ಡಿಕೆಡಿಯಲ್ಲಿ ಶಿವಣ್ಣನ ಹಬ್ಬ : ಅಣ್ಣಾವ್ರನ ಮಗನ ಬಗ್ಗೆ ಕ್ರೇಜಿ ಸ್ಟಾರ್ ತೂಕದ ಮಾತು!
ಜೀ ಕನ್ನಡದ ವೀಕೆಂಡ್ ಶೋ ಡಿಕೆಡಿ ಸದ್ಯ ಎಲ್ಲರ ಅಚ್ಚುಮೆಚ್ಚಾಗಿದೆ. ಮಕ್ಕಳ ಡ್ಯಾನ್ಸ್ ನೋಡುವುದಕ್ಕೂ ಧೈರ್ಯ ಬೇಕು ಎಂಬುದರ ಜೊತೆಗೆ ಮಕ್ಕಳಲ್ಲಿ ಅದೆಷ್ಟು ಕಲೆ ಇದೆ ಎಂಬ ಆಶ್ಚರ್ಯವೂ ಒಟ್ಟೊಟ್ಟಿಗೆ ಆಗುತ್ತೆ. ಇನ್ನು ಡ್ಯಾನ್ಸ್ ಕಲಿಸಿಕೊಡುವ ಡ್ಯಾನ್ಸ್ ಮಾಸ್ಟರ್‌ಗಳಿಗಂತೂ ಸಲಾಂ ಎನ್ನಲೇಬೇಕು. ಅದನ್ನು ಕುಳಿತು ಧೈರ್ಯವಾಗಿ ನೋಡುವ ಪೋಷಕರ ಧೈರ್ಯವೂ ಗ್ರೇಟ್. ಇಷ್ಟೆಲ್ಲಾ ಹೇಳುವುದಕ್ಕೆ ಕಾರಣ ಡಿಕೆಡಿ ಕಾರ್ಯಕ್ರಮದಲ್ಲಿ ಮಕ್ಕಳ ಡಾನ್ಸ್ ಎಲ್ಲರನ್ನು ಮೋಡಿ ಮಾಡಿದೆ. ಒಂದು ಕ್ಷಣ ಕುಂತಲ್ಲೇ ಎಗರಿ ಬೀಳುವಂತೆ ಮಾಡುತ್ತೆ. ರಕ್ಷಿತಾ ಪ್ರೇಮ್ ಆಗಾಗ ಗಾಬರಿಯಾಗುವುದನ್ನು ನೋಡಿದಾಗ ಅದರ ಸತ್ಯಾಸತ್ಯತೆ ಅರಿವಿಗೆ ಬರುತ್ತದೆ. ಇದೆಲ್ಲದರ ನಡುವೆ ಮಕ್ಕಳ ಡ್ಯಾನ್ಸ್‌ಗೆ ಫುಲ್ ಮಾರ್ಕ್ಸ್ ಕೊಡಲೇಬೇಕು.
ಈ ವಾರ ಒಂದಷ್ಟು ಸ್ಪೆಷಲ್ ಅಂಶ ನೋಡುವುದಕ್ಕೆ ಸಿಗುತ್ತದೆ. ದೊಡ್ಮನೆ ಮೇಲೆ ಮತ್ತಷ್ಟು ಗೌರವ ಹೆಚ್ಚು ಮಾಡುವಂತಹ ಮಾತುಗಳು ಕೇಳಿಸುತ್ತವೆ. ನಟಿ ಲಕ್ಷ್ಮೀ ಅವರ ನಟನಾ ಜರ್ನಿ ಗೊತ್ತಿಲ್ಲದವರಿಗೂ ಕಣ್ಣ ಮುಂದೆ ಹಾದು ಹೋಗುತ್ತದೆ. ಹೀಗೆ ಅನೇಕ ವಿಶೇಷತೆಗಳನ್ನು ನಾವಿವತ್ತು ಡಿಕೆಡಿಯಲ್ಲಿ ನೋಡಬಹುದಾಗಿದೆ. ಅದರಲ್ಲಿ ಸ್ಪೆಷಲ್ ಅಂದ್ರೆ ಶಿವಣ್ಣನ ಬಗ್ಗೆ ಕ್ರೇಜಿಸ್ಟಾರ್ ರವಿಚಂದ್ರನ್ ಆಡಿದ ಮಾತುಗಳು.

