»   » ಯುವರಾಜ ನಿರ್ಮಾಪಕರ ಮೊಗದಲ್ಲಿ ರಾಜಕಳೆ

ಯುವರಾಜ ನಿರ್ಮಾಪಕರ ಮೊಗದಲ್ಲಿ ರಾಜಕಳೆ

Posted By: Staff
Subscribe to Filmibeat Kannada

ಯುವರಾಜ ನಿರ್ಮಾಪಕ ಆರ್‌.ಶ್ರೀನಿವಾಸ್‌ ಖುಷಿಯಾಗಿದ್ದಾರೆ. ಚಿತ್ರದ ಚಿತ್ರೀಕರಣ ಅಂದುಕೊಂಡದ್ದಕ್ಕಿಂತ ಸಲೀಸಾಗಿ ಮುಂದುವರಿಯುತ್ತಿರುವ ಖುಷಿ ಒಂದೆಡೆಯಾದರೆ, ಶಿವರಾಜ್‌- ಲಿಸಾ ರೇ ಪೋಟಿಯ ಅಭಿನಯ ನೀಡುತ್ತಿರುವ ತೃಪ್ತಿ ಇನ್ನೊಂದೆಡೆ.

ಲಂಡನ್‌ನಲ್ಲಿ ಚಿತ್ರಿಸಿರುವ ಮೂರು ಹಾಡುಗಳಲ್ಲಿ ಯಾವುದು ಹಿತ ಎಂದು ನಿರ್ಣಯಿಸಲಾಗದಷ್ಟು ಚೆನ್ನಾಗಿ ಮೂಡಿಬಂದಿವೆಯಂತೆ. ಇದೆಲ್ಲಕ್ಕಿಂತ ಮಿಗಿಲಾಗಿ ಶ್ರೀನಿವಾಸ್‌ ಈಗಾಗಲೇ ಕಾಸು ಕಾಣಲಾರಂಭಿಸಿದ್ದಾರೆ. ಆಡಿಯೋ ಹಕ್ಕುಗಳ ಮಾರಾಟದಿಂದಾಗಿಯೇ ಅವರು 30 ಲಕ್ಷ ರುಪಾಯಿ ಗಳಿಸಿದ್ದಾರೆ. ನಿರ್ಮಾಪಕ ಖುಷಿಯಾಗಿರಲು ಇನ್ನೇನು ಬೇಕು!

ಯುವರಾಜನ ಗೀತೆಗಳನ್ನು ಕಿವಿ ಕಿವಿಗೆ ಮುಟ್ಟಿಸುವ ಕೆಲಸವನ್ನು ಆಕಾಶ್‌ ಆಡಿಯೋ ಹೊತ್ತುಕೊಂಡಿದೆ. ಮಧು ಬಂಗಾರಪ್ಪ ಇದ್ದಲ್ಲಿ ಐಡಿಯಾಗಳಿಗೆಲ್ಲಿಯ ಕೊರತೆ? ಯುವರಾಜನ 2 ಲಕ್ಷ ಕೆಸೆಟ್‌ಗಳು ಖರ್ಚಾದ ನಂತರ, 10 ರುಪಾಯಿಗೊಂದು ಕೆಸೆಟ್ಟನ್ನು ನೀಡುವ ಪ್ರಸ್ತಾವನೆಯನ್ನು ಮಧು ಸಿದ್ಧಪಡಿಸಿದ್ದಾರೆ. 20 ರುಪಾಯಿಗೆ ಕೆಸೆಟ್‌ ನೀಡುವ ಲಹರಿಗೊಂದು ಪಾಠ ಕಲಿಸುವ ಉದ್ದೇಶವೂ ಮಧು ಅವರಿಗೆ ಇದ್ದಂತಿದೆ. ಈ ಪ್ರಸ್ತಾವನೆಯೇನಾದರೂ ಕಾರ್ಯಗತವಾದಲ್ಲಿ ಯುವರಾಜ ಕೆಸೆಟ್‌ ಮಾರಾಟದಲ್ಲಿ ದಾಖಲೆಯನ್ನು ಸೃಷ್ಟಿಸುವುದು ಗ್ಯಾರಂಟಿ.

ಯುವರಾಜ ಕೆಸೆಟ್‌ ಬಿಡುಗಡೆ ಸಮಾರಂಭ ಅದ್ದೂರಿಯೂ ವಿಭಿನ್ನವೂ ಆಗಿರಬೇಕು ಎನ್ನುವ ಬಯಕೆ ನಿರ್ಮಾಪಕರದು. ಕೆಸೆಟ್‌ ಬಿಡುಗಡೆ ಸಮಾರಂಭವನ್ನು ನೇರ ಪ್ರಸಾರ ಮಾಡಲು ಉಷೆ ಟಿವಿ ಒಪ್ಪಿಕೊಂಡಿದೆಯಂತೆ. ಅಂದಹಾಗೆ, ಯುವರಾಜ ಸಿನಿಮಾಗೆ 2.5 ಕೋಟಿ ರುಪಾಯಿಗಳನ್ನು ಶ್ರೀನಿವಾಸ್‌ ಖರ್ಚು ಮಾಡಿದ್ದಾರೆ.

ಕೊನೆಯದಾಗಿ- ನಿರ್ಮಾಪಕರ ಲೆಕ್ಕಾಚಾರದಂತೆ, ಅಕ್ಟೋಬರ್‌ 25 ರಂದು ಯುವರಾಜ ತೆರೆ ಕಾಣುತ್ತೆ !

English summary
Yuvaraja Cassette rights brings hell a lot of money

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada