ಜೂನ್ ಮೊದಲ ವಾರ 15 ಸಿನಿಮಾ/ವೆಬ್ ಶೋ ಓಟಿಟಿಗೆ ಎಂಟ್ರಿ: ಇಲ್ಲಿದೆ ಕಂಪ್ಲೀಟ್ ಲಿಸ್ಟ್
ಥಿಯೇಟರ್‌ಗಳಲ್ಲಿ ಸಿನಿಮಾ ನೋಡುವವರ ಸಂಖ್ಯೆ ಬರಬರುತ್ತಾ ಕಮ್ಮಿ ಆಗುತ್ತಿದೆ. ಓಟಿಟಿ ಸಿನಿಮಾ, ವೆಬ್ ಸೀರಿಸ್‌ಗಾಗಿ ಕಾಯುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹೊಸ ಹೊಸ ಡಿಜಿಟಲ್ ಫ್ಲಾಟ್‌ಪಾರ್ಮ್‌ಗಳು ಎಂಟ್ರಿ ಕೊಡುತ್ತಿವೆ. ಇದೀಗ 'ಜಿಯೋ ಸಿನಿಮಾ' ಕೂಡ ಜೋರಾಗಿ ಸದ್ದು ಮಾಡಲು ಆರಂಭಿಸಿದೆ. ಈ ವಾರ(ಜೂನ್ 2) 15ಕ್ಕೂ ಅಧಿಕ ಸಿನಿಮಾ, ವೆಬ್ ಸೀರಿಸ್ ಓಟಿಟಿಗೆ ಬರ್ತಿದೆ.
ಓಟಿಟಿಗೆ ಟ್ರೆಂಡ್ ಅದ್ಯಾವಮಟ್ಟಿಗೆ ಇದೆ ಅಂದ್ರೆ ದೊಡ್ಡ ದೊಡ್ಡ ಸಿನಿಮಾಗಳೇ ನೇರವಾಗಿ ಸ್ಟ್ರೀಮಿಂಗ್ ಆಗುತ್ತಿವೆ. ಬಾಲಿವುಡ್ ಸೂಪರ್ ಸ್ಟಾರ್‌ಗಲೇ ಡೈರೆಕ್ಟ್ ಓಟಿಟಿ ಕಂಟೆಂಟ್‌ಗಾಗಿ ಕೆಲಸ ಮಾಡುತ್ತಿದ್ದಾರೆ. ವೆಬ್ ಸೀರಿಸ್‌ಗಳಲ್ಲಿ ನಟಿಸುತ್ತಿದ್ದಾರೆ. ಈ ವಾರ ಬಹುನಿರೀಕ್ಷಿತ ಸಿನಿಮಾ, ವೆಬ್ ಸೀರಿಸ್‌ಗಳು ಓಟಿಟಿಗೆ ದಾಂಗುಡಿ ಇಡುತ್ತಿವೆ. ಮುಖ್ಯವಾಗಿ ಪ್ಯಾನ್ ಇಂಡಿಯಾ ಸಿನಿಮಾ 'ಪೊನ್ನಿಯಿನ್ ಸೆಲ್ವನ್- 2' ಚಂದಾದಾರರಿಗೆ ಉಚಿತವಾಗಿ ನೋಡಲು ಲಭ್ಯವಾಗ್ತಿದೆ.

5 ದಿನಗಳ ಹಿಂದೆಯೇ ಮಣಿರತ್ನಂ ನಿರ್ದೇಶನದ ಈ ಕಾಸ್ಟ್ಯೂಮ್ ಡ್ರಾಮಾ ಅಮೇಜಾನ್ ಪ್ರೈಮ್‌ಗೆ ಬಂದಿತ್ತು. ಆದರೆ ಚಂದಾದಾರರೂ ಹಣ ಪಾವತಿಸಿ ಸಿನಿಮಾ ನೋಡಬೇಕಾಗಿತ್ತು. ಆದರೆ ಇಂದಿನಿಂದ ಉಚಿತವಾಗಿ ನೋಡುವ ಅವಕಾಶ ಸಿಕ್ಕಿದೆ. ಕನ್ನಡ ವರ್ಷನ್ 'ಪೊನ್ನಿಯಿನ್ ಸೆಲ್ವನ್- 2' ಕೂಡ ಪ್ರೈಂ ವಿಡಿಯೋದಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಚಿಯಾನ್ ವಿಕ್ರಂ, ಐಶ್ವರ್ಯ ರೈ, ಕಾರ್ತಿ, ಜಯಂ ರವಿ, ತ್ರಿಷಾ, ಪ್ರಕಾಶ್ ರಾಜ್, ಕಿಶೋರ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಕಳೆದ ವರ್ಷ ಚಿತ್ರದ ಪ್ರೀಕ್ವೆಲ್ ತೆರೆಗೆ ಬಂದಿತ್ತು.
