For Quick Alerts
  ALLOW NOTIFICATIONS  
  For Daily Alerts

  'ಬನಾರಸ್' ಮೂಲಕ ಬರುತ್ತಿದ್ದಾರೆ ಭರವಸೆಯ ಯುವನಟ ಝೈದ್ ಖಾನ್

  By ಫಿಲ್ಮಿಬೀಟ್ ಡೆಸ್ಕ್
  |

  ಗಾಂಧಿನಗರಕ್ಕೆ ಆಗಾಗ ಹೊಸಬರ ಪರಿಚಯವಾಗುತ್ತಲೇ ಇರುತ್ತದೆ. ಆದರೆ ಬಂದವರು ನೆಲೆ ನಿಲ್ಲುವುದು ತುಂಬಾ ಮುಖ್ಯವಾಗುತ್ತದೆ. ಕೆಲವೊಮ್ಮೆ ಸಿನಿಮಾ ಬರುವ ಮುನ್ನ ಅದರ ತುಣುಕುಗಳನ್ನು ನೋಡಿಯೇ ನಟನ ಭವಿಷ್ಯದ ಬಗ್ಗೆ ತಿಳಿದುಬಿಡುತ್ತದೆ. ಇದೀಗ ಅಂಥದ್ದೊಂದು ಭರವಸೆಯನ್ನು ಮೂಡಿಸಿರುವುದು ಝೈದ್ ಖಾನ್.

  ಬನಾರಸ್ ಸಿನಿಮಾ ಮೂಲಕ ಝೈದ್ ಖಾನ್ ಸಿನಿಮಾ ರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಇತ್ತಿಚೆಗೆ ಬನಾರಸ್ ಸಿನಿಮಾ ಒಂದಷ್ಟು ವಿಚಾರಗಳಿಗೆ ಸುದ್ದಿಯಲ್ಲಿದೆ. ಇತ್ತೀಚೆಗೆ ಮಾಯಾಗಂಗೆ ಸಾಂಗ್ ನೋಡಿದವರಲ್ಲೆಲ್ಲಾ ಝೈದ್ ಖಾನ್ ಬಗ್ಗೆ ಒಂದಷ್ಟು ಭರವಸೆಯನ್ನು ಮೂಡಿಸಿದ್ದಾರೆ.

  ಕಂಗನಾ ಸಿನಿಮಾ ನಿರ್ಮಿಸಿ ಲಾಸ್, ಕಚೇರಿ ಮಾರಿದ ನಿರ್ಮಾಪಕ!ಕಂಗನಾ ಸಿನಿಮಾ ನಿರ್ಮಿಸಿ ಲಾಸ್, ಕಚೇರಿ ಮಾರಿದ ನಿರ್ಮಾಪಕ!

  ಇಷ್ಟು ಭರವಸೆ ಮೂಡಲು ಕಾರಣವೂ ಇದೆ. ಝೈದ್ ಖಾನ್ ಗೆ ಸಿನಿಮಾ ಮೇಲಿನ ಪ್ರೀತಿ ಜಾಸ್ತಿ. ಸಿನಿಮಾಗೆ ಬರಲೇಬೇಕೆಂಬ ಬಯಕೆ ಇಟ್ಟುಕೊಂಡಿದ್ದವರು. ಸಿನಿಮಾ ಮಾಡಲೇಬೇಕೆಂದು ಹೊರಟರೆ ಅವರೆ ನಿರ್ಮಾಪಕರಾಗುವ ಸ್ಥಿತಿವಂತರೆ ಆಗಿದ್ದರು. ಆದರೆ ಅದ್ಯಾವುದನ್ನು ಹತ್ತಿರಕ್ಕೂ ತಂದುಕೊಳ್ಳದೆ ಸಿನಿಮಾಗೆ ಏನೆಲ್ಲಾ ತಯಾರಿ ಬೇಕೋ ಅದೆಲ್ಲವನ್ನು ಪ್ರಾಕ್ಟೀಸ್ ಮಾಡಿಕೊಂಡೆ ಬಂದವರು. ಅವರ ತಯಾರಿ ಹೇಗಿತ್ತು ಅನ್ನೋದು ಹಾಡಿನ ಮೂಲಕವೇ ಸ್ಪಷ್ಟವಾಗಿದೆ.

  ಝೈದ್ ಖಾನ್ ಪಟ್ಟ ಶ್ರಮ ಒಂದೊಂದು ದೃಶ್ಯದಲ್ಲೂ ಅನಾವರಣವಾಗಿದೆ. ಈ ಮೂಲಕ ಒಂದಷ್ಟು ಭರವಸೆ ಮೂಡಿಸಿರುವುದಂತು ಸತ್ಯ. ಬನಾರಸ್ ಪ್ಯಾನ್ ಇಂಡಿಯಾ ಸಿನಿಮಾವಾಗಿ ಹೊರಬಂದಿದೆ. ರಿಲೀಸ್ ಗೂ ರೆಡಿಯಾಗಿದ್ದು, ಐದು ಭಾಷೆಯಲ್ಲೂ ಮಿಂಚಲು ರೆಡಿಯಾಗಿದ್ದಾರೆ. ಜಯತೀರ್ಥ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದು, ಒಂದೊಳ್ಳೆ ನಾಯಕನನ್ನು ನೀಡುತ್ತಿರುವ ಖುಷಿ ಅಭಿಮಾನಿಗಳಲ್ಲಿದೆ.

  Zameer Khans Son Zaid Khans Banaras Movie Will Release In Theaters Soon

  ತಿಲಕರಾಜ್ ಬಲ್ಲಾಳ್ ಅವರು ನಿರ್ಮಾಣ ಮಾಡಿದ್ದಾರೆ. ತಾರಾಗಣದಲ್ಲಿ ಸುಜಯ್ ಶಾಸ್ತ್ರಿ, ದೇವರಾಜ್, ಅಚ್ಯುತ್ ಕುಮಾರ್, ಸ್ವಪ್ನಾ ಮುಂತಾದವರು ನಟಿಸಿದ್ದಾರೆ. ಚಿತ್ರವು ಪ್ರಸ್ತುತ ಪೋಸ್ಟ್-ಪ್ರೊಡಕ್ಷನ್ ಹಂತದಲ್ಲಿದೆ. ಅಜನೀಶ್ ಬಿ ಲೋಕನಾಥ್ ಅವರ ಸಂಗೀತವಿದೆ, ಅದ್ವೈತ ಗುರುಮೂರ್ತಿ ಅವರ ಛಾಯಾಗ್ರಹಣ ನಿರ್ವಹಿಸಿದ್ದಾರೆ.

  English summary
  Former minister Zameer Khan's son Zaid Khan's Banaras movie will release in theaters soon. Banaras directed by Jayatheertha is a pan India Movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X