ಅಪ್ಪು ಸಮಾಧಿ ಮುಂದೆ 'ಬನಾರಸ್' ಪೋಸ್ಟರ್ ಬಿಡುಗಡೆ

ಪುನೀತ್ ರಾಜ್‌ಕುಮಾರ್‌ ಇಲ್ಲವಾದ ಮೇಲೆ ಕನ್ನಡ ಸಿನಿಮಾ ರಂಗದಲ್ಲಿ ಸಾಕಷ್ಟು ಅನಿವಾರ್ಯ ಬದಲಾವಣೆಗಳು ಆಗುತ್ತಿದೆ. ಅಪ್ಪು ಅವರನ್ನು ನಂಬಿದ್ದ ಎಷ್ಟೋ ಚಿತ್ರಗಳು ಬದಲಾವಣೆಯ ಅನಿವಾರ್ಯತೆಯನ್ನು ಎದುರಿಸುತ್ತಿವೆ. ಅಂತೆಯೇ ಕನ್ನಡದ ಬನಾರಸ್‌ ಚಿತ್ರಕ್ಕೂ ಅಪ್ಪು ಸಹಕಾರ ನೀಡಲು ಮುಂದಾಗಿದ್ದರು.

ಬನಾರಸ್ ಸಿನಿಮಾದ ಮೊದಲ ಮೋಷನ್ ಪೋಸ್ಟರ್ ಪುನೀತ್ ರಾಜಕುಮಾರ್ ಕೈಯಲ್ಲಿ ರಿಲೀಸ್‌ ಮಾಡಿಸಬೇಕು ಎನ್ನುವುದು ಚಿತ್ರ ತಂಡದ ಮಹತ್ತರ ಆಸೆಯಾಗಿತ್ತು. ಚಿತ್ರ ತಂಡದ ಈ ಆಸೆಯನ್ನು ಪೂರೈಸಲು ನಟ ಪುನೀತ್‌ ರಾಜ್‌ಕುಮಾರ್‌ ಮುಂದಾಗಿದ್ದರು.

ಅದರೆ ಪುನೀತ್‌ ರಾಜ್‌ಕುಮಾರ್‌ ಹಠಾತ್‌ ನಿಧನದಿಂದಾಗಿ ಸಿನಿಮಾ ತಂಡ ಅಂದು ಕೊಂಡಂತೆ ಸಿನಿಮಾ ಪೋಸ್ಟರ್ ರಿಲೀಸ್ ಮಾಡಲು ಆಗಲಿಲ್ಲ. ಆದರೆ ಚಿತ್ರ ತಂಡ ಅಪ್ಪು ಅವರನ್ನು ಬಿಟ್ಟು ಪೋಸ್ಟರ್ ರಿಲೀಸ್ ಮಾಡಲು ತಯಾರಿಲ್ಲ. ಹಾಗಾಗಿ ಪುನೀತ್‌ ರಾಜ್‌ಕುಮಾರ್‌ ಅವರ ಆಶೀರ್ವಾದೊಂದಿಗೆ ಪೋಸ್ಟರ್ ರಿಲೀಸ್ ಮಾಡಿದೆ ಬನಾರಸ್‌ ಚಿತ್ರತಂಡ.

ಪುನೀತ್‌ ರಾಜ್‌ಕುಮಾರ್ ಸಮಾಧಿ ಬಳಿ 'ಬನಾಸರ್' ಪೋಸ್ಟರ್‌ ಲಾಂಚ್!

ಪುನೀತ್‌ ರಾಜ್‌ಕುಮಾರ್ ಸಮಾಧಿ ಬಳಿ 'ಬನಾಸರ್' ಪೋಸ್ಟರ್‌ ಲಾಂಚ್!

