ಪವನ್ ಕಲ್ಯಾಣ್ 'ಓಜಿ' ಕೇವಲ ನಾಲ್ಕೇ ವಾರಕ್ಕೆ ಓಟಿಟಿಗೆ ಲಗ್ಗೆ: ಕನ್ನಡದಲ್ಲೂ ಸ್ಟ್ರೀಮಿಂಗ್ -ಈ ದಿನದಿಂದ ಪ್ರಸಾರ

ಚಿತ್ರಮಂದಿರಕ್ಕೆ ಚಿತ್ರವೊಂದು ಬಂದು ಒಂದು ತಿಂಗಳಾಗಿರುವುದಿಲ್ಲ. ಅಷ್ಟರಲ್ಲಿಯೇ ಚಿತ್ರ ಓಟಿಟಿಯ ಅಂಗಳಕ್ಕೆ ಬಂದಿರುತ್ತೆ. ಕೇವಲ ಹೊಸಬರ ಚಿತ್ರಗಳು ಮಾತ್ರವಲ್ಲ ಸೂಪರ್ ಸ್ಟಾರ್ ಗಳ ಚಿತ್ರಗಳದ್ದು ಕೂಡ ಇದೇ ಕಥೆ. ಹೀಗಾಗಿಯೇ ಮನೆಯಲ್ಲಿಯೇ ನೋಡುವ ಸೌಲಭ್ಯ ಇದ್ದಾಗ ಚಿತ್ರಮಂದಿರಕ್ಕೆ ಹೋಗುವ ಅವಶ್ಯಕತೆಯಾದರು ಏನು ಎಂಬ ಆಲೋಚನೆಯಲ್ಲಿ ಅನೇಕರು ಈಗ ಓಟಿಟಿಯಲ್ಲಿ ಚಿತ್ರ ಪ್ರಸಾರವಾಗುವ ದಿನವನ್ನೇ ಎದುರು ನೋಡುತ್ತಿರುತ್ತಾರೆ.

ಮತ್ತೊಂದು ಕಡೆ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುತ್ತಿಲ್ಲ ಎಂದು ಚಿತ್ರರಂಗದವರು ಗೊಣಗುತ್ತಿರುತ್ತಾರೆ. ಸಂದರ್ಭ- ಸನ್ನಿವೇಶ ಹೀಗಿರುವಾಗ ಈಗ ಬಿಡುಗಡೆಯಾದ ಒಂದೇ ತಿಂಗಳಿಗೆ ಆಂಧ್ರದ ಉಪಮುಖ್ಯಮಂತ್ರಿ ಮತ್ತು ಪವರ್ ಸ್ಟಾರ್ ಪವನ್ ಕಲ್ಯಾಣ್ ಅಭಿನಯದ ''ಓಜಿ'' ಚಿತ್ರ ಓಟಿಟಿಗೆ ಬರುತ್ತಿದೆ.

300 Crore Hit Arrives Early Pawan Kalyan s OG Streams on Netflix Just 4 Weeks After Theatres

ಹೌದು, ಈ ವರ್ಷದ ದ್ವೀತಿಯಾರ್ಧದಲ್ಲಿ ಪವನ್ ಕಲ್ಯಾಣ್ ತಮ್ಮ ಅಭಿಮಾನಿಗಳಿಗೆ ಬೆಳ್ಳಿ ತೆರೆಯಲ್ಲಿ ಎರಡು ಬಾರಿ ದರ್ಶನ ನೀಡಿದ್ದರು. ಆ ಪೈಕಿ ''ಹರಿಹರ ವೀರ ಮಲ್ಲು'' ಒಂದಾದರೆ. ''ಓಜಿ'' ಮತ್ತೊಂದು. ಬಾಕ್ಸಾಫೀಸ್‌ನಲ್ಲಿ ಮಕಾಡೆ ಮಲಗಿದ ''ಹರಿಹರ ವೀರ ಮಲ್ಲು'' ಅಮೆಜಾನ್ ಪ್ರೈಮ್‌ನಲ್ಲಿ ಲಭ್ಯ ಇದೆ. ಈಗ ''ಓಜಿ'' ಚಿತ್ರದ ಸರದಿ.

