ಧಾರವಾಡ ಕಡೆ ಪಯಣ ಬೆಳೆಸಿದ ಪುನೀತ್ ರಾಜ್ ಕುಮಾರ್ : ಕಾರಣ ಇಲ್ಲಿದೆ

Recommended Video

ಅವಸರವಾಗಿ ಪುನೀತ್ ಧಾರವಾಡಕ್ಕೆ ಹೊರಟಿದ್ದು ಯಾಕೆ ಗೊತ್ತಾ..? | FILMIBEAT KANNADA

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸದ್ಯ ಕನ್ನಡ ಕೋಟ್ಯಾಧಿಪತಿ ರಿಯಾಲಿ ಶೋ ನಲ್ಲಿ ಬ್ಯುಸಿಯಾಗಿದ್ದಾರೆ. ಮೊನ್ನೆ ಮೊನ್ನೆಯಷ್ಟೆ ಬಹು ನಿರೀಕ್ಷೆಯ ರಿಯಾಲಿಟಿ ಶೋ ಕನ್ನಡದ ಕೋಟ್ಯಾಧಿಪತಿ ಪ್ರಾರಂಭವಾಗಿದೆ. ಈಗಾಗಲೆ ಅಪ್ಪು ಪ್ರಶ್ನೆ ಕೇಳಲು ಶುರು ಮಾಡಿಕೊಂಡಿದ್ದಾರೆ. ಇದರ ನಡುವೆ ಈಗ ಪುನೀತ್ ಧಾರವಾಡಕ್ಕೆ ಹೊರಟಿದ್ದಾರೆ.

ಪವರ್ ಸ್ಟಾರ್ ಪುನೀತ್ ಯಾಕೆ ದಿಢೀರನೆ ಧಾರವಾಡ ಕಡೆ ಪಯಣ ಬೆಳೆಸಿದ್ದಾರೆ ಅಂತ ಅಚ್ಚರಿ ಆಗುತ್ತಿದ್ದಿಯಾ. ಪವರ್ ಸ್ಟಾರ್ ಧಾರವಾಡದ ಕಡೆ ಹೊರಟಿದ್ದು ಚಿತ್ರೀಕರಣಕ್ಕಾಗಿ. ಹೌದು, ಈಗಾಗಲೆ ಅಪ್ಪು ಅಭಿನಯದ 'ಯುವರತ್ನ' ಚಿತ್ರದ ಚಿತ್ರೀಕರಣ ಭರದಿಂದ ನಡೆಯುತ್ತಿದೆ. ಯುವರತ್ನ ಚಿತ್ರೀಕರಣ ನಡುವೆಯು ಪುನೀತ್ ಕನ್ನಡದ ಕೋಟ್ಯಾಧಿಪತಿ ಶೋನಲ್ಲೂ ಬ್ಯುಸಿಯಾಗಿದ್ದಾರೆ.

ಕಳೆದ ಕೆಲವು ದಿನಗಳಿಂದ ಮೈಸೂರಿನಲ್ಲಿ ಬೀಡುಬಿಟ್ಟಿದ್ದ ಪುನೀತ್ ಮತ್ತು ತಂಡ ಈಗ ಮೈಸೂರಿನಿಂದ ಧಾವರಾಡ ಕಡೆ ಹೊರಟಿದೆ. ವಿಶೇಷ ಅಂದ್ರೆ ಈಗಾಗಲೆ ಧಾರವಾಡದಲ್ಲಿ ಚಿತ್ರದ ಒಂದಿಷ್ಟು ಭಾಗದ ಚಿತ್ರೀಕರಣ ಮಾಡಿ ಮುಗಿಸಲಾಗಿದೆ. ಆದ್ರೆ ಎರಡನೇ ಬಾರಿಗೆ ಧಾರವಾಡಕ್ಕೆ ಹೊರಟಿದೆ ಚಿತ್ರತಂಡ.

ಧಾರವಾಡ ಜನತೆಗೆ 'ಯುವರತ್ನನ' ದರ್ಶನ

ಧಾರವಾಡ ಜನತೆಗೆ 'ಯುವರತ್ನನ' ದರ್ಶನ

ಕನ್ನಡದ ಕೋಟ್ಯಧಿಪತಿ ಮೂಲಕ ಪ್ರತೀ ಭಾನುವಾರ ಮತ್ತು ಶನಿವಾರ ಕಿರುತೆರೆ ಪ್ರೇಕ್ಷಕರ ಮನೆಗೆ ಹೋಗುತ್ತಿದ್ದಾರೆ ಪುನೀತ್. ಇದರ ನಡುವೆ ಈಗ ಧಾರವಾಡ ಜನತೆಯ ನೇರದರ್ಶನಕ್ಕೆ ಸಜ್ಜಾಗಿದ್ದಾರೆ. ಅಂದ್ರೆ 'ಯುವರತ್ನ' ಚಿತ್ರದ ಚಿತ್ರೀಕರಣ ನಾಳೆಯಿಂದ(ಜೂನ್ 24) ಧಾರವಾಡದಲ್ಲಿ ನಡೆಯಲಿದೆ. ಹಾಗಾಗಿ ಇಡೀ ಚಿತ್ರತಂಡ ಧಾರವಾಡಕ್ಕೆ ಹೊರಟು ನಿಂತಿದೆ. ಅಂದ್ಹಾಗೆ ಈ ಮೊದಲು ಚಿತ್ರದ ಒಂದಿಷ್ಟು ಪ್ರಮುಖ ದೃಶ್ಯಗಳನ್ನು ಧಾರವಾಡದಲ್ಲಿ ಸೆರೆ ಹಿಡಿಯಲಾಗಿದೆ.

