For Quick Alerts
  ALLOW NOTIFICATIONS  
  For Daily Alerts

  'ವಿಕ್ರಾಂತ್ ರೋಣ' ಬಾಕ್ಸಾಫೀಸ್ ಕಲೆಕ್ಷನ್ ₹200 ಕೋಟಿ ಎಂದ ಜೀ5: ಕಾಲರ್ ಎಗರಿಸಿದ ಫ್ಯಾನ್ಸ್!

  |

  ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ 'ವಿಕ್ರಾಂತ್ ರೋಣ' ಸಿನಿಮಾ ಬಾಕ್ಸಾಫೀಸ್‌ ಶೇಕ್ ಮಾಡಿದ್ದು ಗೊತ್ತೇಯಿದೆ. ಜುಲೈ 28ರಂದು ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ 5 ಭಾಷೆಗಳಲ್ಲಿ ಬಾದ್‌ಶಾ ದರ್ಬಾರ್ ಶುರುವಾಗಿತ್ತು. ಅನೂಪ್ ಭಂಡಾರಿ ನಿರ್ದೇಶನದ ಆಕ್ಷನ್ ಅಡ್ವೆಂಚರ್ ಥ್ರಿಲ್ಲರ್ ಸಿನಿಮಾ ಪ್ರೇಕ್ಷಕರಿಗೆ ಸಖತ್ ಕಿಕ್ ಕೊಟ್ಟಿತ್ತು. 3D ವರ್ಷನ್ ಎಕ್ಸ್‌ಪಿಯರೆನ್ಸ್ ಅಂತೂ ಸಖತ್ ಮಜವಾಗಿತ್ತು. ಸಿನಿಮಾ ಕೋಟಿ ಕೋಟಿ ಕೊಳ್ಳೆ ಹೊಡೆದಿತ್ತು. ಆದರೆ ಚಿತ್ರದ ಒಟ್ಟು ಕಲೆಕ್ಷನ್ ಎಷ್ಟು ಅನ್ನುವ ಬಗ್ಗೆ ಖಚಿತ ಮಾಹಿತಿ ಸಿಕ್ಕಿರಲಿಲ್ಲ. ಇದೀಗ ಹೆಚ್ಚು ಕಡಿಮೆ ಆ ಲೆಕ್ಕ ಸಿಕ್ಕಿದಂತಾಗಿದೆ.

  ಕಿಚ್ಚನ ಹುಟ್ಟುಹಬ್ಬ ಸಂಭ್ರಮದಲ್ಲೇ 'ವಿಕ್ರಾಂತ್ ರೋಣ' ಓಟಿಟಿಗೆ ಎಂಟ್ರಿ ಕೊಡ್ತಿದೆ. ಜೀ5 ಸಂಸ್ಥೆ ಚಿತ್ರದ ಡಿಟಿಟಲ್ ರೈಟ್ಸ್ ಕೊಂಡುಕೊಂಡಿದೆ. ಸೆಪ್ಟೆಂಬರ್ 2ಕ್ಕೆ ಚಿತ್ರವನ್ನು ಓಟಿಟಿ ಫ್ಲಾಟ್‌ಫಾರ್ಮ್‌ನಲ್ಲಿ ಸ್ಕ್ರೀಮಿಂಗ್ ಮಾಡುವುದಾಗಿ ಸಣ್ಣ ಟೀಸರ್ ಸಮೇತ ಘೋಷಿಸಿದೆ. ಈ ಟೀಸರ್‌ನಲ್ಲಿ ಸಿನಿಮಾ 200 ಕೋಟಿ ಕ್ಲಬ್ ಸೇರಿದೆ ಅನ್ನುವ ಮಾಹಿತಿಯನ್ನು ನೀಡಿದೆ. ಸಾಮಾನ್ಯವಾಗಿ ಕನ್ನಡ ಸಿನಿಮಾಗಳ ಬಾಕ್ಸಾಫೀಸ್ ಕಲೆಕ್ಷನ್ ಲೆಕ್ಕಾಚಾರ ಸಿಗುವುದಿಲ್ಲ. ಇದು ಕೆಲವೊಮ್ಮೆ ಗೊಂದಲಕ್ಕೂ ಕಾರಣವಾಗುತ್ತದೆ.