ಪ್ರೇಕ್ಷಕರಿಂದ ಮತ್ತು ವಿಮರ್ಷಕರಿಂದ ಮೆಚ್ಚುಗೆಗೆ ಪಾತ್ರವಾದ ''ಓಜಿ'' ಬಾಕ್ಸಾಫೀಸ್‌ನಲ್ಲಿ ಕೇವಲ ಭಾರತದಲ್ಲಿಯೇ ₹ 191.9 ಕೋಟಿಯನ್ನು ಗಳಿಸಿದೆ. ಇನ್ನೂ ವಿಶ್ವದಾದ್ಯಂತ ಗಳಿಕೆಯ ಲೆಕ್ಕವನ್ನು ಕೂಡಿಸಿದರೆ ಚಿತ್ರದ ಗಳಿಕೆ ₹300 ಕೋಟಿಗೂ ಅಧಿಕ ಎಂದು ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ವರದಿಯನ್ನು ಮಾಡಿದೆ.

ವಿಶೇಷ ಅಂದರೆ ಸೆಪ್ಟೆಂಬರ್ 25ರಂದು ತೆರೆಗೆ ಬಂದಿದ್ದ ''ಓಜಿ'' ಇನ್ನೂ ಚಿತ್ರಮಂದಿರಗಳಲ್ಲಿದೆ. ಕೇವಲ ಬೆಂಗಳೂರಿನಲ್ಲಿ 08 ಸ್ಕ್ರೀನ್‌ಗಳಲ್ಲಿ ''ಓಜಿ'' ಇಂದು ( ಅಕ್ಟೋಬರ್ 15) ಪ್ರದರ್ಶನ ಕಂಡಿದೆ. ಹೈದರಾಬಾದ್‌ನ ಹಲವು ಚಿತ್ರಮಂದಿರಗಳಲ್ಲಿ ಈ ಚಿತ್ರ ಇನ್ನೂ ಇದ್ದು ಕೆಲ ಕಡೆ ಹೌಸ್‌ಫುಲ್ ಪ್ರದರ್ಶನವನ್ನು ಕೂಡ ಇಂದು ( ಅಕ್ಟೋಬರ್ 15) ಕಂಡಿದೆ. ಆದರೂ ಕೂಡ ಅಕ್ಟೋಬರ್ 23ರಂದು ಓಜಿ ಚಿತ್ರವನ್ನು ಓಟಿಟಿಯಲ್ಲಿ ಬಿಡುಗಡೆ ಮಾಡಲು ಮುಂದಾಗಿದೆ. ಹೀಗಾಗಿ ಇಷ್ಟೊಂದು ಆತುರ ಯಾಕೆ ಎನ್ನುವ ಪ್ರಶ್ನೆ ಸದ್ಯ ಹಲವರನ್ನು ಕಾಡುತ್ತಿದೆ.

ಇನ್ನು ಇದು ಪ್ಯಾನ್ ಇಂಡಿಯಾ ಕಾಲ. ಪ್ರತಿಯೊಬ್ಬರ ಚಿತ್ರಗಳು ಕೂಡ ಈಗ ಎಲ್ಲ ಭಾಷೆಯಲ್ಲಿ ಬಿಡುಗಡೆಗೊಳ್ಳುತ್ತಿವೆ. ''ಓಜಿ'' ಇದರಿಂದ ಹೊರತಾಗಿಲ್ಲ. ಚಿತ್ರಮಂದಿರಗಳಲ್ಲಿ ಕೇವಲ ತೆಲುಗು ಮತ್ತು ಹಿಂದಿ ಭಾಷೆಯಲ್ಲಿ ಬಿಡುಗಡೆಯಾಗಿದ್ದ ಈ ಚಿತ್ರವನ್ನು ಈಗ ತಮಿಳು, ಮಲಯಾಳಂ ಮತ್ತು ಕನ್ನಡಕ್ಕೆ ಕೂಡ ಡಬ್ ಮಾಡಲಾಗಿದೆ. ಈ ಹಿನ್ನೆಲೆ ಪವನ್ ಕಲ್ಯಾಣ್ ಅವರ ಓಜಿ ಚಿತ್ರವನ್ನು ಕನ್ನಡದಲ್ಲಿಯೇ ನೋಡುವ ಅವಕಾಶ ಕನ್ನಡಿಗರಿಗೆ ಇದೆ.

