For Quick Alerts
  ALLOW NOTIFICATIONS  
  For Daily Alerts

  'ಬಿಗ್‌ ಬಾಸ್‌'ನಲ್ಲಿ ಸುದೀಪ್ ಹಾಕುವ ಬಟ್ಟೆಗಳ ಸೀಕ್ರೇಟ್ ರಿವೀಲ್!

  |

  ಕನ್ನಡದ ಹೆಸರಾಂತ ರಿಯಾಲಿಟಿ ಶೋಗಳಲ್ಲಿ ಬಿಗ್ ಬಾಸ್ ಕೂಡ ಒಂದು. 'ಬಿಗ್ ಬಾಸ್' ಪ್ರತಿ ಸೀಸನ್ ಬಂದಾಗ ಹಲವು ಹೊಸ ವಿಚಾರ ಮತ್ತು ವಿವಾದದ ಮೂಲಕ ಸದ್ದು ಮಾಡುತ್ತದೆ. ಹಾಗಾಗಿ ಪ್ರತೀ ಸೀಸನ್ ಬರುವಾಗಲೂ ಕೂಡ ಒಂದಷ್ಟು ಕುತೂಹಲ ಸಹಜವಾಗಿ ಇದ್ದೇ ಇರುತ್ತದೆ.

  ಅಂತೆಯೇ ಈ ಬಾರಿಯೂ ಕೂಡ ಬಿಗ್‌ ಬಾಸ್ ಮೇಲೆ ಹೆಚ್ಚಿನ ನಿರೀಕ್ಷೆ ಇದ್ದೇ ಇದೆ. ಇನ್ನು ಈ ಬಾರಿ ಓಟಿಟಿಯಲ್ಲೂ ಕೂಡ ಬಿಗ್ ಬಾಸ್ ಪ್ರಸಾರವಾಗಲಿದೆ. ಇದನ್ನು ನಟ ಸುದೀಪ್ ನಡೆಸಿಕೊಡುತ್ತಾರೆ. ಬಿಗ್ ಬಾಸ್ ಒಂದು ಕಡೆ ಆದ್ರೆ, ನಟ ಸುದೀಪ್ ಮತ್ತೊಂದು ಕಡೆ ಎಂದು ಹೇಳ ಬಹುದು. ಅಷ್ಟರ ಮಟ್ಟಿಗೆ ಸುದೀಪ್ ಈ ಬಿಗ್ ಬಾಸ್‌ನಲ್ಲಿ ಒಬ್ಬರಾಗಿದ್ದಾರೆ.

  ಟಿವಿ ಬದಲು ಒಟಿಟಿಯಲ್ಲಿ ಪ್ರಸಾರ ಆಗುತ್ತಿರುವುದೇಕೆ ಬಿಗ್‌ಬಾಸ್? ಕಾರಣ ವಿವರಿಸಿದ ಪರಮೇಶ್ವರ್ ಗುಂಡ್ಕಲ್ಟಿವಿ ಬದಲು ಒಟಿಟಿಯಲ್ಲಿ ಪ್ರಸಾರ ಆಗುತ್ತಿರುವುದೇಕೆ ಬಿಗ್‌ಬಾಸ್? ಕಾರಣ ವಿವರಿಸಿದ ಪರಮೇಶ್ವರ್ ಗುಂಡ್ಕಲ್

  8 ಸೀಸನ್‌ಗಳಿಂದಲೂ ಸುದೀಪ್ ಬಿಗ್‌ಬಾಸ್ ಕಾರ್ಯಕ್ರಮವನ್ನು ನಡೆಸಿಕೊಂಡು ಬರ್ತಿದ್ದಾರೆ. ಈಗ 9ನೇ ಸೀಸನ್ ಶುರುವಾಗಲಿದೆ. ಅದಕ್ಕೂ ಮುನ್ನ ಒಟಿಟಿಯಲ್ಲಿ ಬಿಗ್ ಬಾಸ್ ಪ್ರಸಾರವಾಗಲಿದೆ. ಬಿಗ್‌ಬಾಸ್‌ನಲ್ಲಿ ನಟ ಸುದೀಪ್ ಕಾಸ್ಟ್ಯೂಂಗಳು ಹೆಚ್ಚಾಗಿ ಗಮನ ಸೆಳೆಯುತ್ತವೆ.