  ತೆಲುಗು ಸಿನಿಮಾದಲ್ಲಿ ಸುದೀಪ್: ವಿಜಯ್ ಸೇತುಪತಿ ಜೊತೆ ಜುಗಲ್‌ಬಂಧಿತೆಲುಗು ಸಿನಿಮಾದಲ್ಲಿ ಸುದೀಪ್: ವಿಜಯ್ ಸೇತುಪತಿ ಜೊತೆ ಜುಗಲ್‌ಬಂಧಿ

  ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಸಿನಿಮಾ ಇಷ್ಟು ಕೋಟಿ ರೂ. ಕಲೆಕ್ಷನ್ ಮಾಡ್ತು, ಅಷ್ಟು ಕೋಟಿ ರೂ. ಬಾಚಿದೆ ಎಂದು ಚರ್ಚೆ ಮಾಡುತ್ತಿರುತ್ತಾರೆ. ಇದು ಅವರ ಪ್ರತಿಷ್ಠೆ ಪ್ರಶ್ನೆ ಕೂಡ ಆಗಿರುತ್ತದೆ. ಆದರೆ ಸರಿಯಾದ ಕಲೆಕ್ಷನ್ ಲೆಕ್ಕ ಸಿಗದೇ ಬರೀ ಅಂತೆ ಕಂತೆಗಳ ಸಂತೆ ಆಗಿಬಿಟ್ಟರೆ ಕಷ್ಟ. ಸ್ವತಃ ಜೀ5 ಸಂಸ್ಥೆ 'ವಿಕ್ರಾಂತ್ ರೋಣ' ಸಿನಿಮಾ 200 ಕೋಟಿ ರೂ. ಕ್ಲಬ್ ಸೇರಿದೆ ಎಂದು ಟೀಸರ್‌ನಲ್ಲಿ ಹೇಳಿದೆ. ಈ ಸುದ್ದಿ ಕೇಳಿ ಕಿಚ್ಚನ ಅಭಿಮಾನಿಗಳು ಖುಷಿಯಾಗಿದ್ದಾರೆ.

   ಕಾಲರ್ ಎಗರಿಸಿದ ಬಾದ್‌ಶಾ ಫ್ಯಾನ್ಸ್!

  ಕಾಲರ್ ಎಗರಿಸಿದ ಬಾದ್‌ಶಾ ಫ್ಯಾನ್ಸ್!

  'ವಿಕ್ರಾಂತ್ ರೋಣ' ಸಿನಿಮಾ ದೊಡ್ಡಮಟ್ಟದಲ್ಲಿ ಪ್ರೇಕ್ಷಕರನ್ನು ಥಿಯೇಟರ್‌ಗೆ ಸೆಳೆದಿತ್ತು. ಸಿನಿಮಾ ನೋಡಿದವರೆಲ್ಲಾ ಅನೂಪ್ ಭಂಡಾರಿ ನಿರ್ದೇಶನ ಹಾಗೂ ಸುದೀಪ್ ಪರ್ಫಾರ್ಮೆನ್ಸ್ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದ್ದರು. ಫ್ಯಾಮಿಲಿ ಸಮೇತ ಸಿನಿಮಾ ನೋಡಿ ಖುಷಿಪಟ್ಟಿದ್ದರು. ಹೊರ ರಾಜ್ಯಗಳಲ್ಲೂ ಸಿನಿಮಾ ಸಖತ್ ಸದ್ದು ಮಾಡಿತ್ತು. ಪರಿಣಾಮ ಬಾಕ್ಸಾಫೀಸ್‌ನಲ್ಲಿ 'ರೋಣ'ನ ಕಮಾಯಿ ಚೆನ್ನಾಗಿಯೇ ಇತ್ತು. ಜೀ5 ಸಂಸ್ಥೆ ಇದೀಗ ಸಿನಿಮಾ 200 ಕೋಟಿ ರೂ. ಕಲೆಕ್ಷನ್ ಮಾಡಿದೆ ಎಂದು ಘೋಷಿಸಿದ್ದು ನೋಡಿ ಸುದೀಪ್ ಅಭಿಮಾನಿಗಳು ಕಾಲರ್ ಎಗರಿಸಿದ್ದಾರೆ.

