ಪ್ರೇಕ್ಷಕರ ಮೇಲೆ ನಂಬಿಕೆ, ಗೆಲ್ಲುವ ವಿಶ್ವಾಸ ; ₹120 ಕೋಟಿ ಆಫರ್ ರಿಜೆಕ್ಟ್ ಮಾಡಿದ ಆಮಿರ್ ಖಾನ್..!

ಹಿಂದೆ ಒಂದು ಕಾಲ ಇತ್ತು. ಆ ಕಾಲದಲ್ಲಿ ಚಿತ್ರವನ್ನು ಪ್ರೇಕ್ಷಕರು ಚಿತ್ರಮಂದಿರದಲ್ಲಿಯೇ ನೋಡುತ್ತಿದ್ದರು. ನಗರದ ಸುತ್ತಮುತ್ತ ಇದ್ದ ಹಳ್ಳಿಯ ಜನ ಟ್ರ್ಯಾಕ್ಟರ್.. ಎತ್ತಿನ ಬಂಡಿಯಲ್ಲಿ ಬಂದು ತಮ್ಮ ನೆಚ್ಚಿನ ನಾಯಕನ-ನಿರ್ದೇಶಕನ-ನಾಯಕಿಯ ಚಿತ್ರವನ್ನು ಕಣ್ತುಂಬಿಕೊಳ್ಳುತ್ತಿದ್ದರು. ಆದರೆ.. ಈಗ ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಅಂಗೈಯಲ್ಲಿಯೇ ಮನರಂಜನೆ ಇದೆ. ಚಿತ್ರಮಂದಿರದಲ್ಲಿ ಚಿತ್ರ ನೋಡಲು ಆಗದೇ ಇದ್ದರೆ ಟಿವಿಯಲ್ಲಿ ಬರುವವರೆಗೆ ಈಗ ಕಾಯಬೇಕು ಅಂತೇನು ಇಲ್ಲ.

ಚಿತ್ರ ಇನ್ನೂ ಚಿತ್ರಮಂದಿರದಲ್ಲಿಯೇ ಇರುತ್ತೆ. ಅಷ್ಟರಲ್ಲಿಯೇ ಮನೆಯಲ್ಲಿಯೇ ಅಥವಾ ತಾವು ಇರುವ ಜಾಗದಲ್ಲಿ ಕುಳಿತು ಚಿತ್ರವನ್ನು ನೋಡುವ ವ್ಯವಸ್ಥೆ ಈಗ ಲಭ್ಯ ಇದೆ. ಚಿತ್ರಮಂದಿರ ಮತ್ತು ಪ್ರೇಕ್ಷಕರ ನಡುವೆ ಇದ್ದ ಭಾವನಾತ್ಮಕವಾದ ಸಂಬಂಧವನ್ನು ಓಟಿಟಿ ವೇದಿಕೆಗಳು ಕಡಿತಗೊಳಿಸಿವೆ.

aamir-khans-big-bet-turning-down-120-cr-for-sitaare-zameen-par

ಚಿತ್ರರಂಗದಲ್ಲಿ ಕೂಡ ಅನೇಕರು ಈ ಸತ್ಯವನ್ನು ಒಪ್ಪಿಕೊಂಡು ಕಾಲದ ಜೊತೆ ಹೆಜ್ಜೆ ಹಾಕುತ್ತಿದ್ದಾರೆ. ಲಾಭ-ನಷ್ಟದ ಲೆಕ್ಕಾಚಾರ ಹಾಕುತ್ತಾ ಮನರಂಜನೆಯ ಕೀಲಿ ಕೈಯನ್ನು ಓಟಿಟಿಯವರ ಕೈಗೆ ನೀಡಿ ಸುಮ್ಮನಾಗಿದ್ದಾರೆ.

ಹೀಗಿರುವಾಗ ಬಾಲಿವುಡ್‌ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮಿರ್ ಖಾನ್ ಈ ಸಂಪ್ರದಾಯ ಮುರಿಯಲು ಸಜ್ಜಾಗಿದ್ದಾರೆ. ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಮರಳಿ ಕರೆತರುವ ಶಪಥ ಮಾಡಿದ್ದಾರೆ. ಇದಕ್ಕೆ ಕೈಗನ್ನಡಿ ಎಂಬಂತೆ ಸದ್ಯ ಆಮಿರ್ ಖಾನ್ 120 ಕೋಟಿಯ ಆಫರ್‌ನ ನಿರಾಕರಿಸಿದ್ದಾರೆ.

ಹೌದು, ಆಮಿರ್ ಖಾನ್ ಅಭಿನಯದ ಸಿತಾರೆ ಜಮೀನ್ ಪರ್ ಚಿತ್ರ ಇದೇ ಜೂನ್ 20ಕ್ಕೆ ತೆರೆಗೆ ಬರಲಿದೆ. ಈ ಹಿನ್ನೆಲೆ ಚಿತ್ರದ ಪ್ರಚಾರ ಮಾಡುತ್ತಿರುವ ಆಮಿರ್ ಖಾನ್‌ಗೆ ಅಮೆಜಾನ್ ಪ್ರೈಂ ಚಿತ್ರದ ಹಕ್ಕುಗಳನ್ನು ತಮಗೆ ನೀಡುವಂತೆ ₹120 ಕೋಟಿ ಹಣದಾಸೆ ತೋರಿಸಿದೆ. ಆದರೆ.. ಆಮಿರ್ ಖಾನ್ ಮಾತ್ರ ಅಮೆಜಾನ್‌ ಪ್ರೈಂನವರ ಈ ಆಮಿಷಕ್ಕೆ ಬಲಿಯಾಗಿಲ್ಲ. ಬದಲಿಗೆ ತಮ್ಮ ಚಿತ್ರದ ರೈಟ್ಸ್‌ಗಳನ್ನು ಕೊಡದಿರಲು ನಿರ್ಧಾರ ಮಾಡಿದ್ದಾರೆ.

