For Quick Alerts
  ALLOW NOTIFICATIONS  
  For Daily Alerts

  ಜನರ ಲೈಂಗಿಕತೆ ಕುರಿತು ಮಾತಾಡಿದಕ್ಕೆ ನಿಮ್ಮ ಅಮ್ಮ ಏನೂ ಹೇಳಲ್ವಾ? ಕರಣ್‌ಗೆ ಆಮಿರ್ ಪ್ರಶ್ನೆ!

  |

  ಕರಣ್ ಜೋಹರ್ ನಡೆಸಿಕೊಡುವ 'ಕಾಫಿ ವಿತ್ ಕರಣ್' ಸೀಸನ್ 7 ಟಾಕ್ ಶೋ ಹಲವು ದಿನಗಳಿಂದ ಭಾರಿ ಚರ್ಚೆಯಲ್ಲಿದೆ. ಈಗಾಗಲೇ ಐದು ಎಪಿಸೋಡ್‌ಗಳು ಒಟಿಟಿಯಲ್ಲಿ ಬಿಡುಗಡೆಯಾಗಿದ್ದು, ಐದನೇ ಸಂಚಿಕೆಯಲ್ಲಿ ಆಮಿರ್ ಖಾನ್ ಹಾಗೂ ಕರೀನಾ ಕಪೂರ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದಾರೆ.

  ಕರಣ್ ಜೋಹರ್ ಈ ಬಾರಿ ಒಟಿಟಿಗಾಗಿ 'ಕಾಫಿ ವಿತ್ ಕರಣ್' ಸೀಸನ್ 7 ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದಾರೆ. ಆದರೆ, ಕಳೆದ ಬಾರಿಗಿಂತ ಈ ಬಾರಿ ಕಾಫಿ ವಿತ್ ಕರಣ್ ಸಿಕ್ಕಾಪಟ್ಟೆ ಚರ್ಚೆಯಲ್ಲಿದೆ. ಈಗಾಗಲೇ ಕರಣ್ ಜೋಹರ್ ಕೇಳುವ ಪ್ರಶ್ನೆಗಳು ವಿವಾದಕ್ಕೂ ಸಿಲುಕಿವೆ. ಇದೇ ವಿಷಯವನ್ನು ಇಟ್ಟುಕೊಂಡು ಬಾಲಿವುಡ್ ಸೂಪರ್‌ಸ್ಟಾರ್ ಆಮಿರ್ ಖಾನ್ ಕಾರ್ಯಕ್ರಮದ ನಿರೂಪಕ ಕರಣ್‌ ಜೋಹರ್‌ಗೆ ಟಾಂಗ್ ಕೊಟ್ಟಿದ್ದಾರೆ.

  ನಾಗಚೈತನ್ಯ-ಸಮಂತಾ ವಿಚ್ಛೇದನಕ್ಕೆ ಆಮಿರ್ ಖಾನ್ ಕಾರಣ: ಅವರದ್ದು ಬ್ಲ್ಯಾಕ್ ಹಾರ್ಟ್!ನಾಗಚೈತನ್ಯ-ಸಮಂತಾ ವಿಚ್ಛೇದನಕ್ಕೆ ಆಮಿರ್ ಖಾನ್ ಕಾರಣ: ಅವರದ್ದು ಬ್ಲ್ಯಾಕ್ ಹಾರ್ಟ್!

  ಎಂದಿನಂತೆ ಕರಣ್ ಜೋಹರ್ ಈ ಬಾರಿ ಹಲವು ಸೆಲೆಬ್ರೆಟಿಗಳನ್ನು ಕಾರ್ಯಕ್ರಮಕ್ಕೆ ಕರೆತಂದಿದ್ದಾರೆ. ಈ ವೇಳೆ ಅವರೆಲ್ಲರಿಗೂ ಅವರ ವೈಯಕ್ತಿಕ ಬದುಕಿನ ಬಗ್ಗೆ ಕೆದುಕಿ ಕೆದುಕಿ ಪ್ರಶ್ನೆಗಳನ್ನು ಕೇಳಿದ್ದರು. ಪ್ರತಿಬಾರಿಯೂ ಕರಣ್ ಜೋಹರ್ ಇಂತಹ ಪ್ರಶ್ನೆಗಳನ್ನು ಕೇಳಿದಾಗಲೆಲ್ಲಾ ವಿವಾದಕ್ಕೆ ಒಳಗಾಗಿದ್ದಾರೆ. ಇದೇ ವಿಷಯವನ್ನಿಟ್ಟುಕೊಂಡು ಆಮಿರ್ ಖಾನ್, ನಿರೂಪಕ-ನಿರ್ಮಾಪಕ ಕರಣ್ ಕಾಲೆಳೆದಿದ್ದಾರೆ.

