₹150 ಕೋಟಿ ದೋಚಿದ ಚಿತ್ರ 3 ತಿಂಗಳಾದ್ರೂ ಓಟಿಟಿಗೆ ಬರ್ಲಿಲ್ಲ; ಜನ ಕಾದು ಕಾದು ಸುಸ್ತು!

ಹೇಳಿ ಕೇಳಿ ಇದು ಓಟಿಟಿ ಜಮಾನ. ಮುಂದೆ ಡಿಜಿಟಲ್ ಪ್ಲಾಟ್‌ಫಾರ್ಮ್‌ ಅನ್ನು ಯಾವುದು ಮೀರಿಸುತ್ತೋ ಗೊತ್ತಿಲ್ಲ. ಜನ ಥಿಯೇಟರ್‌ಗೆ ಹೋಗೋದು ಕಮ್ಮಿ ಆಗಿದೆ. ಒಂದೆರಡು ವಾರ ಕಾದರೆ ಓಟಿಟಿಗೆ ಬರುತ್ತೆ ಬಿಡು ಎಂದು ಯೋಚಿಸುವ ಕಾಲ ಇದು. ದೊಡ್ಡ ಸಿನಿಮಾಗಳೇ 25 ದಿನಕ್ಕೆ ಸ್ಮಾಲ್‌ಸ್ಕ್ರೀನ್‌ಗೆ ಬಂದುಬಿಡ್ತಿದೆ.

ನಿರೀಕ್ಷೆ ಮೀರಿ ಸಿನಿಮಾಗಳು ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಂಡಾಗ ಮಾತ್ರ ಓಟಿಟಿ ರಿಲೀಸ್ ಡೇಟ್ ಮುಂದೂಡಲಾಗುತ್ತದೆ. ಹಿಂದೆ 'ಕಾಂತಾರ' ಸೇರಿದಂತೆ ಕೆಲ ಸಿನಿಮಾಗಳ ವಿಚಾರದಲ್ಲಿ ಈ ರೀತಿ ಆಗಿತ್ತು. ಆದರೆ ಮಲಯಾಳಂನ 'ಆಡು ಜೀವಿತಂ' ಸಿನಿಮಾ ತೆರೆಕಂಡು 100 ದಿನ ದಾಟಿದೆ. ಆದರೂ ಸಿನಿಮಾ ಯಾವುದೇ ಡಿಜಿಟಲ್ ಪ್ಲಾಟ್‌ಫಾರ್ಮ್‌ಗೆ ಎಂಟ್ರಿ ಕೊಟ್ಟಿಲ್ಲ. ಸಿನಿರಸಿಕರು ಕಾದು ಕಾದು ಸುಸ್ತಾಗಿದ್ದಾರೆ.

150 crore collected film in boxoffice still did not stream ott even after 100 days

ಬ್ಲೆಸಿ ನಿರ್ದೇಶನದ ಪೃಥ್ವಿರಾಜ್ ಸುಕುಮಾರ್ ನಟಿಸಿದ್ದ ಸರ್ವೈವಲ್ ಡ್ರಾಮಾ ಸಿನಿಮಾ ಇದು. ಮಾರ್ಚ್ 28ಕ್ಕೆ ಸಿನಿಮಾ ತೆರೆಕಂಡಿತ್ತು. ಚಿತ್ರಕ್ಕೆ ಅದ್ಭುತ ರೆಸ್ಪಾನ್ಸ್ ಸಿಕ್ಕಿತ್ತು. ಸಣ್ಣ ಎಳೆಯ 'ಆಡು ಜೀವಿತಂ' ಸಿನಿಮಾ ಪ್ರೇಕ್ಷಕರ ಮನಗೆದ್ದಿತ್ತು. ಇದೇ ಟೈಟಲ್‌ನಲ್ಲಿ ಬೆನ್ಯಾಮಿನ್ ಬರೆದ ಕಾದಂಬರಿ ಆಧರಿಸಿ ಸಿನಿಮಾ ಕಟ್ಟಿಕೊಡಲಾಗಿದೆ. ಸೌದಿ ಅರೇಬಿಯಾದಲ್ಲಿ ಕಾಣೆಯಾಗಿ ಸಂಕಷ್ಟ ಎದುರಿಸಿದ ಭಾರತೀಯ ವಲಸಿಗ ನಜೀಬ್ ಮುಹಮ್ಮದ್ ಅವರ ಜೀವನವನ್ನು ಆಧರಿಸಿ ಈ ಕಾದಂಬರಿ ಬರೆಯಲಾಗಿತ್ತು.

