ಯೂಟ್ಯೂಬ್ ನಲ್ಲಿ ಯುವರತ್ನ ಅಬ್ಬರ: ಎರಡನೇ ದಿನಕ್ಕೆ ದಾಖಲೆ

Recommended Video

Yuvaratna movie teaser creates new record in Youtube | Yuvaratna| FILMIBEAT KANNADA

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ಯುವರತ್ನ ಸಿನಿಮಾದ ಟೀಸರ್ ದಸರಾ ಹಬ್ಬದ ಪ್ರಯುಕ್ತ ಬಿಡುಗಡೆಯಾಗಿತ್ತು. ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಯುವರತ್ನ ಟೀಸರ್ ಯೂಟ್ಯೂಬ್ ನಲ್ಲಿ ಅಬ್ಬರಿಸಿತ್ತು.

ಯುವರತ್ನ ಟೀಸರ್ ಬಿಡುಗಡೆಯಾಗಿ 48 ಗಂಟೆಗಳು ಕಳೆದಿದ್ದು, 2 ಮಿಲಿಯನ್ (20 ಲಕ್ಷ) ವೀವ್ಸ್ ಕಂಡಿದೆ. ಅದರಲ್ಲಿ 109 ಲೈಕ್ಸ್ ಬಂದಿದ್ದು, 6.2 ಡಿಸ್ ಲೈಕ್ಸ್ ಬಂದಿದೆ. ಯೂಟ್ಯೂಬ್ ಟ್ರೆಂಡಿಂಗ್ ನಲ್ಲಿ 6ನೇ ಸ್ಥಾನದಲ್ಲಿದೆ.

ಇನ್ನು ಈ ಟೀಸರ್ ಗೆ 40 ಸಾವಿರಕ್ಕೂ ಹೆಚ್ಚು ಕಾಮೆಂಟ್ ಬಂದಿದ್ದು, ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಕಾಮೆಂಟ್ ಪಡೆದ ಕನ್ನಡ ಟೀಸರ್ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ.

Yuvaratna Creats Record In Youtube

ಅಪ್ಪು, ಅಭಿ ಸಿನಿಮಾಗಳ ಬಳಿಕ ಪುನೀತ್ ರಾಜ್ ಕುಮಾರ್ ಅವರು ಕಾಲೇಜ್ ಸ್ಟೂಡೆಂಟ್ ಆಗಿ ಕಾಣಿಸಿಕೊಳ್ಳುತ್ತಿದ್ದು, ಯುವರತ್ನ ಸಿನಿಮಾ ಸಖತ್ ಸದ್ದು ಮಾಡ್ತಿದೆ.

ವಿಶೇಷ ಅಂದ್ರೆ ಈ ಸಿನಿಮಾದಲ್ಲಿ ಅಪ್ಪು ರಗ್ಬಿ ಆಟಗಾರನಾಗಿಯೂ ಅಭಿನಯಿಸಿದ್ದಾರೆ. ಶಿಕ್ಷಣ ಉದ್ಯಮದಲ್ಲಿ ನಡೆಯುವ ಹಗರಣದ ವಿರುದ್ಧ ಪುನೀತ್ ಧ್ವನಿ ಎತ್ತುವ ಪಾತ್ರದಲ್ಲಿ ನಟಿಸಿದ್ದಾರೆ.

'ರಾಜಕುಮಾರ' ಸಿನಿಮಾ ಬಳಿಕ ನಿರ್ದೇಶಕ ಸಂತೋಷ್ ಆನಂದ್ ರಾಮ್ ಮತ್ತು ಪುನೀತ್ ರಾಜ್ ಕುಮಾರ್ ಜೋಡಿಯಲ್ಲಿ ಯುವರತ್ನ ಸಿನಿಮಾ ಬರ್ತಿದೆ. ಹೊಂಬಾಳೆ ಫಿಲಂಸ್ ಬ್ಯಾನರ್ ನಲ್ಲಿ ವಿಜಯ್ ಕಿರಗಂದೂರ್ ನಿರ್ಮಿಸುತ್ತಿದ್ದಾರೆ. ಸಯೀಶಾ ಸೈಗಲ್ ನಾಯಕಿಯಾಗಿದ್ದು, ವಸಿಷ್ಠ ಸಿಂಹ, ಧನಂಜಯ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

More from Filmibeat

English summary
Powerstar Puneeth Rajkumar starrer Yuvaratna movie teaser creates new record in Youtube.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X