Tagaru Palya: ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ 'ಟಗರು ಪಲ್ಯ' ಸಿಗುತ್ತಿಲ್ಲವೇ...? ಹೀಗೊಮ್ಮೆ ಹುಡುಕಿ ನೋಡಿ!

ಡಾಲಿ ಪಿಕ್ಷರ್ಸ್ ನಿರ್ಮಾಣದ 'ಟಗರು ಪಲ್ಯ' ಈ ವರ್ಷದ ನಾಟಿ ಹಿಟ್ ಎನಿಸಿಕೊಂಡಿದೆ. ಈ ಸಿನಿಮಾದಲ್ಲಿ ಬಹಳಷ್ಟು ಹೊಸ ಕಲಾವಿದರೇ ಇದ್ದರು. ಇವರಿಗೆ ಸಾಥ್ ನೀಡಿದ್ದು, ನಟ ರಾಕ್ಷಸ ಧನಂಜಯ್. ನಟ ನಾಗಭೂಷಣ್ ಮತ್ತು ಅಮೃತಾ ಪ್ರೇಮ್ ನಟನೆಯ ಚಿತ್ರ ಈ ಹಿಂದೆಯೇ ಓಟಿಟಿಗ ಬರಬೇಕಿತ್ತು. ಆದರೆ, ತಾಂತ್ರಿಕ ಕಾರಣಗಳಿಂದ ಅದು ಸಾಧ್ಯವಾಗಿರಲಿಲ್ಲ.

ಥಿಯೇಟರ್‌ಗಳಲ್ಲಿ 'ಟಗರು ಪಲ್ಯ' ಸವಿಯಲು ಸಾಧ್ಯವಾಗದವರು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಸವಿಯಬಹುದಿತ್ತು. ಡಿಸೆಂಬರ್ 8 ರಂದು ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗೆ ಬರಬೇಕಿತ್ತು. ತಾಂತ್ರಿಕ ದೋಷದಿಮದ ಅದು ಆಗಿರಲಿಲ್ಲ. ಈಗ ಮತ್ತೆ ಒಟಿಟಿಯಲ್ಲಿ ಸಿನಿಮಾ ಬಿಡುಗಡೆಯಾಗಿದೆ ಎಂದು ಡಾಲಿ ಪಿಕ್ಷರ್ಸ್ ಮಾಹಿತಿ ನೀಡಿದೆ.

Actor Dhananjay productions Tagaru Palya streaming in Amazon Prime Video

ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ 'ಟಗರು ಪಲ್ಯ'

ಡಾಲಿ ಧನಂಜಯ್ ನಿರ್ಮಾಣದ 'ಟಗರುಪಲ್ಯ' ದ 3 ಲಕ್ಷಕ್ಕೂ ಹೆಚ್ಚು ಟಿಕೆಟ್ ಮಾರಾಟವಾಗಿದೆ ಎಂದು ನಿರ್ಮಾಪಕರೇ ಹೇಳಿಕೊಂಡಿದ್ದಾರೆ. ಈ ವರ್ಷದ ಭರ್ಜರಿ ಫ್ಯಾಮಿಲಿ ಹಿಟ್ ಸಿನಿಮಾಗಳ ಸಾಲಿನಲ್ಲಿ ಟಗರುಪಲ್ಯಕ್ಕೆ ಮೊದಲ ಸ್ಥಾನ. ಥೀಯೇಟರ್‌ಗಳಲ್ಲಿ ಜನ ಇ ರೀತಿ ಖುಷಿ ಪಟ್ಟಿರುವುದು ಕೂಡ ಮೆಚ್ಚುವಂತಹದ್ದು.

ಉಮೇಶ್ ಕೆ. ಕೃಪಾ ನಿರ್ದೇಶನದ 'ಟಗರು ಪಲ್ಯ' ಡಿಸೆಂಬರ್ 17 ರಿಂದ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಮಿಂಗ್ ಅಗುತ್ತಿದೆ. ಹೀಗಾಗಿ ಡಿಸೆಂಬರ್ 8 ರಂದು ನಿರಾಸೆ ಪಟ್ಟವರು ಈಗ 'ಟಗರು ಪಲ್ಯ'ವನ್ನು ಎಂಜಾಯ್ ಮಾಡಬಹುದು. ಇನ್ನು, ಸಿನಿಮಾ ನೋಡಲು ಒಟಿಟಿಯಲ್ಲಿ ಹುಡುಕುತ್ತಿರುವವರಿಗೆ ಸಮಸ್ಯೆಯೊಂದು ಎದುರಾಗಿದೆ!.

