OTT Releases this Week; 'ಆಡುಜೀವಿತಂ' ಜೊತೆ ಈ ವಾರ 20 ಸಿನಿಮಾ, ಸೀರಿಸ್ ಓಟಿಟಿಗೆ ಎಂಟ್ರಿ
ದೊಡ್ಡ ದೊಡ್ಡ ಸಿನಿಮಾಗಳು ಪ್ರೇಕ್ಷಕರನ್ನು ರಂಜಿಸುವಲ್ಲಿ ವಿಫಲವಾಗುತ್ತಿವೆ. ಪ್ಯಾನ್ ಇಂಡಿಯಾ ಲೆಕ್ಕಾಚಾರ ಎಲ್ಲಾ ಸಲ ಸಕ್ಸಸ್ ಆಗಲ್ಲ. ಕಮಲ್ ಹಾಸನ್ ನಟನೆಯ 'ಇಂಡಿಯನ್-2' ಪ್ರೇಕ್ಷಕರನ್ನು ರಂಜಿಸುವಲ್ಲಿ ವಿಫಲವಾಗಿದೆ. 'ಸುರರೈಪೊಟ್ರು' ಹಿಂದಿ ರೀಮೆಕ್ 'ಸರ್ಫಿರಾ' ಕೂಡ ಮುಗ್ಗರಿಸಿದೆ.
ಸದ್ಯ ಚಿತ್ರಮಂದಿರಗಳಲ್ಲಿ 'ಕಲ್ಕಿ 2898 AD' ಆರ್ಭಟವೇ ಮುಂದುವರೆದಿದೆ. ಸದ್ಯಕ್ಕೆ ಯಾವುದೇ ದೊಡ್ಡ ಸಿನಿಮಾ ತೆರೆಗೆ ಬರುವ ಲಕ್ಷಣಗಳು ಕಾಣುತ್ತಿದೆ. ಆಗಸ್ಟ್‌ನಲ್ಲೇ ಸ್ಟಾರ್ ನಟರ ಸಿನಿಮಾಗಳು ತೆರೆಗೆ ಬರುತ್ತಿವೆ. ಅಲ್ಲಿಯವರೆಗೆ ಓಟಿಟಿಯಲ್ಲಿ ಸಿನಿಮಾ, ಸೀರಿಸ್ ನೋಡೊದೇ ಉತ್ತಮ ಎಂದು ಕೆಲವರು ಅಂದುಕೊಂಡಿದ್ದಾರೆ.

ಈ ವಾರ ಇಂಟ್ರೆಸ್ಟಿಂಗ್ ಸಿನಿಮಾ ಹಾಗೂ ವೆಬ್ ಸೀರಿಸ್‌ಗಳು ಓಟಿಟಿಗೆ ಎಂಟ್ರಿ ಕೊಡುತ್ತಿವೆ. ಬಹಳ ದಿನಗಳಿಂದ ಕಾಯುತ್ತಿದ್ದ ಮಲಯಾಳಂನ 'ಆಡುಜೀವಿತಂ' ಸಿನಿಮಾ ಇದೇ ಶುಕ್ರವಾರ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆರಂಭಿಸಲಿದೆ.
ನೆಟ್‌ಫ್ಲಿಕ್ಸ್
1. ಆಡುಜೀವಿತಂ
ಬ್ಲೆಸ್ಸಿ ನಿರ್ದೇಶನದ ಸರ್ವೈವಲ್ ಡ್ರಾಮಾ 'ಆಡುಜೀವಿತಂ' ಸಿನಿಮಾ ಈ ವರ್ಷ ಹಿಟ್ ಆಗಿತ್ತು. ಮಾರ್ಚ್ 28ಕ್ಕೆ ತೆರೆಗಪ್ಪಳಿಸಿದ್ದ ಸಿನಿಮಾ ಪ್ರೇಕ್ಷಕರ ಮನಗೆದ್ದಿತ್ತು. 80 ಕೋಟಿ ರೂ. ಬಜೆಟ್ ಸಿನಿಮಾ 160 ಕೋಟಿ ರೂ.ಗೂ ಅಧಿಕ ಗಳಿಕೆ ಕಂಡಿತ್ತು. ನೈಜ ಘಟನೆ ಆಧರಿಸಿ ಬರೆದ ಕಾದಂಬರಿಯನ್ನು ತೆರೆಗೆ ತರಲಾಗಿತ್ತು. ಪೃಥ್ವಿರಾಜ್ ಸುಕುಮಾರ್ ನಟನೆಗೆ ಪ್ರೇಕ್ಷಕರು ಫಿದಾ ಆಗಿದ್ದರು.
2. ಇಂಡಿಯನ್
ಕಮಲ್ ಹಾಸನ್ ನಟನೆಯ 'ಇಂಡಿಯನ್-2' ಸಿನಿಮಾ ಕಳೆದ ವಾರ ತೆರೆಕಂಡಿದೆ. ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಶಂಕರ್ ನಿರ್ದೇಶನದ ಸಿನಿಮಾ ಹಳೇ ಮ್ಯಾಜಿಕ್ ರಿಪೀಟ್ ಮಾಡುವಲ್ಲಿ ವಿಫಲವಾಗಿದೆ. ಮತ್ತೊಂದು ಕಡೆ 1996ರಲ್ಲಿ ಬಂದಿದ್ದ 'ಇಂಡಿಯನ್' ಸಿನಿಮಾ ಇಂದಿನಿಂದ(ಜುಲೈ 15) ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ. 28 ವರ್ಷಗಳ ಹಿಂದೆ ಈ ಚಿತ್ರದಲ್ಲಿ ಕಮಲ್ ಡಬಲ್ ರೋಲ್‌ನಲ್ಲಿ ನಟಿಸಿದ್ದರು.
3. ತ್ರಿಭುವನ್ ಮಿಶ್ರಾ ಸಿಎ ಟಾಪರ್(ಹಿಂದಿ ವೆಬ್ ಸೀರಿಸ್) ಜುಲೈ 18
4. ಫೈಂಡ್ ಮಿ ಫಾಲಿಂಗ್(ಇಂಗ್ಲೀಷ್ ಸಿನಿಮಾ) ಜುಲೈ 19
5. ಸ್ಕೈ ವಾಕರ್ಸ್: ಎ ಲವ್ ಸ್ಟೋರಿ(ಇಂಗ್ಲೀಷ್ ಸಿನಿಮಾ) ಜುಲೈ 19
6. ಸ್ವೀಟ್ ಹೋಂ ಸೀಸನ್-3(ಕೊರಿಯನ್ ಸೀರಿಸ್) ಜುಲೈ 19
7. ಕೋಬ್ಲಾ ಕಾಯ್ ಸೀಸನ್ 6 ಪಾರ್ಟ್-1 (ಇಂಗ್ಲೀಷ್ ಸೀರಿಸ್) ಜುಲೈ 18
8. ವಾಂಡರುಸ್(ಇಂಗ್ಲೀಷ್ ಸೀರಿಸ್) ಜುಲೈ 15

