For Quick Alerts
  ALLOW NOTIFICATIONS  
  For Daily Alerts

  ಶಿವಣ್ಣ, ಅಪ್ಪು, ರಾಘಣ್ಣಗಿಂತ 'ಯುವ' ಎಂಟ್ರಿ ಬಹಳ ವಿಶೇಷ, ಅದು ಹೇಗೆ?

  |

  ಡಾ ರಾಜ್ ಕುಟುಂಬದಿಂದ ಮತ್ತೊಬ್ಬ ನಟ ಚಿತ್ರರಂಗ ಪ್ರವೇಶಿಸಿದ್ದಾರೆ. ಶಿವಣ್ಣ, ರಾಘಣ್ಣ, ಪುನೀತ್, ವಿನಯ್ ಬಳಿಕ ಯುವ ರಾಜ್ ಕುಮಾರ್ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ.

  ಇದು 15 ವರ್ಷದ ಶ್ರಮ ಎಂದ ಯುವ ರಾಜ್ ಕುಮಾರ್ | Yuva Rajkumar | Yuva Ranadheera Kanteerava | Filmibeat

  ಕನ್ನಡದ ರಾಜ್ಯೋತ್ಸವದ ಪ್ರಯುಕ್ತ ಯುವ ರಾಜ್ ಕುಮಾರ್ ನಟಿಸಲಿರುವ ಚೊಚ್ಚಲ ಸಿನಿಮಾದ ಟೈಟಲ್ ಹಾಗೂ ಐದು ನಿಮಿಷಗಳ ಟೀಸರ್ ಬಿಡುಗಡೆಯಾಗಿತ್ತು. ಜಬರ್‌ದಸ್ತ್ ಆಗಿ ಮೂಡಿಬಂದಿರುವ ಈ ಟೀಸರ್ ನೋಡಿದ ಪ್ರೇಕ್ಷಕ ಪ್ರಭುಗಳು ವಾಹ್ ಎನ್ನುತ್ತಿದ್ದಾರೆ. ಅಣ್ಣಾವ್ರನ್ನು ನೆನಪಿಸುವಂತಹ ಎಂಟ್ರಿ ಇದಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

  ಅಣ್ಣಾವ್ರ ಮೊಮ್ಮಗನ ಭರ್ಜರಿ ಎಂಟ್ರಿ: 'ಯುವ ರಣಧೀರ ಕಂಠೀರವ' ಟೀಸರ್ಅಣ್ಣಾವ್ರ ಮೊಮ್ಮಗನ ಭರ್ಜರಿ ಎಂಟ್ರಿ: 'ಯುವ ರಣಧೀರ ಕಂಠೀರವ' ಟೀಸರ್

  ಯುವರಾಜ್ ಕುಮಾರ್ ಚೊಚ್ಚಲ ಚಿತ್ರದ ಬಗ್ಗೆ ಹೇಳುವುದಾದರೇ ಇದು ಐತಿಹಾಸಿಕ ಸಿನಿಮಾ. ಶಿವಣ್ಣ, ಅಪ್ಪು, ರಾಘಣ್ಣ, ವಿನಯ್‌ಗೆ ಹೋಲಿಸಿಕೊಂಡರೆ ಯುವ ಎಂಟ್ರಿ ವಿಶೇಷ ಎನ್ನಬಹುದು. ಏಕೆ?

  ಲವ್ ಸ್ಟೋರಿ ಜೊತೆ ಬಂದ ಶಿವಣ್ಣ

  ಲವ್ ಸ್ಟೋರಿ ಜೊತೆ ಬಂದ ಶಿವಣ್ಣ

  1986ರಲ್ಲಿ ತೆರೆಕಂಡ 'ಆನಂದ್' ಚಿತ್ರದ ಮೂಲಕ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಾಯಕನಾಗಿ ಪರಿಚಯ ಆದರು. ಸುಧಾರಾಣಿ ನಾಯಕಿಯಾಗಿದ್ದ ಈ ಚಿತ್ರ ಸಿಂಗಿತಂ ಶ್ರೀನವಾಸ್ ರಾವ್ ನಿರ್ದೇಶಿಸಿದ್ದರು. ಇದು ಲವ್ ಸ್ಟೋರಿ ಸಿನಿಮಾ.

