ಈ ವೀಕೆಂಡ್‌ ಬರೋಬ್ಬರಿ 38 ಸಿನಿಮಾ/ವೆಬ್‌ ಶೋ ಓಟಿಟಿಯಲ್ಲಿ ರಿಲೀಸ್: ಇಲ್ಲಿದೆ ಕಂಪ್ಲೀಟ್ ಲಿಸ್ಟ್

ದೊಡ್ಡ ಸಿನಿಮಾಗಳು ಇಲ್ಲದೇ ಥಿಯೇಟರ್‌ಗಳು ಪ್ರೇಕ್ಷಕರ ಬರ ಎದುರಿಸುತ್ತಿದೆ. ಓಟಿಟಿಯಲ್ಲಿ ಜನ ಸಿನಿಮಾ, ವೆಬ್‌ಸೀರಿಸ್ ನೋಡಲು ಮುಗಿ ಬೀಳುತ್ತಿದ್ದಾರೆ. ಬಾಲಿವುಡ್ ಸೂಪರ್ ಸ್ಟಾರ್‌ಗಳೇ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಾಗಿ ಸಿನಿಮಾ, ವೆಬ್‌ ಸೀರಿಸ್ ಮಾಡುತ್ತಿದ್ದಾರೆ. ಇದೀ ಒಂದೇ ವೀಕೆಂಡ್‌ನಲ್ಲಿ 38 ಸಿನಿಮಾ, ವೆಬ್‌ಸೀರಿಸ್‌ ಸ್ಟ್ರೀಮಿಂಗ್ ಆಗಲು ಸಿದ್ಧವಾಗಿದೆ. ಆ ಲಿಸ್ಟ್‌ನಲ್ಲಿ ತೆರೆಮೇಲೆ ಸದ್ದು ಮಾಡಿದ ಸಿನಿಮಾಗಳು ಇವೆ.

ಬರೀ ಓಟಿಟಿಗಾಗಿ ಕಂಟೆಂಟ್ ಸಿದ್ಧಪಡಿಸುವ ಪ್ರವೃತ್ತಿ ಈಗ ಹೆಚ್ಚಾಗುತ್ತಿದೆ. ಬಾಲಿವುಡ್‌ನಲ್ಲಿ ಕೆಲ ಸಿನಿಮಾಗಳು ನೇರವಾಗಿ ಡಿಜಿಟಲ್ ಪ್ಲಾಟ್‌ಫಾರ್ಮ್‌ಗೆ ಎಂಟ್ರಿ ಕೊಡುತ್ತಿವೆ. ಈ ವೀಕೆಂಡ್‌ನಲ್ಲಿ 38 ವೆಬ್‌ ಸೀರಿಸ್/ಸಿನಿಮಾಗಳು ಓಟಿಟಿಗೆ ಬರ್ತಿದೆ ಅಂದ್ರೆ ವೀಕ್ಷಕರಿಗೆ ಹಬ್ಬವೇ ಸರಿ. ಜೊತೆಗೆ ಈ ವಾರ 'ಪೊನ್ನಿಯಿನ್ ಸೆಲ್ವನ್- 2' ಹಾಗೂ 'ರಾಘವೇಂದ್ರ ಸ್ಟೋರ್ಸ್ಸ್' ಸೇರಿದಂತೆ ಹಲವು ಸಿನಿಮಾಗಳು ಥಿಯೇಟರ್‌ನಲ್ಲಿ ರಿಲೀಸ್ ಆಗುತ್ತಿವೆ. ಸಿನಿರಸಿಕರಿಗಂತೂ ಭರ್ಜರಿ ಮನರಂಜನೆ ಕಾದಿದೆ. ಓಟಿಟಿಗೆ ಬರ್ತಿರೋ ಸಿನಿಮಾ/ವೆಬ್‌ಸೀರಿಸ್ ಲಿಸ್ಟ್ ಇಲ್ಲಿದೆ ನೋಡಿ.

38 shows and movies to watch this weekend on Netflix, zee 5, Amazon Prime video, disney plus hotstar and more

ಅಮೇಜಾನ್ ಪ್ರೈಮ್ ವಿಡಿಯೋ

'ಪತ್ತು ತಲಾ'(ಏಪ್ರಿಲ್ 27): ಇದು ಸಿಂಬು ನಟಿಸಿರುವ ಕನ್ನಡದ 'ಮಫ್ತಿ' ಸಿನಿಮಾ ರೀಮೆಕ್. ಇತ್ತೀಚೆಗೆ ತೆರೆಕಂಡ ಈ ಸಿನಿಮಾ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿತ್ತು.

'ಸಿಟಾಡೆಲ್'(ಏಪ್ರಿಲ್ 28): ಪ್ರಿಯಾಂಕ ಚೋಪ್ರಾ ನಟನೆಯ ಹಾಲಿವುಡ್ ವೆಬ್ ಶೋ. ಮೊದಲ ಎಪಿಸೋಡ್ ಏಪ್ರಿಲ್ 28ಕ್ಕೆ ಸ್ಟ್ರೀಮಿಂಗ್ ಆಗಲಿದೆ.