   3ನೇ ಸ್ಥಾನದಲ್ಲಿ 'ವಿಕ್ರಾಂತ್ ರೋಣ'

  3ನೇ ಸ್ಥಾನದಲ್ಲಿ 'ವಿಕ್ರಾಂತ್ ರೋಣ'

  ಒಂದ್ಕಾಲದಲ್ಲಿ ಕನ್ನಡ ಸಿನಿಮಾಗಳು 100 ಕೋಟಿ ರೂ. ಕಲೆಕ್ಷನ್ ಮಾಡುವುದೇ ಕಷ್ಟ ಅನ್ನುವಂತಾಗಿತ್ತು. ಆದರೆ ಪ್ಯಾನ್ ಇಂಡಿಯಾ ಸಿನಿಮಾಗಳ ಜಮಾನ ಶುರುವಾದ ಮೇಲೆ ಇದು ಕೊಂಚ ಸುಲಭವಾಗಿದೆ. 'ಕೆಜಿಎಫ್' ಚಾಪ್ಟರ್‌- 1 ಸಿನಿಮಾ 4 ವರ್ಷಗಳ ಹಿಂದೆ 250 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಇದೇ ವರ್ಷ ಬಂದ 'ಕೆಜಿಎಫ್' ಚಾಪ್ಟರ್‌- 2 ಸಿನಿಮಾ 1300 ಕೋಟಿ ರೂ. ಕಲೆಕ್ಷನ್ ಮಾಡಿ ದಾಖಲೆ ಬರೆದಿತ್ತು. ಇದೀಗ ಆ ಎರಡು ಸಿನಿಮಾಗಳ ನಂತರದ ಸ್ಥಾನಕ್ಕೆ 'ವಿಕ್ರಾಂತ್ ರೋಣ' ಸಿನಿಮಾ ಬಂದಂತಾಗಿದೆ.

   'ವಿಕ್ರಾಂತ್ ರೋಣ' ಜೋಡಿಯ ಮತ್ತೊಂದು ಸಿನಿಮಾ

  'ವಿಕ್ರಾಂತ್ ರೋಣ' ಜೋಡಿಯ ಮತ್ತೊಂದು ಸಿನಿಮಾ

  ಅನೂಪ್ ಭಂಡಾರಿ ಬಹಳ ವಿಭಿನ್ನವಾಗಿ 'ವಿಕ್ರಾಂತ್ ರೋಣ' ಸಿನಿಮಾ ಕಟ್ಟಿಕೊಟ್ಟು ಗೆದ್ದಿದ್ದಾರೆ. ಇದೀಗ ಸುದೀಪ್ ಕಾಂಬಿನೇಷನ್‌ನಲ್ಲಿ ಮತ್ತೊಂದು ಚಿತ್ರಕ್ಕೆ ಕಥೆ ಸಿದ್ಧಪಡಿಸುತ್ತಿದ್ದಾರೆ. 'ವಿಕ್ರಾಂತ್ ರೋಣ' ನಂತರ ಇವರಿಬ್ಬರು ಮತ್ತೊಂದು ಸಿನಿಮಾ ಮಾಡಬೇಕು ಎಂದು ಅಭಿಮಾನಿಗಳು ಕೇಳುತ್ತಿದ್ದರು. ಈಗಾಗಲೇ ಪ್ರೀ ಪ್ರೊಡಕ್ಷನ್ ವರ್ಕ್ ನಡೀತಿದ್ದು, ಈ ವರ್ಷವೇ ಸಿನಿಮಾ ಸೆಟ್ಟೇರಲಿದೆ ಎಂದು ಇತ್ತೀಚೆಗೆ ಅನೂಪ್ ಭಂಡಾರಿ ಫಿಲ್ಮಿಬೀಟ್‌ಗೆ ಮಾಹಿತಿ ನೀಡಿದ್ದರು.

