Don't Miss!
- News
ಬೆಂಗಳೂರಿನಲ್ಲಿ ಇಂದು ಬುಧವಾರ ಭಾರೀ ಮಳೆ: ಆರೆಂಜ್ ಅಲರ್ಟ್ ಘೋಷಣೆ
- Lifestyle
ಪ್ಲಾಸ್ಟಿಕ್ ಸರ್ಜರಿ ಕುರಿತ 10 ಆಸಕ್ತಿಕರ ಸಂಗತಿಗಳು
- Sports
ಟಿ20 ಕ್ರಿಕೆಟ್ನಲ್ಲಿ 250 ವಿಕೆಟ್ ಪಡೆದ ಬುಮ್ರಾ: ಈ ಸಾಧನೆ ಮಾಡಿದ ಭಾರತದ ಮೊದಲ ವೇಗದ ಬೌಲರ್
- Finance
ಮೇ 17ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ
- Automobiles
ಹೊಸ ಕಿಯಾ ಇವಿ6 ಎಲೆಕ್ಟ್ರಿಕ್ ಕಾರು ಮಾಹಿತಿ ಬಹಿರಂಗ: 528 ಕಿ.ಮೀ ರೇಂಜ್, ಅಲ್ಟ್ರಾ-ಫಾಸ್ಟ್ ಚಾರ್ಜಿಂಗ್
- Technology
ಅಪೆಕ್ಸ್ ಲೆಜೆಂಡ್ಸ್ ಮೊಬೈಲ್ ಗೇಮ್ ಬಿಡುಗಡೆ! ಡೌನ್ಲೋಡ್ ಮಾಡುವುದು ಹೇಗೆ?
- Education
Oil India Recruitment 2022 : 16 ನರ್ಸಿಂಗ್ ಟ್ಯೂಟರ್ ಮತ್ತು ಇತರೆ ಹುದ್ದೆಗಳಿಗೆ ನೇರ ಸಂದರ್ಶನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
100 ಕೋಟಿ ಆಫರ್ ತಿರಸ್ಕರಿಸಿದ ವಿಕ್ರಾಂತ್ ರೋಣ ಚಿತ್ರ!
ನಟ ಕಿಚ್ಚ ಸುದೀಪ್ ಅಭಿನಯದ 'ವಿಕ್ರಾಂತ್ ರೋಣ' ಹಲವು ಕಾರಣಗಳಿಗೆ ಸುದ್ದಿಯಲ್ಲಿ ಇದೆ. ಕನ್ನಡದಲ್ಲಿ ಹೆಚ್ಚು ನಿರೀಕ್ಷೆಯೊಂದಿಗೆ ರಿಲೀಸ್ ಆಡಿ ಆಗಿರುವ ಚಿತ್ರ ಅಂದರೆ ಅದು ವಿಕ್ರಾಂತ್ ರೋಣ. ಎಲ್ಲವೂ ಸರಿ ಇದ್ದಿದ್ದರೆ ವಿಕ್ರಾಂತ್ ರೋಣ ಸಿನಿಮಾ ಇದೇ ವರ್ಷ ಫೆಬ್ರವರಿಯಲ್ಲಿ ರಿಲೀಸ್ ಆಗಬೇಕಿತ್ತು. ಆದರೆ ಕೊರೊನಾ ಕಾರಣದಿಂದ ಅದು ಅನುಮಾನ ಎನ್ನುವಂತಾಗಿದೆ.
'ವಿಕ್ರಾಂತ್ ರೋಣ' ಚಿತ್ರಕ್ಕೆ ಒಟಿಟಿ ಇಂದ 100 ಕೋಟಿ ಆಫರ್ ಬಂದಿದೆ ಎನ್ನುವ ಸುದ್ದಿ ಇತ್ತೀಚೆಗೆ ಭಾರಿ ಸದ್ದು ಮಾಡಿತ್ತು. ಈ ಸುದ್ದಿ ಹೊರ ಬೀಳುತ್ತಲೇ, ಸಿನಿಮಾ ಥಿಯೇಟರ್‌ನಲ್ಲಿ ರಿಲೀಸ್ ಆಗುದಿಲ್ಲವಾ? ಎನ್ನುವ ಗೊಂದಲಗಳು ಹುಟ್ಟಿಕೊಂಡಿದ್ದವು. ಆದರೆ ಅದಕ್ಕೆಲ್ಲಾ ಈಗ ಜಾಕ್ ಮಂಜು ಉತ್ತರ ಕೊಟ್ಟಿದ್ದಾರೆ. ಸಿನಿಮಾ ಮಂದಿರದಲ್ಲಿಯೇ ಚಿತ್ರವನ್ನು ರಿಲೀಸ್ ಮಾಡುವುದಾಗಿ ಸಂದರ್ಶನ ಒಂದರಲ್ಲಿ ಜಾಕ್ ಮಂಜು ಸ್ಪಷ್ಟ ಪಡಿಸಿದ್ದಾರೆ.