  ನಟ ಸುದೀಪ್ ವಿಶೇಷ ಉಡುಗೆ!

  ನಟ ಸುದೀಪ್ ವಿಶೇಷ ಉಡುಗೆ!

  ನಟ ಸುದೀಪ್ ತಮ್ಮ ಸಿನಿಮಾಗಳಿಗಿಂತಲೂ ಬಿಗ್ ಬಾಸ್ ವೇದಿಕೆಯ ಮೇಲೆ ಹೆಚ್ಚು ಸ್ಟೈಲಿಶ್ ಆಗಿ ಕಾಣಿಸಿಕೊಳ್ಳುತ್ತಾರೆ. ಪ್ರತೀ ವಾರವೂ ಬಿಗ್‌ ಬಾಸ್ ಕಾರ್ಯಕ್ರಮ ಬರುತ್ತದೆ ಎಂದರೆ ನಟ ಸುದೀಪ್ ಯಾವ ರೀತಿಯ ಕಾಸ್ಟ್ಯೂಂನಲ್ಲಿ ಕಾನಿಸಿಕೊಳ್ಳುತ್ತಾರೆ ಎನ್ನುವ ಕುತೂಹಲ ಇದ್ದೇ ಇರುತ್ತದೆ. ಜೊತೆಗೆ ಸುದೀಪ್ ಪ್ರತೀ ಲುಕ್‌ ಬಗ್ಗೆಯೂ ಸದಾ ಚರ್ಚೆ ಆಗುತ್ತಲೇ ಇರುತ್ತದೆ. ಈಗ ನಟ ಸುದೀಪ್ ತಮ್ಮ ಕಾಸ್ಟ್ಯೂಂ ಸೀಕ್ರೆಟ್ ರಿವೀಲ್ ಮಾಡಿದ್ದಾರೆ.

  ಕಾಸ್ಟ್ಯೂಂ ಆಯ್ಕೆ ಸುದೀಪ್ ಅವರದ್ದೆ!

  ಕಾಸ್ಟ್ಯೂಂ ಆಯ್ಕೆ ಸುದೀಪ್ ಅವರದ್ದೆ!

  ಬಿಗ್ ಬಾಸ್ ವೇದಿಕೆಯ ಮೇಲೆ ಸುದೀಪ್ ಧರಿಸುವ ಕಾಸ್ಟ್ಯೂಂ ಬಗ್ಗೆ ಕಿಚ್ಚ ಹೇಳಿದ್ದು ಹೀಗೆ. "ಇದು ನನ್ನ ಸ್ವಂತ ಪ್ರಯತ್ನ. ಚಾನೆಲ್ ಕಡೆಯಿಂದ ಯಾವುದೇ ಷರತ್ತು ಇಲ್ಲ. ನಾನು ನನಗಾಗಿ ಡ್ರೆಸಪ್ ಮಾಡಿಕೊಳ್ಳುವುದು ಇಲ್ಲಿ ಮಾತ್ರವೇ. ಸಿನಿಮಾಗಳಲ್ಲಿ ಪಾತ್ರಕ್ಕೆ ತಕ್ಕ ಹಾಗೆ ಇರುತ್ತದೆ. ಇಲ್ಲ ಪ್ರೋಗ್ರಾಂಗಳಿಗೆ ಮನೆಯಲ್ಲಿ ಏನ್ ಸಿಗುತ್ತೋ ಹಾಕಿಕೊಂಡು ಹೋಗ್ತೀನಿ. 2 ಸೀಸನ್ ಬಳಿಕ, ನನಗೆ ಅನಿಸಿದ್ದು, ಜನ ಇದನ್ನು ತುಂಬಾ ಫಾಲೋ ಮಾಡ್ತಾರೆ. ಕಾಸ್ಟ್ಯೂಂ ಬಗ್ಗೆ ಚರ್ಚೆ ಮಾಡುತ್ತಾರೆ. ಇದು ಒಂದು ರೀತಿ ಪ್ರೀತಿ ಹಾಗಾಗಿ ಎಚ್ಚರಿಕೆಯಿಂದ ಚೆನ್ನಾಗಿರುವುದು ಆಯ್ಕೆ ಮಾಡುತ್ತೇನೆ" ಎಂದು ಸುದೀಪ್ ಹೇಳಿಕೊಂಡಿದ್ದಾರೆ.

