ಸದ್ದು ಮಾಡ್ತಿದೆ ಸೂರ್ಯ ನಟನೆಯ 'ಜೈ ಭೀಮ್' ಮೋಷನ್ ಪೋಸ್ಟರ್

ತಮಿಳು ನಟ ಸೂರ್ಯ ನಟನೆಯ 'ಸೂರರೈ ಪೊಟ್ರು' ಚಿತ್ರಕ್ಕೆ ಬಹಳ ದೊಡ್ಡ ಗೆಲುವು ಸಿಕ್ಕಿತು. ಚಿತ್ರಮಂದಿರಗಳು ಸಂಪೂರ್ಣವಾಗಿ ತೆರೆಯುವವರೆಗೂ ಕಾಯದ ಸೂರ್ಯ ತನ್ನ ಚಿತ್ರವನ್ನು ನೇರವಾಗಿ ಒಟಿಟಿಯಲ್ಲಿ ರಿಲೀಸ್ ಮಾಡಿದ್ದರು. ಇದರಿಂದ ಥಿಯೇಟರ್ ಮಾಲೀಕರು ಅಸಮಾಧಾನ ವ್ಯಕ್ತಪಡಿಸಿದ್ದರು. ದೊಡ್ಡ ಸ್ಟಾರ್‌ಗಳ ಚಿತ್ರಗಳನ್ನೇ ನಂಬಿ ಚಿತ್ರಮಂದಿರಗಳು ನಡೆಯುತ್ತಿವೆ. ಆದರೆ, ಸ್ಟಾರ್ ನಟರೇ ಒಟಿಟಿ ಕಡೆ ಹೋದ್ರೆ ಥಿಯೇಟರ್‌ಗಳಿಗೆ ಉಳಿಗಾಲವಿಲ್ಲ ಎಂದು ತೀವ್ರ ವಿರೋಧ ವ್ಯಕ್ತಪಡಿಸಿದ್ದರು.

ಆದರೆ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಸೂರ್ಯ ಒಟಿಟಿಯಲ್ಲಿ 'ಸೂರರೈ ಪೊಟ್ರು' ರಿಲೀಸ್ ಮಾಡಿ ಗೆದ್ದರು. ದುಡ್ಡಿಗೆ ದುಡ್ಡು ಬಂತು, ಪ್ರಶಂಸೆ, ಖ್ಯಾತಿ ಹಾಗೂ ಅವಾರ್ಡ್‌ಗಳನ್ನು ಸಹ ಪಡೆದುಕೊಂಡರು.

ಈಗ ಸೂರರೈ ಪೊಟ್ರು ಆದ್ಮೇಲೆ ಮಾಡುತ್ತಿರುವ 'ಜೈ ಭೀಮ್' ಚಿತ್ರವನ್ನು ಸಹ ಒಟಿಟಿಯಲ್ಲಿ ರಿಲೀಸ್ ಮಾಡುತ್ತಿದ್ದಾರೆ. ಇತ್ತೀಚಿಗಷ್ಟೆ ಚಿತ್ರದ ಮೋಷನ್ ಪೋಸ್ಟರ್ ಅನಾವರಣ ಮಾಡಿದ ಚಿತ್ರತಂಡ ಅಧಿಕೃತವಾಗಿ ರಿಲೀಸ್ ದಿನಾಂಕ ಪ್ರಕಟಿಸಿದೆ. ಮುಂದೆ ಓದಿ...

ದೀಪಾವಳಿಗೆ 'ಜೈ ಭೀಮ್'

ದೀಪಾವಳಿಗೆ 'ಜೈ ಭೀಮ್'

ಟಿ ಜ್ಞಾನವೇಲ್ ನಿರ್ದೇಶನದಲ್ಲಿ ತಯಾರಾಗುತ್ತಿರುವ 'ಜೈ ಭೀಮ್' ಸಿನಿಮಾ ದೀಪಾವಳಿ ಹಬ್ಬದ ಪ್ರಯುಕ್ತ ನವೆಂಬರ್ 2 ರಂದು ಅಮೇಜಾನ್ ಪ್ರೈಮ್‌ನಲ್ಲಿ ನೇರವಾಗಿ ಬಿಡುಗಡೆಯಾಗುತ್ತಿದೆ. ಈ ಚಿತ್ರವನ್ನು ಸೂರ್ಯ ಮತ್ತು ಜ್ಯೋತಿಕಾ ತಮ್ಮದೇ 2ಡಿ ಎಂಟರ್‌ಟೈನ್‌ಮೆಂಟ್‌ ನಿರ್ಮಾಣ ಸಂಸ್ಥೆಯಲ್ಲಿ ನಿರ್ಮಿಸಿದ್ದಾರೆ.

ನೈಜ ಪಾತ್ರದಲ್ಲಿ ಸೂರ್ಯ

ನೈಜ ಪಾತ್ರದಲ್ಲಿ ಸೂರ್ಯ

ಜೈ ಭೀಮ್ ಚಿತ್ರದಲ್ಲಿ ನಟ ಸೂರ್ಯ ವಕೀಲನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಂದ್ಹಾಗೆ, ಈ ಸಿನಿಮಾ ನೈಜ ಘಟನೆ ಆಧರಿಸಿ ತಯಾರಾಗಿದೆ. 1993 ಕಾನೂನು ಹೋರಾಟವನ್ನು ಆಧರಿಸಿದ ಸಿನಿಮಾ ಇದಾಗಿದ್ದು, ನಟ ಸೂರ್ಯ, ಮದ್ರಾಸ್ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಕೆ.ಚಂದ್ರು ಎನ್ನುವವರ ಪಾತ್ರ ನಿರ್ವಹಿಸುತ್ತಿದ್ದಾರೆ ಎಂದು ಹೇಳಲಾಗಿದೆ.

