ಶಾರೂಖ್ 'ಜೀರೋ' ಹಾಲಿವುಡ್ ಚಿತ್ರದ ರೀಮೇಕಾ.?

Recommended Video

ಕೆಜಿಎಫ್'ಗೆ ಪ್ಲಸ್ ಪಾಯಿಂಟ್ ಆಗುತ್ತೆ 'ಜೀರೋ' ಚಿತ್ರದ ಈ ವೀಕ್ನೆಸ್.! | FILMIBEAT KANNADA

ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಕೆಜಿಎಫ್' ಸಿನಿಮಾ ಡಿಸೆಂಬರ್ 21 ಕ್ಕೆ ಬರ್ತಿದೆ. ಅದೇ ದಿನ ಬಾಲಿವುಡ್ ಬಾದ್ ಶಾ ಶಾರೂಖ್ ಖಾನ್ ಅಭಿನಯದ 'ಜೀರೋ' ಸಿನಿಮಾನೂ ತೆರೆಗೆ ಬರ್ತಿದೆ.

ಬಾಲಿವುಡ್ ನ ಖ್ಯಾತ ವಿತರಕರು ಕನ್ನಡದ ಕೆಜಿಎಫ್ ಚಿತ್ರವನ್ನ ಹಿಂದಿಯಲ್ಲಿ ಬಿಡುಗಡೆ ಮಾಡುತ್ತಿರುವುದು ಸಹಜವಾಗಿ ಅಲ್ಲಿನ ಮಂದಿಯ ಕೆಂಗಣ್ಣಿಗೆ ಗುರಿ ಮಾಡಿರಬಹುದು. ಯಾಕಂದ್ರೆ, ಶಾರೂಖ್ ಸಿನಿಮಾ ಎದುರು ಕನ್ನಡ ಸಿನಿಮಾ ತರ್ತಿದ್ದಾರೆ ಅಂತ. ಅದಕ್ಕೆ ತಕ್ಕಂತೆ ಕೆಜಿಎಫ್ ಕೂಡ ಭಾರಿ ಸದ್ದು ಮಾಡ್ತಿದೆ.

ಇದನ್ನೆಲ್ಲಾ ಗಮನಿಸಿದ ಚಿತ್ರತಂಡ ಈಗ ಕೆಜಿಎಫ್ ಗೆಲ್ಲುತ್ತಾ, ಜೀರೋ ಗೆಲ್ಲುತ್ತಾ ಎಂದು ಲೆಕ್ಕಾಚಾರ ಹಾಕ್ತಿದ್ದಾರೆ. ಒಂದು ವೇಳೆ ಜೀರೋ ಸೋತು ಕೆಜಿಎಫ್ ಗೆದ್ಬಿಟ್ರೆ ಕಿಂಗ್ ಖಾನ್ ಖ್ಯಾತಿ ಏನಾಗಬೇಡ ಎಂದು ಚಿಂತಿಸುವ ಮಂದಿಯೂ ಇದ್ದಾರೆ ಬಿಡಿ. ಇಂತಹ ಸಮಯದಲ್ಲಿ ಜೀರೋ ಬಗ್ಗೆ ಯಾರಿಗೂ ಗೊತ್ತಿಲ್ಲದ ವಿಷ್ಯವೊಂದು ಚರ್ಚೆಯಾಗೋಕೆ ಶುರುವಾಗಿದೆ. ಈ ವಿಷ್ಯವೀಗ ಜೀರೋಗೆ ಮೈನಸ್ ಆಗಿ, ಕೆಜಿಎಫ್ ಗೆ ಪ್ಲಸ್ ಪಾಯಿಂಟ್ ಆಗುತ್ತಾ ಎಂಬ ಯೋಚನೆ ಕಾಡ್ತಿದೆ. ಅಷ್ಟಕ್ಕೂ ಏನದು.? ಮುಂದೆ ಓದಿ.....

ಜೀರೋ ರೀಮೇಕ್ ಸಿನಿಮಾನ.?

ಜೀರೋ ರೀಮೇಕ್ ಸಿನಿಮಾನ.?

ಶಾರೂಖ್ ಖಾನ್ ಕುಬ್ಜನ ಪಾತ್ರದಲ್ಲಿ ಅಭಿನಯಿಸಿರುವ ಜೀರೋ ಸಿನಿಮಾ ಭಾರಿ ನಿರೀಕ್ಷೆ ಹುಟ್ಟಿಸಿದೆ. ಓರ್ವ ಸ್ಟಾರ್ ನಟ ಇಂತಹ ಪ್ರಯತ್ನ ಮಾಡಿರುವುದು ನಿಜಕ್ಕೂ ಸವಾಲಿನ ವಿಷ್ಯ. ಆದ್ರೆ, ಇದು ರೀಮೇಕ್ ಸಿನಿಮಾನಾ ಎಂಬ ಕುತೂಹಲ ಈಗ ಕಾಡ್ತಿದೆ. ಇಲ್ಲಿಯವರೆಗೂ ರೀಮೇಕ್ ಬಗ್ಗೆ ಎಲ್ಲಿಯೂ ಚರ್ಚೆಯಾಗಿಲ್ಲ. ಬಟ್, ದಿಢೀರ್ ಅಂತ ಈ ಚರ್ಚೆಯಾಗಲು ಕಾರಣ, ಹಾಲಿವುಡ್ ಸಿನಿಮಾದ ಟ್ರೈಲರ್.

'ಅಪ್ ಫಾರ್ ಲವ್' ಛಾಯೆ 'ಜೀರೋ'ನಾ.?

'ಅಪ್ ಫಾರ್ ಲವ್' ಛಾಯೆ 'ಜೀರೋ'ನಾ.?