ನಿರ್ದೇಶಕ ಜಯತೀರ್ಥ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಬನಾರಸ್ ಚಿತ್ರದ ಪೋಸ್ಟರ್ ಬಿಡುಗಡೆಯಾಗಿದೆ. ಪುನೀತ್ ರಾಜಕುಮಾರ್ ಸಮಾಧಿ ಬಳಿ ಚಿತ್ರ ತಂಡ ಇಂದು(ನವೆಂಬರ್ 17) ಬೆಳಿಗ್ಗೆ ಪೋಸ್ಟರ್ ಲಾಂಚ್ ಮಾಡಿದೆ. ಕಂಠೀರವ ಸ್ಟುಡಿಯೋದಲ್ಲಿ ಡಾ.ರಾಜಕುಮಾರ್, ಪಾರ್ವತಮ್ಮ ಅವರ ಸಮಾಧಿಗೆ ಪೂಜೆ ಸಲ್ಲಿಸಿ ಬಳಿಕ ಪುನೀತ್ ರಾಜಕುಮಾರ್ ಸಮಾಧಿ ಪುಷ್ಪಾರ್ಚನೆ ಅರ್ಪಿಸಿ, ಮೌನಾಚರಣೆ ಮಾಡಿ ಪೋಸ್ಟ್ ಲಾಂಚ್ ಮಾಡಿದೆ.

ಬನಾಸರ್ ಚಿತ್ರದ ಪೋಸ್ಟರ್‌ ಲಾಂಚ್‌ ಮಾಡಲು ಸಂತಸ ವ್ಯಕ್ತ ಪಡಿಸಿದ್ದ ಅಪ್ಪು!

ಬನಾಸರ್ ಚಿತ್ರದ ಪೋಸ್ಟರ್‌ ಲಾಂಚ್‌ ಮಾಡಲು ಸಂತಸ ವ್ಯಕ್ತ ಪಡಿಸಿದ್ದ ಅಪ್ಪು!

ಸಿನಿಮಾದ ಪೋಸ್ಟರ್ ರಿಲೀಸ್‌ ಮಾಡುವ ಸಲುವಾಗಿ ಅಪ್ಪು ಜೊತೆಗೆ ಝೈದ್ ಖಾನ್‌ ಮಾತನಾಡಿ ಸಮಯವನ್ನು ತೆಗೆದು ಕೊಂಡಿದ್ದರು. ಅಪ್ಪು ಕೂಡ ಚಿತ್ರ ತಂಡವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪೋಸ್ಟರ್ ರಿಲೀಸ್ ಮಾಡಿ ಕೊಡುವುದಾಗಿ ಒಪ್ಪಿಕೊಂಡಿದ್ದರು. ಈ ವಿಚಾರದ ಬಗ್ಗೆ ಚಿತ್ರದ ನಟ ಝೈದ್ ಖಾನ್‌, ಪುನೀತ್ ರಾಜಕುಮಾರ್ ಜೊತೆಗೆ ಮಾತನಾಡಿದ್ದರು. ಕೊನೆಯದಾಗಿ ಅವರು ಮಾತನಾಡಿದ್ದ ಆಡಿಯೋ ಕೂಡ ವೈರಲ್ ಆಗಿತ್ತು. ಪುನೀತ್‌ ರಾಜ್‌ಕುಮಾರ್‌ ಅವರಿಂದ ನವೆಂಬರ್ 1ರಂದು ಈ ಪೋಸ್ಟರ್ ಬಿಡುಗಡೆ ಮಾಡುವ ಯೋಜನೆ ಚಿತ್ರ ತಂಡ ಹಾಕಿ ಕೊಂಡಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಹಾಗಾಗಿ ಈಗ ಅಪ್ಪು ಸಮಾಧಿಯ ಮುಂದೆ ಪೋಸ್ಟರ್‌ ಲಾಂಚ್ ಮಾಡಲಾಗಿದೆ.

ನವೆಂಬರ್ 1ರಂದೇ ಬನಾಸರ್ ಅಪ್ಪು ರಿಲೀಸ್‌ ಮಾಡಬೇಕಿದ್ದ ಪೋಸ್ಟರ್!

ನವೆಂಬರ್ 1ರಂದೇ ಬನಾಸರ್ ಅಪ್ಪು ರಿಲೀಸ್‌ ಮಾಡಬೇಕಿದ್ದ ಪೋಸ್ಟರ್!

