ಕರ್ನಾಟಕದ ಹುಡುಗಿಯರಿಗೆ ಚಾಲೆಂಜ್ ಹಾಕಿದ 'ಯುವರತ್ನ' ನಾಯಕಿ ಸಯೇಶಾ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ಬಹು ನಿರೀಕ್ಷೆಯ 'ಯುವರತ್ನ' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಅಂದುಕೊಂಡಂತೆ ಆಗಿದ್ದರೆ ಸಿನಿಮಾ ಈಗಾಗಲೇ ರಿಲೀಸ್ ಆಗಬೇಕಿತ್ತು. ಆದರೆ ಆದರೆ ಕೊರೊನಾ ಕಾರಣ ಸಿನಿಮಾ ರಿಲೀಸ್ ಮುಂದಕ್ಕೆ ಹೋಗಿದ್ದು, ಮುಂದಿನ ವರ್ಷ ತೆರೆಗೆ ಬರಲು ಸಿದ್ಧವಾಗಿದೆ.

Recommended Video

#PowerOfYouth ಕರ್ನಾಟಕದ ಹುಡುಗಿಯರಿಗೆ ಚಾಲೆಂಜ್ ಹಾಕಿದ ಯುವರತ್ನ ಬೆಡಗಿ | Yuvarathnaa | Filmibeat Kannada

ಯುವರತ್ನ ಸಿನಿಮಾದ ಅಪ್ ಡೇಟ್ ಆಗಿ ಕಾಯುತ್ತಿದ್ದ ಅಭಿಮಾನಿಗಳಿಗೆ ಯುವರತ್ನ ಸಿನಿಮಾದಿಂದ ಬಂದ ಮೊದಲ ಹಾಡು, ಅಪ್ಪು ಅಭಿಮಾನಿಗಳನ್ನು ಕುಣಿದು ಕುಪ್ಪಳಿಸುವಂತೆ ಮಾಡಿದೆ. ಚಿತ್ರದಿಂದ ರಿಲೀಸ್ ಆಗಿರುವ ಪವರ್ ಆಫ್ ಯೂತ್ ಹಾಡು ಈಗಾಗಲೇ ಟ್ರೆಂಡಿಂಗ್ ನಲ್ಲಿದ್ದು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

ವಿಶೇಷ ಎಂದರೆ ಈ ಹಾಡು, ಕನ್ನಡ ಜೊತೆಗೆ ತೆಲುಗಿನಲ್ಲೂ ರಿಲೀಸ್ ಆಗಿದೆ. ವಿಶೇಷ ಎಂದರೆ ಮತ್ತಷ್ಟು ಗಮನ ಸೆಳೆಯುವ ಉದ್ದೇಶದಿಂದ ಚಿತ್ರತಂಡ ಹೊಸ ಪ್ಲಾನ್ ಮಾಡಿದ್ದು. 'ಪವರ್ ಆಫ್ ಯೂತ್' ಎಂಬ ಚಾಲೆಂಜ್ ಆರಂಭಿಸಿದೆ. ಅಭಿಮಾನಿಗಳು ಡ್ಯಾನ್ಸ್ ವಿಡಿಯೋ ಮಾಡಿ ಕಳುಹಿಸಿ ಎಂದು ಕರೆ ನೀಡಿದೆ. ಮುಂದೆ ಓದಿ...

ಕರ್ನಾಟಕದ ಹುಡುಗಿಯರಿಗೆ ಸಯೇಶಾ ಚಾಲೆಂಜ್

ಕರ್ನಾಟಕದ ಹುಡುಗಿಯರಿಗೆ ಸಯೇಶಾ ಚಾಲೆಂಜ್

ಚಿತ್ರದ ನಾಯಕಿ ಸಯೇಶಾ ಪವರ್ ಆಫ್ ಯೂತ್ ಹಾಡಿಗೆ ಮಸ್ತ್ ಸ್ಟೆಪ್ ಹಾಕಿ, ಹುಡುಗಿಯರಿಗೆ ಅದರಲ್ಲೂ ಕರ್ನಾಟಕದ ಹುಡುಗಿಯರಿಗೆ ಚಾಲೆಂಜ್ ಹಾಕಿದ್ದಾರೆ. ನಟಿ ಸಯೇಶಾ ಡ್ಯಾನ್ಸ್ ಮಾಡಿರುವ ವಿಡಿಯೋ ಶೇರ್ ಮಾಡಿ, ಕರ್ನಾಟಕದ ಹುಡುಗಿಯರಿಗೆ ಮತ್ತು ಎಲ್ಲರಿಗೂ ನಿಮ್ಮ ಡ್ಯಾನ್ಸ ಪವರ್ ಅನ್ನು ತೋರಿಸಿ. ವಿಡಿಯೋ ಮಾಡಿ ಕಳುಹಿಸಿ' ಎಂದು ಬರೆದುಕೊಂಡಿದ್ದಾರೆ. ಜೊತೆಗೆ #PowerOfYouthDanceChallenge, #Yuvarathnaa ಎಂದು ಹ್ಯಾಶ್ ಟ್ಯಾಗ್ ಹಾಕಿ ವಿಡಿಯೋ ಶೇರ್ ಮಾಡಿ ಎಂದು ಕೇಳಿಕೊಂಡಿದ್ದಾರೆ.