  ಸುದೀಪ್ ಕಾಸ್ಟ್ಯೂಂ ಅಂದ್ರೆ ಪರಂಗೆ ಭಯ!

  ಸುದೀಪ್ ಕಾಸ್ಟ್ಯೂಂ ಅಂದ್ರೆ ಪರಂಗೆ ಭಯ!

  ಇನ್ನು ನಟ ಸುದೀಪ್ ಬಿಗ್ ಬಾಸ್‌ಗಾಗಿ ಹಾಕಿಕೊಳ್ಳುವ ಕಾಸ್ಟ್ಯೂಂ ಬಗ್ಗೆ ಎಷ್ಟು ಮುತುವರ್ಜಿ ವಹಿಸುತ್ತಾರೆ ಎನ್ನುವುದನ್ನು ಪರಮೇಶ್ವರ್ ಗುಂಡ್ಕಲ್ ವಿವರಿಸಿದ್ದಾರೆ. ಸುದೀಪ್ ಅವರು ಕಾಸ್ಟ್ಯೂಂ ಓಕೆ ಎನ್ನುವ ತನಕ ಇವರಿಗೆ ಕೈ, ಕಾಲು ನಡುಗುತ್ತದೆಯಂತೆ. "ಬೆಳಿಗ್ಗೆ ಒಮ್ಮೆ ಅವರು ಕಾಸ್ಟ್ಯೂಂ ಓಕೆ ಅನ್ನೋವರೆಗೂ ತುಂಬಾ ಕೆನ್ಷನ್ ಇರುತ್ತದೆ. ಅರ್ಧ ಗಂಟೆ ಅವರು ರೆಡಿಯಾಗಿ ಕಾಸ್ಟ್ಯೂಂ ಓಕೆ ಎನ್ನುವ ತನಕ ಅವರ ಟೀಂ, ಮತ್ತು ಎಲ್ಲರಿಗೂ ಆತಂಕ, ಅಷ್ಟು ಕಾಳಜಿ ಅವರಿಗೆ".

  ಒಟಿಟಿಯಲ್ಲಿ ಬಿಗ್ ಬಾಸ್ ಸೀಸನ್ !

  ಒಟಿಟಿಯಲ್ಲಿ ಬಿಗ್ ಬಾಸ್ ಸೀಸನ್ !

  ಹೌದು ಈ ಬಾರಿಯ ಬಿಗ್ ಬಾಸ್ ನೇರವಾಗಿ ಟಿವಿಯಲ್ಲಿ ಪ್ರಸಾರವಾಗುವುದಿಲ್ಲ. ಅದಕ್ಕೂ ಮುನ್ನ ಒಟಿಟಿಯಲ್ಲಿ ಪ್ರಸಾರವಾಗುತ್ತದೆ. ಆ ಬಳಿಕವೇ ಟಿವಿಯಲ್ಲಿ ಬಿಗ್ ಬಾಸ್ ಕಾರ್ಯಕ್ರಮವನ್ನು ಪ್ರಸಾರ ಮಾಡಲಾಗುತ್ತದೆ. ಒಟಿಟಿ ಸ್ಟ್ರೀಮಿಂಗ್ ವೇದಿಕೆಯಾದ ವೂಟ್ ಸೆಲೆಕ್ಟ್‌ನಲ್ಲಿ ಮೊದಲು ಬಿಗ್ ಬಾಸ್ ಸೀಸನ್ 9 ಪ್ರಸಾರವಾಗಲಿದೆ. ಒಟಿಟಿಯಲ್ಲಿ ಮುಗಿದ ಬಳಿಕ ಟಿವಿಯಲ್ಲಿ ಮುಖ್ಯ ಕಾರ್ಯಕ್ರಮ ಬರಲಿದೆ. ಒಟಿಟಿಯಲ್ಲಿ ಬರುವುದು ಮಿನಿ ಸೀಸನ್ ಮಾತ್ರ.

  English summary
  Actor Sudeep Design Costumes Himself For Bigg Boss,

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X