ಎಮ್ಮಿ ಪ್ರಶಸ್ತಿ ನಾಮಿನೇಶನ್ ಪಟ್ಟಿ ಘೋಷ‍ಣೆ: 'ದಿ ಕ್ರೌನ್' ಮೇಲೆ ಕಣ್ಣು

ಟಿವಿ ಶೋ, ವೆಬ್ ಸರಣಿಗಳು, ಅಂತಾಲಜಿ ಸಿನಿಮಾಗಳಿಗೆ ನೀಡಲಾಗುವ ವಿಶ್ವಶ್ರೇಷ್ಠ ಪ್ರಶಸ್ತಿ ಎಮ್ಮಿಗೆ ನಾಮಿನೇಶನ್ ಪಟ್ಟಿ ಘೋಷಣೆ ಆಗಿದೆ. ಹಲವಾರು ಅತ್ಯುತ್ತಮ ಟಿವಿ ಶೋಗಳು, ವೆಬ್ ಸರಣಿಗಳು, ಅಂತಾಲಜಿ ಸಿನಿಮಾಗಳು ಪ್ರಶಸ್ತಿಗಾಗಿ ಸೆಣಸುತ್ತಿವೆ.

ಸಿನಿಮಾಕ್ಕೆ ಆಸ್ಕರ್ ಪ್ರತಿಷ್ಠಿತ ಪ್ರಶಸ್ತಿ ಆಗಿರುವಂತೆಯೇ ಟಿವಿ ಶೋ ಅಥವಾ ವೆಬ್ ಸರಣಿಗಳಿಗೆ ಎಮ್ಮಿ ಪ್ರತಿಷ್ಠಿತ ಪ್ರಶಸ್ತಿಯಾಗಿದೆ. ಹಾಗಾಗಿ ಈ ಪ್ರಶಸ್ತಿಗೆ ಪ್ರಾಮುಖ್ಯತೆ ಹೆಚ್ಚು.

ಪ್ರತಿ ಬಾರಿಯಂತೆಯೂ ಈ ಬಾರಿಯೂ ಕೆಲವು ಅತ್ಯುತ್ತಮ ಟಿವಿ ಶೋಗಳು ಪ್ರಶಸ್ತಿಗಾಗಿ ಸೆಣೆಸುತ್ತಿದ್ದು, 'ದಿ ಕ್ರೌನ್' ಮೇಲೆ ಹೆಚ್ಚಿನ ನಿರೀಕ್ಷೆ ಇಡಲಾಗಿದೆ.

73rd Emmy 2021 Nomination List Announced

ಹಲವು ವಿಭಾಗಗಳಲ್ಲಿ ಪ್ರಶಸ್ತಿ ನೀಡಲಾಗುತ್ತಿದ್ದು, ಡ್ರಾಮಾ ವಿಭಾಗದಲ್ಲಿ, 'ದಿ ಬಾಯ್ಸ್', 'ಬ್ರಿಡ್ಜಗರ್‌ಟೌನ್', 'ದಿ ಕ್ರೌನ್', 'ಲವ್ ಕ್ರಾಫ್ಟ್ ಕಂಟ್ರಿ', 'ದಿ ಮಂಡೊಲಾರಿನ್', 'ಫೋಸ್', 'ದಿಸ್ ಇಸ್ ಅಸ್' ಶೋಗಳು ಪ್ರಶಸ್ತಿಗಾಗಿ ಸ್ಪರ್ಧಿಸುತ್ತಿವೆ.

ಕಾಮಿಡಿ ವಿಭಾಗದಲ್ಲಿ, 'ಬ್ಲ್ಯಾಕಿಶ್', 'ಕೋಬ್ರ ಕೈ', 'ಎಮಿಲಿ ಇನ್ ಪ್ಯಾರಿಸ್', 'ದಿ ಫ್ಲೈಟ್ ಅಟೆಂಡೆಂಟ್', 'ಹ್ಯಾಕ್ಸ್', 'ದಿ ಕೋಮಿನ್‌ಸ್ಕಿ ಮೆತಡ್', 'ಪೆನ್ 15', 'ಟೆಡ್ ಲಾಸೊ' ಶೋಗಳು ಸ್ಪರ್ಧೆ ಮಾಡುತ್ತಿವೆ.

ಟೆಲಿವಿಷನ್ ಸಿನಿಮಾ ವಿಭಾಗದಲ್ಲಿ, 'ಡಾಲಿ ಪಾರ್ಟೊನ್ಸ್ ಕ್ರಿಸ್ಟ್‌ಮಸ್', 'ದಿ ಸ್ಕ್ವೇರ್', 'ಒಸ್ಲೊ', 'ರಾಬಿನ್ ರಾಬರ್ಟ್ಸ್ ಪ್ರೆಸೆಂಟ್; ಮಹಾಲಿಯಾ', 'ಸ್ಲಿವೀಸ್ ಲವ್', 'ಅಂಕಲ್ ಫ್ರ್ಯಾಂಕ್' ಸಿನಿಮಾಗಳು ಸ್ಪರ್ಧೆಯಲ್ಲಿವೆ.

ಅತ್ಯುತ್ತಮ ನಟ, ಅತ್ಯುತ್ತಮ ನಟಿ, ಅತ್ಯುತ್ತಮ ಪೋಷಕ ನಟ, ಪೋಷಕ ನಟಿ, ನಿರ್ದೇಶಕ, ಕಲಾ ನಿರ್ದೇಶಕ, ಸಂಗೀತ ಇನ್ನೂ ಹಲವು ವಿಭಾಗಗಳಲ್ಲಿ ಎಮ್ಮಿ ಪ್ರಶಸ್ತಿ ವಿತರಣೆ ಆಗಲಿದೆ. ಈ ಬಾರಿಯ ಶೋ ಅನ್ನು ಕ್ರೆಡಿಕ್ ನಿರೂಪಣೆ ಮಾಡಲಿದ್ದಾರೆ. ಎಮ್ಮಿ ಪ್ರಶಸ್ತಿ ವಿತರಣೆಯು ಸೆಪ್ಟೆಂಬರ್ 19ರಂದು ನಡೆಯಲಿದೆ.

More from Filmibeat

English summary
2021, 73rd Emmy Nomination announced. The Crown series is hot favorite. Award ceremony will happen on September 19.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X