ಉತ್ತಮ ಡ್ಯಾನ್ಸ್ ವಿಡಿಯೋಗೆ ಕಾದಿದೆ ಸರ್ಪ್ರೈಸ್

ಅಂತಿಮವಾಗಿ ದಿ ಬೆಸ್ಟ್ ಎನಿಸುವ ವಿಡಿಯೋಗೆ ಪುನೀತ್ ರಾಜ್ ಕುಮಾರ್ ಹಾಗೂ ಯುವರತ್ನ ಚಿತ್ರತಂಡದಿಂದ ಸ್ಪೆಷಲ್ ಹಾಗೂ ಸರ್ಪ್ರೈಸ್ ಉಡುಗೊರೆ ಇದೆ ಎಂದು ನಿರ್ದೇಶಕ ಸಂತೋಷ್ ಆನಂದ್ ರಾಮ್ ಮತ್ತು ಪುನೀತ್ ರಾಜ್ ಕುಮಾರ್ ವಿಡಿಯೋ ಮೂಲಕ ಬಹಿರಂಗ ಪಡಿಸಿದ್ದರು.

ಸಂತೋಷ್ ಆನಂದ್ ರಾಮ್ ಸಾಹಿತ್ಯ , ತಮನ್ ಸಂಗೀತ

ಸಂತೋಷ್ ಆನಂದ್ ರಾಮ್ ಸಾಹಿತ್ಯ , ತಮನ್ ಸಂಗೀತ

ಸದ್ಯ ರಿಲೀಸ್ ಆಗಿರುವ ಪವರ್ ಆಫ್ ಯೂತ್ ಹಾಡಿನ ಸಾಹಿತ್ಯವನ್ನು ಸಂತೋಷ್ ಆನಂದ್ ರಾಮ್ ಅವರೇ ರಚಿಸಿದ್ದಾರೆ. ಎಸ್ ಎಸ್ ತಮನ್ ಸಂಗೀತ ಸಂಯೋಜನೆ ಮಾಡಿದ್ದಾರೆ. ನಕಾಶ್ ಅಜೀಜ್ ಹಾಡಿದ್ದಾರೆ. ಮೊದಲನೇ ಹಾಡು ಹಿಟ್ ಆದ ಬಳಿಕ ಎರಡನೇ ಹಾಡು ಬಿಡುಗಡೆ ಮಾಡಲು ವೇದಿಕೆ ಸಜ್ಜಾಗುತ್ತಿದೆ. ಚಿತ್ರದಿಂದ ಬರ್ತಿರುವ ಎರಡನೇ ಹಾಡನ್ನು ಸ್ವತಃ ಪುನೀತ್ ರಾಜ್ ಕುಮಾರ್ ಹಾಡಿದ್ದಾರೆ.

ಚಿತ್ರದಲ್ಲಿದೆ ದೊಡ್ಡ ತಾರಾಬಳಗ

ಚಿತ್ರದಲ್ಲಿದೆ ದೊಡ್ಡ ತಾರಾಬಳಗ

ಚಿತ್ರದಲ್ಲಿ ಪುನೀತ್‌ಗೆ ಜೋಡಿಯಾಗಿ ಸಯೇಶಾ ಕಾಣಿಸಿಕೊಂಡಿದ್ದಾರೆ. ಮೊದಲ ಬಾರಿಗೆ ಸಯೇಶಾ ಕನ್ನಡ ಸಿನಿಮಾದಲ್ಲಿ ನಟಿಸಿದ್ದು, ಪವರ್ ಸ್ಟಾರ್ ಜೊತೆ ಕನ್ನಡ ಅಭಿಮಾನಿಗಳ ಮುಂದೆ ಬರಲು ಸಖತ್ ಎಕ್ಸಾಯಿಟ್ ಆಗಿದ್ದಾರೆ. ಇನ್ನು ಇಳಿದಂತೆ ಸೋನು ಗೌಡ, ಧನಂಜಯ್, ಪ್ರಕಾಶ್ ರಾಜ್, ದಿಗಂತ್, ವಸಿಷ್ಠ ಸಿಂಹ ಸೇರಿದಂತೆ ಹಲವರು ನಟಿಸಿದ್ದಾರೆ.

More from Filmibeat

English summary
Puneeth Rajkumar's Yuvarathnaa Movie Heroine Sayyeshaa started power of youth dance challenge.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X