   ಕಿಚ್ಚನ ಹುಟ್ಟುಹಬ್ಬಕ್ಕೆ ಭರ್ಜರಿ ಟ್ರೀಟ್

  ಕಿಚ್ಚನ ಹುಟ್ಟುಹಬ್ಬಕ್ಕೆ ಭರ್ಜರಿ ಟ್ರೀಟ್

  'ವಿಕ್ರಾಂತ್ ರೋಣ' ಸಿನಿಮಾ ಸಕ್ಸಸ್‌ ಸಂಭ್ರಮದಲ್ಲೇ ಈ ವರ್ಷ ಸುದೀಪ್ ಹುಟ್ಟುಹಬ್ಬ ಬರ್ತಿದೆ. ಸುದೀಪ್ ಅದ್ಧೂರಿ ಹುಟ್ಟುಹಬ್ಬಕ್ಕೆ ಕೆಲ ವರ್ಷಗಳಿಂದ ಬ್ರೇಕ್ ಹಾಕಿದ್ದಾರೆ. ಹಾಗಾಗಿ ಈ ವರ್ಷವೂ ಸಂಭ್ರಮಾಚರಣೆ ಸರಳವಾಗಿ ಇರುತ್ತದೆ. ಆದರೆ ಸೆಪ್ಟೆಂಬರ್‌ 2ಕ್ಕೆ ಸುದೀಪ್ ಹುಟ್ಟುಹಬ್ಬದ ವಿಶೇಷವಾಗಿ ಸ್ಮಾಲ್‌ ಸ್ಕ್ರೀನ್‌ನಲ್ಲಿ 'ರೋಣ'ನ ಅಬ್ಬರ ಶುರುವಾಗಲಿದೆ. ಜೀ5 ಓಟಿಟಿ ಫ್ಲಾಟ್‌ಫಾರ್ಮ್‌ನಲ್ಲಿ ಸಿನಿಮಾ ನೋಡಿ ಎಂಜಾಯ್ ಮಾಡಬಹುದು. ಜೊತೆಗೆ ಸುದೀಪ್ ನಟನೆಯ ಮುಂದಿನ ಸಿನಿಮಾಗಳ ಬಗ್ಗೆ ಕೂಡ ಅಪ್‌ಡೇಟ್ ಸಿಗುವ ಸಾಧ್ಯತೆಯಿದೆ.

