ಈ 5 ಹೊಚ್ಚ ಹೊಸ ಕನ್ನಡ ಚಿತ್ರಗಳನ್ನು ಈಗ್ಲೇ ಅಮೇಜಾನ್‌ ಪ್ರೈಂನಲ್ಲಿ ನೋಡಿ!

ಓಟಿಟಿಯಲ್ಲಿ ಕನ್ನಡ ಕಂಟೆಂಟ್ ಸಿಗಲ್ಲ. ಅದಕ್ಕೆ ಬೇರೆ ಭಾಷೆ ಸಿನಿಮಾ, ಸೀರಿಸ್ ನೋಡುತ್ತೇವೆ ಎನ್ನುವವರೇ ಹೆಚ್ಚು. ಅದ್ಯಾಕೋ ಕನ್ನಡ ಸಿನಿಮಾಗಳನ್ನು ಕೊಂಡುಕೊಳ್ಳಲು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು ಹಿಂದೆ ಮುಂದೆ ನೋಡ್ತಿವೆ.

ಅಮೇಜಾನ್ ಪ್ರೈಂ ಮಾತ್ರ ಪೇ ಫಾರ್ ವೀವ್ ಪದ್ಧತಿಯಲ್ಲಿ ಒಂದಷ್ಟು ಸಿನಿಮಾಗಳನ್ನು ಕೊಂಡುಕೊಳ್ಳುತ್ತಿದೆ. ಅದೂ ಕೂಡ ಒಳ್ಳೆ ರೆಸ್ಪಾನ್ಸ್ ಸಿಕ್ಕ ಸಿನಿಮಾಗಳನ್ನು ಮಾತ್ರ. ಆದರೆ ಯಾವುದೇ ಅನೌನ್ಸ್‌ಮೆಂಟ್ ಇಲ್ಲೇ ಸಿನಿಮಾ ಅಪ್‌ಲೋಡ್ ಮಾಡುತ್ತಿದೆ. ಸಾಕಷ್ಟು ಜನರಿಗೆ ಆ ಸಿನಿಮಾ ಓಟಿಟಿಗೆ ಬಂದಿರೋದು ಗೊತ್ತಾಗಲ್ಲ.

Abbabba to Blink All new and recently added Kannada movies list on Amazon Prime Video

ಆಗೊಮ್ಮೆ ಈಗೊಮ್ಮೆ ಜೀ-5 ಹಾಗೂ ಡಿಸ್ನಿ ಹಾಟ್‌ಪ್ಲಸ್ ಕೂಡ ಕನ್ನಡ ಸಿನಿಮಾಗಳನ್ನು ಕೊಂಡುಕೊಳ್ಳುತ್ತವೆ. ಕಳೆದೊಂದು ವಾರದಿಂದ ಮೂರ್ನಾಲ್ಕು ಕನ್ನಡ ಸಿನಿಮಾಗಳು ಸದ್ದಿಲ್ಲದೇ ಸ್ಟ್ರೀಮಿಂಗ್ ಆಗುತ್ತಿದೆ. ಆ ಚಿತ್ರಗಳಿಗೆ ಒಳ್ಳೆ ರೆಸ್ಪಾನ್ಸ್ ಸಹ ಸಿಗುತ್ತಿದೆ. ಅಂತಹ ಸಿನಿಮಾಗಳ ಬಗ್ಗೆ ಮಾಹಿತಿ ಮುಂದೆ ಇದೆ ಓದಿ.

1. ಅಬ್ಬಬ್ಬ

ಕೆ. ಎಂ ಚೈತನ್ಯಾ ನಿರ್ದೇಶನದ 'ಅಬ್ಬಬ್ಬ' ಸಿನಿಮಾ ಸದ್ಯಕ್ಕೆ ಅಮೇಜಾನ್ ಪ್ರೈಂನಲ್ಲಿ ಲಭ್ಯವಿದೆ. ಆದರೆ ಬಾಡಿಗೆಗೆ ಪಡೆದು ಸಿನಿಮಾ ವೀಕ್ಷಿಸಬೇಕಿದೆ. ಧನರಾಜ್ ಆಚಾರ್, ಸುಧಾ ಬೆಳವಾಡಿ, ಸಿಹಿ ಕಹಿ ಚಂದ್ರು ಚಿತ್ರದ ತಾರಾಗಣದಲ್ಲಿದ್ದಾರೆ. ಫೆಬ್ರವರಿ 16ಕ್ಕೆ ಸಿನಿಮಾ ತೆರೆಕಂಡು ಒಳ್ಳೆ ರೆಸ್ಪಾನ್ಸ್ ಪಡೆದುಕೊಂಡಿತ್ತು. ಸದ್ಯ ಕೆಲವರು ಓಟಿಟಿಯಲ್ಲಿ ನೋಡಿ ಮೆಚ್ಚುಗೆ ಸೂಚಿಸುತ್ತಿದ್ದಾರೆ.

