Aadujeevitham OTT Release: 'ಆಡುಜೀವಿತಂ' ಓಟಿಟಿ ರಿಲೀಸ್ ಎಲ್ಲಿ? ಯಾವಾಗ?

ಈ ವರ್ಷ ಮಲಯಾಳಂ ಸಿನಿಮಾಗಳ ಕಾರುಬಾರು ಜೋರಾಗಿದೆ. 'ಮಂಜುಮೇಲ್ ಬಾಯ್ಸ್' ಬಳಿಕ 'ಆಡುಜೀವಿತಂ' ಹಾಗೂ 'ಆವೇಶಂ' ಚಿತ್ರಗಳು ಕೂಡ ಬಾಕ್ಸಾಫೀಸ್ ಶೇಕ್ ಮಾಡಿ ದಾಖಲೆ ಬರೆದಿವೆ. ಮಲಯಾಳಂ ಮಾತ್ರವಲ್ಲ ಬೇರೆ ಭಾಷೆಗಳಲ್ಲಿ ಕೂಡ ಈ ಸಿನಿಮಾಗಳಿಗೆ ಸಖತ್ ರೆಸ್ಪಾನ್ಸ್ ಸಿಕ್ಕಿತ್ತು.

ಸದ್ಯ 'ಮಂಜುಮೇಲ್ ಬಾಯ್ಸ್' ಸಿನಿಮಾ ಡಿಸ್ನಿ ಹಾಟ್‌ಸ್ಟರ್‌ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಚಿತ್ರದ ಬಗ್ಗೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕೆಲವರು ಚೆನ್ನಾಗಿದೆ ಅಂದ್ರೆ ಮತ್ತೆ ಕೆಲವರು ಹೈಪ್ ಕೊಟ್ಟ ರೇಂಜ್‌ಗೆ ಸಿನಿಮಾ ಇಲ್ಲ. ಓಕೆ ಓಕೆ ಅಷ್ಟೆ ಎನ್ನುತ್ತಿದ್ದಾರೆ. ಇದೆಲ್ಲದರ ನಡುವೆ 'ಆವೇಶಂ' ಮತ್ತು 'ಆಡುಜೀವಿತಂ' ಚಿತ್ರಗಳು ಸ್ಮಾಲ್‌ಸ್ಕ್ರೀನ್‌ಗೆ ಬರೋದು ಯಾವಾಗ ಎನ್ನುವ ಚರ್ಚೆ ಶುರುವಾಗಿದೆ.

Aadujeevitham - The Goat life Ott Release where and when to watch Prithviraj s Survival drama

ಪೃಥ್ವಿರಾಜ್ ಸುಕುಮಾರನ್ ನಟನೆಯ 'ಆಡುಜೀವಿತಂ'(The goat life) ಸಿನಿಮಾ ಸಂಚಲನ ಸೃಷ್ಟಿಸಿತ್ತು. ಮಾರ್ಚ್ 28ಕ್ಕೆ ತೆರೆಗಪ್ಪಳಿಸಿದ ಸಿನಿಮಾ ಪ್ರೇಕ್ಷಕರ ಮೆಚ್ಚುಗೆ ಗಳಿಸಿತ್ತು. ಚಿತ್ರತಂಡದ ಹಲವು ವರ್ಷ ಪರಿಶ್ರಮ ಕಂಡು ಪ್ರೇಕ್ಷಕರು ಫಿದಾ ಆಗಿದ್ದರು. ಬೆನ್ನಿ ಡೇನಿಯಲ್ ಬರೆದ 'ಆಡುಜೀವಿತಂ' ಕಾದಂಬರಿ ಆಧರಿಸಿ ನಿರ್ದೇಶಕ ಬ್ಲೆಸ್ಸಿ ಈ ಚಿತ್ರ ಕಟ್ಟಿಕೊಟ್ಟಿದ್ದಾರೆ. ಈ ಸರ್ವೈವಲ್ ಡ್ರಾಮಾ ಸಿನಿಮಾ 150 ಕೋಟಿ ರೂ.ಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿದೆ.

ಕರ್ನಾಟಕದಲ್ಲೂ ಕೆಲವೆಡೆ 'ಆಡುಜೀವಿತಂ' ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು, ಪೃಥ್ವಿರಾಜ್ ನಟನೆ ಕಂಡು ಪ್ರೇಕ್ಷಕರು ಹುಬ್ಬೇರಿಸಿದ್ದರು. ನೈಜ ಘಟನೆಗಳನ್ನು ಆಧರಿಸಿ ಬರೆದ ಕಾದಂಬರಿಯನ್ನು ತೆರೆಗೆ ತಂದು ಚಿತ್ರತಂಡ ಸಕ್ಸಸ್ ಕಂಡಿದೆ. ಸಾಕಷ್ಟು ಜನ ಈ ಚಿತ್ರವನ್ನು ಓಟಿಟಿಯಲ್ಲಿ ವೀಕ್ಷಿಸಲು ಕಾಯುತ್ತಿದ್ದಾರೆ. ಡಿಸ್ನಿ ಪ್ಲಸ್ ಹಾಟ್‌ಸ್ಟರ್‌ಗೆ ಚಿತ್ರದ ಓಟಿಟಿ ರೈಟ್ಸ್ ಮಾರಾಟವಾಗಿದೆ ಎನ್ನುವ ಚರ್ಚೆ ನಡೀತಿದೆ.