ಪ್ರೈಮ್ ವಿಡಿಯೋದಲ್ಲಿ 'ಟಗರು ಪಲ್ಯ' ಸಿಗುತ್ತಿಲ್ಲವೇ..? ಹೀಗೆ ಮಾಡಿ

ಇನ್ನು, ಸಿನಿಮಾ ಬಿಡುಗಡೆಗೆ ಇದ್ದ ಎಲ್ಲಾ ಸಮಸ್ಯೆ ಪರಿಹಾರವಾಗಿದೆ ಎಂದುಕೊಳ್ಳುತ್ತಿದ್ದ ಹಾಗೆಯೇ, ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಚಿತ್ರ ಸಿಗುತ್ತಿಲ್ಲ ಎಂಬ ಆರೋಪಗಳು ಕೇಳಿ ಬಂದಿದ್ದವು. ಇದಕ್ಕೆ ತಕ್ಷಣ ನಿರ್ಮಾಪಕ ಡಾಲಿ ಧನಂಜಯ್ ಪ್ರತಿಕ್ರಿಯೆ ನೀಡಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

Actor Dhananjay productions Tagaru Palya streaming in Amazon Prime Video

ಅಮೆಜಾನ್ ಪ್ರೈಮ್‌ನಲ್ಲಿ ಸಿನಿಮಾ ಹುಡುಕಲು "Tagaru ಮತ್ತು palya ದ ಮಧ್ಯ space ಕೊಟ್ಟು ಹುಡುಕಿದರೆ ಸಿನಿಮಾ prime video ದಲ್ಲಿ ಕಾಣುವುದಿಲ್ಲ. Tagarupalya ಎಂದು Tagaru ಮತ್ತು palya ದ ಮಧ್ಯೆ space ಕೊಡದೆ ಹುಡುಕಿದರೆ ಸಿನಿಮಾ ಕಾಣಸಿಗುತ್ತದೆ" ಎಂದು ನಟ ಧನಂಜಯ್ ಹೇಳಿದ್ದಾರೆ.

ಟಗರು ಪಲ್ಯ

ಧನಂಜಯ್ ನಿರ್ಮಾಣದ ಟಗರು ಪಲ್ಯಕ್ಕೆ ಮೊದಲ ಬಾರಿಗೆ ಉಮೇಶ್ ಕೆ. ಕೃಪಾ ಆಕ್ಷನ್ ಕಟ್ ಹೇಳಿದ್ದರು. ಕನ್ನಡ ಸಿನಿಮಾರಂಗದಲ್ಲಿ ಹಾಸ್ಯ ನಟರಾಗಿ ಗುರುತಿಸಿಕೊಂಡಿದ್ದ ನಟ ನಾಗಭೂಷಣ ಮತ್ತು ಅಮೃತಾ ಪ್ರೇಮ್ 'ಟಗರು ಪಲ್ಯ' ದ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ರಂಗಾಯಣ ರಘು, ತಾರಾ ಅನುರಾಧ, ಶರತ್ ಲೋಹಿತಾಶ್ವ, ವಾಸುಕಿ ವೈಭವ್, ಚಿತ್ರಾ ಶೆಣೈ ಮತ್ತು ವೈಜನಾಥ್ ಬಿರಾದಾರ್ ಪೋಷಕ ಪಾತ್ರಗಳಿಗೆ ಜೀವ ತುಂಬಿದ್ದರು. ವಾಸುಕಿ ವೈಭವ್ ಸಂಗೀತ ಸಂಯೋಜಿಸುವ ಜೊತೆಗೆ ಒಂದು ಪಾತ್ರದಲ್ಲಿಯೂ ಕಾಣಿಸಿಕೊಂಡಿದ್ದಾರೆ.

ಟಗರು ಪಲ್ಯ ಚಿತ್ರದ ಮೂಲಕ ನಟ ನೆನಪಿರಲಿ ಪ್ರೇಮ್‌ ಪುತ್ರಿ ಅಮೃತಾ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಈ ವರ್ಷದ ಅಕ್ಟೋಬರ್‌ 27 ರಂದು ಈ ಸಿನಿಮಾ ತೆರೆ ಕಂಡಿತ್ತು.

More from Filmibeat

English summary
Tagaru Palya streaming in Amazon Prime Video.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X