For Quick Alerts
  ALLOW NOTIFICATIONS  
  For Daily Alerts

  'ಕಾಫಿ ವಿತ್ ಕರಣ್'ಗೆ ಬರುತ್ತಿದ್ದಾರೆ ಅಮೀರ್ ಖಾನ್: ಶಾರುಖ್, ಸಲ್ಮಾನ್ ಬರ್ತಾರಾ?

  |

  'ಕಾಫಿ ವಿತ್ ಕರಣ್'ಗೆ ಬರುತ್ತಿದ್ದಾರೆ ಅಮೀರ್ ಖಾನ್: ಶಾರುಖ್, ಸಲ್ಮಾನ್ ಬರ್ತಾರಾ?
  'ಕಾಫಿ ವಿತ್ ಕರಣ್' ಸೀಸನ್ 07 ಪ್ರಾರಂಭವಾಗಿದೆ. ಡಿಸ್ನಿ ಹಾಟ್‌ಸ್ಟಾರ್ ಒಟಿಟಿಯಲ್ಲಿ ಶೋ ಪ್ರಸಾರವಾಗುತ್ತಿದ್ದು, ಈಗಾಗಲೇ ಒಂದು ಎಪಿಸೋಡ್ ಪ್ರಸಾರವೂ ಆಗಿದೆ. ಮೊದಲ ಎಪಿಸೋಡ್‌ನಲ್ಲಿ ಆಲಿಯಾ ಭಟ್ ಹಾಗೂ ರಣ್ವೀರ್ ಸಿಂಗ್ ಭಾಗವಹಿಸಿದ್ದರು.

  'ಕಾಫಿ ವಿತ್ ಕರಣ್' ಎಪಿಸೋಡ್‌ನಲ್ಲಿ ಏನು ಚರ್ಚೆ ಆಗುತ್ತದೆ, ಯಾವ ಗಾಳಿ ಸುದ್ದಿ ಹೊರಗೆ ಬರುತ್ತದೆ ಎಂಬುದರ ಜೊತೆಗೆ ಯಾರ್ಯಾರು ಅತಿಥಿಗಳು ಬರುತ್ತಾರೆ ಎಂಬುದು ಸಹ ಸದಾ ಕುತೂಹಲದ ವಿಷಯ.

  ಈ ಬಾರಿ 'ಕಾಫಿ ವಿತ್ ಕರಣ್'ನ ನಿರೂಪಕ ಕರಣ್ ಜೋಹರ್ ಈ ಬಾರಿ ಹಲವು ಅತಿಥಿಗಳನ್ನು ಶೋಗೆ ಆಹ್ವಾನಿಸಿದ್ದಾರೆ. ದಕ್ಷಿಣದ ಕೆಲವು ನಟರನ್ನೂ ಆಹ್ವಾನಿಸಿದ್ದಾರೆ. ಶೋಗೆ ಯಾರ್ಯಾರು ಅತಿಥಿಗಳು ಬರಲಿದ್ದಾರೆ ಎಂಬುದರ ಝಲಕ್ ಶೋನ ಟೀಸರ್‌ನಲ್ಲಿ ಈಗಾಗಲೇ ಸಿಕ್ಕಿದೆ. ಆದರೆ ಕೆಲವು ಪ್ರಮುಖ ಅತಿಥಿಗಳ ಎಪಿಸೋಡ್‌ ಅನ್ನು ಟೀಸರ್‌ನಲ್ಲಿ ತೋರಿಸಲಾಗಿಲ್ಲ ಎನ್ನಲಾಗುತ್ತಿದೆ.

  ಟೀಸರ್‌ನಲ್ಲಿ ಅಮೀರ್ ಖಾನ್ ಎಪಿಸೋಡ್‌ನ ದೃಶ್ಯವಿಲ್ಲ

  ಟೀಸರ್‌ನಲ್ಲಿ ಅಮೀರ್ ಖಾನ್ ಎಪಿಸೋಡ್‌ನ ದೃಶ್ಯವಿಲ್ಲ

  ಈಗ ಬಿಡುಗಡೆ ಆಗಿರುವ ಟೀಸರ್‌ನಲ್ಲಿ ಅಮೀರ್ ಖಾನ್‌ರ ಎಪಿಸೋಡ್‌ನ ಯಾವುದೇ ದೃಶ್ಯವಿಲ್ಲ. ಆದರೆ ಮೂಲಗಳ ಪ್ರಕಾರ ಅಮೀರ್ ಖಾನ್ 'ಕಾಫಿ ವಿತ್ ಕರಣ್' ಶೋನಲ್ಲಿ ಭಾಗವಹಿಸುತ್ತಾರೆ ಎನ್ನಲಾಗಿದೆ. ಅಮೀರ್ ಖಾನ್ ಸಾಮಾನ್ಯವಾಗಿ ಯಾವುದೇ ರಿಯಾಲಿಟಿ ಶೋ, ಅವಾರ್ಡ್ ಫಂಕ್ಷನ್, ಟಾಕ್ ಶೋಗಳಲ್ಲಿ ಭಾಗವಹಿಸುವುದಿಲ್ಲ. ಹಾಗಾಗಿ ಕಾಫಿ ವಿತ್ ಕರಣ್‌ ಶೋ ಅಂಥಹಾ ಗಾಸಿಪ್ ಟಾಕ್ ಶೋಗೆ ಅಮೀರ್ ಬರುತ್ತಿರುವುದು ಸಹಜವಾಗಿಯೇ ಕುತೂಹಲ ಕೆರಳಿಸಿದೆ.

  ಮೂರು ಬಾರಿ ಕಾಫಿ ವಿತ್ ಕರಣ್‌ಗೆ ಬಂದಿದ್ದರು ಅಮೀರ್

  ಮೂರು ಬಾರಿ ಕಾಫಿ ವಿತ್ ಕರಣ್‌ಗೆ ಬಂದಿದ್ದರು ಅಮೀರ್

  ಅಮೀರ್ ಖಾನ್ ಮೂರು ಬಾರಿ ಕಾಫಿ ವಿತ್ ಕರಣ್‌ ಶೋಗೆ ಬಂದಿದ್ದರು. ಆಗ 'ಕಾಫಿ ವಿತ್ ಕರಣ್' ಶೋ ಬಹಳ ಓವರ್‌ ರೇಟೆಡ್ ಎಂದಿದ್ದರು. ಹಾಗೂ ಕರಣ್ ಜೋಹರ್ ನಿರ್ದೇಶನದ 'ಕಭಿ ಖುಷಿ ಕಭಿ ಗಮ್' ಸಿನಿಮಾ ತಮಗೆ ಇಷ್ಟವಾಗಿರಲಿಲ್ಲ ಎಂದು ಸಹ ಹೇಳಿದ್ದರು. ಹಾಗಾಗಿ ಅಮೀರ್ ಖಾನ್ ಮತ್ತೊಮ್ಮೆ ಕಾಫಿ ವಿತ್ ಕರಣ್‌ ಶೋಗೆ ಬರಲಾರರು ಎನ್ನಲಾಗಿತ್ತು, ಆದರೆ ಆಶ್ಚರ್ಯಕರವಾಗಿ ಅಮೀರ್ ಈ ಬಾರಿ ಶೋಗೆ ಬರುತ್ತಿದ್ದಾರೆ.

  ಸಿನಿಮಾ ಪ್ರಚಾರಕ್ಕಾಗಿ ಬರುತ್ತಿದ್ದಾರೆ ಅಮೀರ್

  ಸಿನಿಮಾ ಪ್ರಚಾರಕ್ಕಾಗಿ ಬರುತ್ತಿದ್ದಾರೆ ಅಮೀರ್

  ಆದರೆ ಅಮೀರ್ ಖಾನ್ ಈ ಬಾರಿ ಕಾಫಿ ವಿತ್ ಕರಣ್ ಶೋಗೆ ಬರುತ್ತಿರುವುದಕ್ಕೆ ಕಾರಣವೂ ಇದೆ. ಅವರು ತಮ್ಮ ಲಾಭಕ್ಕಾಗಿ ಅಷ್ಟೆ ಈ ಶೋಗೆ ಬರಲಿದ್ದಾರೆ. ಅಮೀರ್ ಖಾನ್ ನಟನೆಯ 'ಲಾಲ್ ಸಿಂಗ್ ಛಡ್ಡಾ' ಸಿನಿಮಾ ಆಗಸ್ಟ್ 11 ರಂದು ಬಿಡುಗಡೆ ಆಗಲಿದೆ. ಅಮೀರ್ ಖಾನ್ ಸೇರಿದಂತೆ ಚಿತ್ರತಂಡ ಈಗಾಗಲೇ ಪ್ರಚಾರ ಪ್ರಾರಂಭಿಸಿದೆ. ಪ್ರಚಾರದ ಭಾಗವಾಗಿ ಅಷ್ಟೆ ಅಮೀರ್ ಖಾನ್ ಈ ಶೋಗೆ ಬರಲಿದ್ದಾರೆ ಎನ್ನಲಾಗುತ್ತಿದೆ.

  ಸಲ್ಮಾನ್, ಶಾರುಖ್ ಬರುತ್ತಾರೆಯೇ?

  ಸಲ್ಮಾನ್, ಶಾರುಖ್ ಬರುತ್ತಾರೆಯೇ?

  ಅಮೀರ್ ಖಾನ್ ಬರುತ್ತಿರುವ ವಿಷಯ ಗೊತ್ತಾಗುತ್ತಿದ್ದಂರೆ ಸಲ್ಮಾನ್ ಖಾನ್, ಶಾರುಖ್ ಖಾನ್ ಸಹ ಬರುತ್ತಾರಾ? ಎಂಬ ಪ್ರಶ್ನೆ ಎದ್ದಿದೆ. ಆದರೆ ಮೂಲಗಳ ಪ್ರಕಾರ ಶಾರುಖ್ ಖಾನ್ ಈ ಬಾರಿ ಕಾಫಿ ವಿತ್ ಕರಣ್ ಶೋನಲ್ಲಿ ಭಾಗವಹಿಸುತ್ತಿಲ್ಲ. ಕರಣ್‌ ಜೋಹರ್‌ಗೆ ಶಾರುಖ್ ಖಾನ್ ಆತ್ಮೀಯರು, ಆದರೆ ಈ ಹಿಂದೆ ಕೆಲವು ಬಾರಿ ಶಾರುಖ್ ಈ ಶೋನಲ್ಲಿ ಭಾಗವಹಿಸಿದ್ದಾರೆ. ಅಸಲಿಗೆ ಈ ಶೋ ಪ್ರಾರಂಭವಾದಾಗ ಮೊದಲ ಅತಿಥಿಯೇ ಶಾರುಖ್ ಆಗಿದ್ದರು. ಇನ್ನು ಸಲ್ಮಾನ್ ಖಾನ್ ಸಹ ಈ ರೀತಿಯ ಗಾಸಿಪ್ ಆಧರಿತ ಶೋಗಳಿಂದ ದೂರವೇ ಉಳಿಯುತ್ತಾರೆ.

  English summary
  Actor Aamir Khan appearing in Koffee with Karan season 07 as guest. This is fourth time Aamir appearing in Koffee With Karan Show.
  Saturday, July 9, 2022, 23:34
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X