  English summary
  ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ 'ವಿಕ್ರಾಂತ್ ರೋಣ' ಸಿನಿಮಾ ಬಾಕ್ಸಾಫೀಸ್‌ ಶೇಕ್ ಮಾಡಿದ್ದು ಗೊತ್ತೇಯಿದೆ. ಜುಲೈ 28ರಂದು ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ 5 ಭಾಷೆಗಳಲ್ಲಿ ಬಾದ್‌ಶಾ ದರ್ಬಾರ್ ಶುರುವಾಗಿತ್ತು. ಅನೂಪ್ ಭಂಡಾರಿ ನಿರ್ದೇಶನದ ಆಕ್ಷನ್ ಅಡ್ವೆಂಚರ್ ಥ್ರಿಲ್ಲರ್ ಸಿನಿಮಾ ಪ್ರೇಕ್ಷಕರಿಗೆ ಸಖತ್ ಕಿಕ್ ಕೊಟ್ಟಿತ್ತು. 3D ವರ್ಷನ್ ಎಕ್ಸ್‌ಪಿಯರೆನ್ಸ್ ಅಂತೂ ಸಖತ್ ಮಜವಾಗಿತ್ತು. ಸಿನಿಮಾ ಕೋಟಿ ಕೋಟಿ ಕೊಳ್ಳೆ ಹೊಡೆದಿತ್ತು. ಆದರೆ ಚಿತ್ರದ ಒಟ್ಟು ಕಲೆಕ್ಷನ್ ಎಷ್ಟು ಅನ್ನುವ ಬಗ್ಗೆ ಖಚಿತ ಮಾಹಿತಿ ಸಿಕ್ಕಿರಲಿಲ್ಲ. ಇದೀಗ ಹೆಚ್ಚು ಕಡಿಮೆ ಆ ಲೆಕ್ಕ ಸಿಕ್ಕಿದಂತಾಗಿದೆ.ಕಿಚ್ಚನ ಹುಟ್ಟುಹಬ್ಬ ಸಂಭ್ರಮದಲ್ಲೇ 'ವಿಕ್ರಾಂತ್ ರೋಣ' ಓಟಿಟಿಗೆ ಎಂಟ್ರಿ ಕೊಡ್ತಿದೆ. ಜೀ5 ಸಂಸ್ಥೆ ಚಿತ್ರದ ಡಿಟಿಟಲ್ ರೈಟ್ಸ್ ಕೊಂಡುಕೊಂಡಿದೆ. ಸೆಪ್ಟೆಂಬರ್ 2ಕ್ಕೆ ಚಿತ್ರವನ್ನು ಓಟಿಟಿ ಫ್ಲಾಟ್‌ಫಾರ್ಮ್‌ನಲ್ಲಿ ಸ್ಕ್ರೀಮಿಂಗ್ ಮಾಡುವುದಾಗಿ ಸಣ್ಣ ಟೀಸರ್ ಸಮೇತ ಘೋಷಿಸಿದೆ. ಈ ಟೀಸರ್‌ನಲ್ಲಿ ಸಿನಿಮಾ 200 ಕೋಟಿ ಕ್ಲಬ್ ಸೇರಿದೆ ಅನ್ನುವ ಮಾಹಿತಿಯನ್ನು ನೀಡಿದೆ. ಸಾಮಾನ್ಯವಾಗಿ ಕನ್ನಡ ಸಿನಿಮಾಗಳ ಬಾಕ್ಸಾಫೀಸ್ ಕಲೆಕ್ಷನ್ ಲೆಕ್ಕಾಚಾರ ಸಿಗುವುದಿಲ್ಲ. ಇದು ಕೆಲವೊಮ್ಮೆ ಗೊಂದಲಕ್ಕೂ ಕಾರಣವಾಗುತ್ತದೆ.ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಸಿನಿಮಾ ಇಷ್ಟು ಕೋಟಿ ರೂ. ಕಲೆಕ್ಷನ್ ಮಾಡ್ತು, ಅಷ್ಟು ಕೋಟಿ ರೂ. ಬಾಚಿದೆ ಎಂದು ಚರ್ಚೆ ಮಾಡುತ್ತಿರುತ್ತಾರೆ. ಇದು ಅವರ ಪ್ರತಿಷ್ಠೆ ಪ್ರಶ್ನೆ ಕೂಡ ಆಗಿರುತ್ತದೆ. ಆದರೆ ಸರಿಯಾದ ಕಲೆಕ್ಷನ್ ಲೆಕ್ಕ ಸಿಗದೇ ಬರೀ ಅಂತೆ ಕಂತೆಗಳ ಸಂತೆ ಆಗಿಬಿಟ್ಟರೆ ಕಷ್ಟ. ಸ್ವತಃ ಜೀ5 ಸಂಸ್ಥೆ 'ವಿಕ್ರಾಂತ್ ರೋಣ' ಸಿನಿಮಾ 200 ಕೋಟಿ ರೂ. ಕ್ಲಬ್ ಸೇರಿದೆ ಎಂದು ಟೀಸರ್‌ನಲ್ಲಿ ಹೇಳಿದೆ. ಈ ಸುದ್ದಿ ಕೇಳಿ ಕಿಚ್ಚನ ಅಭಿಮಾನಿಗಳು ಖುಷಿಯಾಗಿದ್ದಾರೆ.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X