The Goat Life Ott date fixed; ಕೊನೆಗೂ 'ಆಡು ಜೀವಿತಂ' ಓಟಿಟಿ ರಿಲೀಸ್ ಡೇಟ್ ಘೋಷಣೆ

ಪೃಥ್ವಿರಾಜ್ ಸುಕುಮಾರ್ ನಟನೆಯ 'ಆಡುಜೀವಿತಂ' ಸಿನಿಮಾ ಈ ವರ್ಷ ಬ್ಲಾಕ್‌ಬಸ್ಟರ್ ಹಿಟ್ ಲಿಸ್ಟ್ ಸೇರಿದೆ. ಇದೀಗ 5 ಭಾಷೆಗಳಲ್ಲಿ ಓಟಿಟಿ ಸ್ಟ್ರೀಮಿಂಗ್‌ಗೆ ಸಜ್ಜಾಗಿದೆ. 3 ತಿಂಗಳ ಹಿಂದೆ ತೆರೆಕಂಡಿದ್ದ ಈ ಸರ್ವೈವರ್ ಡ್ರಾಮಾ ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು.

ಇತ್ತೀಚಿನ ದಿನಗಳಲ್ಲಿ ದೊಡ್ಡ ದೊಡ್ಡ ಸಿನಿಮಾಗಳು 20 ದಿನಕ್ಕೆ ಓಟಿಟಿಗೆ ಬರ್ತಿವೆ. ಆದರೆ 'ಆಡುಜೀವಿತಂ' ಹೆಚ್ಚು ಕಮ್ಮಿ 4 ತಿಂಗಳ ಬಳಿಕ ಡಿಜಿಟಲ್ ಪ್ಲಾಟ್‌ಫಾರ್ಮ್‌ಗೆ ಬರ್ತಿದೆ. ಬ್ಲೆಸಿ ನಿರ್ದೇಶನದ ಈ ಚಿತ್ರದಲ್ಲಿ ಪೃಥ್ವಿರಾಜ್ ಜೊತೆಗೆ ಕೆ. ಆರ್ ಗೋಕುಲ್, ಅಮಲಾ ಪೌಲ್, ಜಿಮ್ಮಿ ಜೀನ್ ಲೂಯಿಸ್, ಶೋಭಾ ಮೋಹನ್, ರಾಬಿನ್ ದಾಸ್ ಸೇರಿದಂತೆ ಹಲವರು ನಟಿಸಿದ್ದಾರೆ. 80 ಕೋಟಿ ರೂ. ಬಜೆಟ್ ಸಿನಿಮಾ ಅಂದಾಜು 160 ಕೋಟಿ ರೂ. ಕಲೆಕ್ಷನ್ ಮಾಡಿ ದಾಖಲೆ ಬರೆದಿತ್ತು.

Aadujeevitham OTT release date confirmed where and when to watch Prithviraj survival drama

ಮಲಯಾಳಂ ಸಿನಿಮಾಗಳು ಇತ್ತೀಚಿನ ವರ್ಷಗಳಲ್ಲಿ ಬಹಳ ಸದ್ದು ಮಾಡ್ತಿದೆ. ಅದೇ ಸಾಲಿಗೆ 'ಆಡುಜೀವಿತಂ' ಸಿನಿಮಾ ಸಹ ಸೇರಿಕೊಂಡಿದೆ. ನೈಜ ಘಟನೆಗಳನ್ನು ಆಧರಿಸಿ ಬರೆದ ಕಾದಂಬರಿಯನ್ನು ಸಿನಿಮಾ ರೂಪದಲ್ಲಿ ಕಟ್ಟಿಕೊಡಲಾಗಿದೆ. ಹಲವು ವರ್ಷಗಳ ಕಾಲ ಈ ಚಿತ್ರಕ್ಕಾಗಿ ತಂಡ ಶ್ರಮಿಸಿತ್ತು. 90 ದಶಕದ ಆರಂಭದಲ್ಲಿ ಕೇರಳದಿಂದ ಕೆಲಸಕ್ಕಾಗಿ ಸೌದಿಗೇ ಹೋಗಿದ್ದ ನಜೀಬ್ ಮುಹಮ್ಮದ್ ಸಂಕಷ್ಟಕ್ಕೆ ಸಿಲುಕ್ಕಿದ್ದ ಕಥೆ ಚಿತ್ರದಲ್ಲಿದೆ.

3 ವರ್ಷಗಳ ಕಾಲ ನಜೀಬ್ ಮುಹಮ್ಮದ್ ಮರಳುಗಾಡಿನಲ್ಲಿ ಕುರಿಗಳನ್ನು ಮೇಯಿಸುತ್ತಾ ಕಾಲ ಕಳೆಯುವಂತಾಗಿತ್ತು. ಈ ವೇಳೆ ಅವರು ಎದುರಿಸಿದ ಕಷ್ಟ ಅಷ್ಟಿಷ್ಟಲ್ಲ. ಹನಿ ನೀರಿಗೂ ನಾನಾ ಪಾಟು ಪಟ್ಟಿದ್ದರು. ಎಜೆಂಟ್ ಮೂಲಕ ಸೌದಿಯಲ್ಲಿ ಕೆಲಸ ಪಡೆಯಲು ಹೋಗಿ ಯಾಮಾರಿ ಅವರು ಸಂಕಷ್ಟಕ್ಕೆ ಸಿಲುಕಿದ್ದರು. 1993ರಲ್ಲಿ ಹೀಗೆ ಸೌದಿಗೆ ಹೋಗಿ ಸಿಕ್ಕಿ ಹಾಕಿಕೊಂಡಿದ್ದ ನಜೀಬ್ ವರ್ಷಗಳ ಕಾಲ ಬಚಾವಾಗಿದ್ದರು. ನಜೀಬ್ ಜೊತೆಗೆ ಹಕೀಮ್ ಕೂಡ ಸಿಲುಕಿದ್ದರು.

