twitter
    For Quick Alerts
    ALLOW NOTIFICATIONS  
    For Daily Alerts

    ದೊಡ್ಡ ಪರದೆಯಿಂದ ಸಣ್ಣ ಪರದೆಗೆ ಬಂದ ಅಭಿಷೇಕ್ ಬಚ್ಚನ್!

    |

    ಅಮಿತಾಬ್ ಬಚ್ಚನ್ ಪುತ್ರ ನಟ ಅಭಿಷೇಕ್ ಬಚ್ಚನ್ ದಿನೇ ದಿನೇ ಬಾಲಿವುಡ್‌ನಲ್ಲಿ ಅವಕಾಶಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಅವರಿಗೆ ಬಾಲಿವುಡ್‌ನಲ್ಲಿ ಅವಕಾಶಗಳು ಕಡಿಮೆ ಆಗುತ್ತಲೇ ಬರುತ್ತಿವೆ.

    Recommended Video

    ಅಣ್ಣನ ಫೋಟೋ ಹಾಕಿ ಭಾವನಾತ್ಮಕ ಸಂದೇಶ ಬರೆದ ಧ್ರುವ ಸರ್ಜಾ | Dhruva Sarja emotional on social media

    ಆದರೆ ಅಭಿಷೇಕ್ ಅಭಿನಯವನ್ನು ಬಿಟ್ಟಿಲ್ಲ ಬದಲಿಗೆ ಪರದೆಯನ್ನು ಬದಲಾಯಿಸಿದ್ದಾರೆ! ಹೌದು, ದೊಡ್ಡ ಪರದೆ ಮೇಲೆ ನಟಿಸುತ್ತಿದ್ದ ಅಭಿಷೇಕ್ ಈಗ ಸಣ್ಣ ಮತ್ತು ಅತಿ ಸಣ್ಣ ಪರದೆ ಕಡೆ ಮುಖ ಮಾಡಿದ್ದಾರೆ.

    ಚಿತ್ರಮಂದಿರ ತೆರೆಯದಿದ್ದರೆ ಒಟಿಟಿಯಲ್ಲಿ ಬಿಡುಗಡೆಯಾಗುತ್ತದೆಯೇ ಕೆಜಿಎಫ್ 2?: ಯಶ್ ನೀಡಿದ ಮಾಹಿತಿಚಿತ್ರಮಂದಿರ ತೆರೆಯದಿದ್ದರೆ ಒಟಿಟಿಯಲ್ಲಿ ಬಿಡುಗಡೆಯಾಗುತ್ತದೆಯೇ ಕೆಜಿಎಫ್ 2?: ಯಶ್ ನೀಡಿದ ಮಾಹಿತಿ

    ಅಭಿಷೇಕ್ ಬಚ್ಚನ್ ವೆಬ್‌ಸೀರೀಸ್‌ ನಲ್ಲಿ ನಟಿಸಿದ್ದಾರೆ. ಇದು ಅವರ ಮೊದಲ ವೆಬ್ ಸೀರೀಸ್ ಆಗಿದ್ದು, ವೆಬ್ ಸೀರೀಸ್ ಜುಲೈ 10 ಕ್ಕೆ ಅಮೆಜಾನ್ ಪ್ರೈಂ ನಲ್ಲಿ ಬಿಡುಗಡೆ ಆಗಲಿದೆ. ಈ ಬಗ್ಗೆ ಅವರೇ ಟ್ವಿಟ್ಟರ್‌ನಲ್ಲಿ ಸುದ್ದಿ ಹಂಚಿಕೊಂಡಿದ್ದು, ವೆಬ್ ಸೀರೀಸ್‌ನ ಪೋಸ್ಟರ್ ಗಮನ ಸೆಳೆಯುತ್ತಿದೆ.

    ವೆಬ್‌ ಸೀರೀಸ್‌ನಲ್ಲಿ ಅಭಿಷೇಕ್ ಬಚ್ಚನ್

    ವೆಬ್‌ ಸೀರೀಸ್‌ನಲ್ಲಿ ಅಭಿಷೇಕ್ ಬಚ್ಚನ್

    'ಬ್ರೀತ್; ಇನ್‌ ಟು ದಿ ಶಾಡೋ' ಹೆಸರಿನ ವೆಬ್ ಸೀರೀಸ್‌ನಲ್ಲಿ ಅಭಿಷೇಕ್ ಬಚ್ಚನ್ ನಟಿಸುತ್ತಿದ್ದು, ಅವರದೇ ಮುಖ್ಯ ಪಾತ್ರವಾಗಿದೆ. ಸಣ್ಣ ಹುಡುಗಿಯೊಬ್ಬಳ ಸುತ್ತುವ ಕತೆ ಇದಾಗಿದೆ.

