ವೀಕ್ಷಕರ ಮೆಚ್ಚುಗೆ ಗಳಿಸಿದ್ದ '12th ಫೇಲ್' ಸಿನಿಮಾ ಒಟಿಟಿಗೆ: ಎಲ್ಲಿ, ಯಾವಾಗ ನೋಡಬಹುದು...?
ವಿಮರ್ಶಾತ್ಮಕವಾಗಿ ಮೆಚ್ಚುಗೆ ಗಳಿಸಿದ್ದ '12th ಫೇಲ್' ಸಿನಿಮಾ ಈ ವರ್ಷದ ಅಕ್ಟೋಬರ್ 27 ರಂದು ಬಿಡುಗಡೆಯಾಗಿತ್ತು. ವಿಧು ವಿನೋದ್ ಚೋಪ್ರಾ ಅವರ ನಿರ್ದೇಶನದಲ್ಲಿ ಮೂಡಿ ಬಂದ ಚಿತ್ರದಲ್ಲಿ ಪ್ರತಿಭಾನ್ವಿತ ನಟ ವಿಕ್ರಾಂತ್ ಮೆಸ್ಸಿ ಮತ್ತು ಮೇಧಾ ಶಂಕರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
12th ಫೇಲ್ ಸಿನಿಮಾವನ್ನು 2019 ರಲ್ಲಿ ಪ್ರಕಟವಾದ ಅದೇ ಹೆಸರಿನ ಅನುರಾಗ್ ಪಾಠಕ್ ಅವರ ಪುಸ್ತಕವನ್ನು ಆಧಾರವಾಗಿಟ್ಟುಕೊಂಡು ಚಿತ್ರಿಸಲಾಗಿದೆ. ಈ ಚಿತ್ರವು ಮನೋಜ್ ಕುಮಾರ್ ಶರ್ಮಾ ಅವರ ನೈಜ ಕಥೆಯನ್ನು ವಿವರಿಸುತ್ತದೆ. ಸಿನಿಮಾ ಬಿಡುಗಡೆ ದಿನದಂದು ಉತ್ತಮ ಆರಂಭ ಪಡೆಯದಿದ್ದರೂ ಕೂಡ, ಚಲನಚಿತ್ರವು ವಿಮರ್ಶಕರು ಮತ್ತು ವೀಕ್ಷಕರಿಂದ ಭಾರಿ ಮೆಚ್ಚುಗೆ ಪಡೆಯಿತು. ಬಳಿಕ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸನ್ನು ಸಾಧಿಸಿತು.
ಈ ಸಿನಿಮಾವು ತೀವ್ರ ಬಡತನದಿಂದ ಬಳಲುವ ಮನೋಜ್ ಕುಮಾರ್ ಶರ್ಮಾ ಅವರು ಭಾರತೀಯ ಪೊಲೀಸ್ ಸೇವಾ ಅಧಿಕಾರಿಯ ಪ್ರತಿಷ್ಠಿತ ಶ್ರೇಣಿಯವರೆಗೂ ಹೋವ ಸಾಧನೆಯನ್ನು ತಿಳಿಸುತ್ತದೆ. 12 ನೇ ಫೇಲ್‌ನಲ್ಲಿ ಅನಂತ್ ವಿ ಜೋಶಿ, ಅಂಶುಮಾನ್ ಪುಷ್ಕರ್ ಮತ್ತು ಪ್ರಿಯಾಂಶು ಚಟರ್ಜಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

12ನೇ ಫೇಲ್ ಬಿಡುಗಡೆ ದಿನಾಂಕ ಅಪ್‌ಡೇಟ್
12th ಫೇಲ್ ಇನ್ನೂ ಕೆಲವು ಚಿತ್ರಮಂದಿರಗಳಲ್ಲಿ ಪ್ರದರ್ಶನವಾಗುತ್ತಿದೆ. ಇದರ ನಡುವೇಯೇ ಅದು ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆಯಾಗುತ್ತಿದೆ. ಕೆಲವು ದಿನಗಳ ಹಿಂದೆ, 12ನೇ ಫೇಲ್ ಮುಂದಿನ ತಿಂಗಳು ZEE5 ಒಟಿಟಿಯಲ್ಲಿ ಸ್ಟ್ರೀಮ್ ಆಗುವ ಸಾಧ್ಯತೆಯಿದೆ ಎಂದು ವದಂತಿಗಳು ಸೂಚಿಸಿದ್ದವು. ಆದರೆ, ಇತ್ತೀಚಿನ ವರದಿಗಳ ಪ್ರಕಾರ ಚಿತ್ರವು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ಡಿಜಿಟಲ್ ಆಗಿ ಬಿಡುಗಡೆಯಾಗಲಿದೆ. ZEE5 ನಲ್ಲಿ ಅಲ್ಲ ಎಂಬುದು ಸ್ಪಷ್ಟವಾಗಿದೆ.
ವಿಕ್ರಾಂತ್ ಮೆಸ್ಸಿ ನಟನೆಯ ಚಿತ್ರವು ಈ ತಿಂಗಳು ಹಾಟ್‌ಸ್ಟಾರ್‌ನಲ್ಲಿ ಬಿಡುಗಡೆಯಾಗುತ್ತಿದೆ. ಇದೇ ತಿಂಗಳ ಡಿಸೆಂಬರ್ 29 ರಿಂದ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ಸಿನಿಮಾವನ್ನು ನೋಡಲು ಸಾಧ್ಯವಾಗುತ್ತದೆ.
12th ಫೇಲ್ ಸಿನಿಮಾ
'12th ಫೇಲ್' ಚಿತ್ರವು ತನ್ನ ಬಾಕ್ಸ್ ಆಫೀಸ್‌ನಲ್ಲಿ ಒಳ್ಳೆಯ ಗಳಿಕೆ ಮಾಡಿದೆ. ಮೊದಲ ದಿನ 2 ಕೋಟಿ ಮಾರ್ಕ್ ಅನ್ನು ಮೀರಿತ್ತು. 12th ಫೇಲ್ ದಿನ ದಿನಕ್ಕೆ ವೀಕ್ಷಕರನ್ನು ಸೆಳೆಯುತ್ತಾ ಅತಿದೊಡ್ಡ ಹಿಟ್ ಗಳಿಸಿತು. ಸಿನಿಮಾದ ಒಟ್ಟು ಸಂಗ್ರಹವು ಈಗ ರೂ 50 ಕೋಟಿಗಳನ್ನು ಮೀರಿದೆ. ಕಳೆದ 2023 ರಲ್ಲಿ ಬಿಡುಗಡೆಯಾಗಿ ಲಾಭ ಗಳಿಸಿದ ಸಿನಿಮಾಗಳ ಸಾಲಿನಲ್ಲಿ ನಿಂತಿದೆ.
'12th ಫೇಲ್' ಸಿನಿಮಾದ ಯಶಸ್ಸು ಮತ್ತು ಪ್ರೇಕ್ಷಕರಿಂದ ಪಡೆದ ಉತ್ತಮ ಮೆಚ್ಚುಗೆಗಳ ಕಾರಣ ಚಿತ್ರತಂಡ ಪಾರ್ಟಿ ಆಯೋಜಿಸಿತ್ತು. ಪಾರ್ಟಿಯಲ್ಲಿ ವಿಕ್ರಾಂತ್ ಮೆಸ್ಸಿ ಸೇರಿದಂತೆ ಇಡೀ ಚಿತ್ರತಂಡ ಭಾಗಿಯಾಗಿತ್ತು. ದೊಡ್ಡ ದೊಡ್ಡ ಸಿನಿಮಾಗಳ ಎದುರು ಗೆದ್ದ ಈ ಸಿನಿಮಾ ಬಾಲಿವುಡ್‌ಗೆ ಹೊಸ ಭರವಸೆ ಮೂಡಿಸಿತ್ತು. ಜೊತೆಗೆ ಈ ನೈಜ ಕಥೆ ಆಧಾರಿತ ಚಲನಚಿತ್ರವು UPSC ಪ್ರವೇಶ ಪರೀಕ್ಷೆಗೆ ಪ್ರಯತ್ನಿಸುತ್ತಿರುವ ಹಲವಾರು ವಿದ್ಯಾರ್ಥಿಗಳಿಗೆ ಸ್ಫೂರ್ತಿ ನೀಡಿದೆ. ಭಾಷೆ ಕಾರಣಕ್ಕೆ ಅದೆಷ್ಟೋ ಮಂದಿ ದೇಶದ ಉನ್ನತ ಪರೀಕ್ಷೆಗೆ ತೆರಳದೆ ಇರುತ್ತಾರೆ. ಜೊತೆಗೆ ಕಟ್ಟಿಕೊಂಡ ಕನಸು ಮಣ್ಣಾಗುತ್ತದೆ. ಆದರೆ, ಈ ಸಿನಿಮಾ ಅಂತಹ ಸೋಲುಗಳನ್ನು ಮೆಟ್ಟಿ ನಿಲ್ಲುವ ಧೈರ್ಯ ನೀಡುತ್ತದೆ.


Click it and Unblock the Notifications











