For Quick Alerts
  ALLOW NOTIFICATIONS  
  For Daily Alerts

  ರಾಕಿಂಗ್ ಸ್ಟಾರ್ ಯಶ್ ದಂಪತಿಯನ್ನು ಭೇಟಿಯಾದ ಕ್ರಿಕೆಟಿಗ ಯುಜ್ವೇಂದ್ರ ಚಹಲ್ ದಂಪತಿ

  |

  ಟೀಂ ಇಂಡಿಯಾದ ಸ್ಪಿನ್ನರ್ ಯುಜ್ವೇಂದ್ರ ಚಹಲ್ ಮತ್ತು ಪತ್ನಿ ಧನಶ್ರೀ ವರ್ಮಾ ಇಂದು ಸ್ಯಾಂಡಲ್ ವುಡ್ ನ ರಾಕಿಂಗ್ ಸ್ಟಾರ್ ದಂಪತಿಯನ್ನು ಭೇಟಿಯಾಗಿದ್ದಾರೆ. ಸ್ಟಾರ್ ಜೋಡಿಗಳ ಅಪರೂಪದ ಭೇಟಿ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ.

  ಮುಂದೆ ನಿಂತು ಆಪ್ತ ಸಹಾಯಕನ ಮದುವೆ ಮಾಡಿದ ಯಶ್ | Filmibeat Kannada

  ಸದ್ಯ ಬೆಂಗಳೂರಿನಲ್ಲಿರುವ ಚಹಲ್ ದಂಪತಿ ಯಶ್ ಮತ್ತು ರಾಧಿಕಾ ಅವರನ್ನು ಭೇಟಿಯಾಗಿ ಕೆಲವು ಸಮಯ ಮಾತುಕತೆ ನಡೆಸಿದ್ದಾರೆ. ಮದುವೆ ಬಳಿಕ ಚಹಲ್ ಪತ್ನಿ ಜೊತೆ ಬೆಂಗಳೂರಿಗೆ ಆಗಮಿಸಿದ್ದಾರೆ. ಇದೇ ಸಮಯದಲ್ಲಿ ಯಶ್ ಅವರನ್ನು ಭೇಟಿಯಾಗಿ ಸಂತಸ ಪಟ್ಟಿದ್ದಾರೆ.

  ಆಪ್ತ ಸಹಾಯಕನ ಮದುವೆ ಸಂಭ್ರಮದಲ್ಲಿ ರಾಕಿಂಗ್ ಸ್ಟಾರ್ ಯಶ್ ದಂಪತಿಆಪ್ತ ಸಹಾಯಕನ ಮದುವೆ ಸಂಭ್ರಮದಲ್ಲಿ ರಾಕಿಂಗ್ ಸ್ಟಾರ್ ಯಶ್ ದಂಪತಿ

  ಅಂದಹಾಗೆ ಯಶ್ ಮತ್ತು ರಾಧಿಕಾ ಇಬ್ಬರು ಇಂದು ಆಪ್ತ ಸಹಾಯಕನ ಮದುವೆಯಲ್ಲಿ ಹಾಜರಿದ್ದರು. ಅನೇಕ ವರ್ಷಗಳಿಂದ ಯಶ್ ಜೊತೆ ಕೆಲಸ ಮಾಡುತ್ತಿದ್ದ ಚೇತನ್ ಮದುವೆ ಸಂಭ್ರಮದಲ್ಲಿ ಭಾಗಿಯಾಗಿದ್ದರು.

  ಮದುವೆಗೆ ಮುಗಿಸಿ ಯಶ್ ಮತ್ತು ರಾಧಿಕಾ, ಚಹಲ್ ದಂಪತಿಯನ್ನು ಭೇಟಿಯಾಗಿದ್ದಾರೆ. ಯಶ್ ಮತ್ತು ರಾಧಿಕಾ ಜೊತೆ ಚಹಲ್ ಮತ್ತು ಧನಶ್ರೀ ಜೋಡಿ ಫೋಟೋ ಕ್ಲಿಕ್ಕಿಸಕೊಂಡಿದ್ದು, ಈ ಫೋಟೋವನ್ನು ಚಹಲ್ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಚಹಲ್ ಶೇರ್ ಮಾಡುತ್ತಿದ್ದಂತೆ ಯಶ್ ಅಭಿಮಾನಿಗಳು ಲೈಕ್ಸ್ ಒತ್ತಿಗೆ ಕಾಮಂಟ್ ಮಾಡುತ್ತಿದ್ದಾರೆ.

  ಟೀಂ ಇಂಡಿಯಾದ ಸ್ಪಿನ್ನರ್ ಚಹಲ್ ಕಳೆದ ವರ್ಷ ಡಿಸೆಂಬರ್ ನಲ್ಲಿ ಬಹುಕಾಲದ ಗೆಳತಿ, ಡ್ಯಾನ್ಸರ್ ಧನಶ್ರೀ ವರ್ಮ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಗುರುಗ್ರಾಮದ ಕರ್ಮ ಲೇಕ್ ರೆಸಾರ್ಟ್ ನಲ್ಲಿ ಇಬ್ಬರು ಹಿಂದೂ ಸಂಪ್ರದಾಯದಂತೆ ವಿವಾಹ ಬಂಧನಕ್ಕೆ ಒಳಗಾಗಿದ್ದಾರೆ.

  English summary
  Yuzvendra Chahal and his wife Dhanashri meet Sandalwood Actor Yash and Radhika pandit.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X