ಟ್ರೇಲರ್: ಹರೆಯದ ಹುಡುಗನೊಂದಿಗೆ ನಟಿ ಟಬು ರೊಮ್ಯಾನ್ಸ್

ನಟಿ ಟಬು ನಟನೆಯ 'ಎ ಸುಟೆಬಲ್ ಬಾಯ್' ವೆಬ್ ಸೀರೀಸ್‌ನ ಟ್ರೇಲರ್ ಬಿಡುಗಡೆ ಆಗಿದ್ದು, ನಟಿ ಟಬು ಹಸಿ-ಬಿಸಿಯಾಗಿ ಕಾಣಿಸಿಕೊಂಡಿರುವ ಈ ವೆಬ್ ಸರಣಿ ಬೇರೆ ಕಾರಣಗಳಿಂದಲೂ ಗಮನ ಸೆಳೆಯುತ್ತಿದೆ.

Recommended Video

ರಾಜ್ ಕುಮಾರ್ ಅಪಹರಣ ಆದಾಗ ವಿಷ್ಣುದಾದಾ ಆಡಿದ್ದ ಮಾತುಗಳು ಇಂದಿಗೂ ಜೀವಂತ | Rajkumar | Filmibeat Kannada

ಹಿರಿಯ ನಟಿ ಟಬು, ಯುವ ನಟ ಇಶಾನ್ ಕಟ್ಟರ್ ಇನ್ನೂ ಹಲವು ನಟರು ನಟಿಸಿರುವ ಈ ವೆಬ್ ಸರಣಿಯನ್ನು ಖ್ಯಾತ ನಿರ್ದೇಶಕಿ, ಲೇಖಕಿ ಮೀರಾ ನಾಯರ್ ನಿರ್ದೇಶಿಸಿದ್ದಾರೆ.

ವಿಕ್ರಮ್ ಸೇಠ್ ಅವರ ಪ್ರಸಿದ್ಧ ಕಾದಂಬರಿ 'ಎ ಸುಟೇಬಲ್ ಬಾಯ್' ಆಧಾರಿತವಾದ ಈ ವೆಬ್ ಸರಣಿ ಅದೇ ಹೆಸರಿನಲ್ಲಿ ತೆರೆಗೆ ಬರುತ್ತಿದೆ. ಸರಣಿಯ ಇನ್ನೊಂದು ವಿಶೇಷವೆಂದರೆ ಬಿಬಿಸಿ ಯ ಮೊದಲ ಟಿವಿ ಸರಣಿ ಇದಾಗಿದೆ.

ಇಂಗ್ಲಿಷ್ ಭಾಷೆಯಲ್ಲಿದೆ ವೆಬ್ ಸರಣಿ

ಇಂಗ್ಲಿಷ್ ಭಾಷೆಯಲ್ಲಿದೆ ವೆಬ್ ಸರಣಿ

1947 ರ ಭಾರತದ ಕತೆಯನ್ನು ವೆಬ್ ಸರಣಿ ಒಳಗೊಂಡಿದ್ದು, ಟ್ರೇಲರ್ ನಲ್ಲಿ ಆಗಿನ ಕಾಲದ ಭಾರತದ ಝಲಕ್ ತುಂಬಿದೆ. ಭಾರತದಲ್ಲಿ ನಡೆವ ಕತೆಯನ್ನು ಇಂಗ್ಲಿಷ್‌ ಭಾಷೆಯಲ್ಲಿ ವೆಬ್ ಸರಣಿ ಮಾಡಲಾಗಿದೆ.

ಇದು 1947 ರ ಭಾರತದ ಕತೆ

ಇದು 1947 ರ ಭಾರತದ ಕತೆ

ಆಗಷ್ಟೆ ಸ್ವಾತಂತ್ರ್ಯ ಪಡೆದ ಭಾರತ, ಜನರು ಎದುರಿಸಿದ ಸವಾಲುಗಳು, ಹಿಂದು-ಮುಸ್ಲಿಂ ದ್ವೇಷದ ಉಗಮ, ಗ್ರಾಮ್ಯ ಭಾರತ, ಸಾಮಾಜಿಕ ಅಸಮಾನತೆ ಇನ್ನೂ ಹಲವು ವಿಷಯಗಳ ಬಗ್ಗೆ 'ಎ ಸುಟೇಬಲ್ ಬಾಯ್' ಕಾದಂಬರಿ ಮಾತಾಡುತ್ತದೆ, ವೆಬ್ ಸರಣಿಯೂ ಸಹ ಇದೇ ಅಂಶಗಳ ಮೇಲೆ ಗಮನ ಕೇಂದ್ರೀಕರಿಸುವುದು ಟ್ರೇಲರ್‌ನಿಂದ ತಿಳಿಯುತ್ತದೆ.

ಹಲವು ಹಸಿ-ಬಿಸಿ ದೃಶ್ಯಗಳಿವೆ

ಹಲವು ಹಸಿ-ಬಿಸಿ ದೃಶ್ಯಗಳಿವೆ

ನಟಿ ಟಬು ಮತ್ತು ಯುವ ನಟ ಇಶಾನ್ ಕಕ್ಕರ್ ಮಧ್ಯೆ ಹಲವು ಹಸಿ-ಬಿಸಿ ದೃಶ್ಯಗಳಿವೆ. ವೆಬ್ ಸರಣಿಯ ಕೇಂದ್ರ ಪಾತ್ರಗಳು ಇವೆರಡೇ ಆಗಿವೆ. ಟ್ರೇಲರ್ ಗಮಿನಿಸಿದ ಸಿನಿಪ್ರಿಯರು, ಕಾದಂಬರಿಗೆ ನ್ಯಾಯ ಒದಗಿಸಿದಂತೆ ಕಾಣುತ್ತಿದೆ ಎಂದು ಪ್ರಶಂಸಿದ್ದಾರೆ.

ಜುಲೈ 26 ಕ್ಕೆ ಬಿಡುಗಡೆ

ಜುಲೈ 26 ಕ್ಕೆ ಬಿಡುಗಡೆ

ಸುಟೇಬಲ್ ಬಾಯ್ ಸರಣಿಯು ಜುಲೈ 26 ರಂದು ಬಿಡುಗಡೆ ಆಗಲಿದೆ. ಸರಣಿಯಲ್ಲಿ ಟಬು, ಇಶಾನ್ ಹೊರತುಪಡಿಸಿ ವಿಜಯ್ ವರ್ಮಾ, ತನ್ಯಾ ಮಣಿಕ್ತಲಾ, ನಮಿತ್ ದಾಸ್, ರಸಿಕಾ ದುಗಲ್, ರಣದೀಪ್ ಹೂಡಾ ಇನ್ನೂ ಹಲರು ನಟಿಸಿದ್ದಾರೆ.

More from Filmibeat

English summary
Meera Nair directed 'A Suitable Boy' web series trailer released. Series will be aired on July 26.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X