ಮತ್ತೆ ಬಂದ 'ಗುಮ್ಮ'; ಬಿಗ್‌ಬಾಸ್ ಓಟಿಟಿಯಲ್ಲಿ ಸುದೀಪ್ ಎಂಟ್ರಿ ಹೇಗಿರುತ್ತೆ?

ಸದ್ಯ ಎಲ್ಲರ ದೃಷ್ಟಿ ಬಿಗ್‌ಬಾಸ್‌ ಓಟಿಟಿ ಕಡೆಗೆ ನೆಟ್ಟಿದೆ. ಕಳೆದ 8 ಸೀಸನ್‌ಗಳು ಟಿವಿಯಲ್ಲಿ ಪ್ರಸಾರವಾಗಿತ್ತು. ಆದರೆ ಈ ಸಲ ವೂಟ್‌ ಸೆಲೆಕ್ಟ್‌ ಓಟಿಟಿ ಫ್ಲಾಟ್‌ಫಾರ್ಮ್‌ನಲ್ಲಿ ಬಿಗ್‌ ಬಾಸ್‌ ಶೋ ಪ್ರಸಾರವಾಗಲಿದೆ. ಇಂದು (ಆಗಸ್ಟ್ 6) ಸಂಜೆ 7 ಗಂಟೆಗೆ ಬಹಳ ಅದ್ಧೂರಿಯಾಗಿ ಶೊ ಆರಂಭವಾಗಲಿದೆ. ಒಂದು ದಿನ ಮೊದಲೇ ಸುದೀಪ್ ದೊಡ್ಮನೆ ಒಳಗೆ ಎಂಟ್ರಿ ಕೊಟ್ಟಿದ್ದಾರೆ.

ಈಗಾಗಲೇ ಗ್ರ್ಯಾಂಡ್‌ ಓಪನಿಂಗ್ ಎಪಿಸೋಡ್‌ ಚಿತ್ರೀಕರಣವಾಗಿದ್ದು, ಸ್ಪರ್ಧಿಗಳು ಮನೆ ಒಳಗೆ ಎಂಟ್ರಿ ಕೊಟ್ಟಾಗಿದೆ. ಸಂಜೆ 7 ಗಂಟೆಯಿಂದ ಓಟಿಟಿಯಲ್ಲಿ ಸ್ಟ್ರೀಮಿಂಗ್‌ ಶುರುವಾಗಲಿದೆ. ಈ ಬಾರಿ ಶೋಗೆ ಯಾರೆಲ್ಲ ಸ್ಪರ್ಧಿಗಳಾಗಿ ಬರಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ. ಆರ್ಯವರ್ಧನ್ ಗುರೂಜಿ, ನಿರೂಪಕ ಸೋಮಣ್ಣ ಮಾಚೀಮಡ, ಪುಟ್ಟ ಗೌರಿ ಮದುವೆ ಖ್ಯಾತಿಯ ಸಾನ್ಯ ಅಯ್ಯರ್, ನಟ ರಾಕೇಶ್ ಅಡಿಗ, ನಟಿ ರಾಗಿಣಿ ಸೇರಿದಂತೆ 16 ಜನ ಸ್ಪರ್ಧಿಗಳಾಗಿ ಎಂಟ್ರಿಕೊಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪ್ರತಿ ಸೀಸನ್‌ ಓಪನಿಂಗ್‌ ಸಿಕ್ಕಾಪಟ್ಟೆ ಗ್ರ್ಯಾಂಡ್‌ ಆಗಿ ಇರುತ್ತಿತ್ತು. ಈ ಬಾರಿ ಓಟಿಟಿ ಸೀಸನ್‌ ಆಗಿರುವುದರಿಂದ ಅದೇ ಇರುತ್ತಾ ಅನ್ನುವ ಅನುಮಾನವೇ ಬೇಡ. ಪ್ರೋಮೊ ನೋಡಿದ್ರೆ, ಸಿಕ್ಕಾಪಟ್ಟೆ ಜೋರಾಗಿ ಇರೋದು ಗೊತ್ತಾಗುತ್ತಿದೆ. ಈಗಾಗಲೇ ಚಿತ್ರೀಕರಣ ಕೂಡ ನಡೆದಿದ್ದು, ಅದರ ಪ್ರೋಮೊ ಸಹ ರಿಲೀಸ್‌ ಆಗಿ ಸಖತ್ ಸದ್ದು ಮಾಡ್ತಿದೆ. ಮಗದೊಮ್ಮೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸ್ಪರ್ಧಿಗಳನ್ನು ಪರಿಚಯ ಮಾಡಿಸಿ, ಮನೆ ಒಳಗೆ ಕಳುಹಿಸಿದ್ದಾರೆ. ಸುದೀಪ್‌ ಎಂಟ್ರಿಯೇ ಸಿಕ್ಕಾಪಟ್ಟೆ ಜೋರಾಗಿದೆ. ಡ್ಯಾನ್ಸ್‌, ಸಿಂಗಿಂಗ್‌ ಪರ್ಫಾರ್ಮನ್ಸ್‌ಗಳು ಅದ್ಧೂರಿ ಓಪನಿಂಗ್‌ಗೆ ಮತ್ತಷ್ಟು ಕಳೆ ತಂದಿದೆ.