ನಜೀಬ್ ಪಾತ್ರದಲ್ಲಿ ಪೃಥ್ವಿರಾಜ್ ನಟನೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಪಾತ್ರಕ್ಕಾಗಿ ಅವರು ತಮ್ಮನ್ನು ಸಂಪೂರ್ಣವಾಗಿ ಅರ್ಪಿಸಿಕೊಂಡಿದ್ದು ಕಾಣಿಸುತ್ತದೆ. ಇನ್ನು ನಜೀಬ್ ಪತ್ನಿ ಸೈನು ಆಗಿ ಅಮಲಾ ಪೌಲ್ ಬಣ್ಣ ಹಚ್ಚಿದ್ದಾರೆ. ಇತ್ತ ಪತಿ ಆಗಮನ ನಿರೀಕ್ಷೆಯಲ್ಲಿರುವ ಪತ್ನಿ, ಅತ್ತ ಪತ್ನಿ ನೆನಪಿನಲ್ಲೇ ನರಕದಂತ ಮರುಭೂಮಿಯಲ್ಲಿ 3 ವರ್ಷಗಳ ಕಳೆದ ನಜೀಬ್ ಕಥೆ ತೆರೆಗೆ ಬಂದಿದೆ.

ನಜೀಬ್ ಸಂಕಷ್ಟದ ಕಥೆಯನ್ನು ಕೇರಳದ ಖ್ಯಾತ ಲೇಖಕ ಬೆನ್ಯಾಮಿನ್ ಕಾದಂಬರಿ ರೂಪದಲ್ಲಿ ಕಟ್ಟಿಕೊಟ್ಟಿದ್ದರು. 'ಆಡುಜೀವಿತಂ' ಹೆಸರಿನ ಆ ಕಾದಂಬರಿ ಆಧರಿಸಿ ಸಿನಿಮಾ ತೆರೆಗೆ ತರಲಾಗಿದೆ. ಮಾಮೂಲಿ ಕಮರ್ಷಿಯಲ್ ಸಿನಿಮಾಗಳಿಗಿಂತ ಬಹಳ ವಿಭಿನ್ನ ಸಿನಿಮಾ ಇದು. ಆದರೆ ಕೊನೆಯವರೆಗೂ ಪ್ರೇಕ್ಷಕರನ್ನು ನೋಡಿಸಿಕೊಂಡು ಹೋಗಿತ್ತು. ಈಗಾಗಲೇ ಹಲವರು ಸಿನಿಮಾ ನೋಡಿದ್ದಾರೆ. ಮತ್ತೆ ಕೆಲವರು ಓಟಿಟಿ ಸ್ಟ್ರೀಮಿಂಗ್‌ಗಾಗಿ ಕಾಯುತ್ತಿದ್ದಾರೆ.

ಕನ್ನಡ ಸೇರಿ 5 ಭಾಷೆಗಳಲ್ಲಿ 'ಆಡುಜೀವಿತಂ' ಸಿನಿಮಾ ಜುಲೈ 19ಕ್ಕೆ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ಅಧಿಕೃತವಾಗಿ ನೆಟ್‌ಫ್ಲಿಕ್ಸ್ ಇಂಡಿಯಾ ಸಂಸ್ಥೆ ಈ ವಿಚಾರವನ್ನು ಹಂಚಿಕೊಂಡಿದೆ. ಈ ಸುದ್ದಿ ಕೇಳಿ ಹಲವರು ಖುಷಿಯಾಗಿದ್ದಾರೆ.

ವಿಷುಯಲ್ ರೋಮ್ಯಾನ್ಸ್, ಜೆಟ್ ಮೀಡಿಯಾ ಪ್ರೊಡಕ್ಷನ್ ಹಾಗೂ ಆಲ್ಟಾ ಗ್ಲೋಬಲ್ ಮೀಡಿಯಾ ಸಂಸ್ಥೆಗಳು ಒಟ್ಟಾಗಿ 'ಆಡುಜೀವಿತಂ' ಸಿನಿಮಾ ನಿರ್ಮಿಸಿವೆ. ಸುನಿಲ್ ಛಾಯಾಗ್ರಹಣ, ಎ. ಆರ್ ರಹಮಾನ್ ಸಂಗೀತ ಚಿತ್ರಕ್ಕಿದೆ. 2008ರಿಂದಲೇ 'ಆಡುಜೀವಿತಂ' ಸಿನಿಮಾ ಕೆಲಸಗಳು ಶುರುವಾಗಿತ್ತು.

ಮೊದಲಿಗೆ ತಮಿಳು ನಟ ಸೂರ್ಯ ಚಿತ್ರದಲ್ಲಿ ನಟಿಸುತ್ತಾರೆ ಎನ್ನಲಾಗಿತ್ತು. ಈ ಬಗ್ಗೆ ನಿರ್ದೇಶಕರು ಅವರೊಟ್ಟಿಗೆ ಚರ್ಚಿಸಿದ್ದರು. ಆದರೆ ಕಾರಣಾಂತರಗಳಿಂದ ಸಾಧ್ಯವಾಗಲಿಲ್ಲ. ಕೊನೆಗೆ ಆ ಅವಕಾಶ ಪೃಥ್ವಿರಾಜ್ ಸುಕುಮಾರನ್ ಪಾಲಾಗಿತ್ತು.

More from Filmibeat

English summary
Prithviraj sukumaran starrer The Goat Life Ott details;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X