ತೆಲುಗಿನ 'ಉಗ್ರಂ'
ಪ್ರತಿ ಶುಕ್ರವಾರ ಸಿನಿರಸಿಕರಿಗೆ ಸಿನಿಮಾ ಹಬ್ಬ. ಥಿಯೇಟರ್‌ನಲ್ಲಿ ಮಾತ್ರವಲ್ಲ ಓಟಿಟಿಯಲ್ಲೂ ಸಿನಿಮಾಗಳು ನೋಡಲು ಲಭ್ಯವಾಗುತ್ತದೆ. ಅಲ್ಲರಿ ನರೇಶ್ ನಟನೆಯ 'ಉಗ್ರಂ' ಸಿನಿಮಾ ಕೂಡ ಪ್ರೈಂ ವಿಡಿಯೋಗೆ ಬರ್ತಿದೆ. ವಿಜಯ್ ಕನಕ ಮೆಡಲ ಈ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಮೇ ಆರಂಭದಲ್ಲಿ ಥಿಯೇಟರ್‌ಗೆ ಬಂದಿದ್ದ ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿರಲಿಲ್ಲ. ಆದರೆ ನರೇಶ್ ನಟನೆಗೆ ಒಳ್ಳೆ ಅಂಕ ಸಿಕ್ಕಿತ್ತು. ಜೂನ್ 2ರಿಂಧ 'ಉಗ್ರಂ' ಸಿನಿಮಾ ಸ್ಟ್ರೀಮಿಂಗ್ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಿದೆ.

ಸೇತುಪತಿ 'ಮುಂಬೈಕರ್'
ವಿಜಯ್ ಸೇತುಪತಿ ಈಗಾಗಲೇ ಬಾಲಿವುಡ್‌ಗೆ ಎಂಟ್ರಿ ಕೊಟ್ಟಾಗಿದೆ. 'ಮುಂಬೈಕರ್' ಚಿತ್ರದಲ್ಲಿ ಸೇತುಪತಿ ನಟಿಸಿದ್ದರು. ಆದರೆ ಕಾರಣಾಂತರಗಳಿಂದ ಸಿನಿಮಾ ರಿಲೀಸ್ ತಡವಾಗಿತ್ತು. ಈ ಸಿನಿಮಾ ಥಿಯೇಟರ್ ಬದಲು ನೇರವಾಗಿ ಜಿಯೋ ಸಿನಿಮಾ ಓಟಿಟಿ ಫ್ಲಾಟ್‌ಪಾರ್ಮ್‌ಗೆ ಬರ್ತಿದೆ. ಸಂತೋಷ್ ಶಿವನ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ವಿಜಯ್ ಸೇತುಪತಿ ಜೊತೆಗೆ ವಿಕ್ರಾಂತ್ ಮೆಸ್ಸಿ, ತಾನ್ಯಾ ಮಣಿಕಂಟಲಾ ನಟಿಸಿದ್ದಾರೆ.
ತೆಲುಗಿನ 'ವಿಶ್ವಕ್'
ಜೀ 5ನಲ್ಲಿ ತೆಲುಗಿನ 'ವಿಶ್ವಕ್', ಮರಾಠಿಯ 'ಘರ್ ಬಂದೂಕ್ ಬಿರ್ಯಾನಿ', ಬೆಂಗಾಲಿಯ 'ಹತ್ಯಾಪುರಿ' ಸಿನಿಮಾಗಳು ಬರ್ತುವೆ. 'ತಾಜ್'- ರೀಜನ್ ಆಫ್ ರಿವೇಂಜ್ ಸೀಸನ್-2 (4 ಎಪಿಸೋಡ್‌ಗಳು) ಕೂಡ ಸ್ಟ್ರೀಮಿಂಗ್ ಆಗುತ್ತಿರುವುದು ವಿಶೇಷ.