ನವೆಂಬರ್ 1ರಂದೇ ಬನಾರಸ್ ಚಿತ್ರದ ಈ ಪೋಸ್ಟರ್ ರಿಲೀಸ್ ಆಗ್ಬೇಕಿತ್ತು. ಅದನ್ನ ಸ್ವತಃ ಪುನೀತ್ ರಾಜಕುಮಾರ್ ಅವರು ಲಾಂಚ್‌ ಮಾಡಬೇಕಿತ್ತು. ಚಿತ್ರ ತಂಡ ಮತ್ತು ಪುನೀತ್‌ ಅವರ ಯೋಚನೆ ಇದಾದರೆ ವಿಧಿಯ ಆಟವೇ ಬೇರೆ ಇತ್ತು. ಅಪ್ಪು ಈಗ ಬಾರದೂರಿಗೆ ಹೋಗಿದ್ದಾರೆ. ಹಾಗಾಗಿ ಚಿತ್ರ ತಂಡ ಪೋಸ್ಟರ್‌ ರಿಲೀಸ್‌ ಮುಂದೂಡಿತ್ತು. ಅಂದು ಕೊಮಡ ಹಾಗೆ ಅಪ್ಪು ಪೋಸ್ಟರ್‌ ರಿಲೀಸ್‌ ಮಾಡದೇ ಇದ್ದರು. ಅವರ ಸಮಾಧಿ ಬಳಿ ಅವರ ಆಶೀರ್ವಾದದೊಂದಿಗೆ ಪೋಸ್ಟರ್ ಲಾಂಚ್ ಆಗಿದೆ.

ಪೋಸ್ಟರ್ ಮೂಲಕ ನಿರೀಕ್ಷೆ ಹುಟ್ಟಿಸಿದ 'ಬನಾಸರ್' ಜೋಡಿ!

ಪೋಸ್ಟರ್ ಮೂಲಕ ನಿರೀಕ್ಷೆ ಹುಟ್ಟಿಸಿದ 'ಬನಾಸರ್' ಜೋಡಿ!

ಮಾಜಿ ಸಚಿವ ಜಮೀರ್ ಅಹ್ಮದ್ ಪುತ್ರ ಝೈದ್ ಖಾನ್‌ ನಟನೆಯ ಚೊಚ್ಚಲ ಚಿತ್ರ ಇದು. ಝೈದ್ ಖಾನ್‌ ಗೆ ನಟಿ ಸೋನಲ್ ಜೊತೆಯಾಗಿದ್ದಾರೆ. ಮೊದಲ ಈ ಪೋಸ್ಟರ್‌ ಮೂಲಕ 'ಬನಾರಸ್' ಜೋಡಿ ಭರವಸೆ ಮೂಡಿಸಿದೆ. ಇ್ನನೂ ಪೋಸ್ಟರ್‌ ಡಿಸೈನ್‌ ಕೂಡ ಗಮನ ಸೆಳೆಯುವಂತಿದೆ. ಈ ಪೋಸ್ಟರ್‌ ಈ ಚಿತ್ರ ಒಂದು ಪ್ರೇಮ ಕಥೆ ಎನ್ನುವುದನ್ನು ರಿವೀಲ್‌ ಮಾಡಿದೆ. ಅಂದಹಾಗೆ ಇದು ರೋಚಕತೆಯಿಂದ ಕೂಡಿರುವ ಪ್ರೇಮ ಕಥೆಯೇ ಆಗಿದೆ ಎನ್ನುವುದನ್ನು ಈ ಹಿಂದೆ ಚಿತ್ರದ ನಿರ್ದೇಶಕ ಜಯ ತೀರ್ಥ ಸ್ಪಷ್ಟ ಪಡಿಸಿದ್ದರು.

ಅಂದುಕೊಂಡಂತೆ ನಡೆದಿದ್ದರೆ ಅಪ್ಪು ಈ ಪೋಸ್ಟರ್ ಅನ್ನು ರಿಲೀಸ್ ಮಾಡಬೇಕಿತ್ತು. ಆದರೆ ಅವರ ಅಕಾಲಿಕ ನಿಧನದಿಂದ ಚಿತ್ರ ತಂಡ ಅವರ ಸಮಾಧಿ ಬಳಿ ಪೋಸ್ಟರ್ ರಿಲಿಸ್‌ ಮಾಡಿ ಗೌರವ ಸಲ್ಲಿಸಿದೆ.

More from Filmibeat

English summary
Zameer Ahmed Khan Son Zaid Khan Debut Kannada Movie Banaras Film Poster Released At Puneeth Rajkumar Grave,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X