ಯುವರತ್ನ ಹೊಸ ಪೋಸ್ಟರ್: ಸಖತ್ ಲುಕ್‌ನಲ್ಲಿ ಪುನೀತ್ ರಾಜ್‌ಕುಮಾರ್
ದಸರಾ ಹಬ್ಬಕ್ಕೆ ಪುನೀತ್ ರಾಜ್‌ಕುಮಾರ್ ಅಭಿನಯದ ಯುವರತ್ನ ಸಿನಿಮಾದ ಹೊಸ ಪೋಸ್ಟರ್ ಬಿಡುಗಡೆ ಆಗಿದೆ.
ಹೊಸ ಪೋಸ್ಟರ್‌ನಲ್ಲಿ ಸಖತ್ ರಗಡ್ ಲುಕ್‌ನಲ್ಲಿ ನಟ ಪುನೀತ್ ರಾಜ್‌ಕುಮಾರ್ ಕಾಣಿಸಿಕೊಂಡಿದ್ದಾರೆ. ಪುನೀತ್ ಅವರು ಗಡ್ಡಧಾರಿಯಾಗಿ ಹೊಸ ಪೋಸ್ಟರ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ಪುನೀತ್ ಅವರು ಗಡ್ಡಧಾರಿಯಾಗಿ ಕಾಣಿಸಿಕೊಂಡಿದ್ದು ಬಹಳ ಅಪರೂಪ, ಬಹುತೇಕ ಇದೇ ಮೊದಲ ಬಾರಿಗೆ ಪುನೀತ್ ಅವರು ಗಡ್ಡಧಾರಿಯಾಗಿ ಕಾಣಿಸಿಕೊಂಡಿದ್ದಾರೆ. ಪುನೀತ್ ಅವರಿಗೆ ಬಿಯರ್ಡ್ ಲುಕ್ ಸಖತ್ತಾಗಿ ಒಪ್ಪುತ್ತಿದೆ.

ಬಿಯರ್ಡ್ ಲುಕ್ ಫೋಟೊ ವೈರಲ್ ಆಗಿತ್ತು
ಕೆಲವು ದಿನಗಳ ಹಿಂದೆಯಷ್ಟೆ ಪುನೀತ್ ಅವರ ಬಿಯರ್ಡ್ ಲುಕ್‌ನ ಫೋಟೊ ಒಂದು ಸಖತ್ ವೈರಲ್ ಆಗಿತ್ತು. ಬಿಯರ್ಡ್ ಲುಕ್, ಪುನೀತ್ ಅಭಿಮಾನಿಗಳಿಗೆ ಬಹಳವೇ ಇಷ್ಟವಾಗಿತ್ತು. ಹಾಗಾಗಿ ಬಿಯರ್ಡ್ ಲುಕ್‌ನ ಪೋಸ್ಟರ್ ಅನ್ನೇ ಬಿಡುಗಡೆ ಮಾಡಲು ಚಿತ್ರತಂಡ ಮೊದಲೇ ನಿರ್ಧರಿಸಿದಂತಿದೆ.

ಮೊದಲೇ ಘೋಷಿಸಿದ್ದರು ಸಂತೋಶ್ ಆನಂದ್‌ರಾಮ್
ಪುನೀತ್ ಅವರ ಬಿಯರ್ಡ್ ಲುಕ್‌ನ ಪೋಸ್ಟರ್ ಅನ್ನು ದಸರಾ ಹಬ್ಬಕ್ಕೆ ಬಿಡುಗಡೆ ಮಾಡುವುದಾಗಿ ಹತ್ತು ದಿನದ ಹಿಂದೆಯೇ ಯುವರತ್ನ ಸಿನಿಮಾ ನಿರ್ದೇಶಕ ಸಂತೋಶ್ ಆನಂದ್‌ರಾಮ್ ಅವರು ಟ್ವಿಟ್ಟರ್‌ನಲ್ಲಿ ಘೋಷಿಸಿದ್ದರು. ಅಂತೆಯೇ ಈಗ ಪೋಸ್ಟರ್ ಬಿಡುಗಡೆ ಆಗಿದೆ.

ಯುವರತ್ನ ಚಿತ್ರೀಕರಣ ಬಹುತೇಕ ಪೂರ್ಣ
ಯುವರತ್ನ ಸಿನಿಮಾದ ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದೆ. ಹಾಡಿಗಾಗಿ ವಿದೇಶಕ್ಕೆ ಹೋಗಬೇಕಿದ್ದ ಚಿತ್ರತಂಡ, ಕೊರೊನಾ ಕಾರಣದಿಂದ ಭಾರತದ ಕೆಲವು ಪ್ರದೇಶಗಳಲ್ಲಿಯೇ ಚಿತ್ರೀಕರಣ ಮುಗಿಸಿದೆ. ಸಿನಿಮಾವು ಬಿಡುಗಡೆಗೆ ಸಿದ್ಧವಾಗಿದ್ದು, ಚಿತ್ರಮಂದಿರಗಳು ಸಾಮಾನ್ಯ ಸ್ಥಿತಿಗೆ ಬಂದ ನಂತರ ಯುವರತ್ನ ಬಿಡುಗಡೆ ಆಗುವ ಸಾಧ್ಯತೆ ಇದೆ.
Recommended Video

ಜೇಮ್ಸ್ ಸಿನಿಮಾದ ಚಿತ್ರೀಕರಣ
ಇನ್ನು ಪುನೀತ್ ಅವರು ಜೇಮ್ಸ್ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಕಳೆದೆರಡು ವಾರದಿಂದಲೂ ಪುನೀತ್ ಹೊಸಪೇಟೆ, ಗಂಗಾವತಿ, ಕೊಪ್ಪಳ ಮುಂತಾದ ಜಾಗಗಳಲ್ಲಿ ಚಿತ್ರೀಕರಣ ಮಾಡಿದ್ದಾರೆ. ಚಿತ್ರೀಕರಣ ಭರದಿಂದ ಸಾಗಿದೆ.


Click it and Unblock the Notifications