ಕಿಚ್ಚ ಸುದೀಪ್ ಬೆಂಕಿ ಎಂಟ್ರಿ

ಡ್ಯಾನ್ಸರ್‌ಗಳ ಡ್ಯಾನ್ಸ್ ಪರ್ಫಾರ್ಮನ್ಸ್‌ ನಡುವೆಯೇ ಸುದೀಪ್ ಮೇಲಿನಿಂದ ವೇದಿಕೆಗೆ ಇಳಿದು ಬರುತ್ತಾರೆ. ಚಕ್ರವರ್ತಿಯ ಕಿರೀಟದ ಮಾದರಿಯ ಕ್ರಾಫ್ಟ್‌ ಮೇಲೆ ನಿಂತು ಎಲೆಕ್ಟ್ರಿಕ್ ಕ್ರಾಕರ್ಸ್‌ ನಡುವೆ ಕಿಚ್ಚನ ಎಂಟ್ರಿಯೇ ಸೂಪರ್. ಹಿನ್ನೆಲೆಯಲ್ಲಿ 'ಗುಮ್ಮ ಮತ್ತೆ ಬಂದ' ಅನ್ನುವ ವಾಯ್ಸ್ ಮಜವಾಗಿದೆ. ತಮ್ಮ ನೆಚ್ಚಿನ ಕಪ್ಪು ಬಣ್ಣದ ಪ್ಯಾಂಟ್ ಮತ್ತು ಜಾಕೆಟ್‌ನಲ್ಲಿ ಕಿಚ್ಚ ಮಿರಿ ಮಿರಿ ಮಿಂಚಿದ್ದಾರೆ. 'ಇದು ಬಿಗ್‌ ಬಾಸ್ ಒಟಿಟಿ, ಕನ್ನಡದ ಅತಿದೊಡ್ಡ ಒಟಿಟಿ ಶೋಗೆ ಸ್ವಾಗತ ಸುಸ್ವಾಗತ' ಅಂತ ತಮ್ಮ ಬೇಸ್‌ ವಾಯ್ಸ್‌ನಲ್ಲಿ ಸ್ವಾಗತ ಕೋರಿದ್ದಾರೆ.

 ಕಲರ್‌ಫುಲ್ ಪರ್ಫಾರ್ಮನ್ಸ್‌ಗಳು

ಕಲರ್‌ಫುಲ್ ಪರ್ಫಾರ್ಮನ್ಸ್‌ಗಳು

ಬಿಗ್‌ಬಾಸ್‌ ಕನ್ನಡ ಒಟಿಟಿ ಮೊದಲ ಸೀಸನ್ ಗ್ರ್ಯಾಂಡ್‌ ಓಪನಿಂಗ್‌ಗೆ ಡ್ಯಾನ್ಸ್ ಮತ್ತು ಸಿಂಗಿಂಗ್‌ ಪರ್ಫಾರ್ಮನ್ಸ್‌ಗಳು ಮತ್ತಷ್ಟು ರಂಗು ತುಂಬಲಿವೆ. ಸಂಗೀತ ನಿರ್ದೇಶಕ ವಾಸುಕಿ ವೈಭವ್ ಹಾಡು ಹಾಡಿ ರಂಗೇರಿಸಿದರೆ, ಮಾನ್ವಿತಾ ಹರೀಶ್‌ ಸೇರಿದಂತೆ ಈ ಹಿಂದಿನ ಬಿಗ್‌ಬಾಸ್‌ ಸ್ಪರ್ಧಿಗಳು ಡ್ಯಾನ್ಸ್‌ ಮಾಡಿ ರಂಜಿಸಲಿದ್ದಾರೆ.

