For Quick Alerts
  ALLOW NOTIFICATIONS  
  For Daily Alerts

  'ಐ ಡೋಂಟ್ ಲೈಕ್ ವೈಲೆನ್ಸ್, ಹಂಗಂತ ಡೋಂಟ್ ಟೆಸ್ಟ್ ಮೈ ಪೇಷನ್ಸ್'; ಝೈದ್ ಖಾನ್ 'ಬನಾರಸ್' ಟ್ರೈಲರ್ ರಿಲೀಸ್

  |

  ರಾಜಕಾರಣಿ ಜಮೀರ್ ಅಹ್ಮದ್ ಖಾನ್ ಪುತ್ರ ಝೈದ್ ಖಾನ್ ಬನಾರಸ್ ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಸೆಟ್ಟೇರಿದಾಗಿನಿಂದಲೂ ಈ ಸಿನಿಮಾ ಮೇಲೆ ಸಿನಿರಸಿಕರು ಒಂದು ಕಣ್ಣಿಟ್ಟಿದ್ದಾರೆ ಎಂದೇ ಹೇಳ್ಬಹುದು. ಪ್ಯಾನ್ ಇಂಡಿಯಾ ಎಂದು ಘೋಷಿಸಿರುವ ಚಿತ್ರವನ್ನು ಯಾವ ರೀತಿ ತಯಾರು ಮಾಡಿರಬಹುದು, ರಾಜಕಾರಣಿಯ ಮಗನ ಮೊದಲ ಚಿತ್ರ ಬಿಲ್ಡಪ್ ಮಯ ಕಮರ್ಷಿಯಲ್ ಸಿನಿಮಾ ಆಗಿರಬಹುದು ಎಂಬ ಪ್ರಶ್ನೆ ಮತ್ತು ಸಂದೇಹಗಳಿದ್ದವು. ಆದರೆ ಇಂದು ( ಸೆಪ್ಟೆಂಬರ್ 26 ) ಬಿಡುಗಡೆಯಾಗಿರುವ ಚಿತ್ರದ ಟ್ರೈಲರ್ ಆ ಪ್ರಶ್ನೆ ಮತ್ತು ಸಂದೇಹಗಳಿಗೆ ಇದೊಂದು ಸಾಮಾನ್ಯ ಕಮರ್ಷಿಯಲ್ ಚಿತ್ರವಲ್ಲ, ಎಕ್ಸ್ ಪರಿಮೆಂಟಲ್ ಕಮರ್ಷಿಯಲ್ ಸಿನಿಮಾ ಎಂಬ ಸಂದೇಶವನ್ನು ನೀಡಿದೆ.

  ವಾರಣಾಸಿಯ ಹಳೆ ಹೆಸರಾದ ಬನಾರಸ್ ಅನ್ನು ಚಿತ್ರದ ಶೀರ್ಷಿಕೆಯಾಗಿ ಇಟ್ಟುಕೊಂಡಿರುವ ಚಿತ್ರ ವಾರಣಾಸಿಯಲ್ಲಿಯೇ ಬಹುತೇಕ ಚಿತ್ರೀಕರಣಗೊಂಡಿರುವುದನ್ನು ಟ್ರೈಲರ್ ಬಿಚ್ಚಿಟ್ಟಿದೆ. ಎಂದೆಂದಿಗೂ ನಮ್ಮ ಹೆಮ್ಮೆ ಎಂದು ಅಪ್ಪು ಚಿತ್ರವನ್ನು ತೋರಿಸುವ ಮೂಲಕ ಆರಂಭವಾಗುವ ಟ್ರೈಲರ್‌ನಲ್ಲಿ ಸಾಧು, ಅಗೋರಿ, ಚಿತ್ರಮಂದಿರ, ಗಂಗಾ ಆರತಿ ಹಾಗೂ ಗಂಗಾ ತೀರಗಳನ್ನು ವೇಗವಾಗಿ ತೋರಿಸಲಾಗಿದೆ.