ಜೀ 5

'ಯೂಟರ್ನ್'(ಏಪ್ರಿಲ್ 28): ಪವನ್ ಕುಮಾರ್ ನಿರ್ದೇಶನದ 'ಯೂಟರ್ನ್' ಹಿಂದಿ ರೀಮೆಕ್ ಇದು.
'ವ್ಯವಸ್ಥ': ತೆಲುಗು ವೆಬ್‌ ಸೀರಿಸ್

38 shows and movies to watch this weekend on Netflix, zee 5, Amazon Prime video, disney plus hotstar and more

ನೆಟ್‌ ಫ್ಲಿಕ್ಸ್

'ದಿ ಮ್ಯಾಚ್ ಮೇಕರ್'(ಏಪ್ರಿಲ್ 27), ' ಏಕೇ'(ಏಪ್ರಿಲ್ 28), 'ಬಿಫೋರ್ ಲೈಫ್ ಆಫ್ಟರ್ ಡೆತ್' (ಏಪ್ರಿಲ್ 28), 'ಕಿಂಗ್ ಆಫ್ ಕಲೆಕ್ಟಬಲ್ಸ್': ದಿ ಗೋಲ್ಡನ್ ಟಚ್(ಏಪ್ರಿಲ್ 28), ಯೋಯೋ ಹನಿಸಿಂಗ್(ಏಪ್ರಿಲ್ 28), ಮ್ಯೂಯಿ: ದಿ ಕರ್ಸ್ ರಿಟರ್ನ್ಸ್(ಏಪ್ರಿಲ್ 30), ಜಾನ್ ಮುಲಾನೆ: ಬೇಬಿ(ಏಪ್ರಿಲ್ 25), 'ದಿ ಲೈಟ್ ವುಯ್ ಕ್ಯಾರಿ': ಮಿಚೆಲ್ ಒಬಾಮಾ ಆಂಡ್ ಓಪ್ರಾ ವಿನ್‌ಫ್ರೆ(ಏಪ್ರಿಲ್ 25), 'ಲವ್ ಆಫ್ಟರ್ ಮ್ಯೂಸಿಕ್'(ಏಪ್ರಿಲ್ 26), 'ದಿ ಗುಡ್ ಬ್ಯಾಡ್ ಮದರ್'(ಏಪ್ರಿಲ್ 26), 'ಕಿಸ್ ಕಿಸ್!'(ಏಪ್ರಿಲ್ 26), 'ದಸರಾ' (ಏಪ್ರಿಲ್ 27), 'ದಿ ನರ್ಸ್'(ಏಪ್ರಿಲ್ 27), 'ಸ್ವೀಟ್ ಟೂತ್' ಸೀಸನ್- 2(ಏಪ್ರಿಲ್ 27)

ಡಿಸ್ನಿ ಪ್ಲಸ್ ಹಾಟ್‌ಸ್ಟರ್

'ಸೇವ್ ದಿ ಟೈಗರ್ಸ್'(ಏಪ್ರಿಲ್ 27), 'ಡಾಕ್ಟರ್ ರೊಮ್ಯಾಂಟಿಕ್' ಸೀಸನ್- 3(ಏಪ್ರಿಲ್ 28) 'ವೇದ್'(ಏಪ್ರಿಲ್ 28), ಪೀಟರ್ ಪಾನ್ ಆಂಡ್ ವೆಂಡಿ(ಏಪ್ರಿಲ್ 28),

ಇನ್ನುಳಿದಂತೆ ಸೋನಿ ಲಿವ್‌ನಲ್ಲಿ ಏಪ್ರಿಲ್ 28ಕ್ಕೆ 'ತುರುಮುಖಮ್' ಹಾಗೂ ಅಹಾ ಪ್ಲಾಟ್‌ಫಾರ್ಮ್‌ನಲ್ಲಿ 'ಜಲ್ಲಿಕಟ್ಟು' ಏಪ್ರಿಲ್ 26ಕ್ಕೆ ಸ್ಟ್ರೀಮಿಂಗ್ ಆಗಲಿದೆ. ಇನ್ನು ಕೆಲ ಪ್ರಾದೇಶಿಕ ಓಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲೂ ಸಾಕಷ್ಟು ಶೋಗಳು, ಸಿನಿಮಾಗಳಲ್ಲೂ ಬರಲಿವೆ. ಒಟ್ನಲ್ಲಿ ಓಟಿಟಿ ಪ್ರಿಯರಿಗಂತೂ ಈ ವಾರ ಭರ್ಜರಿ ಮನರಂಜನೆ ಕಾಯುತ್ತಿದೆ.

ಕೇಲವರ 6 ದಿನಗಳಲ್ಲಿ 100 ಕೋಟಿ ರೂ. ಕಲೆಕ್ಷನ್ ಮಾಡಿ ದಾಖಲೆ ಬರೆದ ನಾನಿ ನಟನೆಯ 'ದಸರಾ' ಸಿನಿಮಾ ಕೂಡ ಇದೇ ವಾರ ಓಟಿಟಿಗೆ ಬರ್ತಿದೆ. ಸಿನಿಮಾ ರಿಲೀಸ್ ಆಗಿ 28 ದಿನಕ್ಕೆ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗುತ್ತಿರುವುದು ವಿಶೇಷ. ಈ ಸಿನಿಮಾಗಾಗಿ ಸಿನಿರಸಿಕರು ಬಹಳ ಕಾತರದಿಂದ ಕಾಯುತ್ತಿದ್ದಾರೆ. ಕೀರ್ತಿ ಸುರೇಶ್ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದು ಕನ್ನಡ ದೀಕ್ಷಿತ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ಮಿಂಚಿದ್ದಾರೆ.

More from Filmibeat

English summary
38 shows and movies to watch this weekend on Netflix, zee 5, Amazon Prime video, disney plus hotstar and more. audience eagerly waiting to watch Dasara film once again in small screen. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X