For Quick Alerts
  ALLOW NOTIFICATIONS  
  For Daily Alerts

  ರಾಬರ್ಟ್ ಮುಗಿತು, ಯುವರತ್ನ ಪ್ರಿ-ರಿಲೀಸ್ ಕಾರ್ಯಕ್ರಮಕ್ಕೆ ಭರ್ಜರಿ ಸಿದ್ಧತೆ

  |

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಯುವರತ್ನ ಸಿನಿಮಾ ಬಿಡುಗಡೆಗೆ ಎಲ್ಲ ತಯಾರಿ ನಡೆಯುತ್ತಿದೆ. ಏಪ್ರಿಲ್ 1ಕ್ಕೆ ಯುವರತ್ನ ಸಿನಿಮಾ ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ರಿಲೀಸ್ ಆಗಲಿದೆ.

  ಪೊಗರು ಅಬ್ಬರ ನೋಡಿದ್ದಾಯಿತು, ರಾಬರ್ಟ್ ಘರ್ಜನೆ ನಡೆಯಬೇಕಿದೆ. ಡಿ ಬಾಸ್ ಎಂಟ್ರಿ ಮುಗಿದ ತಕ್ಷಣ ಚಿತ್ರಮಂದಿರಗಳಲ್ಲಿ ಪವರ್ ಸ್ಟಾರ್ ಆಗಮನವಾಗಲಿದೆ.

  ಪುನೀತ್ 'ಯುವರತ್ನ' ಸಿನಿಮಾದಲ್ಲಿ 'ರಾಧಾ ರಮಣ' ಖ್ಯಾತಿಯ ನಟಿ ಶ್ವೇತಾ ಪ್ರಸಾದ್ಪುನೀತ್ 'ಯುವರತ್ನ' ಸಿನಿಮಾದಲ್ಲಿ 'ರಾಧಾ ರಮಣ' ಖ್ಯಾತಿಯ ನಟಿ ಶ್ವೇತಾ ಪ್ರಸಾದ್

  ಕೊರೊನಾದಿಂದ ಸುಧಾರಿಸಿಕೊಳ್ಳುತ್ತಿರುವ ಚಿತ್ರರಂಗ, ಒಬ್ಬರಿಂದ ಒಬ್ಬರಿಗೆ ತೊಂದರೆಯಾಗದಂತೆ ರಿಲೀಸ್ ದಿನಾಂಕ ನಿರ್ಧರಿಸಿದೆ. ಪ್ರತಿ ಸ್ಟಾರ್ ಸಿನಿಮಾಗಳಿಗೂ ಎರಡು ವಾರಗಳಂತೆ ಅಂತರ ಕಾಪಾಡಿಕೊಳ್ಳಲಾಗಿದೆ.

  ಮಾರ್ಚ್ 11ಕ್ಕೆ ರಾಬರ್ಟ್ ಎಂಟ್ರಿ, ನಂತರ ಏಪ್ರಿಲ್ 1ಕ್ಕೆ ಯುವರತ್ನ ಬಿಡುಗಡೆಯಾಗಲಿದೆ. ಈ ನಡುವೆ ಯುವರತ್ನ ಸಿನಿಮಾದ ಪ್ರಿ-ರಿಲೀಸ್ ಕಾರ್ಯಕ್ರಮಕ್ಕೆ ಭರ್ಜರಿ ಸಿದ್ಧತೆ ಸಾಗುತ್ತಿದೆ. ಯುವರತ್ನ ಕಾರ್ಯಕ್ರಮದ ಹಿನ್ನೆಲೆ ನಿರ್ದೇಶಕ ಸಂತೋಷ್ ಆನಂದ್ ರಾಮ್ ಹಾಗೂ ತಂಡ ಇಂದು ಸಭೆ ನಡೆಸಿ ಕೆಲವು ವಿಚಾರಗಳನ್ನು ನಿರ್ಧರಿಸಿದೆ.

  ವಿಡಿಯೋ ವೈರಲ್: ಪುನೀತ್ ರಾಜ್ ಕುಮಾರ್ ಬ್ಯಾಕ್ ಡೈವ್ ಗೆ ಅಭಿಮಾನಿಗಳು ಫಿದಾವಿಡಿಯೋ ವೈರಲ್: ಪುನೀತ್ ರಾಜ್ ಕುಮಾರ್ ಬ್ಯಾಕ್ ಡೈವ್ ಗೆ ಅಭಿಮಾನಿಗಳು ಫಿದಾ

  ಪ್ರಿ-ರಿಲೀಸ್ ಕಾರ್ಯಕ್ರಮ ಎಲ್ಲಿ ಆಯೋಜಿಸಬೇಕು, ಅದಕ್ಕೆ ಬೇಕಾದ ತಯಾರಿಗಳೇನು ಎನ್ನುವುದರ ಬಗ್ಗೆ ರೂಪುರೇಷೆಗಳು ತಯಾರಾಗುತ್ತಿದೆ. ಹೊಂಬಾಳೆ ಫಿಲಂಸ್‌ನ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ ಸಹ ಈ ಸಭೆಯಲ್ಲಿ ಪಾಲ್ಗೊಂಡಿದ್ದರು. ಕರ್ನಾಟಕ ಹಾಗು ಆಂಧ್ರದಲ್ಲಿ ಯಾವ ರೀತಿ ಪ್ರಚಾರ ಮಾಡಬೇಕು ಎನ್ನುವುದರ ಕುರಿತು ಚರ್ಚಿಸಲಾಗಿದೆ.

  ಅಂದ್ಹಾಗೆ, ಫೆಬ್ರವರಿ 26 ರಂದು ಹೈದರಾಬಾದ್‌ನಲ್ಲಿ ರಾಬರ್ಟ್ ಸಿನಿಮಾ ಪ್ರಿ-ರಿಲೀಸ್ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿದೆ. ಫೆಬ್ರವರಿ 28 ರಂದು ಹುಬ್ಬಳ್ಳಿಯಲ್ಲಿಯೂ ರಾಬರ್ಟ್ ಕನ್ನಡ ಸಿನಿಮಾದ ಪ್ರಿ-ರಿಲೀಸ್ ಕಾರ್ಯಕ್ರಮ ನೆರವೇರಿತ್ತು. ಈಗ ಯುವರತ್ನನ ಶೋಗೆ ಸ್ಯಾಂಡಲ್‌ವುಡ್ ಸಜ್ಜಾಗುತ್ತಿದೆ.

  Yash Next Movie : ರಾಕಿಂಗ್ ಸ್ಟಾರ್ ಯಶ್ ಮುಂದಿನ ಸಿನಿಮಾ ಯಾವುದು? | Filmibeat Kannada

  ಪುನೀತ್ ರಾಜ್ ಕುಮಾರ್ ನಟನೆಯ ಈ ಚಿತ್ರವನ್ನು ಹೊಂಬಾಳೆ ಫಿಲಂಸ್ ನಿರ್ಮಿಸುತ್ತಿದೆ. ಸಂತೋಷ್ ಆನಂದ್ ರಾಮ್ ನಿರ್ದೇಶಿಸಿದ್ದು, ಎಸ್ ತಮನ್ ಸಂಗೀತ ನೀಡಿದ್ದಾರೆ. ಧನಂಜಯ್, ವಸಿಷ್ಠ ಸಿಂಹ, ಪ್ರಿಯಾ ಆನಂದ್ ಸೇರಿದಂತೆ ಹಲವರು ನಟಿಸಿದ್ದಾರೆ.

  English summary
  Director Santhosh ananddram and team Planning to Fix Pre Release Event of Yuvarathnaa movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X