ಇನ್ನು ವಿಕ್ರಾಂತ್ ರೋಣ ಚಿತ್ರಕ್ಕೆ 100 ಕೋಟಿ ಆಫರ್ ಬಂದಿದೆಯಾ ಎನ್ನುವ ಶಂಕೆ ಕೆಲವರಲ್ಲಿ ಮೂಡಿತ್ತು. ಇದು ಸುಳ್ಳು ಮಾಹಿತಿ ಅಂತಲೂ ಹಲವರು ಹೇಳಿದ್ದರು. ಆದರೆ ಈ ಬಗ್ಗೆ ಮಾತನಾಡಿರುವ ನಿರ್ಮಾಪಕ ಜಾಕ್ ಮಂಜು 100 ಕೋಟಿ ಆಫರ್ ಬಂದಿದ್ದು ನಿಜ ಎಂದಿದ್ದಾರೆ. ಆದರೆ ಚಿತ್ರವನ್ನು ಥಿಯೇಟರಿನಲ್ಲೇ ರಿಲೀಸ್ ಮಾಡೋಕೆ ನಿರ್ಧರಿಸಿದ್ದ ಕಾರಣ, ಸದ್ಯಕ್ಕೆ ಈ 100 ಕೋಟಿ ಆಫರ್ ರಿಜೆಕ್ಟ್ ಮಾಡಿದ್ದಾರಂತೆ.
ಚಿತ್ರವನ್ನು 3ಡಿಯಲ್ಲಿ ತಂತ್ರಜ್ಞಾನದಲ್ಲಿ ನಿರ್ಮಾಣ ಮಾಡಲಾಗಿದೆ. ಹಾಗಾಗಿ ಈ ಚಿತ್ರವನ್ನು ಒಟಿಟಿಯಲ್ಲಿ ನೋಡಿದರೆ ಪ್ರೇಕ್ಷಕರಿಗೆ 3ಡಿ ಅನುಭವ ಸಿಗುದಿಲ್ಲ. ಹಾಗಾಗಿ ಚಿತ್ರ ಮಂದಿರದಲ್ಲಿಯೇ ಸಿನಿಮಾವನ್ನು ರಿಲೀಸ್ ಮಾಡಲು ವಿಕ್ರಾಂತ್ ರೋಣ ತಂಡ, ಬಂದಿದ್ದ 100 ಕೋಟಿ ಆಫರ್ ತಿರಸ್ಕರಿಸಿದೆಯಂತೆ. ಇದನ್ನು ಜಾಕ್ ಮಂಜು ಅವರು ಹೇಳಿ ಕೊಂಡಿದ್ದಾರೆ.

ಇನ್ನು ವಿಕ್ರಾಂತ್ ರೋಣ ಚಿತ್ರದ ಮತ್ತೊಂದಿ ವಿಶೇಷತೆ ಎಂದರೆ 14 ಭಾಷೆಗಳಲ್ಲಿ ವಿಕ್ರಾಂತ್ ರೋಣ ರಿಲೀಸ್ ಆಗ್ತಿದೆ. ಯಾವುದೇ ಅಡೆತಡೆ ಬಾರದೆ ಹೋದರೆ ಇದೇ ವರ್ಷ ಏಪ್ರಿಲ್‌ನಲ್ಲಿ ಸಿನಿಮಾ ಬಿಡುಗಡೆಯಾಗೋ ಸಾಧ್ಯತೆ ಇದೆ. ಆದರೆ ಏಪ್ರಿಲ್‌ನಲ್ಲಿಯೂ ಸಾಲು ಸಾಲು ಚಿತ್ರಗಳು ರಿಲೀಸ್‌ಗೆ ರೆಡಿಯಾಗಿ ನಿಂತು ಬಿಟ್ಟಿವೆ.