For Quick Alerts
  ALLOW NOTIFICATIONS  
  For Daily Alerts

  ಜಮೀರ್ ಪುತ್ರನ ಚೊಚ್ಚಲ ಚಿತ್ರ 'ಬನಾರಸ್' ಟ್ರೈಲರ್‌ ಲಾಂಚ್‌ಗೆ ಅರ್ಬಾಜ್ ಖಾನ್ ರವಿಚಂದ್ರನ್ ಗೆಸ್ಟ್!

  |

  ಚಾಮರಾಜಪೇಟೆ ಶಾಸಕ ಜಮೀರ್ ಅಹಮ್ಮದ್ ಖಾನ್ ಪುತ್ರ ಚೊಚ್ಚಲ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಅದುವೇ 'ಬನಾರಸ್'. ಈಗಾಗಲೇ ಈ ಸಿನಿಮಾದ ಹಾಡು ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿದೆ. ಸದ್ಯ ಟ್ರೈಲರ್ ಬಿಡುಗಡೆಗೆ ತಂಡ ಭರ್ಜರಿ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.

  ಝೈದ್ ಖಾನ್ ಹೀರೊ ಆಗಿ ನಟಿಸಿರೋ ಚೊಚ್ಚಲ ಸಿನಿಮಾ ಬನಾರಸ್ ಸಿನಿಮಾದ ಹಾಡು 'ಮಾಯಗಂಗೆ' ಈಗಾಗಲೇ ಸಂಗೀತ ಪ್ರಿಯರ ಮನಗೆದ್ದಿದೆ. ಝೈದ್ ಖಾನ್ ಹಾಗೂ ಸೋನಾಲ್ ಮಾಂಟೇರೋ ಜೋಡಿ ಪ್ರೇಕ್ಷಕರಿಗೆ ಇಷ್ಟ ಆಗಿದೆ. ಇನ್ನೇನು ಸಿನಿಮಾ ಬಿಡುಗಡೆಗೆ ಹತ್ತಿರ ಆಗುತ್ತಿದೆ ಅನ್ನುವಾಗಲೇ ಟ್ರೈಲರ್ ಬಿಡುಗಡೆ ಮುಂದಾಗಿದೆ.

  'ಬನಾರಸ್' ಸಿನಿಮಾ ಟ್ರೈಲರ್ ಇದೇ ಸೆಪ್ಟೆಂಬರ್ 26ರಂದು ಬಿಡುಗಡೆ ಮಾಡುವುದಕ್ಕೆ ಸಿನಿಮಾ ಟೀಮ್ ಮುಂದಾಗಿದೆ. ಇದೊಂದು ಪ್ಯಾನ್ ಇಂಡಿಯಾ ಸಿನಿಮಾ ಆಗಿರುವುದರಿಂದ ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಏಕಕಾಲಕ್ಕೆ ಸಂಜೆ 6 ಗಂಟೆಗೆ ಟ್ರೈಲರ್ ಅನ್ನು ಬಿಡುಗಡೆ ಮಾಡಲಾಗುತ್ತಿದೆ.

  ಈ ಟ್ರೈಲರ್ ಬಿಡುಗಡೆ ಕಾರ್ಯಕ್ರಮಕ್ಕೆ ಬಾಲಿವುಡ್ ಬಾಕ್ಸಾಫೀಸ್‌ ಬಾದ್‌ಷಾ ಸಲ್ಮಾನ್ ಖಾನ್ ಅವರ ಸಹೋದರ ಅರ್ಬಾಜ್ ಖಾನ್ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ. ಇವರೊಂದಿಗೆ ಕ್ರೇಜಿಸ್ಟಾರ್ ರವಿಚಂದ್ರನ್ ಕೂಡ ಮುಖ್ಯ ಅತಿಥಿಯಾಗಿ ಆಗಮಿಸುತ್ತಿದ್ದಾರೆ.

  ಬೆಂಗಳೂರಿನಲ್ಲಿ ಐದೂ ಭಾಷೆಯ ಪತ್ರಕರ್ತರು ಬೆಂಗಳೂರಿಗೆ ಆಗಮಿಸಲಿದ್ದಾರೆ. 'ಕೆಜಿಎಫ್ 2' ಶೈಲಿಯಲ್ಲಿ ಸಿನಿಮಾದ ಟ್ರೈಲರ್ ರಿಲೀಸ್ ಆದಂತೆ 'ಬನಾರಸ್' ಸಿನಿಮಾದ ಟ್ರೈಲರ್ ಅನ್ನೂ ಬಿಡುಗಡೆ ಮಾಡುವುದಕ್ಕೆ ಪ್ಲ್ಯಾನ್ ಮಾಡಿಕೊಳ್ಳಲಾಗಿದೆ.

  Zameer Son Zaid Khan Movie Banaras Trailer Launch Arbaaz Khan Ravichandran Guest

  'ಬನಾರಸ್' ಸಿನಿಮಾದ ಹಾಡುಗಳು ಇಷ್ಟ ಆಗಿದೆ. 'ಬೆಲ್ ಬಾಟಂ' ಖ್ಯಾತಿಯ ಜಯತೀರ್ಥ 'ಬನಾರಸ್' ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ಕನ್ನಡ , ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಸೇರಿದಂತೆ ಒಟ್ಟು ಐದು ಭಾಷೆಗಳಲ್ಲಿ ಏಕಕಾಲದಲ್ಲಿ ತೆರೆಕಾಣಲಿದೆ. ಈ ಸಿನಿಮಾ ನವೆಂಬರ್ ನಾಲ್ಕರಂದು ದೇಶಾದ್ಯಂತ ಅದ್ಧೂರಿಯಾಗಿ ಆಗಿ ರಿಲೀಸ್ ಆಗುತ್ತಿದೆ.

  ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾಗಳು ವಿಶ್ವಮಟ್ಟದಲ್ಲಿ ಸದ್ದು ಮಾಡುತ್ತಿವೆ. 'ಬನಾರಸ್' ಸಿನಿಮಾ ಕೂಡ ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, ಬೇರೆ ಭಾಷೆಯಲ್ಲಿ ಈ ಸಿನಿಮಾ ಯಾವ ರೀತಿ ರೆಸ್ಪಾನ್ಸ್ ಸಿಗುತ್ತೆ ಅನ್ನೋ ಕುತೂಹಲವಿದೆ. ಅಂದ್ಹಾಗೆ 'ಬನಾರಸ್' ಸಿನಿಮಾವನ್ನು ತಿಲಕ್ ರಾಜ್ ಬಲ್ಲಾಳ್ ನಿರ್ಮಾಣ ಮಾಡಿದ್ದಾರೆ. ಜಯತೀರ್ಥ ಸಿನಿಮಾ ಆಗಿರೋದ್ರಿಂದ ಕಥೆ ಹಾಗೂ ಚಿತ್ರಕಥೆಯ ಮೇಲೆ ನಿರೀಕ್ಷೆ ದುಪ್ಪಟ್ಟಾಗಿದೆ. ಇದರೊಂದಿಗೆ ಝೈದ್ ಖಾನ್ ಸಿನಿಮಾ ಎಂಟ್ರಿ ಹೇಗಿರುತ್ತೆ? ಎಂದು ನೋಡುವುದಕ್ಕೆ ಪ್ರೇಕ್ಷಕರು ಕುತೂಹಲದಿಂದ ಕಾಯುತ್ತಿದ್ದಾರೆ.

  English summary
  Zameer Ahmed Khan Son Zaid Khan Movie Banaras Trailer Launch Arbaaz Khan Ravichandran Guest, Know More.
  Saturday, September 24, 2022, 23:39
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X