For Quick Alerts
  ALLOW NOTIFICATIONS  
  For Daily Alerts

  ತೆಲುಗಿನ ಖ್ಯಾತ ನಿರ್ಮಾಪಕರ ಪಾಲಾಯ್ತು ಯುವರತ್ನ ವಿತರಣೆ ಹಕ್ಕು

  |

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ಯುವರತ್ನ ಸಿನಿಮಾ ಏಪ್ರಿಲ್ 1 ರಂದು ಬಿಡುಗಡೆಯಾಗುತ್ತಿದೆ. ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ರಿಲೀಸ್ ಆಗುತ್ತಿರುವ ಈ ಚಿತ್ರ ಸೌತ್ ಇಂಡಿಯಾದಲ್ಲಿ ಹೆಚ್ಚು ನಿರೀಕ್ಷೆ ಮೂಡಿಸಿದೆ. ಯುವರತ್ನ ಸಿನಿಮಾ ಈಗಾಗಲೇ ಹಾಡುಗಳು ಮೂಲಕ ಸದ್ದು ಮಾಡ್ತಿದೆ. ಸಂತೋಷ್ ಆನಂದ್ ರಾಮ್ ನಿರ್ದೇಶಿಸಿರುವ ಈ ಚಿತ್ರಕ್ಕೆ ಎಸ್ ತಮನ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.

  ಕೆಜಿಎಫ್ ನಿರ್ಮಿಸಿದ್ದ ಹೊಂಬಾಳೆ ಬ್ಯಾನರ್ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದು, ದೊಡ್ಡ ಮಟ್ಟದಲ್ಲಿ ಸಿನಿಮಾ ಬಿಡುಗಡೆ ಮಾಡುವ ತಯಾರಿ ನಡೆದಿದೆ. ಇದೀಗ, ಯುವರತ್ನ ಚಿತ್ರದ ವಿತರಣೆ ಹಕ್ಕು ಟಾಲಿವುಡ್‌ನ ಖ್ಯಾತ ನಿರ್ಮಾಪಕ ಪಾಲಾಗಿದೆ. ಟಾಲಿವುಡ್ ಮಾತ್ರವಲ್ಲ ವಿದೇಶಗಳಲ್ಲೂ ಯುವರತ್ನ ಅದ್ಧೂರಿ ಎಂಟ್ರಿ ಕೊಡಲಿದೆ. ಅಷ್ಟಕ್ಕೂ, ತೆಲುಗಿನಲ್ಲಿ ಯುವರತ್ನ ಸಿನಿಮಾ ವಿತರಣೆ ಮಾಡ್ತಿರುವುದು ಯಾರು?

  ವಾರಾಹಿ ಚಲನಚಿತ್ರಂ ತೆಕ್ಕೆಗೆ ಯುವರತ್ನ

  ವಾರಾಹಿ ಚಲನಚಿತ್ರಂ ತೆಕ್ಕೆಗೆ ಯುವರತ್ನ

  ಈ ಹಿಂದೆ ರಾಕಿಂಗ್ ಸ್ಟಾರ್ ಯಶ್ ನಟಿಸಿದ್ದ ಕೆಜಿಎಫ್ ಚಾಪ್ಟರ್ 1 ಸಿನಿಮಾವನ್ನು ಆಂಧ್ರ-ತೆಲಂಗಾಣದಲ್ಲಿ ಬಿಡುಗಡೆ ಮಾಡಿದ್ದ ವಾರಾಹಿ ಚಲನಚಿತ್ರ ಸಂಸ್ಥೆ ಈಗ ಯುವರತ್ನ ಚಿತ್ರವನ್ನು ಖರೀದಿ ಮಾಡಿದೆ. ವೈಜಾಕ್‌ನಲ್ಲಿ (ವಿಶಾಖಪಟ್ಟಣಂ) ಪುನೀತ್ ಸಿನಿಮಾವನ್ನು ವಾರಾಹಿ ಸಂಸ್ಥೆ ಬಿಡುಗಡೆ ಮಾಡಲಿದೆ.