5ನೇ ಹಂತದ ಚಿತ್ರೀಕರಣ ಪ್ರಾರಂಭ

5ನೇ ಹಂತದ ಚಿತ್ರೀಕರಣ ಪ್ರಾರಂಭ

ಈಗಾಗಲೆ ನಾಲ್ಕು ಹಂತದ ಚಿತ್ರೀಕರಣವನ್ನು ಯಶಸ್ವಿಯಾಗಿ ಮಾಡಿ ಮುಗಿಸಿರುವ ಚಿತ್ರತಂಡ ಈಗ 5 ನೆ ಹಂತದ ಚಿತ್ರೀಕರಣಕ್ಕೆ ಸಜ್ಜಾಗಿದೆ. ಈಗಾಗಲೆ ಧಾರವಾಡ ಮತ್ತು ಮೈಸೂರು ಭಾಗಗಳಲ್ಲಿ ಸುಮಾರು 40ರಿಂದ 50 ಭಾಗದಷ್ಟು ಚಿತ್ರೀಕರಣ ಮುಗಿಸಿರುವ 'ಯುವರತ್ನ' ತಂಡ ಈಗ ಮತ್ತೆ 5ನೇ ಹಂತದ ಚಿತ್ರೀಕರಣಕ್ಕೆ ಧಾರವಾಡಕ್ಕೆ ಹೊರಟಿದೆ. ಈ ಬಗ್ಗೆ ನಿರ್ದೇಶಕ ಸಂತೋಷ್ ಆನಂದ್ ರಾಮ್ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ.

'ಯುವರತ್ನ'ನ ಅಡ್ಡ ಸೇರಿದೆ ಡೈನೋಸರ್

'ಯುವರತ್ನ'ನ ಅಡ್ಡ ಸೇರಿದೆ ಡೈನೋಸರ್

ಈಗಾಗಲೆ 'ಯುವರತ್ನ' ಚಿತ್ರೀಕರಣ ಸೆಟ್ ನಲ್ಲಿ ಡೈನೋಸರ್ ಸೇರಿಕೊಂಡಿದೆ. ಚಿತ್ರದಲ್ಲಿ ಡೈನೋಸರ್ ಕೂಡ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದೆಯಂತೆ. ಹಾಗಾಗಿ ಸುಂದರವಾದ ದೊಡ್ಡ ಗಾತ್ರದ ಡೈನೋಸರ್ ಒಂದು ಈಗಾಗಲೆ ತಯಾರಾಗಿ ನಿಂತಿದೆ. ಶಿವಕುಮಾರ್ ಎನ್ನುವರು ಈ ಡೈನೋಸರ್ ಅನ್ನು ತಯಾರಿಸಿದ್ದಾರೆ.

ಚಿತ್ರತಂಡ ಸೇರಿದ್ದಾರೆ ಸರೋಜ-ಮಮತಾ

ಚಿತ್ರತಂಡ ಸೇರಿದ್ದಾರೆ ಸರೋಜ-ಮಮತಾ

ಈಗಾಗಲೆ 'ಯುವರತ್ನ' ಚಿತ್ರದಲ್ಲಿ ಸಾಕಷ್ಟು ಕಲಾವಿದರು ಕಾಣಿಸಿಕೊಳ್ಳುತ್ತಿದ್ದಾರೆ. ಜೊತೆಗೆ ಇತ್ತೀಚಿಗಷ್ಟೆ ಟಗರು ಖ್ಯಾತಿಯ ನಟಿ ಕಾನ್ಸ್ಟೇಬಲ್ ಸರೋಜ ಪ್ರಮುಕ ಪಾತ್ರದಲ್ಲಿ ಮಿಂಚಲಿದ್ದಾರೆ. ಇನ್ನು ಲೇಡಿ ಬಾಡಿ ಬಿಲ್ಡರ್ ಮಮತಾ ಅವರು ಪುನೀತ್ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಅಲ್ಲದೆ ಚಿತ್ರದಲ್ಲಿ ಈಗಾಗಲೆ ಖ್ಯಾತ ತೆಲುಗು ನಟ ಶರತ್ ಕುಮಾರ್ ಪತ್ನಿ ರಾಧಿಕಾ ಶರತ್ ಕುಮಾರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಡಾಲಿ ಧನಂಜಯ್, ವಸಿಷ್ಠ ಸಿಂಹ, ಅರು ಗೌಡ ಸೇರಿದಂತೆ ಸಾಕಷ್ಟು ದೊಡ್ಡ ಕಲಾವಿದರ ಬಳಗವೆ ಚಿತ್ರದಲ್ಲಿದೆ. ಇನ್ನು ನಾಯಕಿಯಾಗಿ ನಟಿ ಸಾಯೇಶಾ ಸೈಗಲ್ ಕಾಣಿಸಿಕೊಳ್ಳುತ್ತಿದ್ದಾರೆ.

More from Filmibeat

English summary
Kannada actor Puneeth Rajkumar starrer 'Yuvaratna' film 5th schedule shooting will start tomorrow in Dharwad.This movie is directed by Santhosh Ananddram.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X