    ಮೊದಲ ಸರಣಿಯಲ್ಲಿ ಮಾಧವನ್ ನಾಯಕ

    ಮೊದಲ ಸರಣಿಯಲ್ಲಿ ಮಾಧವನ್ ನಾಯಕ

    ಬ್ರೀತ್ ಸರಣಿ 2018 ರಲ್ಲಿ ಪ್ರಾರಂಭವಾಗಿದೆ. ಮೊದಲ ಸೀಸನ್‌ನಲ್ಲಿ ಮಾಧವನ್ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಮಗನನ್ನು ಉಳಿಸಿಕೊಳ್ಳಲು ಕೊಲೆಗಳನ್ನು ಮಾಡುವ ಕೊಲೆಗಾರ ಅಪ್ಪನ ಪಾತ್ರ ಅವರದ್ದಾಗಿತ್ತು. ವೆಬ್ ಸೀರೀಸ್ ಉತ್ತಮ ಖ್ಯಾತಿಯನ್ನೂ ಗಳಿಸಿತು.

    ಕೀರ್ತಿ ಸುರೇಶ್ ನಟನೆಯ ಬಹುನಿರೀಕ್ಷಿತ ತಮಿಳು ಚಿತ್ರ ಪೆಂಗ್ವಿನ್ ಟ್ರೇಲರ್ಕೀರ್ತಿ ಸುರೇಶ್ ನಟನೆಯ ಬಹುನಿರೀಕ್ಷಿತ ತಮಿಳು ಚಿತ್ರ ಪೆಂಗ್ವಿನ್ ಟ್ರೇಲರ್

    ಎರಡನೇ ಸೀಸನ್‌ ನಲ್ಲಿ ಅಭಿಷೇಕ್

    ಎರಡನೇ ಸೀಸನ್‌ ನಲ್ಲಿ ಅಭಿಷೇಕ್

    ಇದೀಗ ಅದೇ ವೆಬ್ ಸರಣಿಯ ಎರಡನೇ ಸೀಸನ್‌ನಲ್ಲಿ ಅಭಿಷೇಕ್ ಬಚ್ಚನ್ ನಟಿಸಲಿದ್ದು, ಇದು ಮಗಳನ್ನು ಹುಡುಕುವ ಕತೆಯನ್ನು ಒಳಗೊಂಡಿದೆ ಎನ್ನಲಾಗುತ್ತಿದೆ. ವೆಬ್ ಸೀರೀಸ್‌ನ ಪೋಸ್ಟರ್ ಸಹ ಇದನ್ನೇ ಸೂಚಿಸುತ್ತಿದೆ.

    ಸೆಕ್ಸ್ ಅಂದರೆ ತಪ್ಪಂತೆ, ಆದರೆ ರೇಪ್ ಅಂದರೆ ಸರಿಯೇ?: ಕಿಡಿ ಕಾರಿದ ನಿರ್ಮಾಪಕಿಸೆಕ್ಸ್ ಅಂದರೆ ತಪ್ಪಂತೆ, ಆದರೆ ರೇಪ್ ಅಂದರೆ ಸರಿಯೇ?: ಕಿಡಿ ಕಾರಿದ ನಿರ್ಮಾಪಕಿ

    ಕನ್ನಡತಿ ನಿತ್ಯಾ ಮೆನನ್ ಪಾತ್ರ

    ಕನ್ನಡತಿ ನಿತ್ಯಾ ಮೆನನ್ ಪಾತ್ರ

    ಎರಡನೇ ಸೀಸನ್‌ ಅನ್ನು ಮೊದಲನೇ ಸೀಸನ್ ನಿರ್ದೇಶಿಸಿದ್ದ ಮಯಾಂಕ್ ಶರ್ಮಾ ಅವರೇ ನಿರ್ದೇಶಿಸಿದ್ದು, ಇದರಲ್ಲಿ ಅಭಿಷೇಕ್ ಬಚ್ಚನ್ ಜೊತೆಗೆ ಕನ್ನಡತಿ ನಿತ್ಯಾ ಮೆನನ್, ಸಯಾಮಿ ಖೇರ್, ಅಮಿತ್ ಸದ್ದಾ ನಟಿಸುತ್ತಿದ್ದಾರೆ. ಅಮಿತ್ ಸದ್ದಾ ಮೊದಲ ಸೀಸನ್‌ನ ಪಾತ್ರವನ್ನೇ ಮುಂದುವರೆಸಲಿದ್ದಾರೆ.

    'ಗಾಡ್‌ಮ್ಯಾನ್' ಮೇಲೆ ಬ್ರಾಹ್ಮಣ ಸಮುದಾಯ ಸಿಟ್ಟು: ಬಿಡುಗಡೆಗೆ ತಡೆ'ಗಾಡ್‌ಮ್ಯಾನ್' ಮೇಲೆ ಬ್ರಾಹ್ಮಣ ಸಮುದಾಯ ಸಿಟ್ಟು: ಬಿಡುಗಡೆಗೆ ತಡೆ

    English summary
    Abhishek Bachchan acting in a web series called Breath; into the shadow. He acting in lead role.
    Friday, June 12, 2020, 22:34
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X