ಆಕ್ಷನ್ ಮೂಡ್ ನಲ್ಲಿ 'ಯುವರತ್ನ' ಡೈರೆಕ್ಟರ್ ಸಂತೋಷ್
ನಿರ್ದೇಶಕ ಸಂತೋಷ್ ಆನಂದ್ ರಾಮ್ ನಟ ಪುನೀತ್ ರಾಜ್ ಕುಮಾರ್ ಜೊತೆಗೆ ಮತ್ತೊಂದು ಸಿನಿಮಾ ಮಾಡುತ್ತಿದ್ದಾರೆ. ಅದೇ 'ಯುವರತ್ನ'. ಈಗಾಗಲೇ 'ಯುವರತ್ನ' ಸಿನಿಮಾದ ಶೂಟಿಂಗ್ ಭರ್ಜರಿಯಾಗಿ ನಡೆಯುತ್ತಿದೆ.
ಇಂದಿನಿಂದ ಸಿನಿಮಾದ ಮೂರನೇ ಶಡ್ಯೂಲ್ ಶೂಟಿಂಗ್ ಶುರು ಆಗಿದೆ. ಈ ಭಾಗದಲ್ಲಿ ಮುಖ್ಯವಾಗಿ ಆಕ್ಷನ್ ದೃಶ್ಯದ ಚಿತ್ರೀಕರಣ ನಡೆಯಬೇಕಿದೆ. ಈ ಬಗ್ಗೆ ನಿರ್ದೇಶಕ ಸಂತೋಷ್ ಆನಂದ್ ರಾಮ್ ಟ್ವೀಟ್ ಮಾಡಿದ್ದಾರೆ.

ಸಿನಿಮಾದ ಸಾಹಸ ದೃಶ್ಯಗಳ ಚಿತ್ರೀಕರಣ ನಡೆಯುತ್ತಿದ್ದು, ನಿರ್ದೇಶಕ ಸಂತೋಷ್ ಕೂಡ ಆಕ್ಷನ್ ಮೂಡ್ ನಲ್ಲಿ ಇದ್ದಾರೆ. ತಮ್ಮ ಫೋಟೋವೊಂದನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.
'ಯುವರತ್ನ' ಸಿನಿಮಾದಲ್ಲಿ ಪುನೀತ್ ರಾಜ್ ಕುಮಾರ್ ಕಾಲೇಜ್ ಹುಡುಗನ ಪಾತ್ರ ಮಾಡುತ್ತಿದ್ದಾರೆ. ಅಭಿ ಸಿನಿಮಾದ ಬಳಿಕ ಮತ್ತೆ ಪುನೀತ್ ಕಾಲೇಜ್ ಕ್ಯಾಂಪಸ್ ಗೆ ಹೋಗಿದ್ದಾರೆ. ಸಯ್ಯೇಷಾ ಚಿತ್ರದ ನಾಯಕಿಯಾಗಿದ್ದಾರೆ. ಹೊಂಬಾಳೆ ಫಿಲ್ಮ್ಸ್ ನಲ್ಲಿ ಚಿತ್ರ ನಿರ್ಮಾಣ ಆಗುತ್ತಿದೆ.
More from Filmibeat
English summary
Puneeth Rajkumar in 'Yuvaratna' kannada movie 3rd shooting schedule has been started from today. The movie is directing by Santhosh Ananddram and producing by Hombale films.


Click it and Unblock the Notifications