ರಿಪಿಟ್‌ದ ಸಾಂಗ್‌ಗೆ ಎಲ್ಲರೂ ಫಿದಾ
ಮಚ್ಚು ಲಾಂಗೆಲ್ಲ ಶಿವಣ್ಣ ಕೈಲಿದ್ರೆ ಅದರ ಗತ್ತೇ ಬೇರೆ. ಲಾಂಗ್ ಪರಿಚಯ ಆಗಿರುವುದೇ ಶಿವಣ್ಣನಿಗಾಗಿ ಅನ್ನೋದು ಸಾಕಷ್ಟು ಹಿಂದಿನ ಮಾತು. ಅದು ಇಂದಿಗೂ ಸೂಕ್ತವೇ ಸರಿ. ಅಭಿಮಾನಿಗಳು ಬಾಸು ನಮ್ ಬಾಸು ಅಂತ ಶಿವಣ್ಣನನ್ನು ಹಾಡಿ ಕೊಂಡಾಡುವಂತೆ, ಡಿಕೆಡಿಯಲ್ಲೂ ಶಿವಣ್ಣನಿಗಾಗಿ ಅಭಿಮಾನದ ಗೌರವ ಸಲ್ಲಿಸುತ್ತಿದ್ದಾರೆ. ಅದು ಅವರದ್ದೇ ಸಿನಿಮಾದ ಹಾಡಿಗೆ ಡಿಕೆಡಿ ಮಕ್ಕಳು ಕುಣಿಯುವ ಮೂಲಕ. ಜಾನ್ಸನ್ ಮತ್ತು ಅಶ್ರಿತಾ ಬಾಸು ನಮ್ ಬಾಸು ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಈ ಪರ್ಫಾಮೆನ್ಸ್ ನೋಡಿ ಶಿವಣ್ಣ ಕುಳಿತಲ್ಲಿಯೇ ಕಳೆದು ಹೋಗಿದ್ದಾರೆ. ಜಾನ್ಸನ್ ಹಾಕಿದ ಕ್ಯಾಶ್ಯುವಲ್ ಸ್ಟೆಪ್‌ಗೆ ಹೊಗಳಿದ್ದಾರೆ. ಡ್ಯಾನ್ಸ್ ಮಜಭೂತವಾಗಿತ್ತು ಎಂದಿದ್ದಾರೆ. ಜಾನ್ಸನ್ ಕೂಡ ಅಷ್ಟೇ ಎಲ್ಲರ ಮೋಡಿ ಮಾಡುವಂತೆ ಡ್ಯಾನ್ಸ್ ಮಾಡಿ ತೋರಿಸಿದ್ದಾನೆ. ಈ ಮೂಲಕ ಜೀ ಕನ್ನಡದ ಡಿಕೆಡಿ ವೇದಿಕೆ ಶಿವಣ್ಣನಿಗೆ ಅಭಿಮಾನದ ಗೌರವ ಸಮರ್ಪಿಸಿದೆ. ಅಷ್ಟೇ ಅಲ್ಲ ಆ ಲಾಂಗ್ ಒಮ್ಮೆ ಶಿವಣ್ಣ ಬೀಸದೆ ಹೋದರೆ ಅದಕ್ಕೊಂದು ಕಳೆ ಬರುವುದಕ್ಕೆ ಸಾಧ್ಯವಾ? ಶಿವಣ್ಣ ಕೂಡ ಸ್ಟೇಜ್ ಮೇಲೆ ಹತ್ತಿ ಲಾಂಗ್ ಬೀಸಿಯೇ ಬಿಟ್ಟಿದ್ದಾರೆ.