ಫ್ರಾನ್ಸ್ ಮತ್ತು ಬೆಲ್ಜಿಯಂ ಭಾಷೆಯಲ್ಲಿ ತೆರೆಕಂಡಿದ್ದ 'ಅಪ್ ಫಾರ್ ಲವ್' ಸಿನಿಮಾದ ರೀಮೇಕ್ ಜೀರೋ ಎಂಬ ಅನುಮಾನ ಉಂಟಾಗಿದೆ. ಯಾಕಂದ್ರೆ, ಅಪ್ ಫಾರ್ ಲವ್ ಚಿತ್ರದಲ್ಲಿ ನಾಯಕನಟ ಕುಬ್ಜನ ಪಾತ್ರವಾಗಿದ್ದು, ಸ್ಟಾರ್ ನಟಿಯೊಬ್ಬಳ ಪ್ರೀತಿ ಮಾಡ್ತಾನೆ. ಇಲ್ಲಿ ಜೀರೋ ಚಿತ್ರದಲ್ಲೂ ಅದೇ ಕಥೆ ಹೊಂದಿದೆ.

ಸ್ಫೂರ್ತಿ ಇರಬೇಕು.?

ಸ್ಫೂರ್ತಿ ಇರಬೇಕು.?

ಅಧಿಕೃತವಾಗಿ ರೀಮೇಕ್ ಅಲ್ಲದಿದ್ದರೂ, ಸ್ಫೂರ್ತಿ ಪಡೆದು ಚಿತ್ರಕಥೆ ರಚಿಸರಬೇಕು. ಯಾಕಂದ್ರೆ, ಜೀರೋ ಚಿತ್ರದಲ್ಲಿ ಇಬ್ಬರು ನಾಯಕಿಯರು. ಅನುಷ್ಕಾ ಶರ್ಮಾ ಮತ್ತು ಕತ್ರಿನಾ ಕೈಫ್. ಕತ್ರಿನಾ ಕೈಫ್ ಮತ್ತು ಶಾರೂಖ್ ಖಾನ್ ಭಾಗದ ದೃಶ್ಯಗಳು ಬಹುತೇಕ 'ಅಪ್ ಫಾರ್ ಲವ್' ಚಿತ್ರದ ದೃಶ್ಯಗಳನ್ನ ಹೋಲುತ್ತಿದೆ. ಈ ಚಿತ್ರದಲ್ಲಿ ಅನುಷ್ಕಾ ಶರ್ಮಾ ರೀತಿ ಯಾವ ಪಾತ್ರವೂ ಕಾಣಿಸಿಲ್ಲ. ಹಾಗಾಗಿ, ಈ ಚಿತ್ರವನ್ನ ಸ್ಫೂರ್ತಿಯಾಗಿಸಿಕೊಂಡು ಮಾಡಿರಬೇಕು.

ಕೆಜಿಎಫ್ ಗೆ ಪ್ಲಸ್ ಪಾಯಿಂಟ್.!

ಕೆಜಿಎಫ್ ಗೆ ಪ್ಲಸ್ ಪಾಯಿಂಟ್.!

ಒಂದು ವೇಳೆ ಜೀರೋ ರೀಮೇಕ್ ಸಿನಿಮಾ ಎಂದಾದರೇ, ಸಾಮಾನ್ಯವಾಗಿ ಕೆಲ ಪ್ರೇಕ್ಷಕರು ನಿರಾಸಕ್ತಿ ತೋರುತ್ತಾರೆ. ಅದರ ಪ್ಲಸ್ ಪಾಯಿಂಟ್ ಕನ್ನಡದ ಕೆಜಿಎಫ್ ಚಿತ್ರಕ್ಕ ಆಗಬಹುದು. ಯಾವುದು ಇದು ಹೊಸ ಸಿನಿಮಾ ಎಂದು ಕೆಜಿಎಫ್ ಹಿಂದಿ ನೋಡಬಹುದು. ಇಂತಹ ಸಮಯದಲ್ಲಿ 'ಜೀರೋ' ರೀಮೇಕ್ ಆದ್ರೆ, ಇದು ಸಹಜವಾಗಿ ಯಶ್ ಗೆ ಪ್ಲಸ್ ಪಾಯಿಂಟ್ ಆಗಲಿದೆ.

ಕೆಜಿಎಫ್ ಲೆಕ್ಕಕ್ಕಿಲ್ಲ.!

ಕೆಜಿಎಫ್ ಲೆಕ್ಕಕ್ಕಿಲ್ಲ.!

ಇನ್ನೊಂದು ಮೂಲಗಳ ಪ್ರಕಾರ, ಕೆಜಿಎಫ್ ಚಿತ್ರಕ್ಕೆ ಕರ್ನಾಟಕದಲ್ಲಿ ಹಾಗೂ ಸೌತ್ ಸಿನಿ ಇಂಡಸ್ಟ್ರಿಯಲ್ಲಿ ಸಿಗುತ್ತಿರುವಷ್ಟು ಮನ್ನಣೆ, ಬಾಲಿವುಡ್ ನಲ್ಲಿ ಸಿಗುತ್ತಿಲ್ಲ ಎಂದು ಹೇಳಲಾಗ್ತಿದೆ. ಅಲ್ಲಿ ಏನಿದ್ರು ಶಾರೂಖ್ ಅವರ ಜೀರೋ ಸಿನಿಮಾದ ಹವಾ ಅಂತೆ. ಬಟ್, ವಾಸ್ತವ ಏನು ಎಂಬುದು ಬಿಡುಗಡೆಯ ನಂತರ ಗೊತ್ತಾಗಲಿದೆ.

More from Filmibeat

English summary
Rocking star yash starrer Kgf movie will releasing on decmeber 21st. and shahrukh khan starrer Zero movie also releasing on same day.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X