  ಆಮಿರ್ ಖಾನ್-ಕರೀನಾ ಕಪೂರ್ ಗೆಸ್ಟ್

  ಆಮಿರ್ ಖಾನ್-ಕರೀನಾ ಕಪೂರ್ ಗೆಸ್ಟ್

  ಸೆಲೆಬ್ರೆಟಿಗಳು ಕರಣ್‌ ಜೋಹರ್ ಕಾರ್ಯಕ್ರಮ 'ಕಾಫಿ ವಿತ್ ಕರಣ್‌'ನಲ್ಲಿ ಓಪನ್ ಆದಂತೆ ಬೇರೆ ಯಾವುದೇ ಶೋನಲ್ಲೂ ಮುಕ್ತವಾಗಿ ಮಾತಾಡುವುದಿಲ್ಲ. ಇತ್ತ ಕರಣ್ ಜೋಹರ್‌ ಕೂಡ ಮುಕ್ತವಾಗಿ ಪ್ರಶ್ನೆ ಮಾಡುವುದನ್ನು ನಿಲ್ಲಿಸುವುದಿಲ್ಲ. ಯುವ ನಟ-ನಟಿಯರೇ ಹೆಚ್ಚಾಗಿ ಬರುವ ಈ ಕಾರ್ಯಕ್ರಮಗಳಿಗೆ ಕರಣ್ ಕೆಲವು ವೈಯಕ್ತಿಕ ಪ್ರಶ್ನೆಗಳನ್ನು ಕೇಳಿ ಪೇಚಿಗೆ ಸಿಲುಕಿಸುತ್ತಿದ್ದರು. ಈಗ 5ನೇ ಸಂಚಿಕೆಯಲ್ಲಿ ಆಮಿರ್ ಖಾನ್ ಹಾಗೂ ಕರೀನಾ ಕಪೂರ್ ಆಗಮಿಸಿದ್ದು, ಕರಣ್ ಜೋಹರ್ ಕಾಲೆಳೆದಿದ್ದಾರೆ.

  ವೈಯಕ್ತಿಕ ಬದುಕಿನ ಬಗ್ಗೆ ಪ್ರಶ್ನೆ ಯಾಕೆ?

  ವೈಯಕ್ತಿಕ ಬದುಕಿನ ಬಗ್ಗೆ ಪ್ರಶ್ನೆ ಯಾಕೆ?

  ಕಾಫಿ ವಿತ್ ಕರಣ್ ಸೀಸನ್ 7ರಲ್ಲಿ ಕರಣ್ ಜೋಹರ್ ಒಂದು ಹೆಜ್ಜೆ ಮುಂದಿಟ್ಟಿದ್ದಾರೆ. ಒಟಿಟಿಯಲ್ಲಿ ಕಾರ್ಯಕ್ರಮ ಬರುತ್ತಿದೆ ಅನ್ನೋ ಕಾರಣಕ್ಕೋ ಏನೋ ಕರಣ್ ಜೋಹರ್ ಗಡಿದಾಟಿದ್ದಾರೆ ಅನ್ನೋ ಆರೋಪವಿದೆ. ಕರಣ್ ತಮ್ಮ ಕಾರ್ಯಕ್ರಮಕ್ಕೆ ಬರುವ ಸೆಲೆಬ್ರೆಟಿಗಳಿಗೆ ಅವರ ಸೆ*ಕ್ಸ್ ಲೈಫ್‌ಗೆ ಸಂಬಂಧಿಸಿದ ಪ್ರಶ್ನೆಗಳನ್ನೇ ಯಾಕೆ ಕೇಳುತ್ತಾರೆ? ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗಿದ್ದೂ, ಇದೆ. ಇತ್ತ ಉತ್ತರ ಕೊಟ್ಟ ಸೆಲೆಬ್ರೆಟಿಗಳನ್ನು ತರಾಟೆ ತೆಗೆದುಕೊಂಡಿದ್ದೂ ಇದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಆಮಿರ್ ಖಾನ್ ಟಾಂಗ್ ಕೊಟ್ಟಿದ್ದಾರೆ.