  ರಾಬರ್ಟ್ ಮುಗಿತು, ಯುವರತ್ನ ಪ್ರಿ-ರಿಲೀಸ್ ಕಾರ್ಯಕ್ರಮಕ್ಕೆ ಭರ್ಜರಿ ಸಿದ್ಧತೆರಾಬರ್ಟ್ ಮುಗಿತು, ಯುವರತ್ನ ಪ್ರಿ-ರಿಲೀಸ್ ಕಾರ್ಯಕ್ರಮಕ್ಕೆ ಭರ್ಜರಿ ಸಿದ್ಧತೆ

  Array

  Array

  ವೈಜಾಕ್‌ನಲ್ಲಿ ವಾರಾಹಿ, ನಿಜಾಮ್‌ನಲ್ಲಿ ದಿಲ್ ರಾಜು ಅವರ ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್, ನೆಲ್ಲೂರು ಜೆಪಿಆರ್ ಫಿಲಂಸ್, ಗುಂಟೂರು ಧನುಶ್ರೀ ಫಿಲಂಸ್, ಕೃಷ್ಣ ಅನ್ನಪೂರ್ಣ ಸ್ಟುಡಿಯೋಸ್ ಲಿಮಿಟೆಡ್, ಪಶ್ಚಿಮ ಗೋವಾದರಿ ಇಶ್ನಾ ಎಂಟರ್‌ಪ್ರೈಸಸ್ ಹಾಗೂ ಪೂರ್ವ ಗೋವಾದರಿ ಮಹಿಕಾ ಮೂವಿಸ್ ಸಂಸ್ಥೆ ಯುವರತ್ನ ಚಿತ್ರವನ್ನು ರಿಲೀಸ್ ಮಾಡಲಿದೆ.

  ವಿದೇಶದಲ್ಲಿ ವೀಕೆಂಡ್ ಸಿನಿಮಾ

  ವಿದೇಶದಲ್ಲಿ ವೀಕೆಂಡ್ ಸಿನಿಮಾ

  ಹೊರದೇಶಗಳಲ್ಲಿ ಯುವರತ್ನ ಸಿನಿಮಾ ತೆರೆಕಾಣಲಿದೆ. ಉತ್ತರ ಅಮೆರಿಕ ಹಾಗೂ ಕೆನೆಡಾ ದೇಶಗಳಲ್ಲಿ ವೀಕೆಂಡ್ ಸಿನಿಮಾ ಸಂಸ್ಥೆ ಪುನೀತ್ ಚಿತ್ರವನ್ನು ವಿತರಿಸುತ್ತಿದೆ. ಈ ಎರಡು ದೇಶಗಳನ್ನು ಬಿಟ್ಟು ಉಳಿದ ಕಡೆ ಎಪಿ ಇಂಟರ್‌ನ್ಯಾಷನಲ್ ಸಂಸ್ಥೆ ರಿಲೀಸ್ ಮಾಡುತ್ತಿದೆ.

  'ಯುವರತ್ನ' ಹಾಡಿನಲ್ಲಿ ಕಾಣಿಸಿಕೊಂಡ ದಿಗ್ಗಜರು: ಪುನೀತ್ ಸಿನಿಮಾದಲ್ಲಿ ಸಚಿನ್, ಪಿ ವಿ ಸಿಂಧು'ಯುವರತ್ನ' ಹಾಡಿನಲ್ಲಿ ಕಾಣಿಸಿಕೊಂಡ ದಿಗ್ಗಜರು: ಪುನೀತ್ ಸಿನಿಮಾದಲ್ಲಿ ಸಚಿನ್, ಪಿ ವಿ ಸಿಂಧು

  Recommended Video

  ಡಿ ಬಾಸ್ ಗೆ ಧನ್ಯವಾದ ಖುಷಿಯಿಂದ ಧನ್ಯವಾದ ಹೇಳಿದ ಯಡಿಯೂರಪ್ಪ | CM Yediyurappa | Darshan | Filmibeat Kannada
  ಕರ್ನಾಟಕದಲ್ಲಿ ಕೆಆರ್‌ಜಿ ಸ್ಟುಡಿಯೋಸ್

  ಕರ್ನಾಟಕದಲ್ಲಿ ಕೆಆರ್‌ಜಿ ಸ್ಟುಡಿಯೋಸ್

  ಇನ್ನು ಕರ್ನಾಟಕ ರಾಜ್ಯಾದ್ಯಂತ ಕಾರ್ತಿಕ್ ಗೌಡ ಅವರ ಕೆಆರ್‌ಜಿ ಸ್ಟುಡಿಯೋ ಯುವರತ್ನ ಚಿತ್ರವನ್ನು ರಿಲೀಸ್ ಮಾಡುತ್ತಿದೆ. ಕರ್ನಾಟದ ಹೊರಗೆ ಇತರೆ ರಾಜ್ಯಗಳಲ್ಲಿಯೂ ಕೆಆರ್‌ಜಿ ಸಂಸ್ಥೆಯೇ ಅಪ್ಪು ಸಿನಿಮಾವನ್ನು ವಿತರಣೆ ಮಾಡುತ್ತಿದೆ.

  English summary
  Power star Puneeth Rajkumar starrer Yuvarathna movie all over Distribution rights sold.
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X