Aadujeevitham - The Goat life Ott Release where and when to watch Prithviraj s Survival drama

ನಜೀಬ್ (ಪೃಥ್ವಿರಾಜ್ ಸುಕುಮಾರನ್) ತನ್ನ ಹೆಂಡತಿ ಸೈನು (ಅಮಲಾ ಪೌಲ್) ಜೊತೆ ಕುಗ್ರಾಮವೊಂದರಲ್ಲಿ ಸಂತೋಷದ ಜೀವನ ನಡೆಸುತ್ತಿರುತ್ತಾನೆ. ಆದರೆ ಸರಿಯಾದ ಉದ್ಯೋಗ ಇಲ್ಲದೇ ಹಣಕ್ಕಾಗಿ ಪರಿಪಾಟಲು ಪಡುತ್ತಿರುತ್ತಾನೆ. ತನ್ನ ಸ್ನೇಹಿತನ ಸಲಹೆಯ ಮೇರೆಗೆ ದುಬೈಗೆ ಹೋಗಿ ಹಣ ಸಂಪಾದಿಸಲು ನಿರ್ಧರಿಸುತ್ತಾನೆ. ಕೆಲ ನಾಟಕೀಯ ಬೆಳವಣಿಗೆ ಕಾರಣ ನಜೀಬ್ ಅಕ್ರಮ ವೀಸಾ ಮೇಲೆ ದುಬೈಗೆ ತೆರಳುವಂತಾಗುತ್ತದೆ. ಆದರೆ ಅಲ್ಲಿ ನಜೀಬ್ ಒಬ್ಬ ಖಲೀಫನ ಕೈಗೆ ಸಿಕ್ಕಿಬೀಳುತ್ತಾನೆ.

ಬಳಿಕ ನಜೀಬ್‌ನನ್ನು ಬಲವಂತವಾಗಿ ಕುರಿ ಮೇಯಿಸಲು ಮರುಭೂಮಿಗೆ ಕರೆದೊಯ್ಯುತ್ತಾರೆ. ಆ ಮರುಭೂಮಿಯಿಂದ ಆತ ತಪ್ಪಿಸಿಕೊಳ್ತಾನಾ? ಅಲ್ಲಿ ಹೇಗೆಲ್ಲಾ ಕಷ್ಟ ಅನುಭವಿಸುತ್ತಾನೆ? ಈ ಹಾದಿಯಲ್ಲಿ ಆತನಿಗೆ ಜೊತೆಯಾಗುವ ಹಕೀಮ್ ಯಾರು? ಇಬ್ಬರು ಸೇರಿ ಅಲ್ಲಿಂದ ತಪ್ಪಿಸಿಕೊಂಡು ತಮ್ಮ ತಾಯ್ನಾಡಿಗೆ ಹಿಂದಿರುಗುತ್ತಾರಾ? ಎನ್ನುವುದು ಚಿತ್ರದ ಇನ್ನುಳಿದ ಕಥೆ.

ಸಿಂಪಲ್ ಕಥೆಯನ್ನು ಬ್ಲೆಸ್ಸಿ ಮತ್ತವರ ತಂಡ ಸೊಗಸಾಗಿ ತೆರೆಗೆ ತಂದಿದೆ. ಪಾತ್ರಕ್ಕಾಗಿ ಪೃಥ್ವಿರಾಜ್ ಸುಕುಮಾರನ್ ಮಾಡಿರುವ ಕಸರತ್ತು ಅಷ್ಟಿಷ್ಟಲ್ಲ. ಪೃಥ್ವಿರಾಜ್‌ ಪಾತ್ರಕ್ಕಾಗಿ ಬಹಳ ಶ್ರಮಿಸಿದ್ದಾರೆ. ಅವರು ಎಷ್ಟೆಲ್ಲಾ ಕಷ್ಟಪಟ್ಟಿದ್ದಾರೆ ಎನ್ನುವುದು ಚಿತ್ರದ ಪ್ರತಿ ಫ್ರೇಮ್‌ನಲ್ಲಿ ಗೊತ್ತಾಗುತ್ತದೆ. ಯಾವುದೇ ಕಮರ್ಷಿಯಲ್ ಅಂಶಗಳು ಇಲ್ಲದೇ ನಡೆದ ಕಥೆಯನ್ನು ತೆರೆಗೆ ತಂದು ಎರಡೀವರೆ ಗಂಟೆ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವುದು ಸಾಮಾನ್ಯ ಸಂಗತಿಯಲ್ಲ.

ಒಟ್ಟಾರೆ 'ಆಡುಜೀವಿತಂ' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿದೆ. ಮಲಯಾಳಂನಲ್ಲಿ ಕೆಲವೇ ಸಿನಿಮಾ 100 ಕೋಟಿ ರೂ. ಕಲೆಕ್ಷನ್ ಗಡಿದಾಟಿವೆ. ಆ ಲಿಸ್ಟ್‌ನಲ್ಲಿ ಈ ಸಿನಿಮಾ ಕೂಡ ಸೇರಿಕೊಂಡಿದೆ. ಮೇ 10ಕ್ಕೆ ಸಿನಿಮಾ ಓಟಿಟಿ ಬರುತ್ತದೆ ಎನ್ನಲಾಗ್ತಿದೆ. ಮೇ 26ಕ್ಕೆ ಡಿಸ್ನಿ ಹಾಟ್‌ಸ್ಟರ್‌ನಲ್ಲಿ ಸಿನಿಮಾ ಸ್ಟ್ರೀಮಿಂಗ್ ಎನ್ನುವ ಚರ್ಚೆ ಕೂಡ ಇದೆ. ಆದರೆ ಯಾವಾಗ ಎನ್ನುವುದು ಶೀಘ್ರದಲ್ಲೇ ರಿವೀಲ್ ಆಗಲಿದೆ.

More from Filmibeat

English summary
Prithviraj Sukumaran's Aadujeevitham - The Goat life Ott Straming Details;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X