 6 ವಾರಗಳ ಕಾಲ ಬಿಗ್‌ಬಾಸ್ ಓಟಿಟಿ

6 ವಾರಗಳ ಕಾಲ ಬಿಗ್‌ಬಾಸ್ ಓಟಿಟಿ

ಇಂದು (ಆಗಸ್ಟ್ 6) ಸಂಜೆ 7 ಗಂಟೆಯಿಂದ ಮುಂದಿನ 6 ವಾರಗಳ ಕಾಲ ವೀಕ್ಷಕರು 24 ಗಂಟೆಗಳ ಕಾಲ ವೂಟ್‌ನಲ್ಲಿ ಬಿಗ್‌ಬಾಸ್‌ ಶೋ ನೋಡಬಹುದು. ಪ್ರತಿ ವಾರದ ಕೊನೆಯಲ್ಲಿ ವಾರದ ಕಥೆಯನ್ನು ಕಿಚ್ಚನ ಜೊತೆ ವೀಕ್ಷಿಸಬಹುದು. ಟಿವಿ ಬಿಗ್‌ಬಾಸ್‌ಗಿಂತ ಒಂದಷ್ಟು ಬದಲಾವಣೆಯನ್ನು ಬಿಗ್‌ಬಾಸ್ ಓಟಿಟಿಯಲ್ಲಿ ನೋಡಬಹುದು.

ಮನೆಯ ಒಳಕ್ಕೆ ಆರ್ಯವರ್ಧನ್, ಸೋನು

ಬಿಗ್‌ಬಾಸ್‌ ಒಟಿಟಿ ಮೊದಲ ಸೀಸನ್‌ನಲ್ಲಿ ಯಾರೆಲ್ಲಾ ಸ್ಪರ್ಧಿಗಳಾಗಿ ಹೋಗುತ್ತಾರೆ ಅನ್ನುವ ಕುತೂಹಲ ವೀಕ್ಷಕರಲ್ಲಿದೆ. ಈಗಾಗಲೇ ಸಂಖ್ಯಾಶಾಸ್ತ್ರಜ್ಞ ಆರ್ಯವರ್ಧನ್ ಗುರೂಜಿ, ಸೋಶಿಯಲ್ ಮೀಡಿಯಾ ಸ್ಟಾರ್ ಸೋನು ಶ್ರೀನಿವಾಸ್ ಗೌಡ, ರೂಪೇಶ್ ಶೆಟ್ಟಿ ಮನೆ ಒಳಗೆ ಹೋಗಿದ್ದಾರೆ. ಕಳೆದ ಬಾರಿ ಬಿಗ್‌ಬಾಸ್‌ಗೆ ಹೋಗಲ್ಲ ಅಂದಿದ್ದ ಆರ್ಯವರ್ಧನ್ ಗುರೂಜಿ, ಈ ಬಾರಿ ಮೊದಲ ಸ್ಪರ್ಧಿಯಾಗಿ ಹೋಗಿದ್ದಾರೆ. ಇನ್ನು ಪಾಸಿಟಿವ್ ಹಾಗೂ ನೆಗೆಟಿವ್ ಎರಡೂ ಕಾರಣಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್‌ ಆಗಿ ಸುದ್ದಿಯಾದ ಸೋನು ಶ್ರೀನಿವಾಸ್ ಗೌಡ ಕೂಡ ಮನೆ ಒಳಗೆ ಹೋಗಿದ್ದಾರಂತೆ.

More from Filmibeat

English summary
Actor Sudeep Made A Grand Entry At The Bigg Boss OTT Premiere. Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X