ನೆಟ್‌ಪ್ಲಿಕ್ಸ್‌ನಲ್ಲಿ 'ಮೆನಿಫೆಸ್ಟ್'
ಮತ್ತೊಂದು ಓಟಿಟಿ ಫ್ಲಾಟ್‌ಪಾರ್ಮ್ ನೆಟ್‌ಫ್ಲಿಕ್ಸ್‌ನಲ್ಲಿ 'ಮೆನಿಫೆಸ್ಟ್' ಸೀಸನ್- 4 ಪಾರ್ಟ್- 2(ಇಂಗ್ಲೀಷ್) ವೆಬ್ ಸೀರಿಸ್ ರಿಲೀಸ್ ಆಗಲಿದೆ. 'ವಲರಿಯಾ' ಸೀಸನ್- 3 (ಇಂಗ್ಲೀಷ್) ಹಾಗೂ 'ಸ್ಕೂಪ್' (ಹಿಂದಿ ಸೀರಿಸ್) ಕೂಡ ಬರಲಿದೆ. ಹಾಟ್‌ಸ್ಟರ್‌ನಲ್ಲಿ 'ಸ್ಕೂಲ್ ಆಫ್ ಲೈಸ್' ಎನ್ನುವ ಹಿಂದಿ ವೆಬ್ ಸೀರಿಸ್ ರಿಲೀಸ್ ಆಗಲಿದೆ.
'ಈವಿಲ್ ಡೆಡ್ ರೈಸ್'
ಬುಕ್‌ಮೈ ಶೋದಲ್ಲಿ 'ಈವಿಲ್ ಡೆಡ್ ರೈಸ್' ಇಂಗ್ಲೀಶ್ ಸಿನಿಮಾ ಸ್ಟ್ರೀಮಿಂಗ್ ಆಗಲಿದೆ. ಲೀ ಕ್ರೊನಿನ್ ಈ ಸೂಪರ್ ನ್ಯಾಚುರಲ್ ಹಾರರ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು ರಾಬರ್ಟ್ ಜಿ ಟಾಪೆರ್ಟ್ ಬಂಡವಾಳ ಹೂಡಿದ್ದಾರೆ. ಎಲ್ಲಿಸಾ ಸುಥರ್‌ಲೆಂಡ್, ಲಿಲಿ ಸುಲ್ಲಿವನ್, ಮಾರ್ಗನ್ ಡೇವಿಯಸ್ ತಾರಾಗಣದಲ್ಲಿದ್ದಾರೆ. ಸೂಪರ್ ಹಿಟ್ ಈವಿಲ್ ಡೆಡ್ ಸರಣಿಯ ಹೊಸ ಸಿನಿಮಾ ಇದು.
ಇನ್ನುಳಿದಂತೆ ಜಿಯೋ ಸಿನಿಮಾದಲ್ಲಿ 'ಮುಂಬೈಕರ್' ಜೊತೆಗೆ ಮರಾಠಿ ಚಿತ್ರ 'ಗೋದಾವರಿ' ಕೂಡ ಸ್ಟ್ರೀಮಿಂಗ್ ಆಗಲಿದೆ. 'ಮೀ ಕಲ್ಪಾ' ಎನ್ನುವ ಮಲಯಾಳಂ ಸಿನಿಮಾ ಸೈನಾ ಪ್ಲೇ ಫ್ಲಾಟ್‌ಪಾರ್ಮ್‌ಗೆ ಬರ್ತಿದೆ. ಅಮೇಜಾನ್ ಪ್ರೈಮ್‌ನಲ್ಲಿ 'ಡೆಡ್ ಲಾಕ್' ವೆಬ್ ಸೀರಿಸ್ ಕೂಡ ವೀಕ್ಷಕರಿಗೆ ಸಿಗಲಿದೆ.


Click it and Unblock the Notifications











