»   » ಚಾಮುಂಡೇಶ್ವರಿ ಸ್ಟುಡಿಯೋದ ಗೋಡೆಗೆ ಸೆಲ್‌ಫೋನ್‌

ಚಾಮುಂಡೇಶ್ವರಿ ಸ್ಟುಡಿಯೋದ ಗೋಡೆಗೆ ಸೆಲ್‌ಫೋನ್‌

Posted By: Super
Subscribe to Filmibeat Kannada

ವಿಷ್ಣುವರ್ಧನ್‌ ಚಾಮುಂಡೇಶ್ವರಿ ಸ್ಟುಡಿಯೋಗೆ ಬಂದಷ್ಟೇ ವೇಗವಾಗಿ ವಾಪಸ್ಸೂ ಹೋದರು!
ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ನಡೆದದ್ದು 'ಜಮೀನ್ದಾರ್ರು" ಸಿನಿಮಾದ ಹಾಡುಗಳ ಧ್ವನಿಮುದ್ರಣ ಮುಹೂರ್ತದ ಕಾರ್ಯಕ್ರಮ. . ಕಾರ್ಯಕ್ರಮ ರಂಗು ರಂಗಾಗಿರಲಿ ಎಂದು ನಿರ್ಮಾಪಕ ಕೆ.ಮಂಜು ಸ್ಟುಡಿಯೋಗೆ ಬಣ್ಣ ಬಣ್ಣದ ಹೂಗಳ ಅಲಂಕಾರ ಮಾಡಿಸಿದ್ದರು. ಮುಹೂರ್ತದ ಘಳಿಗೆ ಸಮೀಪಿಸುತ್ತಿದ್ದಂತೆ ಎಲ್ಲರ ಕಣ್ಣುಗಳೂ ಬಾಗಿಲ ಕಡೆಗೆ. ಕೊನೆಗೂ ವಿಷ್ಣು ಬಂದರು, ಬಂದಷ್ಟೇ ವೇಗದಲ್ಲಿ ವಾಪಸ್ಸಾದರು. 'ಕೋಟಿಗೊಬ್ಬ" ಶೂಟಿಂಗ್‌ ತಂಡ ಯಜಮಾನರನ್ನು ಕಾಯುತ್ತಿತ್ತು .

'ಜಮೀನ್ದಾರ್ರು" ಮೂಲಕ ವಿಷ್ಣುವರ್ಧನ್‌ ಮತ್ತು ನಿರ್ದೇಶಕ ಎಸ್‌.ನಾರಾಯಣ್‌ ಮತ್ತೆ ಒಟ್ಟುಗೂಡುತ್ತಿದ್ದಾರೆ. 'ವೀರಪ್ಪನಾಯಕ" ಹಾಗೂ 'ಸೂರ್ಯವಂಶ" ಯಶಸ್ವಿ ಚಿತ್ರಗಳ ನಂತರ ತಂತಮ್ಮ ಕಮಿಟ್‌ಮೆಂಟ್‌ಗಳಲ್ಲಿ ಬಿಜಿಯಾಗಿದ್ದ ಈ ಯಶಸ್ವಿ ಜೋಡಿ 'ಜಮೀನ್ದಾರ್ರು" ಮೂಲಕ ಮತ್ತೆ ಕೈ ಜೋಡಿಸುತ್ತಿದ್ದಾರೆ. ವಿಷ್ಣು ಜೊತೆ ಯಶಸ್ಸಿನ ಹ್ಯಾಟ್ರಿಕ್‌ ಸಾಧಿಸುವ ಬಯಕೆ ನಾರಾಯಣ್‌ ಅವರದು.

ನಿರ್ಮಾಪಕ ಮಂಜು ಅವರಂತೂ ಭಲೇ ಖುಷಿಯಲ್ಲಿದ್ದರು. ಧ್ವನಿಮುದ್ರಣದ ಮುಹೂರ್ತಕ್ಕೆ ಆಗಮಿಸಿದ್ದ ಅತಿಥಿಗಳೆಲ್ಲ ಮಂಜು ಅವರ ಸೌಂದರ್ಯ ಪ್ರಜ್ಞೆಯನ್ನು ಹೊಗಳುತ್ತಿದ್ದುದು ಅವರನ್ನು ಪುಳಕಗೊಳಿಸಿತ್ತು . ಅಲಂಕಾರಕ್ಕಾಗಿ ಬಳಸಿದ್ದ ತೆಂಗು ಹಾಗೂ ಬಗೆಬಗೆ ಹೂಗಳು ಚಿತ್ರದ ಯಶಸ್ಸಿನ ಸಂಕೇತ ಎಂದು ಮಂಜು ಬೀಗಿದರು.

ಸೆಲ್‌ಫೋನ್‌ ಹಿಡಿದು ನಿಂತಿರುವ ವಿಷ್ಣುವರ್ಧನ್‌ ಅವರ ದೊಡ್ಡ ಕಟೌಟೊಂದನ್ನೂ 'ಜಮೀನ್ದಾರ್ರು" ಯಜಮಾನ್ರು ಸಿದ್ಧಪಡಿಸಿದ್ದಾರೆ. ಚಾಮುಂಡೇಶ್ವರಿ ಸ್ಟುಡಿಯೋದ ಗೋಡೆಯಾಂದರ ಅಲಂಕಾರಕ್ಕೆ ಈ ಕಟೌಟ್‌ ಮೀಸಲು. ಅಕ್ಟೋಬರ್‌ 26 ರಿಂದ ಜಮೀನ್ದಾರ್ರು ಶೂಟಿಂಗ್‌ ಶುರುವಾಗುವುದಾಗಿ ಮಂಜು ಹೇಳಿದರು. ಆ ಹೊತ್ತಿಗೆ 'ದುರ್ಗಾ" ಮುಗಿದಿರುತ್ತದಾ?

English summary
Jamindarru : Vishnuvardhan and Narayans new combination

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada