ವಿದ್ಯಾರ್ಥಿಯಾಗಿ ಕಾಲೇಜ್ ಗೆ ಹೊರಟ ಸ್ಟೈಲಿಶ್ ಸ್ಟಾರ್ ಪುನೀತ್
ಸಂತೋಷ್ ಆನಂದ್ ರಾಮ್ ಮತ್ತು ಪುನೀತ್ ರಾಜ್ ಕುಮಾರ್ ಜೋಡಿಯಲ್ಲಿ ಬರ್ತಿರುವ ಯುವರತ್ನ ಸಿನಿಮಾದ ಮೂರನೇ ಹಂತದ ಚಿತ್ರೀಕರಣ ಇಂದಿನಿಂದ ಆರಂಭವಾಗಿದೆ.
ಈಗಾಗಲೇ ಎರಡು ಹಂತದ ಚಿತ್ರೀಕರಣ ಮುಗಿಸಿರುವ ಯುವರತ್ನ ಈಗ ಮತ್ತೆ ಶೂಟಿಂಗ್ ಶುರು ಮಾಡಿದೆ. ಈ ನಡುವೆ ಪುನೀತ್ ಅವರ ಹೊಸ ಫೋಟೋವೊಂದು ಬಹಿರಂಗವಾಗಿದ್ದು, ಪವರ್ ಸ್ಟಾರ್ ಮತ್ತಷ್ಟು ಯಂಗ್ ಆಗಿದ್ದಾರೆ.
ಯುವರತ್ನ ಚಿತ್ರದಲ್ಲಿ ತುಂಬಾ ವರ್ಷದ ಕಾಲೇಜ್ ವಿದ್ಯಾರ್ಥಿಯಾಗಿ ಪುನೀತ್ ರಾಜ್ ಕುಮಾರ್ ನಟಿಸುತ್ತಿದ್ದು, ಅದಕ್ಕಾಗಿ ತಮ್ಮ ಲುಕ್ ನಲ್ಲಿ ಮೇಕ್ ಓವರ್ ಮಾಡಿಕೊಂಡಿದ್ದಾರೆ.

ಬೈಕ್ ನಲ್ಲಿ ಸಖತ್ ಸ್ಟೈಲ್ ಆಗಿ ಕೂತಿರುವ ಅಪ್ಪು ಫೋಟೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.
ಇನ್ನುಳಿದಂತೆ ಹೊಂಬಾಳೆ ಫಿಲಂಸ್ ಬ್ಯಾನರ್ ನಲ್ಲಿ ಈ ಸಿನಿಮಾ ತಯಾರಾಗುತ್ತಿದ್ದು, ಸಯೇಶಾ ಸೈಗಲ್ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ವಸಿಷ್ಠ ಸಿಂಹ, ಧನಂಜಯ್, ಹಿರಿಯ ನಟಿ ರಾಧಿಕಾ ಶರತ್ ಕುಮಾರ್ ಕೂಡ ಸಿನಿಮಾದಲ್ಲಿ ನಟಿಸಲಿದ್ದಾರೆ.
English summary
Santhosh ananddram directional puneeth rajkumar starrer yuvarathna movie Third Schedule started from today.


Click it and Unblock the Notifications