'ಸೂಪರ್ ಸ್ಟಾರ್' ಗೆ ಜೊತೆಯಾಗಲಿದ್ದಾರೆ ಬಾಲಿವುಡ್ ನ ಹಾಟ್ ಬೆಡಗಿ
ಉಪೇಂದ್ರ ಅವರ ಅಣ್ಣನ ಮಗ ನಿರಂಜನ್ ಸುಧೀಂದ್ರ ಹೀರೋ ಆಗಿ ಸಿನಿಮಾ ರಂಗಕ್ಕೆ ಕಾಲಿಡುತ್ತಿದ್ದಾರೆ. 'ಸೂಪರ್ ಸ್ಟಾರ್' ಹೆಸರಿನ ಈ ಸಿನಿಮಾದ ಮುಹೂರ್ತ ಕೆಲವು ದಿನಗಳ ಹಿಂದಷ್ಟೆ ನೆರವೇರಿದೆ.
ನೃತ್ಯಪಟುವೊಬ್ಬನ ಕತೆಯನ್ನು ಸ್ಟೈಲಿಷ್ ಆಗಿ ಹೇಳುವ ಪ್ರಯತ್ನವನ್ನು ಮಾಡಲಾಗುತ್ತಿದೆ ಎಂದು ನಿರ್ದೇಶಕ ರಮೇಶ್ ಬಾಬು ಕತೆಯ ಸಣ್ಣ ಎಳೆಯೊಂದನ್ನು ಬಿಟ್ಟುಕೊಟ್ಟಿದ್ದರು.
ಕಟ್ಟುಮಸ್ತಾದ ದೇಹದ, ಸುಂದರ ಮುಖದ ಹೊಸ ನಾಯಕ ನಿರಂಜನ್ ಗೆ ನಾಯಕಿ ಯಾರಾಗಲಿದ್ದಾರೆ ಎಂಬ ಕುತೂಹಲ ಸಿನಿಮಾದ ಮುಹೂರ್ತದ ದಿನವೇ ಎದ್ದಿತ್ತು, ಅದಕ್ಕೀಗ ಉತ್ತರ ದೊರೆತಿದೆ.

'ಸೂಪರ್ ಸ್ಟಾರ್' ಗೆ ಜೊತೆಯಾಗಲು ಬಾಲಿವುಡ್‌ನಿಂದ ಬಳುಕುವ ಚೆಲುವೆಯನ್ನು ಕರೆತರಲಾಗುತ್ತಿದೆ. ನಿರಂಜನ್ ಜೊತೆಗೆ ನಟಿ ಜಾರಾ ಯಸ್ಮಿನ್ ಸಿನಿಮಾದಲ್ಲಿ ಹೆಜ್ಜೆ ಹಾಕಲಿದ್ದಾರೆ. ಮಾಡೆಲಿಂಗ್‌ನಲ್ಲಿ ಗುರುತಿಸಿಕೊಂಡಿರುವ ಈ ನಟಿಯ ಹಾಟ್ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್.

Recommended Video
ಈಗಾಗಲೇ ಹಲವು ಮ್ಯೂಸಿಕ್ ವಿಡಿಯೋ, ಪ್ರತಿಷ್ಟಿತ ಸಂಸ್ಥೆಯ ಜಾಹೀರಾತುಗಳು, ಸಿನಿಮಾಗಳಲ್ಲಿ ನಟಿಸಿರುವ ಜಾರಾ ಯಸ್ಮಿನ್ ಸೂಪರ್ ಸ್ಟಾರ್ ಸಿನಿಮಾ ಮೂಲಕ ಕನ್ನಡಕ್ಕೆ ಬರುತ್ತಿದ್ದಾರೆ. ಕಳೆದ ತಿಂಗಳು ಬಿಡುಗಡೆ ಆಗಿದ್ದ ಜಾರಾ ಯಸ್ಮಿನ್ ನಟನೆಯ 'ಕಂದೆ ಕಾ ಯೇ' ವಿಡಿಯೋ ಹಾಡು ಸಖತ್ ಹಿಟ್ ಆಗಿದೆ.


Click it and Unblock the Notifications











