ರೂಲ್ ಮಾಡಲು ಬಂದ 'ಯುವರತ್ನ': ಇದು ಪವರ್ ಫುಲ್ ಟೀಸರ್
''ಈ ದುನಿಯಾದಲ್ಲಿ ಮೂರು ತರ ಗಂಡಸರು ಇರುತ್ತಾರೆ. ರೂಲ್ ನ ಫಾಲೋ ಮಾಡುವವರು, ರೂಲ್ ನ ಬ್ರೇಕ್ ಮಾಡುವವರು, ಮೂರನೆಯವರು ನನ್ನ ತರ ರೂಲ್ ಮಾಡೋರು'' ಈ ರೀತಿ ಹೇಳುತ್ತಾ ಬಂದಿದ್ದಾನೆ 'ಯುವರತ್ನ'.
ಪುನೀತ್ ರಾಜ್ ಕುಮಾರ್ ನಟನೆಯ ಬಹು ನಿರೀಕ್ಷಿತ ಸಿನಿಮಾ 'ಯುವರತ್ನ' ಟೀಸರ್ ಇಂದು (ಸಪ್ಟೆಂಬರ್) ಸಂಜೆ 5:30ಕ್ಕೆ ಬಿಡುಗಡೆಯಾಗಿದೆ. 1:40 ಸೆಕೆಂಡ್ ನ ಈ ಟೀಸರ್ ಪವರ್ ಫುಲ್ ಆಗಿದೆ. ದಸರಾ ಹಬ್ಬದ ವಿಶೇಷವಾಗಿ ಟೀಸರ್ ಅಭಿಮಾನಿಗಳ ಮುಂದೆ ಬಂದಿದೆ. ಬೆಂಗಳೂರಿನ ಸಂತೋಷ್ ಚಿತ್ರಮಂದಿರದಲ್ಲಿ ಟೀಸರ್ ರಿಲೀಸ್ ಆಗಿದೆ.

ರಗ್ಬಿ ಆಟದ ಸುತ್ತ ಟೀಸರ್ ಮಾಡಲಾಗಿದೆ. ಡ್ರೆಸ್ಸಿಂಗ್ ರೂಮ್ ನಿಂದ ಮೈದಾನಕ್ಕೆ ಬರುವುದು, ಹೊಡೆದಾಟದ ನಂತರ ಕಪ್ ಗೆಲ್ಲುವುದು ಟೀಸರ್ ನಲ್ಲಿ ಬರುವ ದೃಶ್ಯಗಳಾಗಿವೆ. ಪುನೀತ್ 29ನೇ ಸಿನಿಮಾ ಆಗಿರುವ ಕಾರಣ ಅವರ ಜರ್ಸಿ ಮೇಲೆ ಅದೇ ಸಂಖ್ಯೆ ಬರೆಯಲಾಗಿದೆ. ಅವರ ತಂಡ ಹೆಸರು RK (ರಾಜ್ ಕುಮಾರ್) ಎಂದಾಗಿದೆ.
'ಯುವರತ್ನ' ಸಂತೋಷ್ ಆನಂದ್ ರಾಮ್ ನಿರ್ದೇಶನದ ಸಿನಿಮಾವಾಗಿದೆ. ಹೊಂಬಾಳೆ ಫಿಲ್ಮ್ ಚಿತ್ರದ ನಿರ್ಮಾಣ ಮಾಡಿದೆ. ತಮನ್ ಸಿನಿಮಾಗೆ ಸಂಗೀತ ನೀಡಿದ್ದಾರೆ. ಸಯೇಶಾ ಸೈಗಲ್ ಚಿತ್ರದ ನಾಯಕಿಯಾಗಿದ್ದಾರೆ.
ಸಿನಿಮಾದ ಕ್ವಾಲಿಟಿಯನ್ನು ಟೀಸರ್ ಮೂಲಕ ತೋರಿಸಲಾಗಿದೆ. ಡೈಲಾಗ್ ನಲ್ಲಿ ಹೇಳಿರುವ ಹಾಗೆ, ಇಂಡಸ್ಟ್ರಿಯಲ್ಲಿ ಈ ಸಿನಿಮಾ ರೂಲ್ ಮಾಡಲಿ ಎನ್ನುವುದು ನಮ್ಮ ಶುಭ ಹಾರೈಕೆ.


Click it and Unblock the Notifications