aamir-khans-big-bet-turning-down-120-cr-for-sitaare-zameen-par

ಈ ಕುರಿತು ಮಾಹಿತಿಯನ್ನು ಹಂಚಿಕೊಂಡಿರುವ ಬಾಲಿವುಡ್‌ನ ಟ್ರೇಡ್ ವಿಶ್ಲೇಷಕ ಕೋಮಲ್ ನಹ್ತಾ ಚಿತ್ರವನ್ನು ಪ್ರೇಕ್ಷಕರು ಮೊದಲಿನಂತೆ ಚಿತ್ರಮಂದಿರದಲ್ಲಿಯೇ ನೋಡಬೇಕೆನ್ನುವುದು ಆಮಿರ್ ಖಾನ್ ಅವರ ಹೆಬ್ಬಯಕೆ. ಓಟಿಟಿಗೆ ಒಗ್ಗಿಕೊಂಡ ಪ್ರೇಕ್ಷಕರನ್ನು ಮರಳಿ ಚಿತ್ರಮಂದಿರಕ್ಕೆ ಕರೆತುರವ ಪ್ರಯತ್ನವನ್ನು ಈ ಮೂಲಕ ಆಮಿರ್ ಖಾನ್ ಮಾಡುತ್ತಿದ್ದಾರೆ ಎಂದು ಹೇಳಿದ್ಧಾರೆ.

ಆಮಿರ್ ಜಾಗದಲ್ಲಿ ಬೇರೆ ಯಾರೇ ಇದ್ದರೂ ಕೂಡ ಬಂದ ಈ 120 ಕೋಟಿ ಆಫರ್‌ನ ಕಣ್ಮುಚ್ಚಿಕೊಂಡು ಒಪ್ಪಿಕೊಳ್ಳುತ್ತಿದ್ದರು ಎಂದಿರುವ ಕೋಮಲ್ ನಹ್ತಾ ಚಿತ್ರರಂಗದ ಹಿತ ದೃಷ್ಟಿಯಿಂದ.. ನಿರ್ಮಾಪಕರ ಹಿತ ದೃಷ್ಟಿಯಿಂದ.. ಆಮಿರ್ ಖಾನ್ ದಿಟ್ಟವಾದ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ.

ಆಮಿರ್ ಖಾನ್ ಅವರ ಈ ನಡೆ ಮುಂಬರುವ ದಿನಗಳಲ್ಲಿ ಬೇರೆ ನಿರ್ಮಾಪಕರಿಗೆ ಕೂಡ ಪ್ರೇರಣೆ ನೀಡಬಹುದು ಎಂದು ಹೇಳಿರುವ ಕೋಮಲ್ ನಹ್ತಾ ಒಂದು ವೇಳೆ ಆಮಿರ್ ಖಾನ್ ಅಂದುಕೊಂಡತೆ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬಾರದೇ ಇದ್ದಲ್ಲಿ.. ಸಿತಾರೆ ಜಮೀನ್ ಪರ್ ಚಿತ್ರವನ್ನು ಚಿತ್ರಮಂದಿರದಲ್ಲಿ ನೋಡದೇ ಇದ್ದಲ್ಲಿ.. ಆಮಿರ್ ಖಾನ್‌ಗೆ ₹120 ಕೋಟಿಯ ನಷ್ಟವಾಗಲಿದೆ ಎಂದು ಕೂಡ ಹೇಳಿದ್ದಾರೆ.

ಅಂದ್ಹಾಗೇ ಇದಕ್ಕೂ ಮುಂಚೆ ಆಮಿರ್ ಖಾನ್ ಅವರನ್ನು ನೆಟ್‌ಪ್ಲಿಕ್ಸ್ ಸಂಸ್ಥೆ ಸಂಪರ್ಕಿಸಿತ್ತು. ₹60 ಕೋಟಿ ನೀಡುವುದಾಗಿ ಹೇಳಿತ್ತು. ಆಗಲೂ ಕೂಡ ಆಮಿರ್ ಖಾನ್ ಒಪ್ಪಿರಲಿಲ್ಲ. ಹೀಗಾಗಿ ಈ ಜೂನ್‌ ಆರಂಭದಲ್ಲಿ ಮತ್ತೆ ಆಮಿರ್ ಖಾನ್ ಬೆನ್ನತ್ತಿದ್ದ ನೆಟ್‌ಪ್ಲಿಕ್ಸ್ ಸಂಸ್ಥೆ ₹125 ಕೋಟಿ ಕೊಡುವುದಾಗಿ ಹೇಳಿತ್ತು. ಆಗಲೂ ಕೂಡ ಆಮಿರ್ ಖಾನ್ ಓಟಿಟಿಗೆ ತಮ್ಮ ಚಿತ್ರವನ್ನು ನೀಡದಿರುವ ನಿರ್ಧಾರವನ್ನು ಬದಲಿಸಲಿಲ್ಲ ಎಂದು ಬಾಲಿವುಡ್‌ ಹಂಗಾಮಾ ವರದಿಯನ್ನು ಮಾಡಿದೆ.

More from Filmibeat

English summary
Aamir Khan has reportedly declined a whopping ₹120 crore offer from an OTT platform for 'Sitaare Zameen Par'. Get the full story on this unprecedented decision for his upcoming film.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X