ಶಿವಣ್ಣ ಮಾಡಿದ ಯುದ್ಧದ ಬಗ್ಗೆ ರವಿಮಾಮ ಹೇಳಿದ್ದೇನು?
ಅಣ್ಣಾವ್ರ ಕುಟುಂಬ ಅಂದ್ರೆ ಅಭಿಮಾನಿಗಳಿಗೆ ಮಾತ್ರವಲ್ಲ, ಇಂಡಸ್ಟ್ರಿಯವರಿಗೂ ಅಭಿಮಾನ, ಗೌರವ. ಇನ್ನು ಅಣ್ಣಾವ್ರ ಮಕ್ಕಳು ಅಷ್ಟೇ ಮೂರು ಕೂಡ ಒಂದೊಂದು ಮುತ್ತುಗಳು. ಅಣ್ಣಾವ್ರು ಹಾಕಿಕೊಟ್ಟ ಹಾದಿಯಲ್ಲಿಯೇ ಸಾಗುತ್ತಿದ್ದಾರೆ. ಅಪ್ಪು ಹೋದ ಮೇಲೆ ಮಂಕಾಗಿದ್ದ ಶಿವಣ್ಣ ಈಗೀಗ ನಾರ್ಮಲ್ ಆಗಿದ್ದಾರೆ. ನಗ್ತಾರೆ, ನಗಿಸ್ತಾರೆ. ಡಿಕೆಡಿಯಲ್ಲಿ ಅವರನ್ನು ನೋಡುವುದಕ್ಕೆ ಖುಷಿ ಆಗುತ್ತೆ. ಡಿಕೆಡಿ ಮತ್ತು ಡ್ರಾಮಾ ಜೂನಿಯರ್ ಮಹಾ ಸಂಗಮ ನಡೆಯುತ್ತಿದ್ದು, ರವಿಚಂದ್ರನ್ ಕೂಡ ತೀರ್ಪುಗಾರರ ಸ್ಥಾನದಲ್ಲಿದ್ದಾರೆ. ಈ ವೇಳೆ ಶಿವಣ್ಣನನ್ನು ಮನಸ್ಫೂರ್ತಿಯಾಗಿ ಹೊಗಳಿದ್ದಾರೆ. ಯುದ್ಧ ಮಾಡಿಯೇ ತನ್ನಲ್ಲಿರುವ ಅಹಂಕಾರವನ್ನೆಲ್ಲಾ ಸಾಯಿಸಿರುವುದು. ಏನ್ರಿ ಕಡಿಮೆಯಾಗಿದೆ. ಎಲ್ಲಾ ಇದ್ದವರು ಇಷ್ಟು ಸರಳವಾಗಿರುತ್ತಾರಾ ಎಂದು ಮನಸ್ಸಾರೆ ಮನದ ಮಾತನ್ನು ಹೇಳಿದ್ದಾರೆ. ಈ ಮಾತುಗಳು ಅಣ್ಣಾವ್ರ ಕುಟುಂಬ ಮೇಲಿನ ಗೌರವವನ್ನು ದುಪ್ಪಟ್ಟು ಮಾಡಿದೆ.