  ನಿಮ್ಮ ಅಮ್ಮ ಏನೂ ಹೇಳಲ್ವಾ?

  ಆಮಿರ್ ಖಾನ್ ಹಾಗೂ ಕರೀನಾ ಕಪೂರ್ 'ಕಾಫಿ ವಿತ್ ಕರಣ್ ಸೀಸನ್ 7'ರ 5ನೇ ಸಂಚಿಕೆಗೆ ಆಗಮಿಸಿದ್ದರು. ಈ ವೇಳೆ ಕರಣ್ ಜೋಹರ್ ಅತಿಥಿ ಕರೀನಾ ಕಪೂರ್‌ ಖಾನ್‌ಗೆ " ಮಗು ಪಡೆದ ಬಳಿಕ ನಿಮ್ಮ ಲೈಂಗಿಕ ಜೀವನ ಹೇಗಿದೆ?" ಎಂದು ಪ್ರಶ್ನೆ ಮಾಡಿದ್ದರು. ಆಗ ಕರೀನಾ ಕಪೂರ್ ನಿರೂಪಕ ಕರಣ್ ಪರ್ಸನಲ್ ಲೈಫ್‌ ಬಗ್ಗೆ ಮಾತಾಡಿದ್ದರು. ಆಗ ದಿಢೀರನೇ ಕರಣ್ " ನಾನು ಆ ಬಗ್ಗೆ ಮಾತಾಡೋಲ್ಲ. ಮನೆಯಲ್ಲಿ ನನ್ನ ತಾಯಿ ಈ ಶೋ ನೋಡುತ್ತಾರೆ." ಎಂದು ಪ್ರಶ್ನೆ ಮಾಡಿದ್ದರು. ಆಗ ದಿಢೀರನೇ ಆಮಿರ್ " ನೀವು ಬೇರೆಯವರ ಸೆ*ಕ್ಸ್ ಲೈಫ್ ಬಗ್ಗೆ ಮಾತಾಡಿದರೆ, ನಿಮ್ಮ ಅಮ್ಮ ಏನೂ ಅಂದುಕೊಳ್ಳೋದಿಲ್ವಾ?" ಎಂದು ತಿರುಗೇಟು ನೀಡಿದ್ದರು. ಅದೇ ವಿಡಿಯೋ ಈ ವೈರಲ್ ಆಗುತ್ತಿದೆ.

  'ಲಾಲ್ ಸಿಂಗ್ ಚಡ್ಡಾ' ಪ್ರಚಾರಕ್ಕೆ ಬಂದಿದ್ದ ಜೋಡಿ

  'ಲಾಲ್ ಸಿಂಗ್ ಚಡ್ಡಾ' ಪ್ರಚಾರಕ್ಕೆ ಬಂದಿದ್ದ ಜೋಡಿ

  ಆಮಿರ್ ಖಾನ್ ನಟಿಸಿದ ಸಿನಿಮಾ 'ಲಾಲ್ ಸಿಂಗ್ ಚಡ್ಡಾ' ಇದೇ ಆಗಸ್ಟ್ 11ರಂದು ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ. ಈ ಬೆನ್ನಲ್ಲೇ ಆಮಿರ್ ಈಗಾಗಲೇ ಪ್ರಚಾರ ಆರಂಭಿಸಿದ್ದಾರೆ. ಇದರ ಒಂದು ಭಾಗವಾಗಿ ಆಮಿರ್ ಖಾನ್ ಹಾಗೂ ಕರೀನಾ ಕಪೂರ್ ಖಾನ್ ಇಬ್ಬರೂ 'ಕಾಫಿ ವಿತ್ ಕರಣ್' ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಈ ವೇಳೆ ಸದಾ ಸೆಲೆಬ್ರೆಟಿಗಳ ಕಾಲೆಳೆಯೋ ಕರಣ್ ಜೋಹರ್‌ರನ್ನೇ ರೋಸ್ಟ್ ಮಾಡಿದ್ದಾರೆ ಆಮಿರ್ ಖಾನ್.

  English summary
  Aamir Khan Comments On Karan Johar Personal Life Question In Koffee With Karan, Know More.
  Tuesday, August 2, 2022, 20:28
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X