  'ನನ್ ಹೆಸರು ಸಿದ್ಧ್ ಅಂತ, ನಾನೊಬ್ಬ ಗಗನಯಾತ್ರಿ ಹಾಗೂ ಟೈಮ್ ಟ್ರಾವೆಲರ್' ಎಂದು ತನ್ನನ್ನು ತಾನು ಪರಿಚಯಿಸಿಕೊಳ್ಳುವ ನಾಯಕ ಬನಾರಸ್ ಬೀದಿಗಳಲ್ಲಿ ಸುತ್ತುತ್ತಾ ನಾಯಕಿ ಸೋನಾಲ್ ಮೊಂಟೆರೋ ಜತೆ ಪ್ರೀತಿಯಲ್ಲಿ ಬೀಳ್ತಾನೆ. ಈ ನಡುವೆಯೇ ಬರುವ ಫೈಟಿಂಗ್ ದೃಶ್ಯದಲ್ಲಿ 'ನಾನು ಟಿವಿಯಲ್ಲೂ ಕೂಡ ಆ್ಯಕ್ಷನ್ ಸಿನಿಮಾಗಳನ್ನು ನೋಡುವುದಿಲ್ಲ, ಯಾಕಂದ್ರೆ ಐ ಡೋಂಟ್ ಲೈಕ್ ವೈಲೆನ್ಸ್, ಹಂಗಂತ ಡೋಂಟ್ ಟೆಸ್ಟ್ ಮೈ ಪೇಷನ್ಸ್' ಎಂಬ ವೈಲೆನ್ಸ್ ಡೈಲಾಗನ್ನು ಹೇಳ್ತಾನೆ ನಾಯಕನಟ.

  ಹೀಗೆ ಟ್ರೈಲರ್ ಅರ್ಧಭಾಗ ನಾಯಕನ ಪರಿಚಯ, ಲವ್ ಮತ್ತು ರೊಮ್ಯಾಂಟಿಕ್ ಹಾಡುಗಳಿಂದ ಕೂಡಿದ್ದರೆ, ದ್ವಿತೀಯಾರ್ಧದಲ್ಲಿ ಟೈಮ್ ಟ್ರಾವೆಲ್ ಕುರಿತ ದೃಶ್ಯಗಳಿವೆ ಹಾಗೂ ನಾಯಕ ಯಾರೋ ಹೆಣೆದ ಚಕ್ರವ್ಯೂಹಕ್ಕೆ ಸಿಲುಕಿ ಅವರು ಕರೆ ಮೂಲಕ ಹೇಳುವ ಪ್ರತೀ ಕೆಲಸವನ್ನು ಪಾಲಿಸುತ್ತ ಹೋಗ್ತಾನೆ. ಈ ಮೂಲಕ ಚಿತ್ರದಲ್ಲೊಂದು ಸಸ್ಪೆನ್ಸ್ ಕಥೆಯನ್ನು ಹೇಳಲು ನಿರ್ದೇಶಕ ಜಯತೀರ್ಥ ಮುಂದಾಗಿರುವುದು ತಿಳಿದು ಬಂದಿದೆ. ಕಾಂತಾರ ಚಿತ್ರದ ಟ್ರೈಲರ್ ಹಿನ್ನೆಲೆ ಸಂಗೀತದ ಮೂಲಕ ಇತ್ತೀಚೆಗಷ್ಟೇ ಪ್ರೇಕ್ಷಕರ ಮನಗೆದ್ದಿದ್ದ ಅಜನೀಶ್ ಬಿ ಲೋಕನಾಥ್ ಈ ಚಿತ್ರದ ಟ್ರೈಲರ್ ಮೂಲಕವೂ ಮತ್ತದೇ ಕೆಲಸ ಮಾಡಿದ್ದಾರೆ.

  ಒಟ್ಟಿನಲ್ಲಿ ಟ್ರೈಲರ್ ನೋಡಿದ ಬಹುತೇಕರು ಒಂದೊಳ್ಳೆ ಕತೆ ಇರುವ ಚಿತ್ರದ ಮೂಲಕ ಝೈದ್ ಖಾನ್ ಚಿತ್ರರಂಗ ಪ್ರವೇಶಿಸಲು ಮುಂದಾಗಿದ್ದಾರೆ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

  English summary
  Zaid Khan and Sonal Monteiro starrer Banaras movie trailer is out now. Read on
  Tuesday, September 27, 2022, 10:24
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X