ದಸರಾ ಹಬ್ಬದ ಸಂಭ್ರಮವನ್ನು ಹೆಚ್ಚು ಮಾಡುತ್ತಾನೆ 'ಯುವರತ್ನ'
ದಸರಾ ಹಬ್ಬದ ಸಂಭ್ರಮವನ್ನು 'ಯುವರತ್ನ' ಹೆಚ್ಚು ಮಾಡುತ್ತಿದ್ದಾನೆ. ಅರ್ತಾತ್ 'ಯುವರತ್ನ' ಸಿನಿಮಾದ ಟೀಸರ್ ಹಬ್ಬದ ವಿಶೇಷವಾಗಿ ಬಿಡುಗಡೆ ಆಗುತ್ತಿದೆ.
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ 'ಯುವರತ್ನ' ಟೀಸರ್ ಬಿಡುಗಡೆ ಯಾವಾಗ ಎನ್ನುವ ಅಭಿಮಾನಿಗಳ ಪ್ರಶ್ನೆಗೆ ನಿರ್ದೇಶಕ ಸಂತೋಷ್ ಆನಂದ್ ರಾಮ್ ಉತ್ತರ ನೀಡಿದ್ದಾರೆ. ನಿರ್ಮಾಪಕ ವಿಜಯ್ ಕಿರಗಂದೂರು ಹುಟ್ಟುಹಬ್ಬದ ದಿನವಾದ ಇಂದು (ಸಪ್ಟೆಂಬರ್ 3) ಟೀಸರ್ ರಿಲೀಸ್ ಡೇಟ್ ಅನೌನ್ಸ್ ಮಾಡಿದ್ದಾರೆ.
ಅಕ್ಟೋಬರ್ 7 ರಂದು ಸಿನಿಮಾ ಟೀಸರ್ ಬಿಡುಗಡೆ ಆಗುತ್ತಿದೆ. ಇದು ಈ ಸಿನಿಮಾದ ಮೊದಲ ಟೀಸರ್ ಆಗಿದೆ. ವಿಶೇಷ ಪೋಸ್ಟರ್ ಮೂಲಕ ಟೀಸರ್ ಬಿಡುಗಡೆಯ ದಿನಾಂಕವನ್ನು ಹಂಚಿಕೊಳ್ಳಲಾಗಿದೆ.

ಸಿನಿಮಾ ದೊಡ್ಡ ತಾರ ಬಹಳ ಹೊಂದಿದೆ. ನಟಿ ಸುಧಾರಾಣಿ, ನಟ ಪ್ರಕಾಶ್ ಬೆಳವಾಡಿ, ರವಿಶಂಕರ್ ಗೌಡ, ಅಚ್ಚುತ್ ಕುಮಾರ್, ಗುರುದತ್, ಧನಂಜಯ್, ದಿಗಂತ್, ಸಾಯಿ ಕುಮಾರ್, ರಂಗಾಯಣ ರಘು, ವಸಿಷ್ಟ, ರಾಧಿಕಾ ಶರತ್ ಕುಮಾರ್, ಸೋನುಗೌಡ, ಕುರಿ ಪ್ರತಾಪ್, ತ್ರಿವೇಣಿ, ಅರು ಗೌಡ ಚಿತ್ರದಲ್ಲಿ ನಟಿಸುತ್ತಿದ್ದಾರೆ.
ಸಯೇಶಾ ಸೈಗಲ್ ಚಿತ್ರದ ನಾಯಕಿಯಾಗಿದ್ದಾರೆ. ಇದು ಅವರ ಮೊದಲ ಕನ್ನಡ ಸಿನಿಮಾ. ತಮನ್ ಸಿನಿಮಾಗೆ ಸಂಗೀತ ನೀಡುತ್ತಿದ್ದಾರೆ.


Click it and Unblock the Notifications