ಜಿಯೋ ಸಿನಿಮಾ
1. ಮಿಸ್ಟರ್ ಬಿಗ್ ಸ್ಟಫ್(ಇಂಗ್ಲೀಷ್ ಸೀರಿಸ್) ಜುಲೈ 18
2. ಕುಂಗ್‌ಫೂ ಪಾಂಡ 4 (ಇಂಗ್ಲೀಷ್ ಸಿನಿಮಾ) ಜುಲೈ 15
3. ಐಎಸ್‌ಎಸ್ (ಇಂಗ್ಲೀಷ್ ಸಿನಿಮಾ) ಜುಲೈ 19
ಹಾಟ್‌ಸ್ಟರ್
1. ನಾಗೇಂದ್ರನ್ಸ್ ಹನಿಮೂನ್ಸ್(ಮಲಯಾಳಂ ಸೀರಿಸ್) ಜುಲೈ 19
ಜೀ5
1. ಬರ್ಜಾಕ್(ಹಿಂದಿ ಸೀರಿಸ್) ಜುಲೈ 19
2. ಬಹಿಷ್ಕರಣ(ತೆಲುಗು ಸೀರಿಸ್) ಜುಲೈ 19
ಅಮೇಜಾನ್ ಪ್ರೈಂ
1. ಕರಟಕ ದಮನಕ
ಕಳೆದ ಶುಕ್ರವಾರ ಕನ್ನಡದ 'ಕರಟಕ ದಮನಕ' ಸಿನಿಮಾ ಅಮೇಜಾನ್ ಪ್ರೈಂನಲ್ಲಿ ರಿಲೀಸ್ ಆಗಿದೆ. ಶಿವರಾಜ್‌ಕುಮಾರ್ ಹಾಗೂ ಪ್ರಭುದೇವ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಯೋಗರಾಜ್ ಭಟ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ರಾಕ್‌ಲೈನ್ ವೆಂಕಟೇಶ್ ಚಿತ್ರಕ್ಕೆ ಬಂಡವಾಳ ಹೂಡಿದ್ದರು. 3 ತಿಂಗಳ ಬಳಿಕ ಸಿನಿಮಾ ಓಟಿಟಿಗೆ ಬಂದಿದೆ.
2. ಬೆಟ್ಟಿ ಲಾ ಫಿ(ಸ್ಪ್ಯಾನಿಷ್ ಸೀರಿಸ್) ಜುಲೈ 19
3. ಮೈ ಸ್ಪೈ: ದಿ ಎಟರ್ನಲ್ ಸಿಟಿ(ಇಂಗ್ಲೀಷ್ ಸಿನಿಮಾ) ಜುಲೈ 18


Click it and Unblock the Notifications











