ತಂದೆ ರಾಘಣ್ಣ ಹುಟ್ಟುಹಬ್ಬಕ್ಕೆ ದುಬಾರಿ ಉಡುಗೊರೆ ನೀಡಿದ ಯುವ ರಾಜ್‌ಕುಮಾರ್

ಆಗಸ್ಟ್ 15ರಂದು ನಟ ರಾಘವೇಂದ್ರ ರಾಜ್‌ಕುಮಾರ್ ತಮ್ಮ 60ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಈ ಸಂಭ್ರಮದಲ್ಲೇ ಮಗ ಯುವರಾಜ್‌ಕುಮಾರ್ ತಂದೆಗೆ ಭರ್ಜರಿ ಗಿಫ್ಟ್ ಕೊಟ್ಟಿದ್ದಾರೆ. ಇತ್ತೀಚಿಗೆ ಯುವ ನಟಿಸಿದ 'ಎಕ್ಕ' ಸಿನಿಮಾ ತೆರೆಕಂಡು ಸದ್ದು ಮಾಡಿತ್ತು.

ತಂದೆ, ಅಣ್ಣನ ಹಾದಿಯಲ್ಲೇ ರಾಘವೇಂದ್ರ ರಾಜ್‌ಕುಮಾರ್ ಕೂಡ ಚಿತ್ರರಂಗ ಪ್ರವೇಶಿಸಿದ್ದರು. ಹೀರೊ ಆಗಿ ಒಂದಷ್ಟು ಸಿನಿಮಾಗಳಲ್ಲಿ ನಟಿಸಿದ್ದರು. 'ನಂಜುಂಡಿ ಕಲ್ಯಾಣ' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಬಳಿಕ ಕೆಲ ಸಿನಿಮಾಗಳಲ್ಲಿ ಬಣ್ಣ ಹಚ್ಚಿ ಮೋಡಿ ಮಾಡಿದ್ದರು. ಬಳಿಕ ನಿಧಾನವಾಗಿ ವಜ್ರೇಶ್ವರಿ ಸಂಸ್ಥೆ ಜವಾಬ್ದಾರಿಯನ್ನು ರಾಘಣ್ಣ ವಹಿಸಿಕೊಂಡಿದ್ದರು.

Yuvarajkumar gifted his father Raghavendra Rajkumar a brand-new car on his 60th birthday

ತಾಯಿ ಪಾರ್ವತಮ್ಮ ಜೊತೆ ನಿರ್ಮಾಪಕರಾಗಿ ರಾಘಣ್ಣ ಗುರ್ತಿಸಿಕೊಂಡಿದ್ದರು. 'ಪಕ್ಕದ್ಮನೆ ಹುಡುಗಿ' ಸಿನಿಮಾ ಬಳಿಕ ಅವರು ಬಹಳ ಗ್ಯಾಪ್ ತಗೊಂಡಿದ್ದರು. 15 ವರ್ಷಗಳ ಬಳಿಕ 'ಅಮ್ಮನ ಮನೆ' ಚಿತ್ರಕ್ಕೆ ಬಣ್ಣ ಹಚ್ಚಿದ್ದರು. ಅತ್ಯುತ್ತಮ ನಟ ರಾಜ್ಯಪ್ರಶಸ್ತಿಗೆ ಭಾಜನರಾಗಿದ್ದರು. ಇತ್ತೀಚೆಗೆ ಪೋಷಕ ಪಾತ್ರಗಳಲ್ಲಿ ಹೆಚ್ಚು ನಟಿಸುತ್ತಿದ್ದಾರೆ. ಈಗಾಗಲೇ ವಿಜಯ್ ಹಾಗೂ ಯುವ ಕೂಡ ನಾಯಕರಾಗಿ ಚಿತ್ರರಂಗ ಪ್ರವೇಶಿಸಿದ್ದಾರೆ.

ಈ ವರ್ಷ ರಾಘಣ್ಣನ ಹುಟ್ಟುಹಬ್ಬಕ್ಕೆ ಯುವ ಕಾರ್ ಗಿಫ್ಟ್ ಕೊಟ್ಟಿದ್ದಾರೆ. ಇನ್ನೋವಾ ಹೈಬ್ರೀಡ್ ಕಾರ್ ಇದಾಗಿದ್ದು ದರ 35ರಿಂದ 40 ಲಕ್ಷ ರೂಪಾಯಿ. ಕಾರ್ ಉಡುಗೊರೆ ನೀಡಿರುವ ಫೋಟೊಗಳು ವೈರಲ್ ಆಗುತ್ತಿದೆ. ಇನ್ನು ಯುವ ರಾಜ್‌ಕುಮಾರ್ ಕನ್ನಡ ಚಿತ್ರರಂಗದ ಭವವಸೆಯ ಯುವ ನಟ ಎನಿಸಿಕೊಳ್ಳುತ್ತಿದ್ದಾರೆ.