  ಚಿರಂಜೀವಿ ಸುಧಾಕರ್

  ಚಿರಂಜೀವಿ ಸುಧಾಕರ್

  1988ರಲ್ಲಿ ಬಿಡುಗಡೆಯಾದ ಚಿತ್ರ 'ಚಿರಂಜೀವಿ ಸುಧಾಕರ್'. ಇದು ರಾಘವೇಂದ್ರ ರಾಜ್ ಕುಮಾರ್ ನಾಯಕನಾಗಿ ನಟಿಸಿದ್ದ ಚೊಚ್ಚಲ ಸಿನಿಮಾ. ಈ ಚಿತ್ರವನ್ನು ಸಹ ಸಿಂಗೀತಂ ಶ್ರೀನಿವಾಸ್ ರಾವ್ ನಿರ್ದೇಶಿಸಿದ್ದರು. ಇದು ಸಹ ಲವ್ ಸ್ಟೋರಿ ಆಗಿತ್ತು.

  ಅಪ್ಪು ಆಗಿ ಬಂದ ಪುನೀತ್

  ಅಪ್ಪು ಆಗಿ ಬಂದ ಪುನೀತ್

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಾಯಕನಾಗಿ ನಟಿಸಿದ ಮೊದಲ ಚಿತ್ರ 'ಅಪ್ಪು'. ಪೂರಿ ಜಗನ್ನಾಥ್ ನಿರ್ದೇಶಿಸಿದ್ದ ಈ ಚಿತ್ರದಲ್ಲಿ ರಕ್ಷಿತಾ ನಾಯಕಿಯಾಗಿದ್ದರು. ಇದು ಔಟ್ ಅಂಡ್ ಔಟ್ ಲವ್ ಸ್ಟೋರಿ ಸಿನಿಮಾ.

  ವಿನಯ್ ಮೊದಲ ಚಿತ್ರ

  ವಿನಯ್ ಮೊದಲ ಚಿತ್ರ

  ರಾಘವೇಂದ್ರ ರಾಜ್ ಕುಮಾರ್ ಹಿರಿಯ ಮಗ ವಿನಯ್ ರಾಜ್ ಕುಮಾರ್ ನಾಯಕನಾಗಿ ನಟಿಸಿದ ಮೊದಲ ಸಿನಿಮಾ 'ಸಿದ್ಧಾರ್ಥ್'. 2015ರಲ್ಲಿ ತೆರೆಕಂಡ ಈ ಚಿತ್ರವೂ ಲವ್ ಸ್ಟೋರಿ ಸಿನಿಮಾ.

  ಐತಿಹಾಸಿಕ ಕಥೆ ಹಿಂದೆ ಹೋದ ಯುವ

  ಐತಿಹಾಸಿಕ ಕಥೆ ಹಿಂದೆ ಹೋದ ಯುವ

  ಆದ್ರೆ, ಯುವ ರಾಜ್ ಕುಮಾರ್ ತಮ್ಮ ಮೊದಲ ಚಿತ್ರಕ್ಕೆ ಐತಿಹಾಸಿಕ ಕಥೆ ಆಯ್ಕೆ ಮಾಡಿಕೊಂಡಿದ್ದಾರೆ. ವಿಜಯನಗರ ಸಾಮ್ರಾಜ್ಯ ಪತನದ ವೇಳೆ ನಡೆಯುವ ಘಟನೆಗಳನ್ನು ಆಧರಿಸಿ ಸ್ಕ್ರಿಪ್ಟ್ ಮಾಡಲಾಗಿದೆ. ಹಾಗಾಗಿ, ರಾಜ್ ಕುಟುಂಬದ ಪಾಲಿಗೆ ಯುವ ಚಿತ್ರರಂಗ ಪ್ರವೇಶ ವಿಶೇಷವಾಗಿರಲಿದೆ.

  English summary
  Dr Rajkumar Grandson Yuva rajkumar debut to film industry with Historical subject.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X