ತಮಿಳು-ತೆಲುಗಿನಲ್ಲಿ ಬಿಡುಗಡೆ

ತಮಿಳು-ತೆಲುಗಿನಲ್ಲಿ ಬಿಡುಗಡೆ

'ಜೈ ಭೀಮ್' ಚಿತ್ರದಲ್ಲಿ ಸೂರ್ಯ ಜೊತೆ ಪ್ರಕಾಶ್ ರಾಜ್, ರಾವ್ ರಮೇಶ್, ರಜೀಶಾ ವಿಜಯನ್ ಮತ್ತು ಲಿಜೊ ಮೋಲ್ ಜೋಸ್ ಸೇರಿದಂತೆ ಹಲವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸೀನ್ ರೋಲ್ಡನ್ ಅವರ ಸಂಗೀತವಿದೆ ಮತ್ತು ರಾಜಶೇಖರ್ ಕರ್ಪೂರ ಸುಂದರಪಾಂಡಿಯನ್ ಅವರು ಸಹ-ನಿರ್ಮಾಣ ಮಾಡಿದ್ದಾರೆ. ನವೆಂಬರ್ 2 ರಂದು ತಮಿಳು ಮತ್ತು ತೆಲುಗಿನಲ್ಲಿ ಜೈ ಭೀಮ್ ತೆರೆಗೆ ಬರಲಿದೆ.

ಅಮೇಜಾನ್ ಜೊತೆ ಸೂರ್ಯ ಒಪ್ಪಂದ

ಅಮೇಜಾನ್ ಜೊತೆ ಸೂರ್ಯ ಒಪ್ಪಂದ

ಸೂರರೈ ಪೊಟ್ರು ಚಿತ್ರದ ಯಶಸ್ಸಿನ ನಂತರ ಸೂರ್ಯ ಅಮೇಜಾನ್ ಜೊತೆ ಮೆಗಾ ಒಪ್ಪಂದ ಮಾಡಿಕೊಂಡರು. ತಮ್ಮ ನಿರ್ಮಾಣ ಸಂಸ್ಥೆಯಲ್ಲಿ ತಯಾರಾಗುತ್ತಿರುವ ನಾಲ್ಕು ಚಿತ್ರಗಳನ್ನು ಅಮೇಜಾನ್‌ಗೆ ಕೊಡುವುದಾಗಿ ಮಾತುಕತೆ ಮಾಡಿದರು. ಸೂರ್ಯ ಮತ್ತು ಅಮೇಜಾನ್ ನಡುವಿನ ಒಪ್ಪಂದಂತೆ 'ಜೈ ಭೀಮ್' ನವೆಂಬರ್ 2 ರಂದು, 'ಉದನ್‌ಪಿರಪ್ಪೆ' ಚಿತ್ರ ಅಕ್ಟೋಬರ್ 15 ರಂದು, 'ಓ ಮೈ ಡಾಗ್' ಸಿನಿಮಾ ಡಿಸೆಂಬರ್ ತಿಂಗಳಲ್ಲಿ ರಿಲೀಸ್ ಆಗಲಿದೆ. ಕಳೆದ ಸೆಪ್ಟೆಂಬರ್ ತಿಂಗಳಲ್ಲಿ 'ರಾಮನ್ ಆಂಡಲುಮ್ ರಾವಣನ್ ಆಂಡಲುಮ್' ರಿಲೀಸ್ ಆಗಿದೆ.

ಹಿಂದಿಗೆ ಹೊರಟ 'ಸೂರರೈ ಪೊಟ್ರು'

ಹಿಂದಿಗೆ ಹೊರಟ 'ಸೂರರೈ ಪೊಟ್ರು'

'ಸೂರರೈ ಪೊಟ್ರು' ಸಿನಿಮಾ ಹಿಂದಿಯಲ್ಲಿ ರಿಮೇಕ್ ಆಗುತ್ತಿದೆ. ಹಿಂದಿಯಲ್ಲೂ ಸೂರ್ಯ ಹಾಗೂ ಜ್ಯೋತಿಕಾ ಅವರೇ 2ಡಿ ಎಂಟರ್‌ಟೈನ್‌ಮೆಂಟ್ ಅಡಿ ನಿರ್ಮಾಣ ಮಾಡ್ತಿದ್ದಾರೆ. ಹಿಂದಿಯಲ್ಲಿ ಅಕ್ಷಯ್ ಕುಮಾರ್ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಇದುವರೆಗೂ ಕಲಾವಿದರ ಆಯ್ಕೆ ಅಂತಿಮವಾಗಿಲ್ಲ. ಮೂಲ ಚಿತ್ರ ನಿರ್ದೇಶಿಸಿದ್ದ ಸುಧಾ ಕೊಂಗರಾ ಅವರೇ ಹಿಂದಿಯಲ್ಲೂ ಡೈರೆಕ್ಟ್ ಮಾಡಲಿದ್ದಾರೆ. ಈಗಾಗಲೇ ಸ್ಕ್ರಿಪ್ಟ್ ಕೆಲಸ ನಡೆಯುತ್ತಿದ್ದು, ಶೀಘ್ರದಲ್ಲಿ ಕಲಾವಿದರು ಆಯ್ಕೆ ಅಧಿಕೃತವಾಗಿ ಘೋಷಿಸಲಾಗುತ್ತದೆ.

More from Filmibeat

English summary
Tamil Actor Suriya starrer Jai Bhim movie set release on amazon on november 2nd.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X