ಪುನೀತ್ ಹುಟ್ಟುಹಬ್ಬಕ್ಕೆ ಸಂತೋಷ್ ಕೊಟ್ಟ ಭರ್ಜರಿ ಉಡುಗೊರೆ ಇದು

ಮಾರ್ಚ್ 17 ದೊಡ್ಮನೆ ಅಭಿಮಾನಿಗಳ ಹಬ್ಬ. ಯಾಕಂದ್ರೆ, ಈ ದಿನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಹುಟ್ಟುಹಬ್ಬ. ಅಪ್ಪು ಬರ್ತಡೇ ಹಲವು ಗಿಫ್ಟ್, ಕೆಲವು ಸಿನಿಮಾಗಳ ಪೋಸ್ಟರ್ ಬಿಡುಗಡೆ, ಹೊಸ ಚಿತ್ರಗಳ ಘೋಷಣೆ ಆಗುವುದು ಸಾಮಾನ್ಯ.

ಈ ಸಲ ಅಪ್ಪು ಹುಟ್ಟುಹಬ್ಬಕ್ಕೆ ಸ್ಪೆಷಲ್ ಎನಿಸಿರುವುದು ಯುವರತ್ನ. ಹೌದು, ಪುನೀತ್ ಅಭಿನಯಿಸುತ್ತಿರುವ ಯುವರತ್ನ ಚಿತ್ರದ ಮೊದಲ ಪೋಸ್ಟರ್ ಅಧಿಕೃತವಾಗಿ ಬಿಡುಗಡೆಯಾಗಿದೆ. ಪವರ್ ಸ್ಟಾರ್ ಬರ್ತಡೇ ವಿಶೇಷವಾಗಿ ಜಬರ್ ದಸ್ತ್ ಫಸ್ಟ್ ಲುಕ್ ಬಹಿರಂಗವಾಗಿದೆ.

Yuvaratna movie poster release

ಈ ಮೂಲಕ ಚಿತ್ರದ ಮೇಲೆ ಮತ್ತಷ್ಟು ನಿರೀಕ್ಷೆ ಹೆಚ್ಚಾಗಿದೆ. ಇನ್ನುಳಿದಂತೆ ರಾಜಕುಮಾರ ಚಿತ್ರದ ನಂತರ ಸಂತೋಷ್ ಆನಂದ್ ರಾಮ್ ಮತ್ತು ಪುನೀತ್ ಜೋಡಿಯಲ್ಲಿ ಬರ್ತಿರುವ ಚಿತ್ರ ಇದಾಗಿದ್ದು, ವಿಜಯ್ ಕಿರಂಗಧೂರ್ ನಿರ್ಮಾಣ ಮಾಡ್ತಿದ್ದಾರೆ.

ಈಗಾಗಲೇ ಯುವರತ್ನ ಚಿತ್ರೀಕರಣ ಆರಂಭವಾಗಿದ್ದು, ಮಂಗಳೂರು ಸುತ್ತಾಮುತ್ತಾ ಶೂಟಿಂಗ್ ಮುಗಿಸಿದೆ. ಸಯೇಶಾ ಸೈಗಲ್ ಈ ಚಿತ್ರಕ್ಕೆ ನಾಯಕಿಯಾಗಿದ್ದು, ಧನಂಜಯ್, ವಸಿಷ್ಠ ಸಿಂಹ, ಧನಂಜಯ್ ಕೂಡ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

More from Filmibeat

English summary
Kannada actor Puneeth rajkumar starrer Yuvaratna movie first look poster release for his 44th birthday special.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X