2. ಧರಣಿ ಮಂಡಲ ಮಧ್ಯದೊಳಗೆ

ಒಂದೂವರೆ ವರ್ಷದ ಹಿಂದೆ ತೆರೆಕಂಡಿದ್ದ 'ಧರಣಿ ಮಂಡಲ ಮಧ್ಯದೊಳಗೆ' ಸಿನಿಮಾ ಇದೀಗ ಅಮೇಜಾನ್ ಪ್ರೈಂನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಆದರೆ ಭಾರತದಲ್ಲಿ ಸಿನಿಮಾ ವೀಕ್ಷಣೆಗೆ ಸಿಗಲ್ಲ. ಯೂಸ್ ಹಾಗೂ ಯೂಕೆನಲ್ಲಿ ಮಾತ್ರ ವೀಕ್ಷಕರು ಬಾಡಿಗೆಗೆ ಪಡೆದು ಸಿನಿಮಾ ನೋಡುವ ಅವಕಾಶ ಇದೆ. ಶ್ರೀಧರ್ ಷಣ್ಮುಕ ನಿರ್ದೇಶನದ ಈ ಚಿತ್ರದಲ್ಲಿ ನವೀನ್ ಶಂಕರ್, ಐಶಾನಿ ಶೆಟ್ಟಿ ಸೇರಿದಂತೆ ಹಲವರು ನಟಿಸಿದ್ದರು. ಆದರೆ ಸಿನಿಮಾ ಈಗ ಪೈರಸಿ ಆಗಿದೆ.

Abbabba to Blink All new and recently added Kannada movies list on Amazon Prime Video

3. ಮಿ. ನಟ್ವರ್‌ಲಾಲ್

ಲವ ಕಗ್ಗೆರೆ ನಿರ್ದೇಶನದ ಮಿ. ನಟ್ವರ್‌ಲಾಲ್ ಸಿನಿಮಾ ಪ್ರೈಂ ವೀಡಿಯೊದಲ್ಲಿ ಬಾಡಿಗೆಗೆ ಸಿಗುತ್ತದೆ. ತನುಷ್ ಶಿವಣ್ಣ ಹಾಗೂ ಸೋನಲ್ ಮಂಥೆರೋ ಚಿತ್ರದ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಧರ್ಮ ವಿಶ್ ಸಂಗೀತ, ವಿಲಿಯಂ ಡೇವಿಡ್ ಛಾಯಾಗ್ರಹಣ ಚಿತ್ರದಕ್ಕಿದೆ.

4. ಬ್ಲಿಂಕ್

ಇತ್ತೀಚೆಗೆ ಬಹಳ ಸದ್ದು ಮಾಡಿದ 'ಬ್ಲಿಂಕ್' ಸಿನಿಮಾ ಕೂಡ ಪ್ರೈಂ ವೀಡಿಯೊದಲ್ಲಿದೆ. ಆದರೆ ಭಾರತದಲ್ಲಿ ವೀಕ್ಷಣೆಗೆ ಸಿಗಲ್ಲ. ಯುಎಸ್ ಹಾಗೂ ಯುಕೆ ಪ್ರೈಂ ಚಂದಾದಾರರು ಬಾಡಿಗೆಗೆ ಸಿನಿಮಾ ನೋಡಬಹುದು. ಆದರೆ ಅಲ್ಲಿ ಸಿನಿಮಾ ಸ್ಟ್ರೀಮಿಂಗ್ ಆಗುತ್ತಿದ್ದಂತೆ ಪೈರಸಿ ಆಗಿದೆ. ಟೆಲಿಗ್ರಾಂ ಸೇರಿದಂತೆ ಹಲವಡೆ ಲಿಂಕ್ ಸಿಗುತ್ತಿದೆ. ಸಿನಿಮಾ ನೋಡಿ ನಿಮಗೆ ಇಷ್ಟವಾದರೆ ನನಗೆ ಹಣ ಕಳುಹಿಸಿ ಎಂದು ನಿರ್ಮಾಪಕರು ಮನವಿ ಮಾಡಿದ್ದಾರೆ.

5. ಅವತಾರ ಪುರುಷ-2

ಸುನಿ ನಿರ್ದೇಶನದಲ್ಲಿ ಶರಣ್ ನಟನೆಯ 'ಅವತಾರ ಪುರುಷ-2' ಸಿನಿಮಾ ಕೂಡ ಅಮೇಜಾನ್ ಪ್ರೈಂಗೆ ಬಂದಿದೆ. ಆಶಿಕಾ ರಂಗನಾಥ್ ಚಿತ್ರದಲ್ಲಿ ನಾಯಕಿಯಾಗಿದ್ದು ಶ್ರೀನಗರ ಕಿಟ್ಟಿ, ಸಾಯಿಕುಮಾರ್ ಕೂಡ ತಾರಾಗಣದಲ್ಲಿದ್ದಾರೆ. ಚಿತ್ರದ ಪ್ರೀಕ್ವೆಲ್‌ಗೂ ಮಿಶ್ರ ಪ್ರತಿಕ್ರಿಯೆ ಸಿಕ್ಕಿತ್ತು. ಸೀಕ್ವೆಲ್ ಕೂಡ ದೊಡ್ಡದಾಗಿ ಸದ್ದು ಮಾಡಲಿಲ್ಲ. ಸದ್ಯ ಅಮೇಜಾನ್ ಪ್ರೈಂನಲ್ಲಿ ಸಿನಿಮಾ ವೀಕ್ಷಿಸಬಹುದಾಗಿದೆ.

More from Filmibeat

English summary
Best Kannada movies on Amazon Prime Video to watch now;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X