ಮಕ್ಕಳ ಹಾಡಿಗೆ ಅರ್ಜುನ್ ಜನ್ಯ ಭಾವುಕ
ಅರ್ಜುನ್ ಜನ್ಯಾ ಈಗಾಗಲೇ ಮ್ಯಾಜಿಕಲ್ ಮ್ಯೂಜಿಕ್ ಕಂಪೋಸರ್ ಎಂಬ ಬಿರುದು ತೆಗೆದುಕೊಂಡಿದ್ದಾರೆ. ಅವರು ಕಂಪೋಸ್ ಮಾಡಿದ ಪ್ರತಿಯೊಂದು ಹಾಡುಗಳು ಹಿಟ್ ಲೀಸ್ಟ್ ಸೇರಿವೆ. ಇಷ್ಟು ಅದ್ಭುತ ಸಂಗೀತ ನೀಡಿದ ಅರ್ಜುನ್ ಜನ್ಯಾಗೆ ಹಾಡಿನ ಮೂಲಕವೇ ಅಭಿನಂದಿಸಿದ್ದಾರೆ. ಸರಿಯಾಗಿ ನೆನಪಿದೆ ನನಗೆ ಹಾಡಿಗೆ ಸದ್ವಿನ್ ಮತ್ತು ಸಾರಿಕಾ ಹೆಜ್ಜೆ ಹಾಕಿದ ರೀತಿಗೆ ಎಲ್ಲರೂ ಖುಷಿಯಾಗಿದ್ದಾರೆ. ರವಿಚಂದ್ರನ್, ಶಿವಣ್ಣ ಸೀಟಿನ ಮೇಲಿಂದ ಎದ್ದು ಸಂತಸ ವ್ಯಕ್ತಪಡಿಸಿದ್ದಾರೆ. ಮಕ್ಕಳನ್ನು ಉತ್ತೇಜಿಸಿದ್ದಾರೆ.
ಲಕ್ಷ್ಮೀ ಅವರಿಗೆ ಸಿನಿಮಾಗಳ ಮೂಲಕ ಅಭಿನಂದನೆ
ಡ್ರಾಮಾ ಜೂನಿಯರ್ ಶೋಗೆ ನಟಿ ಲಕ್ಷ್ಮೀ ಅವರು ತೀರ್ಪುಗಾರರಾಗಿದ್ದಾರೆ. ಇದೀಗ ಡಿಕೆಡಿ ಮಕ್ಕಳು ಲಕ್ಷ್ಮೀ ಅವರ ನಗು ಎಂದಿದೆ ಮಂಜಿನ ಬಿಂದು ಹಾಡಿಗೆ ಸಾಕ್ಷಾ ಸಹನ ಹೆಜ್ಜೆ ಹಾಕಿದ್ದಾರೆ. ಈ ಡ್ಯಾನ್ಸ್ ಮಧ್ಯೆ ಲಕ್ಷ್ಮೀ ಅವರ ಚಿಕ್ಕ ವಯಸ್ಸಿನ ಫೋಟೋ, ಸಿನಿಮಾದ ಪೋಸ್ಟರ್‌ಗಳು ಅನಾವರಣವಾಗಿವೆ. ಇದನ್ನು ಕಂಡು ಲಕ್ಷ್ಮೀ ಅವರೇ ಆಶ್ಚರ್ಯಚಕಿತರಾಗಿದ್ದಾರೆ. ಜೊತೆಗೆ ಸಾಕ್ಷಾ-ಸಹನಾಗೆ ಉಡುಗೊರೆಯಾಗಿ ಬಳೆಯನ್ನು ತೊಡಿಸಿದ್ದಾರೆ. ಅಷ್ಟೇ ಅಲ್ಲ ಇವತ್ತಿನ ಡಿಕೆಡಿಯಲ್ಲಿ ಮತ್ತಷ್ಟು ವಿಶೇಷತೆ ಇದೆ. ಎಲ್ಲಾ ನಕಲಿ ತೀರ್ಪುಗಾರರು ವೇದಿಕೆ ಮೇಲೆ ರಂಜಿಸಲಿದ್ದಾರೆ. ಇದಕ್ಕೂ ಮುಖ್ಯವಾಗಿ ಅಣ್ಣಾವ್ರ ನೆನಪಿನಲ್ಲಿ ಲಕ್ಷ್ಮೀ ಅವರ ಜೊತೆ ಶಿವಣ್ಣ ಹೆಜ್ಜೆ ಹಾಕಲಿದ್ದಾರೆ.


Click it and Unblock the Notifications