'ಆಡು ಜೀವಿತಂ' ಚಿತ್ರದಲ್ಲಿ ನಜೀಬ್ ಮುಹಮ್ಮದ್ ಆಗಿ ಪೃಥ್ವಿರಾಜ್ ಸುಕುಮಾರನ್ ನಟಿಸಿದ್ದಾರೆ. ಸಿನಿಮಾ ತೆರೆಕಂಡು 3 ತಿಂಗಳು ಕಳೆದಿದೆ. ಚಿತ್ರಕ್ಕೆ ಪ್ರೇಕ್ಷಕರಿಂದ ಅದ್ಭುತ ರೆಸ್ಪಾನ್ಸ್ ಸಿಕ್ಕಿತ್ತು. ಪರಭಾಷಿಕರು ಸಿನಿಮಾ ನೋಡಿ ಮೆಚ್ಚಿಕೊಂಡಿದ್ದರು. ಇನ್ನು ಸಾಕಷ್ಟು ಜನ ಓಟಿಟಿ ಸ್ಟ್ರೀಮಿಂಗ್‌ಗಾಗಿ ಕಾಯುತ್ತಿದ್ದಾರೆ. ಆದರೆ 3 ತಿಂಗಳು ಕಳೆದರೂ ಸಿನಿಮಾ ಮಾತ್ರ ಡಿಜಿಟಲ್ ಪ್ಲಾಟ್‌ಫಾರ್ಮ್‌ಗೆ ಬರಲೇಯಿಲ್ಲ.

ಓಟಿಟಿ ಸಂಸ್ಥೆಗಳು 'ಆಡು ಜೀವಿತಂ' ಸಿನಿಮಾ ಕೊಂಡುಕೊಳ್ಳಲು ಮುಂದೆ ಬರುತ್ತಿಲ್ಲ ಎನ್ನಯವ ಚರ್ಚೆ ಮಾಲವುಡ್‌ ಅಂಗಳದಲ್ಲಿ ಕೇಳಿಬರ್ತಿದೆ. ಚಿತ್ರತಂಡ ಕೇಳುವಷ್ಟು ಹಣ ಕೊಡಲು ಯಾರು ಒಪ್ಪುತ್ತಿಲ್ಲವಂತೆ. ಇದೇ ಕಾರಣಕ್ಕೆ ಸಿನಿಮಾ ಓಟಿಟಿ ರಿಲೀಸ್ ತಡವಾಗುತ್ತಿದೆ ಎಂದು ಹೇಳಲಾಗುತ್ತಿದೆ. ಕೆಲವರು ಕಾದು ಕಾದು ಸುಮ್ಮನಾಗಿದ್ದು ಈ ತಿಂಗಳಾದರೂ ಸಿನಿಮಾ ವೀಕ್ಷಣೆಗೆ ಸಿಗುತ್ತಾ ಎಂದು ಕಾಯುವಂತಾಗಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಮನವಿ ಮಾಡುತ್ತಿದ್ದಾರೆ.

150 crore collected film in boxoffice still did not stream ott even after 100 days

'ಆಡು ಜೀವಿತಂ' ಚಿತ್ರದಲ್ಲಿ ನಜೀಬ್ ಪತ್ನಿ ಪಾತ್ರದಲ್ಲಿ ಅಮಲಾ ಪೌಲ್ ನಟಿಸಿದ್ದಾರೆ. ಇನ್ನುಳಿದಂತೆಕೆ. ಆರ್ ಗೋಕುಲ್, ಜಿಮ್ಮಿ ಜೀಲ್ ಲೂಯಿಸ್, ಶೋಭಾ ಮೋಹನ್, ರಾಬಿನ್ ದಾಸ್ ಸೇರಿದಂತೆ ಹಲವರು ಬಣ್ಣ ಹಚ್ಚಿದ್ದಾರೆ. ವಿಷುಯಲ್ ರೋಮ್ಯಾನ್ಸ್, ಜೆಟ್ ಮೀಡಿಯಾ ಪ್ರೊಡಕ್ಷನ್ ಹಾಗೂ ಆಲ್ಟಾ ಗ್ಲೋಬಲ್ ಮೀಡಿಯಾ ಸಂಸ್ಥೆಗಳು ಜಂಟಿಯಾಗಿ ಸಿನಿಮಾ ನಿರ್ಮಿಸಿವೆ. ಅಂದಾಜು 82 ಕೋಟಿ ರೂ. ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣ ಮಾಡಿದ್ದಾಗಿ ನಿರ್ದೇಶಕರು ಹೇಳಿದ್ದರು.

ಸಿನಿಮಾ ಒಟ್ಟು 160 ಕೋಟಿ ರೂ. ಕಲೆಕ್ಷನ್ ಮಾಡಿರುವ ಅಂದಾಜಿದೆ. ಇತ್ತೀಚೆಗೆ ಮಲಯಾಳಂ ಸಿನಿಮಾಗಳನ್ನು ಕನ್ನಡಕ್ಕೆ ಡಬ್ ಮಾಡಿ ಓಟಿಟಿಗೆ ರಿಲೀಸ್ ಮಾಡಲಾಗುತ್ತಿದೆ. ಹಾಗಾಗಿ 'ಆಡು ಜೀವಿತಂ' ಕೂಡ ಕನ್ನಡಕ್ಕೆ ಡಬ್ ಆಗಿ ಸ್ಟ್ರೀಮಿಂಗ್ ಆಗಲಿದೆ. ಆದಷ್ಟು ಬೇಗ ಸಿನಿಮಾ ಓಟಿಟಿಗೆ ಬರುವ ನಿರೀಕ್ಷೆಯಿದೆ.

More from Filmibeat

English summary
Super hit film didn't release in ott even after 3 months theatrical run
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X