'ಯುವರತ್ನ': ನಟಿ ಸಯೇಶಾ ಲುಕ್ ಮತ್ತು ಪಾತ್ರ ರಿವೀಲ್
ಪವರ್ ಸ್ಟಾರ್ ಪುನೀತ್ ಅಭಿನಯದ 'ಯುವರತ್ನ' ಸಿನಿಮಾ ಪೋಸ್ಟರ್ ಮತ್ತು ಟೀಸರ್ ಗಳ ಮೂಲಕವೇ ಭಾರಿ ನಿರೀಕ್ಷೆ ಹುಟ್ಟುಹಾಕಿದೆ. ಸಿನಿಮಾದ ಬಗ್ಗೆ ಅಪ್ ಗಾಗಿ, ಹಾಡುಗಳನ್ನು ರಿಲೀಸ್ ಮಾಡಿ ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಒತ್ತಾಯ ಮಾಡುತ್ತಿದ್ದಾರೆ. ಮೊನ್ನೆ ಮೊನ್ನೆಯಷ್ಟೆ ಸಿನಿಮಾತಂಡ ಪುನೀತ್ ರಾಜ್ ಕುಮಾರ್ ಅವರ ಸ್ಟೈಲಿಶ್ ಲುಕ್ ಅನ್ನು ರಿಲೀಸ್ ಮಾಡಿ ಅಭಿಮಾನಿಗಳ ಮನ ತಣಿಸಿತ್ತು.
Recommended Video
ಚಿತ್ರಕ್ಕೆ ಸಂಬಂಧಿಸಿದ ಇನ್ನಷ್ಟು ಕೆಲಸಗಳು ಬಾಕಿ ಇದೆ. ಆದರೆ ಸಿನಿಮಾತಂಡ ಅಭಿಮಾನಿಗಳಿಗೆ ಚಿತ್ರದ ನಾಯಕಿಯ ಲುಕ್ ಮತ್ತು ಪಾತ್ರವನ್ನು ಪರಿಚಯ ಮಾಡಿಸಿದೆ. ಹೌದು, ಯುವರತ್ನ ಸಿನಿಮಾದ ನಾಯಕಿ ಸಯೇಶಾ ಸೈಗಲ್ ಲುಕ್ ಮತ್ತು ಪಾತ್ರವನ್ನು ಸಿನಿಮಾತಂಡ ರಿವೀಲ್ ಮಾಡಿದೆ.
ಅಂದ್ಹಾಗೆ ಇಂದು ಸಯೇಶಾಗೆ ಹುಟ್ಟುಹಬ್ಬದ ಸಂಭ್ರಮ. ಈ ಖುಷಿಗೆ ಸಯೇಶಾ ಫಸ್ಟ್ ಲುಕ್ ರಿಲೀಸ್ ಮಾಡಿ ಅಭಿಮಾನಿಗಳ ಸಂಭ್ರಮ ಹೆಚ್ಚಿಸಿದೆ ಸಿನಿಮಾತಂಡ. ನಿರ್ದೇಶಕ ಸಂತೋಷ್ ಆನಂದ್ ರಾಮ್ ಲುಕ್ ರಿಲೀಸ್ ಮಾಡಿ ಸಯೇಶಾಗೆ ಶುಭಹಾರೈಸಿದ್ದಾರೆ.

ಇನ್ನೂ ಸಿನಿಮಾದಲ್ಲಿ ಸಯೇಶಾ ವಂದನಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕಾಲೇಜು ಹುಡುಗಿಯ ಪಾತ್ರದಲ್ಲಿ ಸಯೇಶಾ ಬಣ್ಣಹಚ್ಚಿದ್ದಾರೆ. ಮುಂಬೈ ಮೂಲಕ ನಟಿ ಸಯೇಶಾ ಮೊದಲ ಬಾರಿಗೆ ಕನ್ನಡ ಸಿನಿಮಾದಲ್ಲಿ ಮಿಂಚುತ್ತಿದ್ದಾರೆ.
ಯುವರತ್ನ ಸಿನಿಮಾದಲ್ಲಿ ದೊಡ್ಡ ತಾರಾಬಳಗವೆ ಇದೆ. ದಿಗಂತ್, ಧನಂಜಯ್, ಸೋನು ಗೌಡ ಸೇರಿದ್ದಂತೆ ಸಾಕಷ್ಟು ಕಲಾವಿದರು ಬಣ್ಣ ಹಚ್ಚಿದ್ದಾರೆ. ಚಿತ್ರಕ್ಕೆ ತಮನ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಚಿತ್ರದ ಹಾಡುಗಳಿಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.


Click it and Unblock the Notifications