ಕಳೆದ ವರ್ಷ 'ಯುವ' ಚಿತ್ರದ ಮೂಲಕ ರಾಘಣ್ಣನ ಕಿರಿಮಗ ಚಿತ್ರರಂಗ ಪ್ರವೇಶಿಸಿದ್ದರು. ಮೊದಲ ಚಿತ್ರದಲ್ಲಿ ರಮ್ಮ ಫೈಟ್ಸ್, ಡ್ಯಾನ್ಸ್ ಮೂಲಕ ಕಮಾಲ್ ಮಾಡಿದ್ದರು. ಈ ವರ್ಷ 'ಎಕ್ಕ' ಚಿತ್ರದಲ್ಲಿ ನಟಿಸಿ ಮತ್ತೊಮ್ಮೆ ಪ್ರೇಕ್ಷಕರ ಮನಗೆದ್ದಿದ್ದಾರೆ. ರೋಹಿತ್ ಪದಕಿ ನಿರ್ದೇಶನದ ಸಿನಿಮಾ ಜುಲೈ 18ಕ್ಕೆ ತೆರೆಗೆ ಬಂದಿತ್ತು. ಫಸ್ಟ್ ಹಾಫ್ ಬಹಳ ಚೆನ್ನಾಗಿದೆ, ಸೆಕೆಂಡ್ ಹಾಫ್ ಚೆನ್ನಾಗಿಲ್ಲ ಎಂದು ಕೆಲವರು ಕಾಮೆಂಟ್ ಮಾಡಿದ್ದರು.

Yuvarajkumar gifted his father Raghavendra Rajkumar a brand-new car on his 60th birthday

'ಎಕ್ಕ' ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದ್ದ ಸಮಯದಲ್ಲೇ 'ಸು ಫ್ರಂ ಸೋ' ಸಿನಿಮಾ ತೆರೆಗೆ ಬಂದಿತ್ತು. ಈ ಕಾಮಿಡಿ ಎಂಟರ್‌ಟೈನರ್ ಮುಂದೆ 'ಎಕ್ಕ' ಸಿನಿಮಾ ಸೈಲೆಂಟ್ ಆಗಿತ್ತು. ಶೀಘ್ರದಲ್ಲೇ ಸಿನಿಮಾ ಓಟಿಟಿಗೆ ಬರಲಿದೆ. ಇನ್ನು ಈಗಾಗಲೇ ಯುವ ರಾಜ್‌ಕುಮಾರ್ ನಟನೆಯ 3ನೇ ಸಿನಿಮಾ ಸೆಟ್ಟೇರಿದೆ. ಮುಂದಿನ ತಿಂಗಳು ಚಿತ್ರೀಕರಣ ಶುರುವಾಗುವ ಸಾಧ್ಯತೆಯಿದೆ. ದುನಿಯಾ ಸೂರಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ.

ಸೂರಿ ಕೂಡ ಸೋಲಿನ ಸುಳಿಗೆ ಸಿಲುಕಿದ್ದಾರೆ. ಅವರಿಗೂ ದೊಡ್ಡ ಬ್ರೇಕ್ ಬೇಕಿದೆ. 'ಎಕ್ಕ' ಚಿತ್ರವನ್ನು ಪಿಆರ್‌ಕೆ ಪ್ರೊಡಕ್ಷನ್ಸ್, ಕೆಆರ್‌ಜಿ ಸ್ಟುಡಿಯೋಸ್ ಹಾಗೂ ಜಯಣ್ಣ ಫಿಲ್ಮ್ಸ್ ಸಂಸ್ಥೆಗಳು ಒಟ್ಟಾಗಿ ನಿರ್ಮಾಣ ಮಾಡಿದ್ದವು. ಯುವ 3ನೇ ಚಿತ್ರಕ್ಕಾಗಿ ಕೂಡ ಈ 3 ಸಂಸ್ಥೆಗಳು ಕೈಜೋಡಿಸುತ್ತಿವೆ. ದುನಿಯಾ ವಿಜಯ್ ಮಗಳು ರಿತನ್ಯಾ ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ.

ಇದೊಂದು ವಿಭಿನ್ನ ಲವ್ ಸ್ಟೋರಿ ಆಗಿದ್ದು ಸೂರಿ ತಮ್ಮದೇ ಶೈಲಿಯಲ್ಲಿ ಸಿನಿಮಾ ಕಟ್ಟಿಕೊಡಲು ಮುಂದಾಗಿದ್ದಾರೆ. ಮುಂದಿನ ವರ್ಷವೇ ಸಿನಿಮಾ ತೆರೆಗೆ ತರುವ ಪ್ರಯತ್ನ ನಡೀತಿದೆ. 3ನೇ ಚಿತ್ರದಲ್ಲಾದರೂ ಅಣ್ಣಾವ್ರ ಮೊಮ್ಮಗನಿಗೆ ದೊಡ್ಡ ಬ್ರೇಕ್ ಸಿಗುತ್ತಾ ಕಾದು ನೋಡಬೇಕಿದೆ.

More from Filmibeat

English summary
Raghavendra Rajkumar’s 60th birthday celebration became memorable when Yuvarajkumar gifted him an Innova hybrid.
Read more about: raghavendra rajkumar ekka
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X