ದೊಡ್ಡ ಪರದೆಯಿಂದ ಸಣ್ಣ ಪರದೆಗೆ ಬಂದ ಅಭಿಷೇಕ್ ಬಚ್ಚನ್!
ಅಮಿತಾಬ್ ಬಚ್ಚನ್ ಪುತ್ರ ನಟ ಅಭಿಷೇಕ್ ಬಚ್ಚನ್ ದಿನೇ ದಿನೇ ಬಾಲಿವುಡ್‌ನಲ್ಲಿ ಅವಕಾಶಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಅವರಿಗೆ ಬಾಲಿವುಡ್‌ನಲ್ಲಿ ಅವಕಾಶಗಳು ಕಡಿಮೆ ಆಗುತ್ತಲೇ ಬರುತ್ತಿವೆ.
Recommended Video
ಆದರೆ ಅಭಿಷೇಕ್ ಅಭಿನಯವನ್ನು ಬಿಟ್ಟಿಲ್ಲ ಬದಲಿಗೆ ಪರದೆಯನ್ನು ಬದಲಾಯಿಸಿದ್ದಾರೆ! ಹೌದು, ದೊಡ್ಡ ಪರದೆ ಮೇಲೆ ನಟಿಸುತ್ತಿದ್ದ ಅಭಿಷೇಕ್ ಈಗ ಸಣ್ಣ ಮತ್ತು ಅತಿ ಸಣ್ಣ ಪರದೆ ಕಡೆ ಮುಖ ಮಾಡಿದ್ದಾರೆ.
ಅಭಿಷೇಕ್ ಬಚ್ಚನ್ ವೆಬ್‌ಸೀರೀಸ್ ನಲ್ಲಿ ನಟಿಸಿದ್ದಾರೆ. ಇದು ಅವರ ಮೊದಲ ವೆಬ್ ಸೀರೀಸ್ ಆಗಿದ್ದು, ವೆಬ್ ಸೀರೀಸ್ ಜುಲೈ 10 ಕ್ಕೆ ಅಮೆಜಾನ್ ಪ್ರೈಂ ನಲ್ಲಿ ಬಿಡುಗಡೆ ಆಗಲಿದೆ. ಈ ಬಗ್ಗೆ ಅವರೇ ಟ್ವಿಟ್ಟರ್‌ನಲ್ಲಿ ಸುದ್ದಿ ಹಂಚಿಕೊಂಡಿದ್ದು, ವೆಬ್ ಸೀರೀಸ್‌ನ ಪೋಸ್ಟರ್ ಗಮನ ಸೆಳೆಯುತ್ತಿದೆ.

ವೆಬ್ ಸೀರೀಸ್‌ನಲ್ಲಿ ಅಭಿಷೇಕ್ ಬಚ್ಚನ್
'ಬ್ರೀತ್; ಇನ್ ಟು ದಿ ಶಾಡೋ' ಹೆಸರಿನ ವೆಬ್ ಸೀರೀಸ್‌ನಲ್ಲಿ ಅಭಿಷೇಕ್ ಬಚ್ಚನ್ ನಟಿಸುತ್ತಿದ್ದು, ಅವರದೇ ಮುಖ್ಯ ಪಾತ್ರವಾಗಿದೆ. ಸಣ್ಣ ಹುಡುಗಿಯೊಬ್ಬಳ ಸುತ್ತುವ ಕತೆ ಇದಾಗಿದೆ.

ಮೊದಲ ಸರಣಿಯಲ್ಲಿ ಮಾಧವನ್ ನಾಯಕ
ಬ್ರೀತ್ ಸರಣಿ 2018 ರಲ್ಲಿ ಪ್ರಾರಂಭವಾಗಿದೆ. ಮೊದಲ ಸೀಸನ್‌ನಲ್ಲಿ ಮಾಧವನ್ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಮಗನನ್ನು ಉಳಿಸಿಕೊಳ್ಳಲು ಕೊಲೆಗಳನ್ನು ಮಾಡುವ ಕೊಲೆಗಾರ ಅಪ್ಪನ ಪಾತ್ರ ಅವರದ್ದಾಗಿತ್ತು. ವೆಬ್ ಸೀರೀಸ್ ಉತ್ತಮ ಖ್ಯಾತಿಯನ್ನೂ ಗಳಿಸಿತು.

ಎರಡನೇ ಸೀಸನ್ ನಲ್ಲಿ ಅಭಿಷೇಕ್
ಇದೀಗ ಅದೇ ವೆಬ್ ಸರಣಿಯ ಎರಡನೇ ಸೀಸನ್‌ನಲ್ಲಿ ಅಭಿಷೇಕ್ ಬಚ್ಚನ್ ನಟಿಸಲಿದ್ದು, ಇದು ಮಗಳನ್ನು ಹುಡುಕುವ ಕತೆಯನ್ನು ಒಳಗೊಂಡಿದೆ ಎನ್ನಲಾಗುತ್ತಿದೆ. ವೆಬ್ ಸೀರೀಸ್‌ನ ಪೋಸ್ಟರ್ ಸಹ ಇದನ್ನೇ ಸೂಚಿಸುತ್ತಿದೆ.

ಕನ್ನಡತಿ ನಿತ್ಯಾ ಮೆನನ್ ಪಾತ್ರ
ಎರಡನೇ ಸೀಸನ್ ಅನ್ನು ಮೊದಲನೇ ಸೀಸನ್ ನಿರ್ದೇಶಿಸಿದ್ದ ಮಯಾಂಕ್ ಶರ್ಮಾ ಅವರೇ ನಿರ್ದೇಶಿಸಿದ್ದು, ಇದರಲ್ಲಿ ಅಭಿಷೇಕ್ ಬಚ್ಚನ್ ಜೊತೆಗೆ ಕನ್ನಡತಿ ನಿತ್ಯಾ ಮೆನನ್, ಸಯಾಮಿ ಖೇರ್, ಅಮಿತ್ ಸದ್ದಾ ನಟಿಸುತ್ತಿದ್ದಾರೆ. ಅಮಿತ್ ಸದ್ದಾ ಮೊದಲ ಸೀಸನ್‌ನ ಪಾತ್ರವನ್ನೇ ಮುಂದುವರೆಸಲಿದ್ದಾರೆ.


Click it and Unblock the Notifications











