ಬಾಕ್ಸಿಂಗ್ ಕೋರ್ಟ್ ನಲ್ಲಿ ಪುನೀತ್, ಧನಂಜಯ್ ಹೊಡೆದಾಟ
'ಯುವರತ್ನ' ಸಿನಿಮಾದ ಚಿತ್ರೀಕರಣ ಸದ್ಯ ನಡೆಯುತ್ತಿದೆ. ಸಿನಿಮಾದ ಶೂಟಿಂಗ್ ನ ಫೋಟೋವೊಂದನ್ನು ನಿರ್ದೇಶಕ ಸಂತೋಷ್ ಆನಂದ್ ರಾಮ್ ಹಂಚಿಕೊಂಡಿದ್ದಾರೆ.
ಸಾಹಸ ದೃಶ್ಯದ ಚಿತ್ರೀಕರಣ ಇದೀಗ ನಡೆಯುತ್ತಿದೆ. ಪುನೀತ್ ರಾಜ್ ಕುಮಾರ್ ಮತ್ತು ಧನಂಜಯ್ ನಡುವೆ ಫೈಟ್ ಆಗುತ್ತಿದೆ. ಬಾಕ್ಸಿಂಗ್ ಕೋರ್ಟ್ ನಲ್ಲಿ ಅಪ್ಪು ಮತ್ತು ಡಾಲಿ ಹೊಡೆದಾಟ ನಡೆಸಲಿದ್ದಾರೆ. ಸಿನಿಮಾದ ಪ್ರಮುಖ ಸನ್ನಿವೇಶಗಳಲ್ಲಿ ಈ ಬಾಕ್ಸಿಂಗ್ ಸೀನ್ ಕೂಡ ಒಂದಾಗಿದೆ.
ಸಿನಿಮಾದಲ್ಲಿ ಧನಂಜಯ್ ಸ್ಟೈಲಿಷ್ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ. 'ಟಗರು' ಹಾಗೂ 'ಯಜಮಾನ' ನಂತರ ಖಳ ನಾಯಕನಾಗಿ ಡಾಲಿ ಇಲ್ಲಿ ನಟಿಸಿದ್ದಾರೆ. ಪುನೀತ್ ಹಾಗೂ ಧನಂಜಯ್ ನಡುವಿನ ಈ ಸಾಹಸ ದೃಶ್ಯದ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಆಕ್ಷನ್ ಇಷ್ಟ ಪಡುವವರಿಗೆ ಈ ದೃಶ್ಯ ಥ್ರಿಲ್ ನೀಡಲಿದೆ.

ಈ ಹಿಂದೆ 'ಅಣ್ಣಾಬಾಂಡ್' ಸಿನಿಮಾದಲ್ಲಿ ಪುನೀತ್ ಬಾಕ್ಸಿಂಗ್ ಮಾಡಿದ್ದರು. ಅದಕ್ಕೂ ಹಿಂದೆ 'ಮೌರ್ಯ' ಸಿನಿಮಾದಲ್ಲಿಯೂ ಬಾಕ್ಸಿಂಗ್ ಕೋರ್ಟ್ ನಲ್ಲಿ ಪುನೀತ್ ಫೈಟ್ ಮಾಡಿದ್ದರು. 'ಯುವರತ್ನ'ದಲ್ಲಿ ಕಾಲೇಜ್ ಹುಡುಗನಾಗಿರುವ ಪುನೀತ್, ಬಾಕ್ಸಿಂಗ್ ಕೋರ್ಟ್ ಗೆ ಯಾಕೆ ಬರ್ತಾರೆ ಎನ್ನುವ ಕುತೂಹಲ ಮೂಡಿದೆ.

ಸಂತೋಷ್ ಆನಂದ್ ರಾಮ್ ನಿರ್ದೇಶನದ ಮೂರನೇ ಸಿನಿಮಾ ಇದಾಗಿದೆ. ಹೊಂಬಾಳೆ ಫಿಲ್ಮ್ಸ್ ನಲ್ಲಿ ವಿಜಯ್ ಕಿರಗಂದೂರು ನಿರ್ಮಾಣ ಮಾಡುತ್ತಿದ್ದಾರೆ. ಸಯ್ಯೇಶಾ ಚಿತ್ರದ ನಾಯಕಿಯಾಗಿದ್ದಾರೆ. ತಮನ್ ಸಿನಿಮಾಗೆ ಸಂಗೀತ ನೀಡುತ್ತಿದ್ದಾರೆ.


Click it and Unblock the Notifications











