ್ದಾರೆ. ಎರಡನೇ ಮಗನನ್ನು ಲಾಂಚ್ ಮಾಡುತ್ತಿರುವ ರಾಘಣ್ಣ ವಿಡಿಯೋ ಮೂಲಕ ಅಭಿಮಾನಿಗಳ ಆಶೀರ್ವಾದ ವಿರಲಿ ಎಂದು ಕೇಳಿ ಕೊಂಡಿದ್ದಾರೆ. ಏಪ್ರಿಲ್ 24ಕ್ಕೆ 2ನೇ ಮಗನ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಆಗುತ್ತಿದೆ. ನನ್ನ ಚಿಕ್ಕ ಮಗನಿಗೆ ಸಿನಿಮಾರಂಗದಲ್ಲಿ ಹುಟ್ಟುಹಬ್ಬ. ನಿಮ್ಮ ಆಶೀರ್ವಾದ ಬಯಸುತ್ತೇನೆ" ಎಂದು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

  ಯುವ ಮೊದಲ ಸಿನಿಮಾಗೆ ಪುನೀತ್ ನಿರ್ದೇಶನ?

  ಯುವ ಮೊದಲ ಸಿನಿಮಾಗೆ ಪುನೀತ್ ನಿರ್ದೇಶನ?

  'ಕೆಜಿಎಫ್' ಸಿನಿಮಾದಲ್ಲಿ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದ ಪುನೀತ್, ಯುವರಾಜ್ ಕುಮಾರ್ ಮೊದಲ ಸಿನಿಮಾಗೆ ಆಕ್ಷನ್ ಕಟ್ ಹೇಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಪ್ರಶಾಂತ್ ನೀಲ್ ಜೊತೆ ಕೆಲಸ ಮಾಡಿದ ಅನುಭವ ಹೊಂದಿರುವ ಪುನೀತ್ 'ಕೆಜಿಎಫ್' ಚಿತ್ರದ ಸಣ್ಣ ಪಾತ್ರದಲ್ಲಿಯೂ ಕಾಣಿಸಿಕೊಂಡಿದ್ದರು. ಈಗ ಯುವ ರಾಜ್ ಕುಮಾರ್ ಸಿನಿಮಾ ಮೂಲಕ ಪೂರ್ಣ ಪ್ರಮಾಣದ ನಿರ್ದೇಶಕರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ ಈ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಇನ್ನೂ ಬಹಿರಂಗವಾಗಿಲ್ಲ.

  English summary
  Dr.Rajkumar grandson Yuvaraj Kumar first film First look release on April 24th.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X