»   » ಇದೇ ತಿಂಗಳಿನಿಂದ ಹೊಚ್ಚ ಹೊಸ ಧಾರಾವಾಹಿ 'ಕಮಲಿ'

ಇದೇ ತಿಂಗಳಿನಿಂದ ಹೊಚ್ಚ ಹೊಸ ಧಾರಾವಾಹಿ 'ಕಮಲಿ'

By Bharath Kumar
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ಹೊಸ ಹೊಸ ಧಾರಾವಾಹಿ, ಕಾರ್ಯಕ್ರಮಗಳ ಮೂಲಕ ಜನಪ್ರಿಯತೆಗೊಳಿಸಿಕೊಂಡಿರುವ ಜೀ-ಕನ್ನಡ ಇದೀಗ ಮತ್ತೊಂದು ಕಥೆಯೊಂದಿಗೆ ಮತ್ತಷ್ಟು ಮನರಂಜನೆ ನೀಡಲು ಮುಂದಾಗಿದೆ. ಜೀ ಕನ್ನಡ ವಾಹಿನಿಯಲ್ಲಿ ಇದೇ ಮೇ. 28ರಿಂದ ಹೊಸ ಧಾರಾವಾಹಿ 'ಕಮಲಿ' ಆರಂಭವಾಗುತ್ತಿದೆ.

  ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 7 ರಿಂದ 7.30ರವರೆಗೆ ಈ ಧಾರಾವಾಹಿ ಪ್ರಸಾರವಾಗಲಿದೆ. ಕನ್ನಡ ಕಿರುತೆರೆಯಲ್ಲಿ ಇದೇ ಮೊದಲು ಧಾರಾವಾಹಿಯೊಂದು ಕೊಡೈಕೆನಾಲ್ ನಲ್ಲಿ ಚಿತ್ರೀಕರಣಗೊಂಡಿದೆ. ಕಮಲಿಯ ಹಳ್ಳಿ ದೃಶ್ಯಗಳು ಪೂರ್ತಿಯಾಗಿ ಕೊಡೈಕೆನಾಲ್ ನಲ್ಲಿ ಚಿತ್ರಿತವಾಗಿದೆ.

  ಕಥೆಯ ನಾಯಕಿ ಕಮಲಿ ಹಳ್ಳಿ ಹುಡುಗಿ. ಓದಿ ವಿದ್ಯಾವಂತೆಯಾಗಬೇಕೆಂಬ ಕನಸು. ಪಿಯುಸಿ ಮುಗಿದ ಬಳಿಕ ಪಟ್ಟಣಕ್ಕೆ ಹೋಗಿ ಓದಬೇಕೆಂಬ ಹಂಬಲ. ಆದ್ರೆ ಅಮ್ಮನೇ ಈಕೆಗೆ ಓದಿನ ವಿಚಾರದಲ್ಲಿ ಶತೃ. ಮಗಳು ಹಳ್ಳಿ ಬಿಟ್ಟು ಪಟ್ಟಣಕ್ಕೆ ಹೋಗಲು ಅಮ್ಮ ಬಿಡುವುದಿಲ್ಲ. ಅಮ್ಮ ಮಗಳನ್ನು ಹಳ್ಳಿಯಲ್ಲೇ ಉಳಿಸಿಕೊಳ್ಳುವ ಯತ್ನದ ಹಿಂದೊಂದು ರಹಸ್ಯವಿದೆ.

  ಅಮ್ಮನ ಮಾತು ಮೀರಿ ನಗರಕ್ಕೆ ಬರುವ 'ಕಮಲಿ' ಓದು ಪೂರೈಸುತ್ತಾಳಾ ಅಥವಾ ದೊಡ್ಡದೊಂದು ಸಮಸ್ಯೆಯಲ್ಲಿ ಸಿಲುಕಿ ಹಾಕಿಕೊಳ್ಳುತ್ತಾಳಾ ಎಂಬ ಎಳೆಯ ಮೇಲೆ ಮುಂದಿನ ಕಥೆ ಸಾಗುತ್ತದೆ. 17 ವರ್ಷದ ಹಿಂದಿನ ರಹಸ್ಯವೊಂದು ನಗರದಲ್ಲಿ ತೆರೆದುಕೊಳ್ಳುತ್ತೆ.

  ಹಳ್ಳಿಯಿಂದ ಬಂದ ಕಮಲಿ ಪಟ್ಟಣದಲ್ಲಿ ಅನುಭವಿಸುವ ನೋವು, ನಲಿವಿನ ಗೊಂಚಲುಗಳು ಇಲ್ಲಿವೆ. ಪಟ್ಟಣದ ಪಯಣದಲ್ಲಿ ಕಮಲಿಗೆ ನಾಯಕ ಸಿಗುತ್ತಾನೆ. ಅವನಿಂದ ಈಕೆಯ ಬದುಕಿನಲ್ಲಿ ಎಂಥ ತಿರುವು ಸಿಗುತ್ತದೆ ಎಂಬ ಸುತ್ತ ಕಥೆ ಸಾಗುತ್ತದೆ.

  ಕಿರುತೆರೆ ಜಗತ್ತಿನ ಜನಪ್ರಿಯ ನಿರ್ದೇಶಕರಾದ ಅರವಿಂದ್ ಕೌಶಿಕ್ ಈ ಧಾರಾವಾಹಿಯನ್ನು ನಿರ್ದೇಶಿಸಿ ನಿರ್ಮಾಣ ಮಾಡುತ್ತಿದ್ದಾರೆ. ಪದ್ಮವಾಸಂತಿ, ಯಮುನಾ ಶ್ರೀನಿಧಿ ಸೇರಿದಂತೆ ಅನೇಕ ನುರಿತ ಕಲಾವಿದರಿದ್ದಾರೆ. ಇದೇ ಮೇ.28 ರಿಂದ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 7 ರಿಂದ 7.30 ರವರೆಗೆ ಜೀ ಕನ್ನಡ ವಾಹಿನಿಯಲ್ಲಿ 'ಕಮಲಿ' ಪ್ರಸಾರವಾಗಲಿದೆ.

  English summary
  Papoular channel Zee Kannada is all set to expand its fiction band with the launch of its new show, Kamali. The story of Kamali, a young girl hailing from a village who wishes to pursue her dreams of becoming a professional Kabaddi player, Kamali aims to bring about a refreshing change in the minds of the next generation.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more