300 Crore Hit Arrives Early Pawan Kalyan s OG Streams on Netflix Just 4 Weeks After Theatres

ಈ ಹಿಂದೆ ಪ್ರಭಾಸ್‌ಗೆ ''ಸಾಹೋ'' ಚಿತ್ರವನ್ನು ನಿರ್ದೇಶಿಸಿದ್ದ ಸುಜಿತ್ ''ಓಜಿ'' ಚಿತ್ರವನ್ನು ನಿರ್ದೇಶಿಸಿದ್ದಾರೆ. ಪವನ್ ಕಲ್ಯಾಣ್ ಅವರ ಎದುರು ಇಮ್ರಾನ್ ಹಶ್ಮಿ ಖಳನಾಯಕನಾಗಿ ಅಬ್ಬರಿಸಿದ್ದಾರೆ. ಎಸ್ ತಮನ್ ಸಂಗೀತ ನಿರ್ದೇಶನ ಇರುವ ಚಿತ್ರಕ್ಕೆ ಡಿವಿವಿ ದಾನಯ್ಯ ಬಂಡವಾಳ ಹೂಡಿದ್ಧಾರೆ. ನಾಯಕಿ ಪಾತ್ರವನ್ನು ಪ್ರಿಯಾಂಕ ಮೋಹನ್ ನಿರ್ವಹಿಸಿದ್ದಾರೆ. ಇನ್ನು ಮುಂಗಾರು ಮಳೆ 2 ಚಿತ್ರದ ನಾಯಕಿ ನೇಹಾ ಶೆಟ್ಟಿ ಚಿತ್ರದಲ್ಲಿ ವಿಶೇಷ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದಾರೆ. ಬಿಡುಗಡೆಯಾದಾಗ ಈ ಹಾಡನ್ನು ತೆಗೆಯಲಾಗಿತ್ತು. ಆ ನಂತರ ಆಕ್ರೋಶ ವ್ಯಕ್ತವಾದ ನಂತರ ಸುಜಿತ್ ಈ ಹಾಡನ್ನು ಚಿತ್ರದಲ್ಲಿ ಸೇರಿಸಿದ್ದಾರೆ.

ಅಂದ್ಹಾಗೇ ಅಕ್ಟೋಬರ್ 23ರಿಂದ ಓಜಿ ಚಿತ್ರ ''ನೆಟ್‌ಫ್ಲಿಕ್ಸ್‌''ನಲ್ಲಿ ಪ್ರಸಾರವಾಗಲಿದೆ. ಆಸಕ್ತ ಚಿತ್ರಪ್ರೇಮಿಗಳು ಮತ್ತು ಪವನ್ ಕಲ್ಯಾಣ್ ಅವರ ಅಭಿಮಾನಿಗಳು ಮನೆಯಲ್ಲಿಯೇ ಕುಳಿತು ನೋಡಬಹುದು. ಮಕ್ಕಳನ್ನು ಆದಷ್ಟು ದೂರ ಇಟ್ಟರೆ ಒಳ್ಳೆಯದು. ಯಾಕೆಂದರೆ ಸೆನ್ಸಾರ್‌ ಪರೀಕ್ಷೆಯಲ್ಲಿ ಎ ಸರ್ಟಿಫಿಕೆಟ್ ಪಡೆದ ಪವನ್ ಕಲ್ಯಾಣ್ ಅವರ ಮೊದಲ ಸಿನಿಮಾ ಇದು.

More from Filmibeat

English summary
Get ready for the storm! Powerstar Pawan Kalyan's OG is set for a digital premiere. Catch the massive action thriller on Netflix starting October 23—just 4 weeks after release.
Read more about: pawan kalyan tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X